Skip to main content

Full text of "PRAVAADHI Yusuf (A) (K)"

See other formats


ಪ್ರವಾದಿ ಯೂಸುಫ್‌(ಅ) 


ಕುರ್‌ಆನಿನ ಬೆಳಕಿನಲ್ಲಿ 


ಲೇಖಕರು 


ಸಯ್ಯದ್‌ ಅಹ್ಮದ್‌ ಉರೂಜ್‌ ಕಾದ್ರೀ 


ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ 


ಪ್ರಕಾಶಕರ ಮಾತು 


-ಪವಿತ್ರ ಕುರ್‌ಆನ್‌ ಪ್ರಸ್ತಾಪಿಸಿದ ಅನೇಕ ಪಾಠಬೋಧಕ ವೃತ್ತಾಂತಗಳಲ್ಲಿ 
ಪ್ರವಾದಿ ಯೂಸುಫ್‌ರ(ಅ) ಚರಿತ್ರೆಯೂ ಒಂದು. ಹಳ್ಳಿಗಾಡಿನ ಓರ್ವ ಬಾಲಕ ಮಲ 
ಸಹೋದರರ ಅಸೂಯೆಯಿಂದಾಗಿ ಹಾಳು ಬಾವಿಗೆ ತಳ್ಳಲ್ಪಟ್ಟು ಅಲ್ಲಿಂದ ಯಾತ್ರಾ 
ತಂಡವೊಂದರ ಮೂಲಕ ಈಜಿಪ್ಟ್‌ನ ಮಾರುಕಟ್ಟೆಯಲ್ಲಿ ಗುಲಾಮನಾಗಿ ಮಾರಲ್ಪಿಟ್ಟ 
ಘಟನೆಯಿಂದ ಆರಂಭಗೊಂಡು ಈಜಿಪ್ಟ್‌ನ ಮಹಾ ಚಕ್ರ: ವರ್ತಿಯಾಗುವ ವರೆಗಿನ 
ವಿವಿಧ ಸನ್ನಿವೇಶಗಳನ್ನು ಅತ್ಯಂತ ಮನಮುಟ್ಟುವ ಶೈಲಿಯಲ್ಲಿ ಕುರ್‌ಆನ್‌ ವಿವರಿಸುತ್ತದೆ. 

ಪ್ರವಾದಿ ಯೂಸುಫ್‌ರ(ಅ) ಜೀವನದ ಕುರಿತು ಅನೇಕ ಕೃತಿಗಳು ವಿವಿಧ 
ಭಾಷೆಗಳಲ್ಲಿ ಪ್ರಕಟಗೊಂಡಿವೆ. ಆದರೆ ಅವುಗಳ ಪೈಕಿ ಹೆಚ್ಚಿನವುಗಳಲ್ಲಿ ಅವರ ಮತ್ತು 
ರುುಲೇಖಾರ ನಡುವಿನ "ಕಾಲ್ಪನಿಕ ಪ್ರಣಯಕತೆ'ಯನ್ನು ತೀರಾ ಅಸಭ್ಯ ಹಾಗೂ 
ಲಜ್ಞಾಹೀನ ರೀತಿಯಲ್ಲಿ ವರ್ಣಿಸಿರುವುದು ಕಂಡು ಬರುತ್ತದೆ. ಅದರಿಂದಾಗಿ ಅವರ ನೈಜ 
ವ್ಯಕ್ತಿತ್ವವು ಕಣ್ಮರೆಯಾಗಿದೆ. ' _ 

ಈ ನಿಟ್ಟಿನಲ್ಲಿ ಮರ್ಷೂಮ್‌ ಸಯ್ಯದ್‌ ಅಹ್ಮದ್‌ ಉರೂಜ್‌ ಕಾದ್ರೀಯವರು 
ಪ್ರವಾದಿ ಯೂಸುಫ್‌ರ(ಅ) ನೈಜ ವ್ಯಕ್ತಿತ್ವವನ್ನು ಇದ್ದಕ್ಕಿದ್ದಂತೆ ಕುರ್‌ಆನಿನ ಬೆಳಕಿನಲ್ಲಿ 
ಮನೋಜ್ಞವಾಗಿ ನಮ್ಮ ಮುಂದಿರಿಸಿದ್ದಾರೆ. ಚಾರಿತ್ರ್ಯ, ಮಾನ-ಮರ್ಯಾದಗಳು. 
ಮರೀಚಿಕೆಯಾಗುತ್ತಿರುವ ಇಂದಿನ ಕಾಲದಲ್ಲಿ ಸಚ್ಚಾರಿತ್ರ್ಯದೊಂದಿಗೆ ಯಾವ ರೀತಿ 
ಬದುಕಬಹುದೆಂಬುದಕ್ಕೆ ಈ ಕೃತಿಯು ಅತ್ಯುತ್ತಮ ಮಾರ್ಗದರ್ಶಕವಾಗಿದೆ. ಆ ನೆಲೆಯಲ್ಲಿ 
ಎಂ. ಸಾದುಲ್ಲಾರವರು ಕನ್ನಡಕ್ಕೆ ಅನುವಾದಿಸಿ ಕೊಟ್ಟ. ಈ ಕೃತಿಯು ಕನ್ನಡನಾಡಿನ 
ಜನತೆಗೆ ಪ್ರಯೋಜನಕಾರಿಯಾಗಲೆಂದು ಹಾರೈಸುತ್ತೇವೆ. 


2%. ಶಾಂತಿ 'ಪ್ರಕಾಶನ 


(ಠೇವಕರ ಮಾತು 


ಈ ಕೃತಿಯು ಕುರ್‌ಆನಿನ ಯೂಸುಫ್‌ ಅಧ್ಯಾಯದ ಸಂಶೋಧನಾತ್ಮಕ 
ಅಧ್ಯಯನವೇನೂ ಅಲ್ಲ. ಇದು 'ಅಹ್ಸನುಲ್‌ ಕಸಸ್‌'(ಅತ್ಯುತ್ತಮ ಕತೆ)ನ ಒಂದು 
ಸುಂದರ ಪ್ರತಿಬಿಂಬವಾಗಿದೆ. ಇದರಲ್ಲಿ ಕತೆಯ ಘಟನೆಗಳು, ಪಾತ್ರ, ಪಾಠಗಳು ಮತ್ತು 
ಉಪದೇಶಗಳನ್ನು ಸಂಕ್ಷೇಪಿಸಲು ಪ್ರಯತ್ನಿಸಲಾಗಿದೆ. ಈ ಅಧ್ಯಾಯದ ಶುಭ್ರದರ್ಪಣದಲ್ಲಿ 
ಹ.ಯೂಸುಫ್‌ರ(ಅ) ಆಂತರಿಕ ಸೌಂದರ್ಯವು ಮನಮೋಹಕ ಮತ್ತು ಅತ್ಯಾಕರ್ಷಕ 
ರೀತಿಯಲ್ಲಿ ಗೋಚರಿಸುತ್ತದೆ. ಅದರಲ್ಲಿ ಅತೃಪ್ತ ಕಣ್ಣುಗಳಿಗೆ ತಂಪು ಹಾಗೂ ಘಾಸಿಗೊಂಡ 
ಹೃದಯಗಳಿಗೆ. ಸಾಂತ್ವನವಿದೆ. ಇದರಲ್ಲಿ ಯೂಸುಫ್‌ರ ಯೌವನವು ಯುವಕರನ್ನು 
ಸಚ್ಚಾರಿತ್ರ್ಯವಂತರಾಗಿ, ಪರಿಶುದ್ಧರಾಗಿ, ಸಹನಶೀಲರಾಗಿ, ಶ್ರಮಜೀವಿಗಳಾಗಿ, 
ಧೈರ್ಯಶಾಲಿಗಳಾಗಿ, ಸಜ್ಜನರಾಗಿ, ಅನುರಾಗಿಗಳಾಗಿ, ಸಮರ್ಥರಾಗಿ, ಇಸ್ಲಾಮಿನ 
ಸಂದೇಶಪ್ರಚಾರಕರಾಗಿ ಮತ್ತು ಪರಿಪೂರ್ಣ ಸತ್ಯವಿಶ್ವಾಸಿಗಳಾಗಿ ಮಾಡುತ್ತದೆ. ಇದರಲ್ಲಿ 
ಯಲ್‌ಕೂಬರ(ಅ) ಮುದಿತನವು ಹಿರಿಯರಿಗೆ ಸಹನಾಮೂರ್ತಿಗಳಾಗಲು,' ಉತ್ತಮ 
ಕಾರ್ಯಯೋಜನೆ ಮಾಡಲು ಮತ್ತು' ಅಲ್ಲಾಹನ ಮೇಲೆ ಭರವಸೆಯಿಡಲು ಕಲಿಸುತ್ತದೆ. 
ಇದರಲ್ಲಿ ಅಸೂಯೆಯ 'ಲಾವಾರಸವು ಮಾನವೀಯತೆ, ಸಜ್ಜನಿಕೆ ಮಾತ್ರವಲ್ಲ ಆಪ್ತ 
ಸಂಬಂಧವನ್ನೂ ಉರಿಸಿ ಬೂದಿ ಮಾಡುತ್ತದೆಂದು ಮನವರಿಕೆಯಾಗುತ್ತದೆ. ಸಹಾನುಭೂತಿ, 
ಉತ್ತಮ ವರ್ತನೆ, ತಾಳ್ಮೆ, ಅಲ್ಲಾಹನ ಮೇಲೆ ಭರವಸೆ, ದೇವಭಯ ಮತ್ತು 
ಪರೋಷಕಾರಗಳ ಫಲಗಳು ಎಷ್ಟು ಸ್ವಾದಿಷ್ಟ ಮತ್ತು ಹೇಗೆ ಅವುಗಳ ಪ್ರತಿಫಲ ಎಂದೂ 
ವ್ಯರ್ಥವಾಗುವುದಿಲ್ಲವೆಂಬುದೂ ಸ್ಪಷ್ಟವಾಗಿ ತಿಳಿಯುತ್ತದೆ. 

ಸಿಜ್ನ್‌(ಸೆರೆಮನೆ) ಈ ಕತೆಯ ಒಂದು ಭಾಗವಾಗಿದೆ, ಪೂರ್ಣ ಕತೆಯಲ್ಲ. ಈ 
ಅಧ್ಯಾಯ ಸೆರೆಮನೆಯ ಒಳಗೂ ಮಾರ್ಗದರ್ಶನ ಮಾಡುತ್ತದೆ. ಸೆರೆಮನೆಯ ಹೊರಗೂ 
ಸನ್ಮಾರ್ಗ ತೋರಿಸುತ್ತದೆ. ಈ ಪುಸ್ತಕದ ಕಲ್ಪನೆಯನ್ನು ಸೆರೆಮನೆಯಲ್ಲೇ ರೂಪಿಸಿದ್ದೇನೆ. 
ಒಂದು ರೀತಿಯಲ್ಲಿ ಇದು ಸೆರೆಮನೆಯ ಸ್ಮಾರಕವಾಗಿದೆ. ಏಕೆಂದರೆ ಯೂಸುಫ್‌ 
ಅಧ್ಯಾಯವನ್ನು ಆಳವಾಗಿ ಅಭ್ಯಸಿಸಲು ಮತ್ತು ಅದರಿಂದ ಪಾಠ ಕಲಿಯುವ ಅವಕಾಶ 
ಸೆರೆಮನೆಯಲ್ಲೇ ಸಿಕ್ಕಿತು. ಸೆರೆಮನೆಯಿಂದ ಹೊರಗೆ ಅದು ಕೃತಿಗಿಳಿಯಿತು. ನಾನು 
'ಯುಂದಗಿ' ಮಾಸ ಪತ್ರಿಕೆಯ 1976ರ ಮಾರ್ಚ್‌ನಿಂದ ಜೂನ್‌ ವರೆಗಿನ ಸಂಚಿಕೆಗಳಲ್ಲಿ 
ನಾಲ್ಕು ಕಂತುಗಳಲ್ಲಿ ಬರೆದಿರುವ ಈ ಲೇಖನಮಾಲೆ ಈಗ ಪುಸ್ತಕದ ರೂಪದಲ್ಲಿ 
ಪ್ರಕಟವಾಗುತ್ತಿದೆ. ಪತ್ರಿಕೆಯ ಪ್ರಥಮ ಕಂತಿನ ಆರಂಭದಲ್ಲಿ ನಾನು ಹೀಗೆ ಬರೆದಿದ್ದೆ: 


"ನಾನು 1975ರ ಜುಲ್ಯಾ ಒಂದರಂದು ರಾಮ್‌ಪುರದಿಂದ ಹೊರಹೋಗಿದ್ದೆ. 
| 1976ರ ಜನವರಿ 21ರಂದು ಮರಳಿ ಬಂದೆ. ಈ ಅವಧಿಯಲ್ಲಿ ಯೂಸುಫ್‌ ಆಧ್ಯಾಯವನ್ನು 
ಕಂಠಪಾಠ ಮಾಡುವ ಸೌಭಾಗ್ಯವೂ ದೊರೆಯಿತು. ಹೊಸತಾಗಿ ಆದರ ವಿಷಯಗಳ ಬಗ್ಗೆ 
ಚಿಂತನೆ ನಡೆಸಲು ಸಮಯಾವಕಾಶವೂ ಸಿಕ್ಕಿತು. ಕಳೆದ ಆರೂವರೆ ತಿಂಗಳು ಎಲ್ಲಿ ಹೇಗೆ 
ಕಳೆಯಿತೋ ಅವುಗಳಲ್ಲಿ ಈ ಅಧ್ಯಾಯದ ಉಪದೇಶ ಹಾಗೂ ಪಾಠದಾಯಕ 
ಬೋಧನೆಗಳು ಮುಂದೆ ಬರುತ್ತಲೇ ಇದ್ದವು." 
(ಮಿಂದಗಿ, ಮಾರ್ಚ್‌, 1976) 
ತುರ್ತುಪರಿಸ್ಥಿತಿಯ ಪ್ರಸ್ತುತ ಕಾಲ ಅತ್ಯಂತ ಕರಾಳ ದಿನವಾಗಿದ್ದು ನನಗೆ 
ಹೊರಗಿನ ವಿಷಯಗಳೇನೂ ತಿಳಿದಿರಲಿಲ್ಲ. ಅಲ್ಲಾಹನು ಈ ಪುಸ್ತಕವನ್ನು ನನಗೂ ಎಲ್ಲ 
ಓದುಗರಿಗೂ ಪ್ರಯೋಜನಕಾರಿಯಾಗಿ ಮಾಡಲಿ ಮತ್ತು ನಮ್ಮನ್ನು ಎಲ್ಲ ಅವಸ್ಥೆಗಳಲ್ಲೂ 
ಸತ್ಯದ ಮೇಲೆ ಸ್ಥಿರವಾಗಿರುವಂತೆ ಅನುಗ್ರಹಿಸಲಿ. (ಆಮೂನ್‌) 


`ಈ ಸಯ್ಯದ್‌ ಅಹ್ಮದ್‌ ಉರೂಜ್‌ ಕಾದ್ರೀ, ರಾಮ್‌ಪುರ. 


ಊಟ, ಅನುಕ್ರಮಣಿಕ KK 
ಪ್ರಸ್ತಾವನೆ | » 9 
ಅಸೂಯೆಯ ಕಾರಸ್ಥಾನಗಳು 0 ರ 
ಕೊಲೆಯ ಸಂಚು ಟಿ. (ಗ 15 
ಈಜಿಪ್ಟ್‌ನ ಅಧಿಕಾರಿಯ ಭವನದಲ್ಲಿ “ 20 
ಆಡಳಿತಸಿದ್ದತೆ.. 20 
ಪ್ರವಾದಿತ್ವ | 22. 
ಮಹಾ ಸತ್ವಪರೀಕ್ಷೆ 4 23 
ಸೋಲೊಪ್ಪದ ತಕ್ವಾ ಎ25 
ರಬ್ಬ್‌, ಬುರ್ಹಾನ್‌ ಮತ್ತು ಶಾಹಿದ್‌ ಎಂದರೇನು? . ... 26 
ಪ್ರತಿಷ್ಠಿತ ವರ್ಗದ ಸ್ತ್ರೀಯರ ದುಸ್ಥಿತಿ ೬. 28 
ಯೂಸುಫ್‌ರ(ಅ)' ಎನಯಶೀಲತೆ .. 30 


| ಯೂಸುಫ್‌(ಅ) ಕಾರಾಗೃಹದಲ್ಲಿ 31 
ಜೈಲರನು ಜೈಲನ್ನೇ ಒಪ್ಪಿಸಿದನು ... 32] 
ತೌಹೀದ್‌ನ ಬೋಧನೆ 34 

| ಸೆರೆಮನೆಯಲ್ಲಿ ಕಳೆದ ಕೆಲವು ವರ್ಷಗಳು ... 36 


. ಸತ್ಯದ ಅನಾವರಣ ಮತ್ತು ತಪ್ಪೊಪ್ಪಿಗೆ 1 41 

, ಆಡಳಿತ ವಹಿಸುವಉದ್ದೇಶ ಎ. 46|. 

" ಸುಭಿಕ್ಸ ಕಾಲದ ಸಾಧನೆಗಳು ಎ 46 
ಭೀಕರ ಬರಗಾಲ ಮತ್ತು ಸಹೋದರರ ಆಗಮನ ಎ 48 
ಅಲ್ಲಾಹನ ಮೇಲೆ ಅಚಂಚಲ ಭರವಸೆಯ ವಾಸ್ತವಿಕತೆ ೬.51] 
ನೀವೇನಾ ಯೂಸುಫ್‌? ಎ 54 
ಸೌಜನ್ಯದ ಅತ್ಯುನ್ನತ ಮಾದರಿ ಎ. 55 

' ರಾಜ ವೈಭವದ ಸ್ಟಾಗತ ಕಿ | 
ಯಲ್‌ಕೂಬರ(ಅ) ಮರಣ ಎ. 62 

| ಯೂಸುಫ್‌ರ(ಅ) ಆಡಳಿತ ಕಾಲ ಮತ್ತು ಮರಣ 62 [- 


ಪ್ರಸ್ತಾವನೆ 


ಪವಿತ್ರ ಕುರ್‌ಆನ್‌ ಅಲ್ಲಾಹನ ಗ್ರಂಥವಾಗಿದೆ. ಅದರಲ್ಲಿ ಬಂದಿರುವ ಘಟನೆಗಳನ್ನೆಲ್ಲ 
ಅತ್ಯುತ್ತಮ ಹಾಗೂ ಪವಾಡದ ರೀತಿಯಲ್ಲಿ ' ವಿವರಿಸಲಾಗಿದೆ. ' ಹ.ಯೂಸುಫ್‌ರ(ಅ) 
ಸತ್ಮಕತೆಯನ್ನು ಕುರ್‌ಆನಿನಲ್ಲಿ ಸ್ಪಷ್ಟವಾಗಿ 'ಅಹ್ಸನುಲ್‌ ಕಸಸ್‌'(ಅತ್ಯುತ್ತಮ ಕತೆ) ಎಂದು 
ವರ್ಣಿಸಲಾಗಿದೆ. 

ಮುಸ್ಲಿಮರಲ್ಲಿ ಸುಶಿಕ್ಷಿತರು Joana ಕುರ್‌ಆನಿನ ಅಧ್ಯಯನ ನಡೆಸುವವರು . 
ವಿವರವಾಗಿಯೂ, ಮಾನವ ಬದುಕು ಪೂರ್ಣವಾಗಿ ಸತ್ವಪರೀಕ್ಷೆಗಳಿಂದ ಕೂಡಿದೆಯೆಂಬುದನ್ನು 
ಚೆನ್ನಾಗಿ ಬಲ್ಲರು. ಈ ಭೂಮಿ ವಿಶಾಲವಾದ ಒಂದು ಪರೀಕ್ಷಾ ಕೊಠಡಿಯಾಗಿದೆ, ಇಲ್ಲಿ 
ಎಲ್ಲರೂ ತಂತಮ್ಮ ಜೀವನ ಪರೀಕ್ಷೆ ಬರೆಯುವುದರಲ್ಲಿ ನಿರತರಾಗಿದ್ದಾರೆ. ಜೀವನದ 
- ಕೊನೆಯ ಕ್ಷಣದವರೆಗೂ ಇದು ಮುಂದುವರಿಯುವುದು. ಇದರಲ್ಲಿ ಸ್ತ್ರೀ-ಪುರುಷರು," 
ಯುವಕರು-ವೃದ್ಧರು, ' ಆರೋಗ್ಯವಂತರು-ರೋಗಿಗಳು, ಬಡವರು-ಬಲ್ಲಿದರು, ನಾಯಕರು- 
ಅನುಯಾಯಿಗಳು, ಅಕ್ಷರಸ್ಥರು-ಅನಕ್ಷರಸ್ವರು, ಬಂದಿಗಳು-ಸ್ವತಂತ್ರರು ಎಂಬ, ಭೇದವಿಲ್ಲ. 
ಕುರ್‌ಆನಿನಲ್ಲಿ ಈ ವಿಷಯವನ್ನು ಪದೇ ಪದೇ ವಿವರಿಸಲಾಗಿದೆ. ಕುರ್‌ಆನನ್ನು . ಓದಿ : 
ಗ್ರಹಿಸುವ ಪ್ರತಿಯೊಬ್ಬನಿಗೂ ಇದು ಚೆನ್ನಾಗಿ ಮನದಟ್ಟಾಗುತ್ತದೆ. ಅಲ್‌ ಅನ್‌ಆಮ್‌ 

ಅಧ್ಯಾಯದ ಕೊನೆಯ ಸೂಕ್ತದಲ್ಲಿ ಹೀಗೆ ಹೇಳಲಾಗಿದೆ- 
"ಅವನೇ ನಿಮ್ಮನ್ನು ಭೂಮಿಯ ಪ್ರತಿನಿಧಿಗಳನ್ನಾಗಿ ಮಾಡಿದನು ಮತ್ತು ನಿಮಗೆ 
ಕೊಟ್ಟಿರುವುದರಲ್ಲಿ ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಕೆಲವರಿಗಿಂತ ಉನ್ನತ 
ಪದವಿಗಳನ್ನು ನೀಡಿದನು. ನಿಶ್ಚಯವಾಗಿಯೂ ನಿಮ್ಮ ಪ್ರಭು ಶಿಕ್ಷೆ ಕೊಡುವುದರಲ್ಲಿ ಅತಿ. 
ಇತ ಮತ್ತು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” 
(ಪವಿತ್ರ ಕುರ್‌ಆನ್‌, 6:165) 


- ಈ ಸೂಕ್ತದಲ್ಲಿ ನಾಲ್ಕು ಮೂಲಭೂತ ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲಾಗಿದೆ. _ ' 


ಒಂದನೆಯದಾಗಿ, ಮಾನವನು ಈ ಭೂಮಿಯಲ್ಲಿ ಅಲ್ಲಾಹನ. ಖಲೀಫ ಅಥವಾ ದೇವನ 
ಪ್ರತಿನಿಧಿಯಾಗಿದ್ದಾನೆ. ಅಸಂಖ್ಯಾತ. ವಸ್ತುಗಳನ್ನು, ಅಮಾನತ್ತಾಗಿ ಅವನ ವಶಕ್ಕೆ ಸಿ*ಹಾಗಿದೆ 
ಅವುಗಳನ್ನು ಬಳಸುವ ಸ್ವಾತಂತ್ರ್ಯವನ್ನು ಅವನಿಗೆ ನೀಡಲಾಗಿದೆ. ' 

ಎರಡನೆಯದಾಗಿ, ಮಾನವರ ಮಧ್ಯೆ ಸ್ಥಾನಮಾನಗಳ ಅಂತರವನ್ನೂ ಅಲ್ಲಾಹನೇ 


ಈ" 


ಇರಿಸಿದ್ದಾನೆ. ಅಮಾನತ್‌ಗಳನ್ನು ಎಲ್ಲರಿಗೂ ಸಮಾನ್ಯವಾಗಿ ಏಕರೂಪದಲ್ಲಿ ನೀಡಲಾಗಿಲ್ಲ. 


10 ಪ್ರವಾದಿ ಯೂಸುಫ್‌(ಆ) 


ದೈಹಿಕ ಸಾಮರ್ಥ್ಯಗಳಲ್ಲೂ ಬಾಹ್ಮವಸ್ತುಗಳನ್ನು ಬಳಸುವ ಅಧಿಕಾರಗಳಲ್ಲೂ ವೃತ್ಕಾಸಗಳಿವೆ. 

ಮೂರನೆಯದಾಗಿ, ದೇವ ಪ್ರಾತಿನಿಧ್ಯದ ಬಾಧ್ಯತೆಗಳನ್ನು ಯಾರು ಈಡೇರಿಸುತ್ತಾನೆ 
ಮತ್ತು ಯಾರು ಅದರಲ್ಲಿ ವಿಫಲನಾಗುತ್ತಾನೆ ಎಂಬುದನ್ನು ಅಲ್ಲಾಹನು ನೋಡುವ 
ಸಲುವಾಗಿ ಅವುಗಳನ್ನು ಪರೀಕ್ಷಾರ್ಥವಾಗಿ ಅವನಿಗೆ ನೀಡಲಾಗಿದೆ. 

ನಾಲ್ಕನೆಯದಾಗಿ, ಅಲ್ಲಾಹನ ಶಿಕ್ಷೈಯ ಬಗ್ಗೆ ಯಾರೂ ನಿರ್ಭಯರಾಗಿರಬಾರದು. 
ಅವನು. ಬಯಸಿದರೆ ಕ್ಷಣಮಾತ್ರದಲ್ಲಿ ದೊಡ್ಡ ದೊಡ್ಡ ಶಿಕ್ಷೆಗಳನ್ನು ನೀಡಬಲ್ಲನು. ಅದೇ 
ರೀತಿ ಅಲ್ಲಾಹನ ನಿಷ್ಕದಾಸರು ಆತನ ಕ್ಷಮೆ ಮತ್ತು ಕರುಣೆಯ ಬಗ್ಗೆಯೂ ನಿರಾಶರಾಗಬಾರದು. 
ಅವನು ಮಹಾ ಕ್ಷಮಾದಾನಿಯೂ ಕರುಣಾಸಾಗರನೂ ಆಗಿರುತ್ತಾನೆ. 

`` ಅಲ್‌ ಕಹ್ಫ್‌ ಅಧ್ಯಾಯದಲ್ಲಿ ಹೀಗೆ ಹೇಳಲಾಗಿದೆ: 

"ವಾಸ್ತವದಲ್ಲಿ ಇವರ ಪೈಕಿ ಯಾರು ಉತ್ತಮ ಕರ್ಮಗಳನ್ನು ಮಾಡುತ್ತಾರೆಂದು 
ಪರೀಕ್ಷಿಸಲಿಕ್ಕಾಗಿ ನಾವು ಈ ಭೂಮಿಯಲ್ಲಿರುವ ಎಲ್ಲ ವಸ್ತುಗಳನ್ನು ಭೂಮಿಗೆ 
ಅಲಂಕಾರವನ್ನಾಗಿ ಮಾಡಿರುತ್ತೇವೆ. ಕಟ್ಟಕಡೆಗೆ ನಾವು ಇದನ್ನೆಲ್ಲಾ ಒಂದು ಬಟ್ಟ ಬಯಲನ್ನಾಗಿ 
ಮಾಡಿ ಬಿಡುವವರಿದ್ದೇವೆ.'' -. (ಪವಿತ್ರ ಕುರ್‌ಆನ್‌, 18:7-8) 

ಇನ್ನೊಂದು ಕಡೆ ಅಲ್‌ ಮುಲ್ಕ್‌ ಅಧ್ಯಾಯದಲ್ಲಿ ಹೀಗಿದೆ: 

"ಅವನು ಅತ್ಯಂತ ಮಂಗಳಮಯನು. ಅವನ ಕೈಯಲ್ಲೀ(ವಿಶ್ವದ) ಪ್ರಭುತ್ಛವಿದೆ ಮತ್ತು 
ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. ನಿಮ್ಮನ್ನು ಪರೀಕ್ಷಿಸಿ ನಿಮ್ಮ 
ಹೈಕಿ:ಯಾರು ಸತ್ಯರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ 
ಅವಿಷ್ಯರಿಸಿದನು. ಅವನು aa ಕ್ಷಮಾಶೀಲನೂ ಆಗಿರುತ್ತಾನೆ." 

(ಪವಿತ್ರ ಕುರ್‌ಆನ್‌, 67:1-2) 
ಮಾನವ ಬದುಕಿಗೆ ಸಾವಿರ ಮುಖಗಳಿರುವಂತೆಯೇ ಸತ್ವಪರೀಕ್ಸೆಗಳಿಗೂ ಸಾವಿರ 
ಬಣ್ಣಗಳಿರುತ್ತವೆ. 

ಯೂಸುಫ್‌ ಅಧ್ಯಾಯದಲ್ಲಿ ವಿವರಿಸಲಾಗಿರುವ ಘಟನೆಗಳೆಲ್ಲ ನಿಜವಾಗಿ ಸತ್ವಪರೀಕ್ಷೆಗಳೇ 
ಆಗಿವೆ. ಕತೆ ಹೇಳಿ ಸಂತೋಷ ಪಡಿಸಲಿಕ್ಕಾಗಿ ಅವುಗಳನ್ನು ವಿವರಿಸಲಾಗಿಲ್ಲ: ಮಾನವನು 
ಅಂತ್ಕದಿನದ ವರೆಗೂ ಅದರಿಂದ ಪಾಠ ಕಲಿಯುವ ಉದ್ದೇಶದಿಂದಲೇ ಅವುಗಳನ್ನು 
ವಿವರಿಸಲಾಗಿದೆ. ಶಕ್ತಿ ಸಾಮರ್ಥ್ಯಗಳು ಮತ್ತು ವಿವಿಧ ಘಟಕಗಳು ಸೇರಿಕೊಂಡಿರುವ ಮಾನವ 
ಪ್ರಕೃತಿ ಬದಲಾಯಿಸತಕ್ಕಂತಹದ್ದಲ್ಲ. ಈ ಅಹ್ಸನುಲ್‌ ಕಸಸ್‌ನಲ್ಲಿ ವಿವರಿಸಲಾದ 
ಘಟನಾವಳಿಗಳು ಜಿನ್ನ್‌ಗಳದ್ದೋ ದೇವಚರರದ್ದೋ ಆಗಿರದೆ, ಕೇವಲ ಮಾನವರ 
ಕುರಿತಾಗಿದೆ. | 


ಅವತೀರ್ಣದ ಹಿನ್ನೆಲೆ 
ಯಹೂದಿಗಳ ಸಲಹೆಯ ಮೇರೆಗೆ ಕೆಲವು ಮಂದಿ ಪ್ರವಾದಿ ಮುಹಮ್ಮದ್‌ರಲ್ಲಿ(ಸ) 
` ಕಲವು ಪ್ರಶ್ನೆಗಳನ್ನು ಕೇಳಿದರು. ಪ್ರಪ್ರಥಮ ಸತ್ವಪರೀಕ್ಷೆ ಆ ಮಂದಿಯದ್ದೇ ನಡೆಯಿತು. 


` ಪ್ರವಾದಿ ಯೂಸುಫ್‌(ಅ) 3 11 


ಬನೀ ಇಸ್ರಾಈಲರು ಈಜಿಪ್ಟ್‌ಗೆ ಬರಲು ಕಾರಣವೇನು, ಅವರು ಫೆಲೆಸ್ತೀನ್‌ ಪ್ರದೇಶಗಳಿಂದ 
ಹೊರಟು ಈಜಿಪ್ಟ್‌ಗೆ ಹೇಗೆ ತಲಪಿದರು ಎಂಬುದು ಅವರ ಪ್ರಶ್ನೆಯಾಗಿತ್ತು. ಅರಬರಿಗೆ 
ಈ ಘಟನೆಗಳಾವುವೂ ತಿಳಿದಿರಲಿಲ್ಲ. ಅವರ ಇತಿಹಾಸದಲ್ಲಿ ಅದರ ಸಂಕ್ಷಿಪ್ತ ಪ್ರಸ್ತಾಪವೂ 
ಇರಲಿಲ್ಲ. ಪ್ರವಾದಿ(ಸ) ಕೂಡ ಈ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ. ಆದ್ದರಿಂದ 
ಪ್ರವಾದಿವರ್ಯರು(ಸ) ಈ ಪ್ರಶ್ನೆಗೆ ಉತ್ತರ ನೀಡಲಾರರು ಅಥವಾ ನೀಡುವುದಾದರೂ 
ಯಹೂದಿಯರೊಂದಿಗೆ ಕೇಳಿಯೇ ನೀಡಬಲ್ಲರು. ಎರಡೂ ಸ್ಥಿತಿಗಳಲ್ಲಿ ಪ್ರವಾದಿವರ್ಯರ(ಸ) 
ರಹಸ್ಯ ಬಯಲಾಗುವುದು, ತಮಗೆ ವಹ್ಮ್‌(ದಿವ್ಕವಾಣಿ) ಅವತೀರ್ಣವಾಗುತ್ತದೆಂಬ ಅವರ 
ವಾದ ಸರಿಯಲ್ಲವೆಂದು ಜನರಿಗೆತಿಳಿಯುವುದು ಎಂದವರು ಭಾವಿಸಿದ್ದರು. ಆದರೆ 
ಪ್ರವಾದಿವರ್ಯರನ್ನುಸ) ಪರೀಕ್ಷಿಸಬಯಸಿದ ಈ ಮಂದಿಗೇ ಮುಖಭಂಗವಾಯಿತು. 
ಅಲ್ಲಾಹನ ವಾಣಿ ಅತ್ಯಂತ ಸಮತೋಲನದೊಂದಿಗೆ ಈ ಪ್ರಶ್ನೆಗೆ ಉತ್ತರಿಸಿದಾಗ, ಪ್ರಶ್ನೆ 
ಕೇಳಿದವರು ಮಾತ್ರವಲ್ಲ, ಪ್ರಶ್ನೆ ಕೇಳಲು ಕುಮ್ಮಕ್ಕು ನೀಡಿದವರು ಕೂಡ ದಂಗಾಗಿ 
ಬಿಟ್ಟಿರಬಹುದು. ಇದು ಮುಹಮ್ಮದ್‌ರ(ಸ) ಪ್ರವಾದಿತ್ವವನ್ನು ಮತ್ತು 'ಕುರ್‌ಆನ್‌ ಅಲ್ಲಾಹನ 
ಗ್ರಂಥವಾಗಿದೆಯೆಂಬುದನ್ನು ಅಂಗೀಕರಿಸಬೇಕಾದಂತಹ ಸನ್ನಿವೇಶವಾಗಿತ್ತು. ಆದರೆ ಅವರು 
ಈ ಪರೀಕ್ಷೆಯಲ್ಲಿ ಪರಾಜಯಗೊಂಡರು. ಅವರು ವಿಶ್ವಾಸ ಸ್ವೀಕರಿಸಲಿಲ್ಲ. ಏಕೆಂದರೆ 
ಅವರಲ್ಲಿ ಅದರ ಆಸಕ್ತಿಯೇ ಇರಲಿಲ್ಲ. ಇದರಿಂದ ಮಾನವನ ಮನೋಸ್ಥಿತಿಯ ದಿಕ್ಕು 
ನಿರ್ಣಯವಾಗುತ್ತದೆ. ಅದು ಯಾವುದೇ ಒಂದು ವಿಷಯವನ್ನು ಅಂಗೀಕರಿಸಲಿಕ್ಕೇ 
ಸಿದ್ಧವಿಲ್ಲದಿರುವಾಗ್ಯ ತಾನೇ ಮುಂದಿಡುವ ಪುರಾವೆಯನ್ನು ಕೂಡಾ ಅಂಗೀಕರಿಸಲು ಸಿದ್ಧವಿರುವುದಿಲ್ಲ. 
ಮಾನವನ ಈ ಸ್ವಭಾವ 14 ಶತಮಾನಗಳ ಹಿಂದೆ ಇದ್ದಂತೆಯೇ ಈಗಲೂ ಇದೆ. ಅದು 
ಅಂತ್ಯ ದಿನದವರೆಗೂ ಹಾಗೆಯೇ ಇರುವುದು. ಅರಿತೂ ಅರಿತೂ ಸತ್ಯವನ್ನು ನಿರಾಕರಿಸುವ 
ಸ್ವಭಾವ ಹೊಸತೇನಲ್ಲ. 

ಕುರ್‌ಆನ್‌ ಈ ಕತೆಯನ್ನು ಅವರಿಗೆ ವಿವರಿಸಿ ಕೊಡುವುದರ ಮೂಲಕ ಒಂದು 
ಕನ್ನಡಿಯನ್ನು ಅವರ ಮುಂದಿಟ್ಟಿತು. ಅದರಲ್ಲಿ ಅವರು, ತಾವು ಮುಹಮ್ಮದ್‌ರೊಂದಿಗೆ(ಸ) . 
ವರ್ತಿಸುತ್ತಿರುವ ರೀತಿ ಯೂಸುಫ್‌ರ(ಅ) ಸಹೋದರರು ಅವರೊಂದಿಗೆ ವರ್ತಿಸುತ್ತಿರುವಂತೆಯೇ' 
ಇದೆಯೆಂಬುದು ಅವರಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ವರ್ತನೆಯ ಪರಿಣಾಮವೂ 
ಆ ಕಾಲದಲ್ಲಿ ಪ್ರಕಟವಾದ ಪರಿಣಾಮದಂತೆಯೇ ಮುಂದೆ ಬರುವುದೆಂದು ಅವರು 
ಗ್ರಹಸಬೇಕಿತ್ತು. ಅದರೆ ಇಹಲೋಕದ ಮೋಹಪಾಶದಲ್ಲಿ ಸಿಲುಕಿ ಮಾನವನು ತನ್ನ 
ಪ್ರಕೃತಿಯನ್ನೇ ವಿಕೃತಗೊಳಿಸಿದಾಗ ಎಷ್ಟೇ. ದೊಡ್ಡ ನಿದರ್ಶನ ಕೂಡಾ ತನ್ನ ದುರ್ಗತಿಯ 
ಬಗ್ಗೆ ಅವನನ್ನು ಚಿಂತಿಸಲು ಬಿಡುವುದಿಲ್ಲ. ಈ ಘಟನೆ ನಿಮಗೆ ತಿಳಿದಿರಲಿಲ್ಲ, ಈಗ 
ಅಲ್ಲಾಹನು ದಿವ್ಕವಾಣಿಯ ಮೂಲಕ ತಿಳಿಸುತ್ತಿದ್ದಾನೆಂದು ಪ್ರವಾದಿ ಮುಹಮ ಒದ್‌ರಿಗೇಸು 
ಈ ಅಧ್ಯಾಯದ ಆರಂಭದಲ್ಲೇ ಸ್ಪಷ್ಟಪಡಿಸಲಾಗಿದೆ. " 


12 ಪ್ರವಾದಿ ಯೂಸುಫ್‌(ಅ) 


"ಓ ಪೈಗಂಬರರೇ! ನಾವು ಈ ಕುರ್‌ಆನನ್ನು ನಿಮ್ಮ ಕಡೆಗೆ ಬಾರ) 
ಮಾಡಿ ವೃತ್ತಾಂತಗಳನ್ನೂ ವಸ್ತುಸ್ಥಿತಿಗಳನ್ನೂ ಉತ್ತಮ ಶೈಲಿಯಲ್ಲಿ ನಿಮಗೆ ವಿವರಿಸಿ 
ಕೊಡುತ್ತೇವೆ. ಅನ್ಯಥಾ ಇದಕ್ಕಿಂತ ಮುಂಚೆ ನೀವು (ಈ ವಿಷಯಗಳ ಕುರಿತು) ಸಂಪೂರ್ಣ 
ಜೋದಧರಹಿತರಾಗಿದ್ದೀರಿ.'' (ಪವಿತ್ರ ಕುರ್‌ಆನ್‌, 12:3) 

ಅಧ್ಯಾಯದ ಕೊನೆಯಲ್ಲಿ ಹೀಗೆ ಹೇಳಲಾಗಿದೆ: 

''ಓ ಪೈಗಂಬರರೇ! ನಿಮ್ಮ ಮೇಲೆ ಅವತೀರ್ಣಗೊಳಿಸುತ್ತಿರುವ ಈ ಚರಿತ್ರೆ ಅದೃಶ್ಯ 
ವೃತ್ತಾಂತಗಳಲ್ಲೊಂದಾಗಿದೆ. ಅನ್ಯಥಾ ಯೂಸುಫರ ಸಹೋದರರು ಪರಸ್ಪರ ಒಮ್ಮತದೊಂದಿಗೆ 
ಕುತಂತ್ರ ಹೂಡಿದಾಗ ನೀವು ಅಲ್ಲಿರಲಿಲ್ಲ.'' (ಪವಿತ್ರ ಕುರ್‌ಆನ್‌, 12:102) 

ಆರಂಭದಲ್ಲಿ ಹೀಗೂ ಹೇಳಲಾಗಿದೆ: ` 

"ವಾಸ್ತವದಲ್ಲಿ ಯೂಸುಫ್‌ ಮತ್ತು ಅವರ ಸಹೋದರರ ಚರಿತ್ರೆಯಲ್ಲಿ ಈ 
ಪ್ರಶ್ನಿಸುವವರಿಗೆ ದೊಡ್ಡ ನಿದರ್ಶನಗ U (ಪವಿತ್ರ ಕುರ್‌ಆನ್‌, 12:7) 

ಈ ಕತೆಯಲ್ಲಿ ಅಲ್ಲಾಹನ ಮಹಿಮೆ' ಮತ್ತು. ಜಾಣ್ಮೆಯ ದೃಷ್ಟಾಂತಗಳೂ 
ಮುಹಮ್ಮದ್‌ರ(ಸ) ಪ್ರವಾದಿತ್ವದ ಸಂಕೇತಗಳೂ ಇವೆ. ಅಷ್ಟೇ ಅಲ್ಲ, ಈ ಘಟನೆಗಳೆಲ್ಲ 
ಸ್ವತಃ ಪ್ರಶ್ನೆ ಕೇಳುವವರಿಗೆ ಹೇಗೆ ಅನ್ವಯವಾಗುತ್ತದೆಯೆಂಬುದರ ಕುರುಹುಗಳೂ ಇವೆ. 
ಆದರೆ ಪ್ರಶ್ನಾರ್ಥಿಗಳು ಯಾವುದೇ ದೃಷ್ಟಾಂತದ ಮೇಲೂ ಆಲೋಚಿಸುವ ಗೊಡವೆಗೇ 
ಹೋಗಲಿಲ್ಲವೆಂಬುದು ಅತ್ಯಂತ ಕಳವಳಕಾರಿಯಾದ ಅಂಶವಾಗಿದೆ. 


ಅಸೂಯೆಯ ಕಾರಸ್ನಾನಗಳು 
ಹ.ಯೂಸುಫ್‌ರು(ಅ) ಪ್ರವಾದಿ ಇಬ್‌ರಾಹೀಮ್‌ರ(ಅ) ಪುತ್ರರಾಗಿದ್ದ ಪ್ರವಾದಿ 
ಇಸ್‌ಹಾಕ್‌ರ(ಅ) ಪುತ್ರ ಪ್ರವಾದಿ ಯಲ್‌ಕೂಬರ(ಅ) ಪುತ್ರರಾಗಿದ್ದರು. ಬೈಬಲ್‌ನ ಹೇಳಿಕೆ 
ಪ್ರಕಾರ, ಯಲ್‌ಕೂಬರಿಗೆ(ಅ) ನಾಲ್ವರು ಪತ್ನಿಯರು ಮತ್ತು ಹನ್ನೆರಡು ಮಂದಿ ಪುತ್ರರಿದ್ದರು. 
(12 ಮಕ್ಕಳಿರುವುದನ್ನು ಕುರ್‌ಆನ್‌ ಕೂಡಾ ಸಮರ್ಥಿಸುತ್ತದೆ) ಯೂಸುಫ್‌(ಅ) ಮತ್ತವರ 
ಸಹೋದರನಾದ ಬಿನ್‌ಯಮೂನ್‌ ಓರ್ವ ಪತ್ನಿಯಿಂದಲೂ ಉಳಿದ ಹತ್ತು ಮಂದಿ ಮಕ್ಕಳು 
ಇತರ ಪತ್ನಿಯರಿಂದಲೂ ಆಗಿದ್ದರು. (ತಪ್ಲೀಮುಲ್‌ ಕುರ್‌ಆನ್‌, ಭಾಗ-2) 
ಪ್ರವಾದಿ ಮುಹಮ್ಮದ್‌ರು(ಸ) ಯೂಸುಫ್‌ರ ಬಗ್ಗೆ, ಅತ್ಯಂತ ಸುಂದರ ಮತ್ತು 
ಮೋಹಕ ಶೈಲಿಯಲ್ಲಿ ವರ್ಣಿಸಿದ್ದಾರೆ-ಅಲ್‌ ಕರೀಮ್‌ ಇಬ್ನಿಲ್‌ ಕರೀಮ್‌ ಇಬ್ನಿಲ್‌ ಕರೀಮ್‌ 
ಇಬ್ನಿಲ್‌ ಕರೀಮ್‌(ಸನ್ಮಾನಿತನ ಪುತ್ರನಾದ ಸನ್ಮಾನಿತನ ಪುತ್ರನ ಸನ್ಮಾನಿತನ ಪುತ್ರನ 
ಸನ್ನಾನಿತ ಪುತ್ರ) [ತಪ್ಸೀರ್‌ ಮರ್ದುರಿಯಲ್ಲಿ ಬುಖಾರಿಯಿಂದ ಉಧೃತ] 
ಬಿನ್‌ಯಮೂನ್‌ನ ಜನನದ ವೇಳೆ ಅವರ ತಾಯಿ ಮರಣ ಹೊಂದಿದ್ದರು. 
ಯೂಸುಫ್‌(ಅ) ಕೂಡಾ ಆಗ ಎಳೆಯ ಪ್ರಾಯದವರಾಗಿದ್ದರು. ಅವರ ಮಲಸಹೋದರರೆಲ್ಲ 
ಅವರಿಗಿಂತ ಹಿರಿಯರಾಗಿದ್ದು, ಯುವಪ್ರಾಯದವರೂ ಶಕ್ತಿಶಾಲಿಗಳೂ ಆಗಿದ್ದರು. 


ಪ್ರವಾದಿ ಯೂಸುಫ್‌(ಆ) . 33 


ಹ.ಯಲ್‌ಕೂಬರು(ಅ) ಯೂಸುಫ್‌(ಅ) ಮತ್ತು ಬಿನ್‌ಯವೂನ್‌ರತ್ತ ಹೆಚ್ಚು 
ಗಮನವಿರಿಸುತ್ತಿದ್ದುದು ಮಾತ್ರವಲ್ಲ ಅವರನ್ನು ಇತರ ಸಹೋದರರಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು. 
ಇದಕ್ಕೆ ಎರಡು ಕಾರಣಗಳಿದ್ದುವು: ಒಂದನೆಯದಾಗಿ, ಬಿನ್‌ಯವೂನ್‌ ತಾಯಿಯಿಲ್ಲದ 
ತಬ್ಬಲಿಯಾಗಿದ್ದರು. ಅವರ ಪೋಷಣೆ ಸರಿಯಾಗಿ ಆಗುತ್ತಿರಲಿಲ್ಲ. ಯೂಸುಫ್‌(ಅ) ಕಿರಿಯ 
ಬಾಲಕನಾಗಿದ್ದು ತಾಯಿಯ ಅಗಲಿಕೆಯ ದುಃಖವು ಅವರನ್ನು ಹೆಚ್ಚು ಕಾಡುತ್ತಿದ್ದಿರಬಹುದು. 
ಎರಡನೆಯದಾಗಿ, ಯಲ್‌ಕೂಬರಿಗೆ(ಅ) ತನ್ನ ಮಕ್ಕಳ ಪೈಕಿ ಯೂಸುಫ್‌ರಲ್ಲಿ(ಅ) ಸಜ್ಜನಿಕೆಯ 
ಕುರುಹುಗಳು ಗೋಚರಿಸುತ್ತಿದ್ದುವು. ಅಲ್ಲದೆ ಅವರು ತನ್ನ ತಂದೆಯ ವಿಧೇಯ , 
ಪುತ್ರನೂಆಗಿದ್ದರು. ಬುದ್ಧಿಮತ್ತೆಯಲ್ಲೂ ಇತರರಿಗಿಂತ ಮುಂದಿದ್ದರು. ಇದಕ್ಕೆ ವೃತಿರಿಕ್ತವಾಗಿ, 
ಅವರ ಮಲಸಹೋದರರಲ್ಲಿ ಅಂತಹ ಯಾವುದೇ ಗುಣ ಸ್ವಭಾವವಿರಲಿಲ್ಲ. ಅವರಲ್ಲಿದ್ದ 
ಗುಣಸ್ವಭಾವಗಳು ಯಾವ ತಂದೆಯಮಟ್ಟಿಗೂ ಆಶಾದಾಯಕವಾಗಿರಲಿಲ್ಲ. ತಮ್ಮ ತಂದೆ 
ತಮಗಿಂತ ಹೆಚ್ಚು ಅವರನ್ನು ಪ್ರೀತಿಸಲು ಕಾರಣವೇನು? ತಮ್ಮಲ್ಲಿಲ್ಲದ ಅಂತಹ ಯಾವ 
ಗುಣಗಳು ಅವರಲ್ಲಿವೆ. ತಮ್ಮತ್ತ ಕಡಿಮೆ ಗಮನಹರಿಸಲು ತಮ್ಮಲ್ಲಿ ಯಾವ 
ದುರ್ಗುಣಗಳಿವೆಯೆಂಬುದನ್ನು ಅವರು ಆಲೋಚಿಸಬೇಕಿತ್ತು. ಅವರು ಯುವಕರೂ ಶಕ್ತಿಶಾಲಿಗಳೂ 
ಆಗಿರುವಾಗ ತಮ್ಮ ತಂದೆಗೆ ಅವರಿಗಿಂತ ಹೆಚ್ಚು ಸಹಾಯ ಮಾಡುವವರೂ ಆಪತ್ಸಾಂಧವರೂ 
ಆಗಬಹುದಿತ್ತು. ಆದರೆ ಅವರು ತಮ್ಮನ್ನೇ ಅವಲೋಕಿಸುವ ಬದಲು ತಮ್ಮ ತಂದೆಯ 
ಬಗ್ಗೆ ಕೆಟ್ಟಭಾವನೆ ತಳೆದರು. ತಂದೆಯು ತಮ್ಮೊಂದಿಗೆ ಅನ್ಯಾಯದಿಂದ ವರ್ತಿಸುತ್ತಿದ್ದಾರೆಂದು 
ಭಾವಿಸಿ ಹೊಟ್ಟೆಕಿಚ್ಚಿನಿಂದ ಉರಿಯ ತೊಡಗಿದರು. ಯೂಸುಫ್‌ರು ತಮ್ಮ ದಾರಿಗೆ 
ಅಡ್ಡಿಯಾಗಿ ಅವರಿಗೆ ಕಾಣಿಸತೊಡಗಿದರು. ಈ ಕತೆಯನ್ನು ಆರಂಭಿಸುತ್ತಾ ಕುರ್‌ಆನ್‌ ಅವರ 
ಮನೋಸ್ಥಿತಿಯನ್ನು ಅತ್ಯಂತ, ಸಮಗ್ರವಾಗಿ ಮತ್ತು ಸಂತುಲಿತ ಶೈಲಿಯಲ್ಲಿ ಈ ರೀತಿ 
ವರ್ಣಿಸಿದೆ- ಮ ; 

"ಅವರ ಸಹೋದರರು ಪರಸ್ಪರ ಹೀಗೆ ಹೇಳಿದರು: ಈ ಯೂಸುಫನೂ ಅವನ . 
ಸಹೋದರನೂ ನಮ್ಮ ತಂದೆಗೆ ನಮ್ಮೆಲ್ಲರಿಗಿಂತ ಹೆಚ್ಚು ಪ್ರಿಯರಾಗಿರುತ್ತಾರೆ. ವಸ್ತುತಃ 
ನಾವು ಒಂದು ಸಂಪೂರ್ಣ ಕೂಟವಾಗಿದ್ದೇವೆ. ನಿಜ ಹೇಳುವುದಾದರೆ ನಮ್ಮ 
ಪಿತ್ಯವರ್ಯರು ಸ್ಪಷ್ಟ ದುರ್ಮಾರ್ಗದಲ್ಲಿದ್ದಾರೆ.'" (ಪವಿತ್ರ ಕುರ್‌ಆನ್‌, 12:8) 

ಇದು ಮಹಾ ಮಾರಿಯಾದ ಹೊಟ್ಟೆಕಿಚ್ಚಿನ ಪ್ರಥಮ ಕಾರಸ್ಥಾನವಾಗಿತ್ತು. ಅದರಿಂದಾಗಿ 
ಅವರ ಆಲೋಚನಾ ಶಕ್ತಿಯೇ ಕೆಟ್ಟು ಹೋಗಿತ್ತು. ತಮ್ಮ ತಂದೆ ಅಲ್ಲಾಹನ ಪ್ರವಾದಿಯಾಗಿದ್ದೂ 
ತಮ್ಮೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ಅನ್ಕಾಯ ಮಾಡುತ್ತಾರೆಂದಾದರೆ ಇನ್ನು ನ್ಯಾಯ 
ಮತ್ತು ಸರಿಯಾದ ವರ್ತನೆಯನ್ನು ಯಾರಿಂದ ನಿರೀಕ್ಷಿಸಬಹುದೆಂದು ಯೋಚಿಸುವಷ್ಟು 
ವ್ಯವಧಾನ ಕೂಡಾ ಅವರಿಗಿರಲಿಲ್ಲ. ಅವರು ತಮ್ಮ ಮುಂದೆ ಬಂದ ' ಈ ಸಣ್ಣ 
ಪರೀಕ್ಷೆಯಲ್ಲೂ ವಿಫಲರಾದರು. 


14 ಪ್ರವಾದಿ ಯೂಸುಫ್‌(ಲೆ) 


ಸಾ 
ಯೂಸುಫ್‌ರ(ಅ) ಬಗ್ಗೆ ಅವರ ಸಹೋದರರು ಹೊಟ್ಟೆಕಿಚ್ಚಿನಿಂದ 
ಉರಿಯುತ್ತಿದ್ದಾರೆಂಬ ವಿಷಯ ಯಲ್‌ಕೂಬರಿಗೆ(ಅ) ತಿಳಿದಿತ್ತು. ಹೀಗಿರಲು ಒಮ್ಮೆ 
ಯೂಸುಫ್‌ರಿಗೆ(ಅ) ಒಂದು ಕನಸುಚಿತ್ತು. 
''ಯೂಸುಫರು(ಅ) ತಮ್ಮ ಪಿತರೊಡನೆ ಹೇಳಿದ ಸಂದರ್ಭವಿದು- ಅಪ್ಪಾ, 
ಹನ್ನೊಂದು ನಕ್ಷತ್ರಗಳೂ ಸೂರ್ಯನೂ ಚಂದ್ರನೂ ನನಗೆ ಸಾಷ್ಟಾಂಗವೆರಗುತ್ತಿರುವುದನ್ನು 
- ನಾನು ಸ್ವಪ್ನದಲ್ಲಿ ಕಂಡಿರುತ್ತೇನೆ.'' (ಪವಿತ್ರ ಕುರ್‌ಆನ್‌, 12:4) 
ಹನ್ನೊಂದು ನಕ್ಸತ್ರಗಳೆಂದರೆ ಯೂಸುಫ್‌ರ(ಅ) ಹನ್ನೊಂದು ಮಂದಿ ಸಹೋದರರು, 
ಸೂರ್ಯನೆಂದರೆ ಹ.ಯಆ್‌ಕೂಬ್‌(ಅ) ಮತ್ತು ಚಂದ್ರನೆಂದರೆ ಯೂಸುಫ್‌ರ(ಅ) ಮಲತಾಯಿ 
ಎಂಬುದು ಕನಸಿನ ಫಲವಾಗಿತ್ತು. ತನ್ನ ಕನಸನ್ನು ಅವರು ತನ್ನ ಪ್ರೀತಿಪಾತ್ರರೂ ರಕ್ಷಕರೂ 
ಆದ ತಂದೆಗೆ ತಿಳಿಸಿದಾಗ, ಅವರ ಸಹೋದರರ ಹೊಟ್ಟೆಕಿಚ್ಚಿನ ವಿಚಾರ ಅವರಿಗೆ ತಿಳಿಸುವುದು 
ಸೂಕ್ತವೆಂದು ಯಲ್‌ಕೂಬರಿಗೆ(ಅ) ಅನಿಸಿತು. ಆದುದರಿಂದ ಅವರು ತಮ್ಮ ಪ್ರಿಯ ಪುತ್ರನಿಗೆ 
ಹೀಗೆ ಆದೇಶಿಸಿದರು: 
“ಮಗನೇ, ನಿನ್ನ ಈ ಸ್ವಪ್ನವನ್ನು ನಿನ್ನ ಸಹೋದರರೊಡನೆ ಹೇಳಬೇಡ. ಅನ್ಯಥಾ 
ಅವರು ನಿನ್ನ ವಿರುದ್ಧ ಒಳಸಂಚು ನಡೆಸುವರು. ವಾಸ್ತವದಲ್ಲಿ ಶೈತಾನನು ಮಾನವನ 
ಪ್ರತ್ಯಕ್ಷ ಶತ್ರು." (ಪವಿತ್ರ ಕುರ್‌ಆನ್‌, 12:5) 
ಹ.ಯಲ್‌ಕೂಬ್‌ರು(ಅ) ಯೂಸುಫ್‌ರ(ಅ) ಸಹೋದರರ ಮತ್ಸರವನ್ನು ಅರಿತಿದ್ದುದು 
ಮಾತ್ರವಲ್ಲ, ಆ ಮಕ್ಕಳು ಅವರ ಶಿಕ್ಷಣ-ತರಬೇತಿಯಿಂದ ಯಾವ ಪ್ರಯೋಜನವನ್ನೂ 
ಪಡೆದಿರಲಿಲ್ಲವೆಂದೂ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅವರು ಶೈತಾನನ ಉರುಳಿಗೆ 
ಬಿದ್ದಿದ್ದರು. ನೀತಿ-ಚಾರಿತ್ರ್ಯದ ದೃಷ್ಟಿಯಿಂದ ನೋಡಿದರೆ, ಅವರು ತಮ್ಮ ಸ್ಪಾರ್ಥ 
ಸಾಧನೆಗಾಗಿ ಯಾವ ಕೃತ್ಯವನ್ನೆಸಗಲೂ ಹೇಸದವರಾಗಿದ್ದರು. ಅಷ್ಟೇ. ಅಲ್ಲ, ಯೂಸುಫ್‌ರ(ಅ) 
ಬಗ್ಗೆ ಯಲ್‌ಕೂಬರು(ಅ) ಯಾವ ಭಾವನೆಯನ್ನು ಹೊಂದಿದ್ದರೋ ಅದನ್ನು ಆ ಕನಸು 
, ಸಮರ್ಥಿಸಿತು. ಅವರು ಮುಗ್ಧರಾದ ತಮ್ಮ ಪ್ರಿಯ ಪುತ್ರನನ್ನುದ್ದೇಶಿಸಿ ಹೀಗೆ ಹೇಳುತ್ತಾರೆ: ' 
“(ನೀನು ಸ್ವಪ್ನದಲ್ಲಿ ಕಂಡ) ಹಾಗೆಯೇ ಆಗುವುದು. ನಿನ್ನ ಪ್ರಭುವು ನಿನ್ನನ್ನು(ತನ್ನ 
ಕಾರ್ಯಕ್ಕಾಗಿ) ಆಯ್ದುಕೊಳ್ಳುವನು. ನಿನಗೆ ವಿಷಯಗಳ ಆಳಕ್ಕೆ ತಲಪುವುದನ್ನು ಕಲಿಸಿ 
ಕೊಡುವನು ಮತ್ತು ಇದಕ್ಕೆ ಮುಂಚೆ ನಿನ್ನ ಪೂರ್ವಜರಾಗಿದ್ದ ಇಬ್‌ರಾಹೀಮ್‌(ಆಅ), 
ಇಸ್‌ಹಾಕ್‌ರ(ಅ) ಮೇಲೆ ತನ್ನ ಭವ್ಯ ಕೊಡುಗೆಯನ್ನು ಪೂರ್ಣಗೊಳಿಸಿದಂತೆ, ನಿನ್ನ ಮೇಲೂ 
ಯಲ್‌ಕೂಬರ(ಅ) ವಂಶಜರ ಮೇಲೂ ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ 
ಪ್ರಭು ಸರ್ವಜ್ಞನೂ ಧೀಮಂತನೂ ಆಗಿರುತ್ತಾನೆ." . " (ಪವಿತ್ರ ಕುರ್‌ಆನ್‌, 12:6) 
` ಯೂಸುಫ್‌(ಅ) ಮತ್ತವರ ಸಹೋದರರ ಬಗ್ಗೆ ಯಲ್‌ಕೂಬರು(ಅ) ಹೇಳಿದ 
ಮಾತುಗಳೆಲ್ಲ ಯೂಸುಫ್‌ರಿಗೆ(ಅ) ಮುಂದೆ ಬರಲಿರುವ ಘಟನೆಗಳಲ್ಲಿ ಮಾರ್ಗದರ್ಶನ 


ಚ ಪ್ರವಾದಿ ಯೂಸುಫ್‌(ಆ) 15 


ನೀಡಿತು. ಅದರಿಂದ ಅವರ ಸಜ್ಜನಿಕೆ ಮತ್ತು ನೀತಿ-ಚಾರಿತ್ರ್ಯಗಳಿಗೆ ಭದ್ರ ನೆಲೆಯೊದಗಿತು. 
ಅವರಿಗೆ ತಮ್ಮ ಸಹೋದರರ ಕೆಟ್ಟಿ ಭಾವನೆಗಳ ಬಗ್ಗೆ ತಿಳಿಯಿತು. ಅಷ್ಟೇ ಅಲ್ಲ, 
ಅಲ್ಲಾಹನು ತನ್ನಿಂದ ಯಾವುದೋ ಒಂದು ದೊಡ್ಡ ಕೆಲಸ ಮಾಡಿಸುವವನಿದ್ದಾನೆಂದೂ 
ತಿಳಿಯಿತು. 


ಕೊಲೆಯ ಸಂಚು 
ಕೊನೆಗೂ ಯೂಸುಫರೊಂದಿಗೆ(ಅ) ಅವರ ಸಹೋದರರ ಮತ್ಸರದ ಲಮ 
ಸ್ಫೋಟಗೊಂಡಿತು. ಅದರಿಂದ ಕೊಲೆಯ ಸಂಚಿನ ಲಾವಾರಸ ಹರಿಯತೊಡಗಿತು. ಅವರ 
ಸಂಚನ್ನು ಕುರ್‌ಆನ್‌ ಈ ರೀತಿ ಅನಾವರಣಗೊಳಿಸಿತು: 

“ನಿಮ್ಮ ತಂದೆಯವರ ಒಲವು ನಿಮ್ಮ ಕಡೆಗೇ ಆಗುವಂತೆ ವು 
ಯೂಸುಫನನ್ನು(ಅ) ಕೊಂದು ಹಾಕಿರಿ. ಇಲ್ಲವೆ ಎಲ್ಲಾದರೂ ಎಸೆದುಬಿಡಿರಿ. ಈ ಕಾರ್ಯವನ್ನು 
ಮಾಡಿಯಾದ ಬಳಿಕ ಸಜ್ಜನರಾಗಿರಬೇಕು. ಆಗ ಅವರಲ್ಲೊಬ್ಬನು ಹೇಳಿದನು- 
ಯೂಸುಫ್‌ನನ್ನು(ಅ) ಕೊಲ್ಲಬೇಡಿರಿ. ಹಾಗೇನಾದರೂ ಮಾಡಲೇ ಬೇಕೆಂದಾದರೆ 
ಯಾವುದಾದರೊಂದು ಆಳವಾದ ಬಾವಿಯಲ್ಲಿ ಹಾಕಿಬಿಡಿರಿ. ಯಾವುದಾದರೊಂದು ಪ್ರವಾಸಿ 
ತಂಡವು ಅವನನ್ನು ಎತ್ತಿ ಕೊಂಡೊಯ್ಯಬಹುದು.'' (ಪವಿತ್ರ ಕುರ್‌ಆನ್‌, 12:9-10) 

. ಮತ್ಸರವು ಒಂದು ಅತ್ಯಂತ ಕೆಟ್ಟ ಗುಣವಾಗಿದೆ. ಅದು ಮತ್ಸರಿಯ ಮನಸ್ಸನ್ನು 
ಪಕ್ಷಪಾತ ಪೀಡಿತಗೊಳಿಸಿ ಬಿಡುತ್ತದೆ. ಅದರ ಯೋಚಿಸುವ ಮತ್ತು ಗ್ರಹಿಸುವ ಸಾಮರ್ಥ್ಯವೇ 
ಹೋಗಿ ಬಿಟ್ಟಿರುತ್ತದೆ. ಒಂದು ವೇಳೆ ಅವರಲ್ಲಿ ಈ ಸಾಮರ್ಥ್ಯವಿದ್ದಿದ್ದರೆ, ತಮ್ಮ ತಂದೆಯ 
ಪ್ರೀತಿಯ ಮಗನನ್ನು ಕೊಂದು ಅಥವಾ ಎಲ್ಲಾದರೂ ಬಿಟ್ಟು ಬಂದು ತಮ್ಮ ತಂದೆಯ 
ಗಮನವನ್ನು ತಮ್ಮೆಡೆಗೆ ತಿರುಗಿಸಲು ಸಾಧ್ಯವಿಲ್ಲವೆಂದೂ ಈ ಕೃತ್ಯದಿಂದ ತಂದೆಯ 
ಮನಸ್ಸಿನಲ್ಲಿ ತಮ್ಮ ಬಗ್ಗೆ ಕೋಪ-ಜಿಗುಪ್ಸೆಯನ್ನಷ್ಟೇ ಸೃಷ್ಟಿಸೀತು ಪ್ರೀತಿ 
ಹುಟ್ಟಿಸುತ್ತಿರಲಿಲ್ಲವೆಂದೂ ಅವರು ಆಲೋಚಿಸುತ್ತಿದ್ದರು. ಆದರೆ ಮತ್ಸರಿಗಳಿಗೆ ಹಾಗೆ 
ಯೋಚಿಸಲು ಸಮಯವೆಲ್ಲಿದೆ? ಮತ್ಸರಿಯು ಮತ್ಸರಕ್ಕೊಳಗಾದವನಿಗೆ ದಕ್ಕಿರುವ ಸೌಭಾಗ್ಯಗಳು, 
ತನಗೆ ಸಿಕ್ಕಿದರೂ ಸಿಗದೆ ಇದ್ದರೂ, ಅವನಿಂದ ಕಸಿಯಲ್ಪಡಬೇಕೆಂದು ಬಯಸುತ್ತಾನೆ. 


ಇನ್ನೊಂದು ಆತ್ಮವಂಚನೆ 
ಯೂಸುಫ್‌ರ(ಅ) ಸಹೋದರರು ಈ ನೀಚ ಮತ್ತು ಹೇಡಿತನದ ಒಳಸಂಚು 
ನಡೆಸುವಾಗ 'ಈ ಕಾರ್ಯ ಮಾಡಿಯಾದ ಬಳಿಕ ಸಜ್ಜನರಾಗಿರಬೇಕು' ಎಂದು ಹೇಳಿದ್ದರಷ್ಟೆ. 
ಇದೊಂದು ದೊಡ್ಡ ಆತ್ಮವಂಚನೆಯಾಗಿದೆ ಅಥವಾ ಶೈತಾನನ ಕುತಂತ್ರವಾಗಿರುತ್ತದೆ. 
ಇದರಿಂದ ಪಾರಾಗುವುದು ಪಕ್ಪಗೊಳ್ಳದ ಧರ್ಮಭಕ್ತರಿಂದ ಸಾಧ್ಯವೇ ಇಲ್ಲ. ಈ ವಾಕ್ಕದ 
ವ್ಯಾಖ್ಯಾನವನ್ನು ಪ್ರಖ್ಯಾತ ಕುರ್‌ಆನ್‌ ವ್ಯಾಖ್ಯಾನಕಾರರಾದ ಸಯ್ಯದ್‌ ವು 
ಹೀಗೆ ಮಾಡಿದ್ದಾರೆ; 


/ 
16 ಪ್ರವಾದಿ ಜೂಸಫ್‌ 


ಈ ವಾಕ್ಯವು ತಮ್ಮನ್ನು ತಮ್ಮ ಚಿತ್ತಾಕಾಂಕ್ಷೆಯ ವಶಕ್ಕೆ ನೀಡುವುದರ ಜೊತೆಗೆ 


ಈಮಾನ್‌(ವಿಶ್ವಾಸ) ಮತ್ತು ಒಳಿತಿನೊಂದಿಗೂ ಸ್ವಲ್ಪಂಶ ಸಂಬಂಧವಿರಲಿ ಎಂದು 
ಭಾವಿಸುವಂತಹವರನ್ನು ಸರಿಯಾಗಿಯೇ ಪ್ರತಿನಿಧಿಸುತ್ತದೆ. ಇಂತಹ ಮಂದಿ ಏನಾದರೂ ಕೆಟ್ಟ 
ಕೆಲಸವನ್ನು ಮಾಡ ಬಯಸಿದಾಗ ಮೊದಲು, ಈಮಾನಿನ ಬೇಡಿಕೆಗಳನ್ನು ಬದಿಗೆ ಸರಿಸಿ 
ತಮ್ಮ ಚಿತ್ತದ ಬೇಡಿಕೆಯನ್ನು ಈಡೇರಿಸಲು ಮುಂದಾಗುತ್ತಾರೆ. ಆದರೆ ಅವರ ಆತ್ಮಸಾಕ್ಷಿ 
ಒಳಗಿನಿಂದ ಚುಚ್ಚುವಾಗ, "ಸ್ವಲ್ಪ ನಿಲ್ಲು, ನಮ್ಮ ಒಂದು ಕೆಲಸಕ್ಕೆ ಅಡ್ಡಿಯಾಗಿರುವ ಈ 
ಒಂದು ಅನಿವಾರ್ಯ ಪಾಪವನ್ನು ಮಾಡಿ ಬಿಟ್ಟ ನಂತರ ನೋಡು. ಇನ್‌ಶಾ 
ಅಲ್ಲಾಹ್‌(ಅಲ್ಲಾಹನಿಚ್ಛಿಸಿದರೆ) ನಾವು ತೌಬಾ ಮಾಡಿ, ನೀನು ನಮ್ಮನ್ನು ಕಾಣಬಯಸುವ 
ರೀತಿಯಲ್ಲಿ ನಾವು ಸಜ್ಜ ನರಾಗಿ ಬಿಡುತ್ತೇವೆ" ಎಂದು ಹೇಳಿ ಮನಸ್ಸನ್ನು ಸಾಂತ್ವನ 
ಪಡಿಸುತ್ತಾರೆ. (ತಪ್ಪೀಮುಲ್‌ ಕುರ್‌ಆನ್‌, ಭಾಗ-2) 


ಕಾರ್ಯರೂಪಕ್ಕಿಳಿದ ಒಳಸಂಚು 

ಯೂಸುಫ್‌ ರನ್ನು (ಅ) ತಮ್ಮ ಜೊತೆ ವಿಹಾರಕ್ಕೆಂದು ಕಳಿಸಿಕೊಡುವಂತೆ ಅವರ 
ಸಹೋದರರು ತಮ್ಮ ವಾಕ್ಚಾತುರ್ಯದಿಂದಲೂ ಸುಳ್ಳು ಮಾತುಗಳಿಂದಲೂ ತಮ್ಮ 
"ವಯೋವೃದ್ಧ ತಂದೆಯನ್ನು ಒಪ್ಪಿಸಿಯೇ ಬಿಟ್ಟರು. ಆ ಸಂದರ್ಭದಲ್ಲಿ ಯಲ್‌ಕೂಬರು(ಲ), 
'ನೀವು ಅವನನ್ನು ನಿರ್ಲಕ್ಷಿಸಿ ಬಿಟ್ಟರೆ ಆತನನ್ನು ತೋಳ ಹಿಡಿದು ಹರಿದು ತಿಂದೀತೋ 
ಎಂದು ನನಗೆ ಭಯವಾಗುತ್ತಿದೆ' ಎಂದು ಹೇಳಿದರು. (ಏಕೆಂದರೆ ಆ ಪ್ರದೇಶದಲ್ಲಿ 
ತೋಳಗಳು ಹೆಚ್ಚಾಗಿದ್ದುವು) ಆಗ ಅವರು, 'ನಾವು ಒಂದು ತಂಡವೇ ಇರುವಾಗ ತೋಳವು 
ಯೂಸುಫ್‌ನನ್ನು(ಅ) ಹೇಗೆ ತಿಂದೀತು?' ಎಂದು ತಂದೆಯನ್ನು. ಸಮಾಧಾನ ಪಡಿಸಿದರು. 
ಆದರೆ ಈ ಭಯವನ್ನು ಆ ಸಹೋದರರು ಒಂದು ನೆಪವಾಗಿ ತಮ್ಮ ಮನದಲ್ಲಿರಿಸಿದರು. 
ಅಂತೂ ಅವರು ಯೂಸುಫ್‌ರನ್ನು(ಅ) ತಮ್ಮೊಂದಿಗೆ ಕರೆದೊಯ್ದರು. ಆದರೆ ಅವರನ್ನು 
ಕೊಲ್ಲುವ ವಿಚಾರದಲ್ಲಿ ಅವರಲ್ಲಿ ಒಮ್ಮತವುಂಟಾಗಲಿಲ್ಲ, ಅವರನ್ನು ಕೊಲ್ಲಲೇ ಬಾರದೆಂದು 
ಒಬ್ಬ ಸಹೋದರನು ಪಟ್ಟು ಹಿಡಿದಿದ್ದನು. `ಕೊನೆಗೆ, ಅವರನ್ನು ಒಂದು ಪಾಳು ಬಾವಿಗೆ 
ದೂಡಿ ಬಿಡುವುದೆಂದು ಅವರು ಸರ್ವಾನುಮತದೊಂದಿಗೆ ತೀರ್ಮಾನಿಸಿದರು. ಅದರಂತೆ 
ಅವರು ಯೂಸುಫ್‌ರನ್ನು(ಅ) ಒಂದು ಪಾಳು ಬಾವಿಗೆ ಹಾಕಿಬಿಟ್ಟರು. 


ವಿಫಲಗೊಂಡ ಒಳಸಂಚು 

`ಸಂಜೆಯಾಗುವಾಗ ಆ ಮಕ್ಕಳು ಅಳುತ್ತಾ ರೋದಿಸುತ್ತಾ ತಂದೆಯ ಬಳಿಗೆ ಬಂದರು. 
ಯಾವ ಆಶಂಕೆಯನ್ನು ತಂದೆ ಯಲ್‌ಕೂಬ್‌(ಅ) ವ್ಯಕ್ತಪಡಿಸಿದ್ದರೋ ಅದನ್ನೇ ಅವರ 
ಮುಂದಿಟ್ಟರು. ''ಯೂಸುಫ್‌ನನ್ನು(ಆ) ನಮ್ಮ ಸಾಮಾನುಗಳ ಬಳಿಯಲ್ಲಿ ಬಿಟ್ಟು ನಾವು 
ಓಟದ ಸ್ಪರ್ಧೆಯಲ್ಲಿ ಏರ್ಪಟ್ಟಿದ್ದೆವು. ಅಷ್ಟರಲ್ಲಿ ತೋಳವೊಂದು ಬಂದು ಅವನನ್ನು ತಿಂದು 
ಬಿಟ್ಟಿ: ತು" R ಸ " (ಪವಿತ್ರ ಕುರ್‌ಆನ್‌, 12:17) 


ಪ್ರವಾದಿ ಯೂಸುಫ್‌(ಆ) 17 


'ಎಂದವರು ತಂದೆಗೆ ತಿಳಿಸಿದರು. ಅದಕ್ಕೆ ಸಾಕ್ಷಿಯಾಗಿ ಅವರು ಯೂಸುಫ್‌ರ(ಅ) 
ಅಂಗಿಗೆ ಸ್ವಲ್ಪ ಕೃತಕ ರಕ್ತ ತಾಗಿಸಿ ತಂದಿದ್ದರು. ಆದರೆ ಅಂಗಿ ಎಲ್ಲೂ ಹರಿದಿರಲಿಲ್ಲವೆಂಬುದು 
ಗಮನಾರ್ಹ. ಅಸೂಯೆಯ ಕಾರಣ ಅವರ ಮಸ್ತಿಷ್ಯಗಳು ಕೆಟ್ಟೇ ಹೋಗಿತ್ತು. ತೋಳ 
ಯಾರನ್ನಾದರೂ ಹಿಡಿದು ತಿಂದರೆ, ಬಲಿಯಾದವನ ಅಂಗಿ ಹೇಗೆ ಸುರಕ್ಷಿತವಾಗಿ ಉಳಿಯುತ್ತದೆ 
ಎಂದು ಯೋಜಿಸುವಷ್ಟು ಸ್ತಿಮಿತವೂ ಅವರ ಬುದ್ಧಿಃ ಗಿರಲಿಲ್ಲ. ಯಲ್‌ಕೂಬರು(ಅ) ಅವರಿಗೆ 
ನೀಡಿದ ಉತ್ತರವು ಕುರ್‌ಆನಿನಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಅದು ಮುಂದೆ ಬರಲಿದೆ. ವ್ಯಾಖ್ಯಾನ 
ಗ್ರಂಥಗಳಲ್ಲಿರುವಂತೆ, ಯಲ್‌ಕೂಬರು(ಅ) ಮಕ್ಕಳೊಂದಿಗೆ ಹೀಗೆ ಹೇಳಿದರು- "ಅಯ್ಯೋ! 
ಮಕ್ಕಳೇ, ಎಷ್ಟೊಂದು ಸಹನಶೀಲ ಮತ್ತು ದಯೆಯುಳ್ಳಿ ತೋಳವದು! ಯೂಸುಫ್‌ನನ್ನಂತೂ(ಅ) 
ಅದು ಹರಿದು ತಿಂದುಬಿಟ್ಟಿತು. ಆದರೆ ಅವನ ಅಂಗಿಗೆ ಅದು ತನ್ನ ಉಗುರನ್ನಾಗಲೀ 
ಹಲ್ಲುಗಳನ್ನಾಗಲಿ ತಾಗಿಸಲಿಲ್ಲವಲ್ಲ. ಅದು ಅವನನ್ನು ಎತ್ತಿಕೊಂಡು ಹೋಯಿತು. `ಆದರೆ 
ಅವನ ಅಂಗಿಯನ್ನು ತೆಗೆದು ಅಲ್ಲೇ ಬಿಟ್ಟು ಹೋಯಿತಲ್ಲ! ಎಂತಹ ಬುದ್ಧಿವಂತ 
ತೋಳವದು." 


ಸಹನೆಯ ಮೂರ್ತರೂಪ 

ಯಲ್‌ಕೂಬರ(ಅ) ' ಉತ್ತರವನ್ನು ಕುರ್‌ಆನ್‌ ಈ ರೀತಿ ಪ್ರಸ್ತಾಪಿಸಿದೆ- 

''ಅವರ ತಂದೆ ಹೇಳಿದರು- ಆದರೆ ನಿಮ್ಮ ಬ್ರಷ್ಟ ಚಿತ್ತಗಳು ನಿಮಗೆ ಒಂದು ದೊಡ್ಡ 
ಕಾರ್ಯವನ್ನು ಸುಲಭಗೊಳಿಸಿಬಿಟ್ಟವು. ಚಿಂತಿಲ್ಲ, ನಾನು ಸಹಿಸಿಕೊಳ್ಳುವೆನು ಚೆನ್ನಾಗಿ 
ಸಹಿಸಿಕಿ ಳ್ಳುವೆನು. ನಿಮ್ಮ ಸೃಷ್ಟನೆಯ ಮಾತುಗಳ ಬಗ್ಗೆ ಅಲ್ಲಾಹನೊಡನೆ ಮಾತ್ರ 
ಸಹಾಯ ಯಾಚಿಸಬಹುದಷ್ಟೆ.'' ' (ಪವಿತ್ರ ಕುರ್‌ಆನ್‌, 12:18) 

ಇಂತಹ ಉತ್ತರವನ್ನು ಓರ್ವ ಪ್ರವಾದಿಯಿಂದ ಮಾತ್ರ ನೀಡಲು ಸಾಧ್ಯ. ಇಂತಹ 
ಪರಿಸ್ಥಿತಿಯಲ್ಲಿ ಸಹನೆವಹಿಸುವುದು ಹೇಗೆಂಬ ಬಗ್ಗೆ ಪ್ರತಿಯೊಬ್ಬ ವಿಶ್ವಾಸಿಗೂ ಇದರಲ್ಲಿ 
ಆದರ್ಶವಿದೆ. ಅತ್ಯುತ್ತಮ ಸಹನೆ(ಸಬ್ರುನ್‌ ಜಮೂಲ್‌) ಅಂದರೆ ಸೃಷ್ಟಿಗಳ ಮುಂದೆ ಕೋರಿಕೆ 
ಸಲ್ಲಿಸದ, ಆರ್ತನಾದವಿಲ್ಲದ, ಯಾರಲ್ಲೂ ಮೊರೆಯಿಡದಂತಹ ಸಹನೆ. ಕೋರಿಕೆ 
ಸಲ್ಲಿಸುವುದಾದರೆ ಅಲ್ಲಾಹನ ಮುಂದೆ ಮಾತ್ರ. ಕಳವಳ, ದುಃಖದಿಂದ ತುಂಬಿದ ಮನಸ್ಸನ್ನು 
ತೆರೆದಿಡುವುದಾದರೆ ಕೇವಲ ಆತನ ಮುಂದೆ. ಯಲ್‌ಕೂಬರು(ಅ) ಇನ್ನೊಂದು ಕಡೆ ಈ 
ರೀತಿ ಹೇಳಿದ್ದರು- 

"ನಾನು ನನ್ನ ತಲ್ಲಣ ಮತ್ತು ದುಃಖದ ಮೊರೆಯನ್ನು ಅಲ್ಲಾಹನ ಹೊರತು 
ಇನ್ನಾರೊಡನೆಯೂ ಇಡುವುದಿಲ್ಲ." (ಪವಿತ್ರ ಕುರ್‌ಆನ್‌, 12:86) 

ಅತ್ಯುತ್ತಮ ಸಹನೆಯಿಲ್ಲದಿದ್ದರೆ ಸಂಕಷ್ಟ, ಕಳವಳ, ದುಃಖಗಳಿಗೆ ಯಾರಿಗೂ 
ಪರಲೋಕದಲ್ಲಿ ಪುಣ್ಮ ಸಿಗಲಾರದು. ಸಂಕಷ್ಟಗಳ ವೇಳೆ ಅತ್ಯುತ್ತಮ ಸಹನೆ ವಹಿಸುವಂತೆ 
ಪ್ರವಾದಿ ಮುಹಮ್ಮದ್‌ರಿಗೇಸ) ಆಜ್ಞಾಪಿಸಲಾಗಿದೆ. 

"ತಾಳ್ಮೆ ವಹಿಸಿರಿ, ಸಭ್ಯ ತಾಳ್ಮೆ'' (ಪವಿತ್ರ ಕುರ್‌ಆನ್‌, 70:05) 


18 ಪ್ರವಾದಿ ಯೂಸುಫ್‌(ಆ) 


ಯಲ್‌ಕೂಬರು(ಅ) ತಮಗೆದುರಾದ ಈ ದೊಡ್ಡ ಸತ್ವಪರೀಕ್ಷೆಯಲ್ಲಿ ಸಂಪೂರ್ಣ 
ಯಶಸ್ವಿಯಾದರು. ಯೂಸುಫ್‌ರ(ಆ) ಸಹೋದರರು ಒಂದು ಸಣ್ಣ ಪರೀಕ್ಷೆಯಲ್ಲೂ 
ಪರಾಜಯ ಹೊಂದಿದರು. ಅವರ ಒಳಸಂಚು ಕೂಡಾ ದಯನೀಯವಾಗಿ ಮಣ್ಣು ಮುಕ್ಕಿತು. 
ಯಲ್‌ಕೂಬರಿಗೆ(ಅ) ಯೂಸುಫ್‌ರೊಂದಿಗೆ(ಅ) ಈ ವರೆಗೂ ಇದ್ದ ಪ್ರೀತಿ ಅವರ 
ಅನುಪಸ್ಥಿತಿಯಲ್ಲಿ ನೂರು ಪಟ್ಟು ಹೆಚ್ಚಿತು. ಕುತಂತ್ರಿಗಳಾದ ಅವರ ಸಹೋದರರ ಪಾಲಿಗೆ 
ಈ ಪ್ರೀತಿಯ ಒಂದು ಸಾಮಾನ್ಮ ಪಾಲೂ ದಕ್ಕದೆಹೋಯಿತು. ಯೂಸುಫ್‌ರನ್ನು(ಅ) 
ಅಳಿಸುವ ಮೂಲಕ ತಮ್ಮ ತಂದೆಯ ಗಮನವನ್ನು ತಮ್ಮತ್ತ ಸೆಳೆಯಬಹುದೆಂಬ ಅವರ 
ಲೆಕ್ಕಾಚಾರ ಬುಡಮೇಲಾಯಿತು. ` 


ಒಂದು ಪ್ರಶ್ನೆ 

ಅವರು ತಮ್ಮ ತಂದೆಯ ಗಮನ ತಮ್ಮತ್ತ ತಿರುಗಿಸಲು ಬಯಸಿದ್ದುದರ 
ಪ್ರೇರಣೆಯೇನಾಗಿತ್ತು ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತವಾಗಿದೆ. ಅಲ್ಲಾಹನ ಪ್ರವಾದಿಯಾಗಿದ್ದ 
ಕಾರಣ ಅವರು ತಮ್ಮ ಗಮನವನ್ನು ತಮ್ಮತ್ತ ಹರಿಸಬೇಕೆಂದು ಬಯಸಿರುತ್ತಿದ್ದರೆ ಅವರ 
ಶಿಕ್ಷಣ ಬೋಧನೆಗಳತ್ತ ಅವರು ಗಮನ ಕೊಡುತ್ತಿದ್ದರು. ತಮ್ಮ ನೀತಿ-ಚಾರಿತ್ರ್ಯವನ್ನು 
ಸುಧಾರಿಸುತ್ತಿದ್ದರು. ನಮ್ಮ ತಂದೆ ನಮಗೆ ಎಂದೆಂದಿಗೂ ಅನ್ಕಾಯ ಮಾಡಲಾರರೆಂದು 
ದೃಢವಾಗಿ ನಂಬುತ್ತಿದ್ದರು. ಆದರೆ ಅವರ ಚಾರಿತ್ರ್ಯವ್ರು 'ನಮ್ಮ ಪಿತೃವರ್ಯರು ಸ್ಪಷ್ಟ 
ದುರ್ಮಾರ್ಗದಲ್ಲಿದ್ದಾರೆ' ಎನ್ನಲೂ ಹೇಸದಷ್ಟು ಕೆಟ್ಟಿತ್ತು. ಕಿಂಚಿತ್ತೂ ದೇವಭಯ ಅವರಲ್ಲಿರಲಿಲ್ಲ. 
ಅಂದರೆ ತಂದೆಯು ಮುಪ್ಪಿನ ಅರಳು ಮುರುಳಿನಿಂದಾಗಿ ದಾರಿ ತಪ್ಪಿ ಬಿಟ್ಟಿದ್ದಾರೆ. ಅವರು 
ತಪ್ಪುತಪ್ಪಾಗಿ ವರ್ಶಿಸುತ್ತಾರೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಅಲ್ಲಾಹನ 
ಭಯವಿರುವ ಮತ್ತು ಪರಲೋಕ ಪ್ರಜ್ಞೆಯಿರುವ ಯಾರ ಬಾಯಿಂದಲಾದರೂ ತನ್ನ ತಂದೆಯ, 
ಮಾತ್ರವಲ್ಲ ಅಲ್ಲಾಹನ ಒಬ್ಬ ಪ್ರವಾದಿಯ ಬಗ್ಗೆ ಇಂತಹ ಮಾತು ಹೊರಡಲು ಸಾಧ್ಯವೇ? 
ಅವರ ಲೌಕಿಕ ಮೋಹದಿಂದಾಗಿಯೇ ಅವರಲ್ಲಿ ಇಂತಹ ಭಾವನೆ ಹುಟ್ಟಿರಲು 
ಕಾರಣವಾಗಿತ್ತೆಂಬುದು ಇದರ ಸರಿಯಾದ ಉತ್ತರವಾಗಿದೆ. ಅಲ್ಲಾಹನು ಯಲ್‌ಕೂಬರಿಗೆ(ಅ) 
ಸಾಕಷ್ಟು ಧನ-ಕನಕಗಳನ್ನೂ ವಿಶಾಲವಾದ ಜಮೂನನ್ನೂ ನೀಡಿದ್ದನು. ಯೂಸುಫ್‌ರ(ಅ) 
ಮೇಲಿನ ಅತಿಯಾದ ಪ್ರೀತಿಯಿಂದ ತಮ್ಮ ತಂದೆಯು ಎಲ್ಲವನ್ನೂ ಅವರಿಗೆ ಮತ್ತು 
ಬಿನ್‌ಯಮೂನ್‌ಗೆ ಕೊಟ್ಟು ತಮ್ಮನ್ನು ಆಸ್ತಿಯಿಂದ ವಂಚಿತಗೊಳಿಸಿಬಿಡುವರೋ ಎಂದು 
ಆ ಸಹೋದರರು ತಮ್ಮಷ್ಟಕ್ಕೆ ಆತಂಕಗೊಂಡಿದ್ದರು. ಆದ್ದರಿಂದಲೇ ಯೂಸುಫರನ್ನು(ಅ) 
ಅವರು ತಮ್ಮ ಪ್ರತಿಸ್ಪರ್ಧಿಯೆಂದು ಭಾವಿಸಿ ಅವರನ್ನು ತಮ್ಮ ಹಾದಿಯಿಂದ ಸರಿಸಿ 
ಬಿಡಲೆತ್ನಿಸಿದ್ದರು. 


ಪ್ರವಾದಿ ಯೂಸುಫ್‌(ಅ) 19 


ಕುರೈಶ್‌ ಸರದಾರರ ವರ್ತನೆ 

ಲೌಕಿಕ ಮೋಹ ಮತ್ತು ಮತ್ಸರದಿಂದಾಗಿ ಯೂಸುಫ್‌ರ(ಅ) ಸಹೋದರರು ಅವರೊಂದಿಗೆ 
ಅನುಸರಿಸಿದ್ದ ಅದೇ ವರ್ತನೆಯನ್ನು ಕುರೈಶ್‌ ಸರದಾರರು ಪ್ರವಾದಿ ಮುಹಮ್ಮದ್‌ರೊಂದಿಗೇಸ) 
ಕೈಗೊಂಡಿದ್ದರು. ಪ್ರವಾದಿವರ್ಯರನ್ನು(ಸ) ಪರೀಕ್ಷಿಸಲಿಕ್ಕಾಗಿ ಅವರು, ಬನೀ ಇಸ್ರಾಈಲರು 
ಈಜಿಪ್ಟ್‌ಗೆ ವಲಸೆ ಹೋಗಲು ಕಾರಣವೇನೆಂದು ಕೇಳಿದ್ದರು. ಯಹೂದಿಯರಲ್ಲೂ 
ಹೆಚ್ಚಿನವರು ಮುಹಮ್ಮದ್‌ರ(ಸ) ಪ್ರವಾದಿತ್ವವನ್ನು ಅಂಗೀಕರಿಸದಿರಲು ಅವರ ಲೌಕಿಕ 
ಮೋಹ ಮತ್ತು ಮತ್ಸರವೇ ಕಾರಣವಾಗಿತ್ತು. ಅಬೂಜಹಲ್‌ನಂತಹ ವ್ಯಕ್ತಿಯೂ ಪ್ರವಾದಿತ್ವದ 
ಮೇಲೆ ವಿಶ್ವಾಸವಿರಿಸದಿರಲು ಅದೇ ಕಾರಣವಾಗಿತ್ತು. ಕೌಟುಂಬಿಕ ವಿರಸವೂ ಒಂದು 
ತಡೆಯಾಗಿತ್ತು. 

ಅಲ್ಲಾಮಾ ಶಿಬ್ಲೀ ನುಲ್‌ಮಾನಿಯವರು ಹೀಗೆ ಬರೆದಿದ್ದಾರೆ: 

ಒಮ್ಮೆ ಅಖ್ನಸ್‌ ಬಿನ್‌ ಶುರೈಕ್‌ ಎಂಬವನು ಅಬೂಜಹಲನ ಬಳಿ ಹೋಗಿ 
ಮುಹಮ್ಮದ್‌ರ(ಸ) ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಅಬೂಜಹಲ್‌ 
ಹೀಗೆ ಉತ್ತರಿಸಿದನು- ನಾವು ಮತ್ತು ಅಬ್ದುಮನಾಫ್‌ ಮನೆತನ(ಹಾಶಿಮ್‌ರ ಸಂತತಿಗಳು) 
ಯಾವಾಗಲೂ ಪ್ರತಿಸ್ಪರ್ಧಿಗಳಾಗಿದ್ದೆವು. ಅವರು ಅತಿಥಿ ಸತ್ಕಾರ ಮಾಡಿದಾಗ ನಾವೂ 
ಮಾಡಿದೆವು. ಅವರು ರಕ್ತಪಾತ ಮಾಡಿದಾಗ ನಾವೂ ಮಾಡಿದೆವು. ಅವರು ದಾನಧರ್ಮ 
ಮಾಡಿದಾಗ ನಾವು ಅವರಿಗಿಂತಲೂ ಹೆಚ್ಚು ದಾನಧರ್ಮ ಮಾಡಿದೆವು. ಈ ರೀತಿ ನಾವು 
ಒಟ್ಟೊಟ್ಟಿಗೇ ಸಾಗುತ್ತಿದ್ದವು. ಆದರೆ ಈಗ ಬನೂ ಹಾಶಿಮ್‌ನವರು ಪ್ರವಾದಿತ್ವವನ್ನು 
ಘೋಷಿಸಿಬಿಟ್ಟಿದ್ದಾರೆ. ದೇವನಾಣೆ! ನಾವು ಈ ಪ್ರವಾದಿಯನ್ನು ಅಂಗೀಕರಿಸಲಾರೆವು.” 

(ಸೀರತುನ್ನಬಿ, ಭಾಗ-1) 

ಕುರೈಶ್‌ ಸರದಾರರು 'ದಾರುನ್ನದ್ವ'(ಸಮಾಲೋಚನೆ ನಡೆಸುವ ಸ್ಥಳ)ದಲ್ಲಿ 
ಪ್ರವಾದಿವರ್ಯರ(ಸ) ವಿರುದ್ಧ ನಡೆಸುತ್ತಿದ್ದ ಒಳಸಂಚು ಯೂಸುಫ್‌ರ(ಅ) ಸಹೋದರರು 
ಅವರ ವಿರುದ್ಧ ನಡೆಸಿದ್ದಂತಹ ಸಂಚಿನಂತೆಯೇ ಇತ್ತು. ಆದರೆ ಒಂದು ವ್ಯತ್ಯಾಸವಿತ್ತು. 
ಯೂಸುಫ್‌ರ(ಅ) ಸಹೋದರರು ಅವರನ್ನು ಗಡಿಪಾರು ಮಾಡುವ ವಿಷಯದಲ್ಲಿ ಒಮ್ಮತ 
ಹೊಂದಿದ್ದರೆ, ಕುರೈಶ್‌ ಸರದಾರರು ಪ್ರವಾದಿವರ್ಯರನ್ನು(ಸ) ವಧಿಸುವ ವಿಷಯದಲ್ಲಿ 
ಒಮ್ಮತ ಹೊಂದಿದ್ದರು. 

ಲೌಕಿಕ ಮೋಹ ಮತ್ತು ಮತ್ಸರದ ಕಾರಣ ತಮ್ಮ ವಿರೋಧಿಗಳ ಅಥವಾ ಅವರ 
ಯಾವುದೇ ಸಂಘಟನೆಗಳ ವಿರುದ್ಧ ಕುತಂತ್ರಗಳನ್ನು ಮಾಡುವುದು ಹಳೆಯ ಕಾಲಕ್ಕೆ ಮಾತ್ರ 
ಸೀಮಿತವಾದ ವಿಷಯವಾಗಿರಲಿಲ್ಲ. ಅದನ್ನು ಈಗಲೂ ಮಾಡಲಾಗುತ್ತದೆ. ಇನ್ನು 
ಲೋಕಾಂತ್ಕದವರೆಗೂ ಇದು ಮುಂದುವರಿಯುವುದು. 


20 ಪ್ರವಾದಿ ಯೂಸುಫ್‌(ಆ) 


ಈಜಿಷ್ಟ್‌ನ ಅಧಿಕಾರಿಯ ಭವನದಲ್ಲಿ 

'ಯೂಸುಫ್‌ರನ್ನು(ಲ) ಪಾಳು ಬಾವಿಗೆ ಹಾಕಲಾಯಿತು, ಈ 'ಸತ್ವಪರೀಕ್ಷೆಯಲ್ಲಿ ಅವರು 
ತೇರ್ಗಡೆ ಹೊಂದಿದರು. ಅವರು ಸಣ್ಣಮಟ್ಟದ ಆರ್ತನಾದ ಮಾಡಿದ ಬಗ್ಗೆಯೂ ಕುರ್‌ಆನ್‌ 
ಯಾವುದೇ ಸೂಚನೆ ನೀಡಿಲ್ಲ. ತನ್ನ ಕನಸಿನ ಪ್ರಸ್ತಾಪವನ್ನು ತಂದೆಯ ಮುಂದಿಟ್ಟಾಗ ಅವರು 
ಹೇಳಿದ ಮಾತು ಅವರ ನೆನಪಿಗೆ ಈಗ ಬಂದಿರಬೇಕು. ಇನ್ನೊಂದೆಡೆ ಅಲ್ಲಾಹನ ರಹಸ್ಕ 
ಸೂಚನೆಯೂ ಅವರಲ್ಲಿ ಧೈರ್ಯ ತುಂಬಿರಬಹುದು. "ನೀನು ಇವರಿಗೆ ಇವರ ಈ 
ವರ್ತನೆಯ ಪರಿಣಾಮವನ್ನು ತೋರಿಸಿ ಕೊಡುವ ಸಂದರ್ಭವೊಂದು' ಬರಲಿದೆ. ಇವರು ಅದರ 
ಬಗ್ಗೆ ಬೋಧರಹಿತರಾಗಿದ್ದಾರೆ” ಎಂಬುದು ಆ ಸೂಚನೆಯಾಗಿತ್ತು. 

ಯೂಸುಫ್‌ರ(ಅ) ಸಹೋದರರು, ತಮ್ಮ ದಾರಿಯ ಮುಳ್ಳನ್ನುಸರಿಸಿ ಅವರನ್ನು 
ನಿರಾಶ್ರಿತರನ್ನಾಗಿಸಿ ಬಿಟ್ಟೆ ವೆಂದು ಭಾವಿಸಿದ್ದರು, ಆದರೆ ಅವರು ಎಸೆದಿರುವುದು ಪಾಳುಬಾವಿಯ 
ತಳಕ್ಕಲ್ಲ, ಉನ್ನತಿಯ ಶಿಖರಕ್ಕೇರುವ ಪ್ರಥಮ ಮೆಟ್ಟಲಿಗೆ ಎಂದು ಪಾಪ ಅವರಿಗೇನು 
ಗೊತ್ತು? 

ಈಜಿಪ್ಟ್‌ಗೆ ಹೋಗುತ್ತಿದ್ದ ವ್ಯಾಪಾರಿಗಳ ತಂಡವೊಂದು ಅಲ್ಲಿಂದ ಸಾಗುವಾಗ ಅವರಿಗೆ 
ನೀರಿನ ಅಗತ್ಯ ಬಿತ್ತು. ಆದರೆ ಅವರಿಗೆ ಸಿಕ್ಕಿದ್ದು ಬಾವಿಯಲ್ಲಿ ಒಂದು ಚಂದ್ರ. ಅವರು 
ಯೂಸುಫ್‌ರನ್ನು(ಅ) ಒಂದು ಸರಕಾಗಿ ಈಜಿಪ್ಟ್‌ನ ಪೇಟೆಯಲ್ಲಿ ಮಾರಿಬಿಟ್ಟರು. ಈ ರೀತಿ 
ಕೆಲವೇ ಕಾಸಿಗೆ ಮಾರಾಟ ಮಾಡಲ್ಪಟ್ಟ ಈ 'ಅಮೂಲ್ಯ ಮುತ್ತು' ಈಜಿಪ್ಟ್‌ನ ಅಧಿಕಾರಿಯ 
ಮನೆಗೆ ತಲಪಿತು. ಅವರನ್ನು ಕಂಡ ಕೂಡಲೇ ಖರೀದಿಸಿದ ಆ ಅಧಿಕಾರಿ, ಈ ಬಾಲಕ 
ಗುಲಾಮನಾಗಿರಲು- ಸಾಧ್ಯವಿಲ್ಲ. ಈತ ಯಾವುದೋ ಉನ್ನತ ಮನೆತನವೊಂದರ 
ಸುಪ್ಪತ್ರನಾಗಿರಬೇಕೆಂದು ಭಾವಿಸಿದರು. ಅವರನ್ನು ತನ್ನ ಪತ್ನಿಯ ಕೈಗೊಪ್ಪಿಸುತ್ತಾ ಆತ 
ಹೇಳಿದ- ''ಇವನನ್ನು ಚೆನ್ನಾಗಿರಿಸು, ಇವನು ನಮಗೆ ಫಲಕಾರಿಯಾಗಲೂಬಹುದು. ಅಥವಾ 
ನಾವು ಇವನನ್ನು ದತ್ತುಪುತ್ರನನ್ನಾಗಿಯೂ ಮಾಡಿಕೊಳ್ಳಬಹುದು." ' 

(ಪವಿತ್ರ ಕುರ್‌ಆನ್‌, 12:21) 

ಅತ್ತ ಅಲ್ಲಾಹನು ಹೀಗೆಂದನು- ''ಈ ರೀತಿ ನಾವು ಯೂಸುಫ್‌ರಿಗೆ(ಅ) ಆ 
ಭೂಭಾಗದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟೆವು ಮತ್ತು ಅವರಿಗೆ ವಿಷಯಗಳನ್ನು 
ಗ್ರಹಿಸುವ ಜ್ಞಾನವನ್ನು ಕೊಡುವ ವ್ಯವಸ್ಥೆಮಾಡಿದೆವು. ಅಲ್ಲಾಹನು ತನ್ನ ಕಾರ್ಯವನ್ನು 
ಮಾಡಲು ಸುಶಕ್ತನು. ಆದರೆ ಹೆಚ್ಚಿನವರು ತಿಳಿಯುವುದಿಲ್ಲ.'' 

(ಪವಿತ್ರ ಕುರ್‌ಆನ್‌, 12:21) 


ಆಡಳಿತ ಸಿದ್ಧತೆ 


ಯೂಸುಫ್‌ರೊಂದಿಗೆ(ಅ) ಏನೆಲ್ಲ ನಡೆಯುತ್ತಿತ್ತೋ ಅದೆಲ್ಲವೂ ಅಲ್ಲಾಹನ 
ಮೇಲ್ನೋಟದಲ್ಲೇ ನಡೆಯುತ್ತಿತ್ತು ಮತ್ತು ಅವರನ್ನು ಯಾವ ಮಹಾನ್‌ ಕಾರ್ಯಕ್ಕಾಗಿ 


ಪ್ರವಾದಿ ಯೂಸುಫ್‌(ಅ) 21 


ಆಯ್ಕೆ ಮಾಡಲಾಗಿತ್ತೋ ಅದಕ್ಕಾಗಿ ಸಿದ್ಧತೆ ನಡೆಸುವುದೇ ಅದರ ಉದ್ದೇಶವಾಗಿತ್ತೆಂದು 
ಅಲ್ಲಾಹನು ಪ್ರಸ್ತುತ ಸೂಕ್ತಗಳ ಮೂಲಕ ವಿಷಯವನ್ನು ತೆರೆದಿಟ್ಟನು. .ಅಲ್ಲಾಹನು 
ಅವರಿಂದ ಆ ಕಾಲದ ನಾಗರಿಕತೆಯಲ್ಲಿ ಅತ್ಯಂತ ಮುಂದುವರಿದ ದೇಶವಾದ ಈಜಿಪ್ಟ್‌ನಲ್ಲಿ 
ತನ್ನ ಕೆಲಸವನ್ನು ಮಾಡಿಸಬಯಸಿದ್ದನು. ಅದು ಕೇವಲ ಸಂದೇಶ ಪ್ರಚಾರ ಮತ್ತು 
ಬೋಧನೆಯ ಕೆಲಸವಾಗಿರಲಿಲ್ಲ. ದೇಶದ ಆಡಳಿತವನ್ನು ವಹಿಸಿಕೊಳ್ಳುವುದೂ ಆಗಿತ್ತು. 
ಅಲ್ಲಾಹನು ಅವರನ್ನು ಫೆಲೆಸ್ತೀನಿನ ಹಳ್ಳಿಗಾಡಿನಿಂದ ತೆಗೆದು ಈಜಿಪ್ಟ್‌ನ ರಾಜಧಾನಿಗೆ 
ತಲಪಿಸಿದನು. ಅವರನ್ನು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರ ಮನೆಯ ಪ್ರತಿಷ್ಠಿತ 
ವ್ಯಕ್ತಿಯಾಗಿ ಮಾಡಿದನು. ಈತನು ಸಾಮಾನ್ಯ ಬಾಲಕನಾಗಿರದೆ, ಪ್ರತಿಷ್ಠಿತ ಕುಟುಂಬವೊಂದರ 
ಕಣ್ಮಣಿಯಾಗಿರಬೇಕೆಂದು ಗುರುತಿಸಿ ಆ ಅಧಿಕಾರಿ ತನ್ನ ಮನೆಯಲ್ಲಿ ಅವರ ಪ್ರತಿಭೆಗಳನ್ನು ` 
ಕಂಡು ಬಹಳ ಪ್ರಭಾವಿತನಾದನು. ಆದ್ದರಿಂದ ಅವನು ತನ್ನ ಆಸ್ತಿಯ ಮತ್ತು ಮನೆಯ 
ಸೊತ್ತು ಸರಂಜಾಮುಗಳ ಮೇಲ್ವಿಚಾರಕನಾಗಿ ನೇಮಿಸಿದ್ದಷ್ಟೇ ಅಲ್ಲ, ಅವುಗಳ ಸಂಪೂರ್ಣ 
ಅಧಿಕಾರವನ್ನು ಅವರಿಗೆ ವಹಿಸಿಕೊಟ್ಟನು. ಬೈಬಲ್‌ನ ಆದಿಕಾಂಡದಲ್ಲಿ ಈ ರೀತಿಯಿದೆ: 

"ಪೋಟೀಫರನು ಹೀಗೆ ತನ್ನದನ್ನೆಲ್ಲ ಜೋಸೆಫ್‌ನವಶಕ್ಕೆ ಒಪ್ಪಿಸಿ, 'ಅವನು ಇದ್ದಾನಲ್ಲ' 
ಎಂದು ಕೊಂಡು, ತಾನು ತಿನ್ನುತ್ತಿದ್ದ ಆಹಾರ ಒಂದನ್ನು ಬಿಟ್ಟು ಬೇರೆ ಏನನ್ನೂ ಕುರಿತು 
ಚಿಂತಿಸದೆ ಇದ್ದ."(39:4-6) ಅರ್ಥಾತ್‌ ತನ್ನ ಮತ್ತು ಆಸ್ತಿ-ಪಾಸ್ತಿಗಳ ಬಗ್ಗೆ ಸಂಪೂರ್ಣ 
ನಿಶ್ಚಿಂತನಾದ. : ಇದು ಯೂಸುಫ್‌ರ ಯೌವನ ಕಾಲದ ಚಿತ್ರ. 

ಆ ಕಾಲದಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡಿದರೆ ಈಜಿಪ್ಟ್‌ನ ಅಧಿಕಾರಿಯ 
ಆಸ್ತಿ-ಪಾಸ್ತಿಗಳು ಸಾಮಾನ್ಕವಾದುದಾಗಿರಲಿಲ್ಲವೆಂದು ಮನವರಿಕೆಯಾಗುತ್ತದೆ. ಆ ಸೊತ್ತುವಿತ್ತಗಳ 
ಮೇಲ್ವಿಚಾರಣೆ ಯೂಸುಫ್‌ರಲ್ಲಿ(ಅ) ಒಂದು ದೇಶದ ಆಡಳಿತ ವ್ಯವಸ್ಥೆಯನ್ನು 
ವಹಿಸಿಕೊಳ್ಳುವಂತಹ ಸಾಮರ್ಥ್ಯಗಳನ್ನು ಬೆಳೆಸಿರಬಹುದು. 
ಯೂಸುಫ್‌ರನ್ನು(ಅ) 'ಅಮೀರುಖ್‌' ಎಂದಿರುವುದೇಕೆ? 

ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಾದ ಅಗತ್ಯವಿದೆ. ಯೂಸುಫ್‌ರನ್ನು(ಅ) 
ಕುರ್‌ಆನಿನಲ್ಲಿ ಎರಡು ಕಡೆ 'ಅರೀರು್‌' ಎಂದು ಪ್ರಸ್ತಾವಿಸಲಾಗಿದೆ. ವಸ್ತುತಃ ಆಗ ಅವರು 
ಇಡೀ ಈಜಿಪ್ಟ್‌ ದೇಶದ ಸಾರ್ವಭೌಮ ಅಧಿಕಾರಿಯಾಗಿದ್ದು ಆಡಳಿತ ಪಟ್ಟವನ್ನು 
ವಹಿಸಿಕೊಂಡಿದ್ದರು. ಅವರು ಪಟ್ಟಾಭಿಷಿಕ್ಷರಾಗಿರುವುದನ್ನು ಕುರ್‌ಆನ್‌ ಸ್ಪಷ್ಟವಾಗಿ ಹೀಗೆ 
ಸಾರಿದೆ. ''ಅವರು ತಮ್ಮ ಮಾತಾಪಿತರನ್ನೆತ್ತಿ ತಮ್ಮ ಬಳಿ ಆಸನದಲ್ಲಿ ಕುಳ್ಳಿರಿಸಿಕೊಂಡರು.'' 

(ಪವಿತ್ರ' ಕುರ್‌ಆನ್‌, 12:100) 

'ಅಮೀರು್‌' ಎಂಬ ಪದವನ್ನು ಯಾವುದೋ ಒಂದು ವಿಶಿಷ್ಟ ಹುದ್ದೆಗಾಗಿ 
ಪ್ರಯೋಗಿಸಲಾಗಿಲ್ಲ. ಅದನ್ನು 'ಆಡಳಿತಾಧಿಕಾರಿ' ಎಂಬ ಅರ್ಥದಲ್ಲಿ ಪ್ರಯೋಗಿಸಲಾಗಿದೆಯೆಂದು 
ಇದರಿಂದ ತಿಳಿದುಬರುತ್ತದೆ. ಯೂಸುಫ್‌ರನ್ನು(ಅ) ಕೊಂಡು ಕೊಂಡಂತಹ ಅಮೀರುನು 


22 ಪ್ರವಾದಿ ಯೂಸುಫ್‌(ಆ) 


ಸಾರ್ವಭೌಮನಾಗಿದ್ದ ಅಥವಾ ಪಟ್ಟಾಭಿಷಿಕ್ಷನಾಗಿದ್ದ ಎಂಬುದರ ಕಡೆಗೆ ಕುರ್‌ಆನಿನಲ್ಲಾಗಲಿ 
ಬೈಬಲ್‌ನಲ್ಲಾಗಲಿ ಯಾವ ಸೂಚನೆಯೂ ಕಾಣಸಿಗುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, 
ಆತನನ್ನು ಫಿರ್‌ಔನನ ಅಂಗರಕ್ಷಕರ ದಳಪತಿಯೆಂದು ಬೈಬಲ್‌ನ ಆದಿಕಾಂಡದಲ್ಲಿ 
ಸ್ಪಷ್ಟಪಡಿಸಲಾಗಿದೆ. (ನೋಡಿರಿ 39:1) 

ಅಂದರೆ ಆತ ಅರಸನ ಅಂಗರಕ್ಟಕದಳದ ಅಧಿಕಾರಿಯಾಗಿದ್ದ. ಕುರ್‌ಆನ್‌ ವ್ಯಾಖ್ಯಾನ 
ಗ್ರಂಥಗಳಲ್ಲಿ ಆತ ರಾಜಬೊಕ್ಕಸದ ಅಧಿಕಾರಿಯಾಗಿದ್ದನೆಂದು ಹೇಳಲಾಗಿದೆ. ಬೈಬಲ್‌ನಲ್ಲಿ 
ಆತನ ಹೆಸರು ಪೋಟಿಫರ್‌ ಎಂದಿದೆ. ಆತನಿಗೆ ಈಜಿಪ್ಟ್‌ನಲ್ಲಿ ದೊರಕಿರುವ ಸ್ಥಾನಕ್ಕೂ 
ಯೂಸುಫರಿಗೆ(ಅ) ಇರುವ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಯೂಸುಫ್‌ರಿಗೆ(ಅ) 
ಪೋಟಿಫರನ ಸ್ಟಾ ನವನ್ನು ನೀಡಲಾಗಿತ್ತೆಂದು ಕಲ್ಪಿಸುವುದು ಕುರ್‌ಆನಿನ ದೃಷ್ಟಿಯಲ್ಲೂ ತಪ್ಪ. 
ಬೈಬಲ್‌ನ ಆಧಾರದಲ್ಲೂ ತಪ್ಪು ಮತ್ತು ನಿರಾಧಾರವಾಗಿದೆ. 


ಪ್ರವಾದಿತ್ವ 

ಯೂಸುಫ್‌ರು(ಅ) ಅಧಿಕಾರಿಯ ಮನೆಯಲ್ಲಿ ತುಂಬು ಯೌವನಕ್ಕೆ ತಲುಪಿದಾಗ 
ಅಲ್ಲಾಹನು ಅವರಿಗೆ ಪ್ರವಾದಿತ್ವದ ಮಹಾ ಪದವಿ ನೀಡಿ ಅನುಗ್ರಹಿಸಿದನು. ಆಗ ಅವರಿಗೆ 
ಸುಮಾರು ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಪ್ರಾಯವಾಗಿತ್ತು. ಕುರ್‌ಆನ್‌ 
ಹೇಳುತ್ತದೆ-''ಅವರು ತಮ್ಮ ತುಂಬು ಯೌವನಕ್ಕೆ ತಲುಪಿದಾಗ ನಾವು ಅವರಿಗೆ ತೀರ್ಮಾನದ 
ಶಕ್ತಿ ಮತ್ತು ಜ್ಞಾನ ನೀಡಿದೆವು. ಸಜ್ಜನರಿಗೆ ನಾವು ಈ ರೀತಿ ಪ್ರತಿಫಲ ನೀಡುತ್ತೇವೆ.” 

(ಪವಿತ್ರ ಕುರ್‌ಆನ್‌, 12:22) 

ಯೂಸುಫ್‌ರಿಗೆ ಪ್ರವಾದಿತ್ವವನ್ನು ಪಾಳುಬಾವಿಯಲ್ಲಿ ಪ್ರದಾನ ಮಾಡಲಾಗಿತ್ತೊ 

ಅಥವಾ ಅಧಿಕಾರಿಯ ಮನೆಯಲ್ಲಿ ನೀಡಲಾಗಿತ್ತೋ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. 

ಎರಡನೆಯ ಅಭಿಪ್ರಾಯವೇ ಸರಿಯೆಂದು ಕಾಣುತ್ತದೆ. 'ಹುಕ್ಕ್‌ ಮತ್ತು ಇಲ್ಮ್‌ (ತೀರ್ಮಾನದ 

ಶಕ್ತಿ ಮತ್ತು ಜ್ಞಾನ ನೀಡುವುದೆಂಬುದು ಕುರ್‌ಆನಿನ ವಿಶಿಷ್ಟ ಶೈಲಿಯಾಗಿದ್ದು ಅದನ್ನು 

ಪ್ರವಾದಿತ್ವಕ್ಕಾಗಿಯೇ ಬಳಸಲಾಗುತ್ತದೆ. ಮೂಸಾರಿಗೆಅ) ಪ್ರವಾದಿತ್ವ ನೀಡಿದ ಪ್ರಸ್ತಾಪವನ್ನು 
ಇದೇ ಪದಗಳಲ್ಲಿ ಮಾಡಲಾಗಿದೆ. 

''ಮೂಸಾ ತುಂಬು ಯೌವನಕ್ಕೆ ತಲುಪಿದಾಗ ಹಾಗೂ ಅವರ ಬೆಳವಣಿಗೆ 
ಪೂರ್ತಿಗೊಂಡಾಗ ನಾವು ಅವರಿಗೆ ನಿರ್ಧಾರ ಶಕ್ತಿ ಮತ್ತು ಜ್ಞಾನವನ್ನು (ಹುಕ್ಕ್‌ 
ಮತ್ತು ಇಲ್‌) ನೀಡಿದೆವು. ನಾವು ಸಜ್ಜನರಿಗೆ ಇದೇ ರೀತಿ ಸತ್ಸಲವನ್ನು 
ದಯಪಾಲಿಸುತ್ತೇವೆ.'' (ಪವಿತ್ರ ಕುರ್‌ಆನ್‌, 28:14) 

ಲೂತ್‌ರಿಗೆ ಪ್ರವಾದಿತ್ವ ನೀಡಿದ್ದನ್ನೂ ಹುಕ್ಕ್‌ ಮತ್ತು ಇಲ್ಮ್‌ ಎಂಬ ಪದಗಳಿಂದಲೇ 


ಪ್ರವಾದಿ ಯೂಸುಫ್‌(ಅ) 23 


"ಲೂತರಿಗೆ ನಾವು ನಿರ್ಧಾರ ಶಕ್ತಿ ಮತ್ತು ಜ್ಞಾನ ದಯಪಾಲಿಸಿದೆವು. ಅವರನ್ನು 
ದುಷ್ಕರ್ಮವೆಸಗುತ್ತಿದ್ದ ಆ ನಾಡಿನಿಂದ ರಕ್ಷಿಸಿ ಕೊಂಡೊಯ್ದೆವು.'' 

(ಪವಿತ್ರ ಕುರ್‌ಆನ್‌, 21:74) 

'ಅಲ್‌ ಅಂಬಿಯಾ' ಎಂಬ ಅಧ್ಯಾಯದಲ್ಲೂ ದಾವೂದ್‌ ಮತ್ತು ಸುಲೈಮಾನ್‌ರಿಗೆ 
ಇದೇ ಪದವನ್ನು ಬಳಸಲಾಗಿರುವುದನ್ನು ಕಾಣಬಹುದು. 

"ವಸ್ತುತಃ ತೀರ್ಮಾನದ ಶಕ್ತಿ ಮತ್ತು ಜ್ಞಾನಗಳನ್ನು ನಾವು ಇಬ್ಬರಿಗೂ 
ದಯಪಾಲಿಸಿದ್ದೆವು.'' (ಪವಿತ್ರ ಕುರ್‌ಆನ್‌, 21:79) 

ಈ ಎಲ್ಲ ಸೂಕ್ತಗಳಲ್ಲೂ 'ಹುಕ್ಕ್‌ ಮತ್ತು ಇಲ್ಮ್‌' ಎಂದರೆ ಪ್ರವಾದಿತ್ವವೇ ಆಗಿದೆ. 
ಪ್ರವಾದಿಯಲ್ಲದ ಯಾರಿಗೂ ಈ ಪದಗಳನ್ನು ಬಳಸಿರುವುದು ಕುರ್‌ಆನಿನಲ್ಲಿ ಎಲ್ಲೂ 
ಕಾಣಸಿಗುವುದಿಲ್ಲ. 

'ಹುಕ್ಕ್‌' ಎಂಬ ಪದವನ್ನು ಯುಕ್ತಿ, ನಿರ್ಧಾರ ಶಕ್ತಿ ಮತ್ತು ಆಡಳಿತ ನೈಪುಣ್ಮ 
ಎಂಬಿತ್ಯಾದಿ ಅರ್ಥಗಳಿಗಾಗಿ ಬಳಸಲಾಗಿದೆ. 'ಇಲ್ಮ್‌' ಎಂದರೆ ಪ್ರವಾದಿಗಳಿಗೆ ದಿವ್ಯವಾಣಿಯ 
ಮೂಲಕ ಅಲ್ಲಾಹನ ವತಿಯಿಂದ ನೀಡಲಾಗುವ ಆ ವಿಶಿಷ್ಟ ಜ್ಞಾನವಾಗಿದೆ. 

ಯೂಸುಫ್‌ರು ಪ್ರವಾದಿಶ್ಚ ಪದವಿ ಲಭಿಸಿದ ಬಳಿಕವೂ ಅಧಿಕಾರಿಯ ಮನೆಯಲ್ಲೇ 
ಇದ್ದರು. ಹೀಗಿರುವಾಗ ಅವರಿಗೊಂದು ಮಹಾ ಸತ್ವಪರೀಕ್ಷೆ ಎದುರಾಯಿತು. 
ಮಹಾ ಸತ್ವಪರೀಕ್ಷೆ 

ಯೂಸುಫ್‌ರಿಗೆ(ಅ) ಅಲ್ಲಾಹನು ಅಪೂರ್ವ ಸೌಂದರ್ಯವನ್ನು ದಯಪಾಲಿಸಿದ್ದನು. 
ಅವರು ಸರ್ವಾಂಗ ಸುಂದರ, ಉತ್ತಮ ಮೈಕಟ್ಟಿನ ವ್ಯಕ್ತಿಯಾಗಿದ್ದರು. ಅವರನ್ನು ತನ್ನ 
ಪುತ್ರನನ್ನಾಗಿ ಮಾಡಬೇಕೆಂದು ಆ ಅಧಿಕಾರಿ ಬಯಸಿದ್ದನೆಂದು ಈ ಹಿಂದೆ 
ಪ್ರಸ್ತಾಪಿಸಲಾಗಿದೆಯಷ್ಟೆ. ಆದರೆ ಅವನ ಪತ್ನಿಯು ಅವರ ತಾಯಿಯಾಗುವ ಸೌಭಾಗ್ಯವನ್ನು 
ಕಳೆದು ಕೊಂಡಳು. ತಲ್ಮೂದ್‌ನಲ್ಲಿ ಆಕೆಯ ಹೆಸರು ರುಲೇಖಾ ಎಂದಿದೆ. ಆಕೆ ಅವರ 
ಮೇಲೆ ಪ್ರೇಮದ ಜಾಲ ಹರಡತೊಡಗಿದಳು. ಒಮ್ಮೆ ಆಕೆ ಅವರನ್ನುದ್ದೇಶಿಸಿ, 'ಯೂಸುಫ್‌! 
ನಿನ್ನ ಮುಂಗುರುಳು ಎಷ್ಟು ಚಂದ' ಎಂದು ಹೇಳಿದರೆ ಇನ್ನೊಮ್ಮೆ' 'ನಿನ್ನ ಕಣ್ಣುಗಳಲ್ಲಿ 
ಅದೆಂತಹ ಆಕರ್ಷಣೆಯಿದೆ' ಎಂದು ಹೇಳುತ್ತಿದ್ದಳು. ಇನ್ನು ಕೆಲವೊಮ್ಮೆ, 'ನೀನು ಎಷ್ಟು 
ಸುಂದರನಾಗಿರುವೆ' ಎನ್ನುತ್ತಿದ್ದಳು. ಒಟ್ಟಿನಲ್ಲಿ ಅವರ ಒಂದೊಂದು ಅಂಗದ ಸೌಂದರ್ಯವನ್ನು 
ವರ್ಣಿಸುತ್ತಾ ಅವರನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಳು. ಆ ಹೆಂಗಸು ಕೂಡಾ 
ಸುರಸುಂದರಿಯಾಗಿದ್ದಳು. ತನ್ನ ಸೌಂದರ್ಯದ ಪ್ರದರ್ಶನ ಮಾಡುತ್ತಾ, ತನ್ನ ಕೇಶಾಲಂಕಾರ, 
ಶೃಂಗಾರಾದಿಗಳ ಮೂಲಕ ಅವರನ್ನು ತನ್ನ ಬಲೆಯಲ್ಲಿ ಸಿಲುಕಿಸಲು ನಿರಂತರ ಪ್ರಯತ್ನಿಸುತ್ತಿದ್ದಳು. 
ಸುಂದರ ದೃಢಕಾಯ ಹಾಗೂ ಆರೋಗ್ಯವಂತನಾದ ಓರ್ವ ಯುವಕನ ಮಟ್ಟಿಗೆ ನಿರಂತರವಾದ 
ಈ ಪ್ರೇರಣೆಗಳು ಅತಿದೊಡ್ಡ ಸತ್ವಪರೀಕ್ಷೆಯೇ ಆಗಿತ್ತು. ಈ ಉಪಾಯಗಳೆಲ್ಲ 


24 ಪ್ರವಾದಿ ಯೂಸುಫ್‌(ಆ) 


ವಿಫಲವಾಗುತ್ತಿದೆಯೆಂದು ಆಕೆಗೆ ಮನವರಿಕೆಯಾದಾಗ ತನ್ನ ಬತ್ತಳಿಕೆಯಲ್ಲಿದ್ದ ಕೊನೆಯ 
ಅಸ್ತ್ರವನ್ನೂ ಆಕೆ ಪ್ರಯೋಗಿಸಿಬಿಟ್ಟಳು. ಅದರ ಏಟಿನಿಂದ ಅಲ್ಲಾಹನಿಗಲ್ಲದೆ ಬೇರಾರಿಂದಲೂ 
ರಕ್ಷಿಸಲು ಸಾಧ್ಯವಿರಲಿಲ್ಲ. 

ಒಂದು ದಿನ ಆಕೆ ತನ್ನ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ತನ್ನ 
ಕೋಣೆಯಲ್ಲಿ ಅವರ ಮುಂದೆ ಅಂಗಾತ ಮಲಗಿ, 'ಬಾ ನನ್ನ ಬಳಿಗೆ' ಎಂದು ಅವರನ್ನು 
ಕರೆದೇಬಿಟ್ಟಳು. ಇದು ಎಂತಹ ದೊಡ್ಡ ಸತ್ವಪರೀಕ್ಷೆ! ಊಹಿಸುವಾಗಲೇ ಮೈನವಿರೇಳುತ್ತದೆ. 
ಒಂದು ವೇಳೆ ಅವರು ಆಕೆಯ ಬಯಕೆಯನ್ನು ಈಡೇರಿಸದಿದ್ದರೆ ಆಕೆಯ ಕೋಪಕ್ಕೆ 
ಬಲಿಯಾಗುವ ಸಾಧ್ಯತೆಯಿತ್ತು. ಅಧಿಕಾರಿಯ ಮನೆಯಲ್ಲಿ ಅವರಿಗೆ. ಎಷ್ಟೇ ಅಧಿಕಾರ 
ಪ್ರಾಪ್ತವಿದ್ದರೂ, ಆಕೆ ಮನೆಯ ಒಡತಿಯಾಗಿದ್ದಳು. ಆಕೆಯ ಕೋಪವು ಅವರಿಗೆ ನಾನಾ 
ರೀತಿಯ ಹಾನಿ ಮುಟ್ಟಿಸುತ್ತಿತ್ತು. ಅವರನ್ನು ಅಪಮಾನಿಸ ಬಹುದಾಗಿತ್ತು. ಸೆರೆಮನೆಗೆ 
ಹಾಕಿಸಬಹುದಾಗಿತ್ತು. ಇನ್ನಾವುದೇ ಕಠಿಣ ಶಿಕ್ಷೆ ವಿಧಿಸಬಹುದಾಗಿತ್ತು ಅಥವಾ ಕನಿಷ್ಠಪಕ್ಸ 
ಅವರ ಅಧಿಕಾರಗಳನ್ನೆಲ್ಲ ಅವರಿಂದ ಕಿತ್ತು ಅವರ ಸ್ಥಾನಮಾನವನ್ನು ಕುಗ್ಗಿಸಬಹುದಾಗಿತ್ತು. 
ಒಂದು ವೇಳೆ ಅವರು ಆಕೆಯ ಆಶೆಯನ್ನು ಪೂರೈಸುತ್ತಿದ್ದರೆ ಈ ಎಲ್ಲ ಅಪಾಯಗಳಿಂದಲೂ 
ಪಾರಾಗಬಹುದಿತ್ತು. ಆದರೆ ಇನ್ನೊಂದು ಬದಿಯಲ್ಲಿ ಪರಲೋಕದ ಅಪಾಯವಿತ್ತು. 
ಅಲ್ಲಾಹನ ಕ್ರೋಧವಿತ್ತು. ಈ ಸತ್ವಪರೀಕ್ಷೆಯ ಕುರಿತು ಮೌಲಾನಾ ಶಬ್ಬೀರ್‌ ಅಹ್ಮದ್‌ 
ಉಸ್ಮಾನಿಯವರು ಹೀಗೆ ವಿವರಿಸಿದ್ದಾರೆ- 

"ಯೂಸುಫ್‌ರ(ಅ) ಸೌಂದರ್ಯಕ್ಕೆ ರುಲೇಖಾ ಮಾರು: ಹೋದಳು. ಅವರನ್ನು 
ತನ್ನತ್ತ ಸೆಳೆಯಲು ತನಗೆ ಸಾಧ್ಯವಿರುವ ಎಲ್ಲ ಉಪಾಯಗಳನ್ನೂ :ಹೂಡಿದಳು. ಯಾವ 
ರೀತಿಯಿಂದಲಾದರೂ ಅವರ ಮನಸ್ಸಿನ ನಿಯಂತ್ರಣವನ್ನು ಸಡಿಲಿಸಿ ಬಿಡಬೇಕೆಂದು ಬಯಸಿದಳು. 
ಒಂದೆಡೆ ಎಲ್ಲ ರೀತಿಯ ಐಶಾರಾಮದ ಸಾಧನ-ಸೌಕರ್ಯಗಳು, ಲೈಂಗಿಕ ವಿಕಾರಗಳನ್ನು 
ತಣಿಸಬಲ್ಲಂತಹ ಎಲ್ಲ ಸೌಲಭ್ಯಗಳು, ರುಲೇಖಾಳ ಮನೆಯಲ್ಲಿ ಯೂಸುಫ್‌ರ ಸದಾ 
ಇರುವಿಕೆ, ಅವರ ಮೇಲೆ ಆಕೆಯ ಪ್ರೇಮದ ಹರಿವು ಏಕಾಂತದಲ್ಲಿ ಮಹಿಳೆಯ 
ಕಡೆಯಿಂದಲೇ ವಿಕಾರ ಪೂರ್ಣ ಆಹ್ವಾನ, ಹೊರಗಿನವರು ಪ್ರವೇಶಿಸಬಲ್ಲಂತಹ ಎಲ್ಲ 
ಬಾಗಿಲುಗಳ ಮುಚ್ಚುವಿಕೆಯಾದರೆ ಇನ್ನೊಂದೆಡೆ, ಯೂಸುಫ್‌ರ ತುಂಬು ಯೌವನ, 
ದೇಹಬಲವಿರುವ ಕಾಲ, ಸ್ವಭಾವದಲ್ಲಿ ಸಮತೋಲನ ಹಾಗೂ ಒಂಟಿ ಜೀವನ- ಈ ಎಲ್ಲ 
ಸೌಲಭ್ಯಗಳು. ಅವುಗಳ ಹೊಡೆತಕ್ಕೆ ಎಷ್ಟು ದೊಡ್ಡ ದೇವಭಕ್ತನಾಗಿದ್ದರೂ ಅವನ 
ತಕ್ವಾ(ದೇವಭಯ) ಛಿದ್ರ ಛಿದ್ರವಾಗಿ ಬಿಡುತ್ತಿತ್ತು. ಆದರೆ ಅಲ್ಲಾಹನು ಮುಸ್ಸಿನ್‌ ಎಂದು 
ಸಾರಿ ಯುಕ್ತಿ-ಜ್ಞಾನಗಳ ಸಂಪತ್ತನ್ನು ನೀಡಿ ಪವಿತ್ರ ಪ್ರವಾದಿತ್ವದ ಉನ್ನತ ಪದವಿಗೆ 
ಏರಿಸಿರುವಂತಹ ಓರ್ವ ವ್ಯಕ್ತಿಯ ಮೇಲೆ ಶೈತಾನನ ಆಟ ನಡೆಯುವುದಾದರೂ ಹೇಗೆ? 
ಅವರು ಕೇವಲ 'ಮಆದಲ್ಲಾಹ್‌'(ಅಲ್ಲಾಹನ ಅಭಯ) ಎಂದು ಹೇಳಿ ಬಿಟ್ಟಾಗ ಶೈತಾನನ 
ಜಾಲದ ಎಲ್ಲ ಗಂಟುಗಳೂ ಬಿಚ್ಚಿಕೊಂಡವು. ಅಲ್ಲಾಹನ ಅಭಯ ಪಡೆದವನ ಮೇಲೆ 
ಬೇರಾರದಾದರೂ ಏಟು ಬೀಳಲು ಸಾಧ್ಯವೆ?” (ಕುರ್‌ಆನ್‌: ಟಿಪ್ಪಣಿ) 


ಪ್ರವಾದಿ ಯೂಸುಫ್‌(ಅ) 25 


ಕುರ್‌ಆನಿನ ವಿಶೇಷತೆಯಾಗಿದೆ. 

''ಯೂಸುಫರು(ಆ) ವಾಸಿಸುತ್ತಿದ್ದ ಮನೆಯೊಡತಿ ಅವರ ಮೇಲೆ ಪ್ರೇಮ ಜಾಲ 
ಬೀಸತೊಡಗಿದಳು. ಒಂದು ದಿನ ಕದ ಮುಚ್ಚಿ, 'ಇತ್ತ ಬಾ' ಎಂದಳು. ಆಗ ಯೂಸುಘರು(ಅ) 
'ಅಲ್ಲಾಹನು ರಕ್ಷಿಸಲಿ. ನನ್ನ ಪ್ರಭು ನನಗೆ ಉತ್ತಮ ಸ್ಥಾನವನ್ನು ದಯಪಾಲಿಸಿದ್ದಾನೆ. 
(ಹೀಗಿರುವಾಗ ನಾನು ಈ ನೀಚ ಕಾರ್ಯವೆಸಗುವುಜೇ?) ಇಂತಹ ಅಕ್ರಮಿಗಳು ಎಂದೂ 
ಯಶಸ್ವಿಗಳಾಗುವುದಿಲ್ಲ' ಎಂದರು. ಅವಳು ಅವರ ಕಡೆಗೆ ಮುಂದುವರಿದಳು. 
ಯೂಸುಫರೂ(ಅ) ತಮ್ಮ ಪ್ರಭುವಿನ ನಿದರ್ಶನವನ್ನು ಕಾಣದಿರುತ್ತಿದ್ದರೆ ಅವಳ ಕಡೆಗೆ 
ಮುಂದಾಗುತ್ತಿದ್ದರು. ಹೀಗಾದುದು ನಾವು ಅವರಿಂದ ಪಾಪ ಮತ್ತು ನಿರ್ಲಜ್ಜತನವನ್ನು 
ತೊಲಗಿಸಲಿಕ್ಕಾಗಿ. ವಾಸ್ತವದಲ್ಲಿ ಅವರು ನಮ್ಮ ಆಯ್ದ ದಾಸರಲ್ಲಾಗಿದ್ದರು. ಕೊನೆಗೆ 
ಯೂಸುಫರು ಮುಂದಿನಿಂದಲೂ ಅವಳು ಹಿಂದಿನಿಂದಲೂ ಬಾಗಿಲಿನತ್ತ ಓಡಿದರು ಮತ್ತು 
ಹಿಂದಿನಿಂದ ಯೂಸುಫರ(ಅ) ಅಂಗಿಯನ್ನು (ಹಿಡಿದೆಳೆದು) ಹರಿದಳು. ಬಾಗಿಲಲ್ಲಿ ಅವರಿಬ್ಬರೂ 
ಅವಳ ಪತಿ ಉಪಸ್ಥಿತನಿದ್ದುದನ್ನು ಕಂಡರು. ಅವನನ್ನು ಕಂಡೊಡನೆ ಆಕೆ ಹೇಳಿದಳು. 'ನಿಮ್ಮ 
ಮನೆಯಾಕೆಯೊಂದಿಗೆ ನೀಚಕಾರ್ಯವೆಸಗಲಿಚ್ಛಿಸಿದವನ ಶಿಕ್ಷೆಯೇನು? ಇವನಿಗೆ ಸೆರೆಮನೆವಾಸ 
ಅಥವಾ ವೇದನಾತ್ಮಕ ದಂಡನೆಯ ವಿನಾ ಇನ್ನಾವ ಶಿಕ್ಷೆ ಇರಬಹುದು?' (ಆಗ) 
ಯೂಸುಫರು(ಅ), "ಇವಳೇ ನನ್ನನ್ನು ಬಲೆಗೆ ಸಿಕ್ಕಿಸಲು ಯತ್ನಿಸಿದ್ದಳು' ಎಂದರು. ಆ 
ಸ್ತ್ರೀಯ ಕುಟುಂಬದವರಲ್ಲೊಬ್ಬನು (ಸಂದರ್ಭೋಚಿತ) ಸಾಕ್ಸ್ಯವನ್ನು ಹೀಗೆ ನೀಡಿದನು: 
''ಯೂಸುಫನ(ಅ) ಅಂಗಿ ಮುಂಭಾಗದಿಂದ ಹರಿದಿದ್ದರೆ ಸ್ತ್ರೀಯು ಸತ್ಯವಂತಳು ಮತ್ತು 
ಇವನು ಸುಳ್ಳುಗಾರ. ಇವನ ಅಂಗಿ ಹಿಂಭಾಗದಿಂದ ಹರಿದಿದ್ದರೆ ಸ್ತ್ರೀಯು ಸುಳ್ಳುಗಾರ್ತಿ 
ಮತ್ತು ಇವನು ಸತ್ಯವಂತ. ಆಕೆಯ ಪತಿಯು ಯೂಸುಫರ(ಅ) ಅಂಗಿಯು ಹಿಂಭಾಗದಿಂದ 
ಹರಿದಿದ್ದುದನ್ನು ಕಂಡಾಗ ಇಂತೆಂದನು, 'ನಿಮ್ಮ (ಸ್ತ್ರೀಯರ) ಕುತಂತ್ರಗಳಿವು. ನಿಜಕ್ಕೂ 
ನಿಮ್ಮ ಕುತಂತ್ರಗಳು ಕಂಟಕಪ್ರಾಯವಾಗಿರುತ್ತವೆ.' 'ಯೂಸುಫ್‌(ಅ)! ನೀನು ಈ ಏಷಯವನ್ನು 
ಕಡೆಗಣಿಸು ಮತ್ತು ಓ ಸ್ತ್ರೀಯೇ! `ನೀನು ನಿನ್ನ ಅಪರಾಧಕ್ಕಾಗಿ ಕ್ಷಮೆ ' ಯಾಚಿಸು. 
ವಾಸ್ತವದಲ್ಲಿ ನೀನೇ ಅಪರಾಧಿಯಾಗಿದ್ದಿ."' '  ಹೊರಃ ಯೂಸುಘ್‌ಃ23-29) 

ಇಷ್ಟು ದೊಡ್ಡ ಸತ್ವಪರೀಕ್ಷೆ ಹಾಗೂ ಲೈಂಗಿಕ ವಿಕಾರಗಳನ್ನು ಕೆರಳಿಸುವಂತಹ 
ಘಟನೆಯನ್ನು ಬಚ್ಚಿಟ್ಟುಕೊಂಡು ಎಷ್ಟೊಂದು ಸುಂದರ ಮತ್ತು ಸಂಕ್ಷಿಪ್ತವಾಗಿ ಕುರ್‌ಆನ್‌ 
ವಿವರಿಸಿದೆ! 
ಸೋಲೊಪ್ಪದ ತಕ್ಕಾ 

ಸೌಂದರ್ಯದ ರಾಶಿಯಾದ ಓರ್ವ ಹೆಣ್ಣು ಸಕಲ ಮನಮೋಹಕ ಸಾಧನಗಳೊಂದಿಗೆ 
ಯೂಸುಫ್‌ರ(ಅ) ಮುಂದೆ ತನ್ನನ್ನು ಪ್ರದರ್ಶಿಸುತ್ತಾಳೆ. ಅಷ್ಟೇ ಅಲ್ಲ, ನಿರ್ಲಜ್ಜೆಯೊಂದಿಗೆ 
'ಬಾ ನನ್ನ ಬಳಿಗೆ' ಎಂದು ಅವರನ್ನು ಆಹ್ವಾನಿಸುತ್ತಾಳೆ. ಇಂದು ಹೇಗಾದರೂ ಮಾಡಿ 


26 ಪ್ರವಾದಿ ಯೂಸುಫ್‌(ಆ) 


ಯೂಸುಫ್‌ನನ್ನು(ಅ) ಸೋಲಿಸಿ ಬಿಡುವೆನೆಂದು ಆಕೆ ಪಣ ತೊಟ್ಟಿದ್ದಾಳೆ. ಆದರೆ ಯಾರ 
ಮುಂದೆ ಆಕೆ ತನ್ನನ್ನು ಬಿಚ್ಚಿಕೊಂಡಿದ್ದಳೋ ಆ ಆರೋಗ್ಯವಂತ, ಸ್ಪುರದ್ರೂಪಿ ಯುವಕ 
ಎಳ್ಳಷ್ಟೂ ವಿಚಲಿತನಾಗಲಿಲ್ಲ. ಒಮ್ಮೆಲೇ 'ಮಆದಲ್ಲಾಹ್‌'(ಅಲ್ಲಾಹನ ಅಭಯ) ಎಂದು 
ಉದ್ದರಿಸಿ ಬಿಡುತ್ತಾರೆ. ಶೈತಾನನು ಹರಡಿದ ಜಾಲ ತುಂಡು ತುಂಡಾಗಿ ಬಿಡುತ್ತದೆ. 
ಹಿಂದಿನಿಂದ ಓಡಿ ಬಂದು ಅವರ ಲಂಗಿಯನ್ನು ಜೋರಾಗಿ ಎಳೆಯುತ್ತಾಳೆ. ಅದು ಹರಿದು 
ಬಿಡುತ್ತದೆ. ಅವರಿಬ್ಬರೂ ಒಬ್ಬರ ನಂತರ ಒಬ್ಬರಂತೆ ಬಾಗಿಲಿನಿಂದ ಹೊರಬರುತ್ತಾರೆ. ಅಲ್ಲಿ 
ನೋಡುವುದೇನು! ಆಕೆಯ ಪತಿ ಬಾಗಿಲ ಬಳಿ ನಿಂತಿದ್ದಾನೆ. ಇದು ಕಾಕತಾಳೀಯವೋ 
ಅಲ್ಲಾಹನೇ ಸೃಷ್ಟಿಸಿದ ಸನ್ನಿವೇಶವೋ, ಎರಡೂ ಸಾಧ್ಯತೆಗಳಿವೆ. ಹೇಗೂ ಭಾವಿಸಬಹುದು. 
ಯೂಸುಫ್‌ರ(ಅ) ಮೇಲೆ ಅಪವಾದ ಬೀಳುವುದಕ್ಕಿಂತ ಮುಂಚೆಯೇ ಪ್ರಕರಣ ಅಲ್ಲೇ 
ಇತ್ರರ್ಥಗೊಳ್ಳುತ್ತದೆ. ಸೂಕ್ತಸಾಕ್ಸ್ಯ ಮತ್ತು ಸೂಕ್ಷ್ಮ ಪರಾಮರ್ಶೆಯ ನಂತರ ಅಧಿಕಾರಿಗೆ 
ತನ್ನ ಪತ್ನಿಯದ್ದೇ ತಪ್ಪು ಎಂದು ಮನವರಿಕೆಯಾಗುತ್ತದೆ. ಆತ ಪತ್ನಿಗೆ 'ನೀನೇ ಅಪರಾಧಿ' 
ಎಂದು ಹೇಳುತ್ತಾನೆ. ಸಾಕ್ಷಿಯು ಹೊರಗಿನವರಾರೂ ಆಗಿರಲಿಲ್ಲ. ಅದೇ ಹೆಂಗಸಿನ 
ಮನೆತನಕ್ಕೆ ಸೇರಿದ ಒಬ್ಬ ವ್ಯಕ್ತಿಯೇ ಆಗಿದ್ದನು. ಆತ ತನ್ನದೇ ಮನೆತನದ ಮಹಿಳೆಯನ್ನು 
ಅಪಮಾನಿಸುವ ಉದ್ದೇಶದಿಂದ ಸುಳ್ಳುಸಾಕ್ಸ್ಯ ನೀಡಿರಬಹುದೆಂದು ಊಹಿಸಲಿಕ್ಕೂ ಸಾಧ್ಯವಿಲ್ಲ. 
ಆದ್ದರಿಂದಲೇ ಆತ ಸಾಕ್ಸ್ಟ್ಯನುಡಿದ ಬಳಿಕ ಆಕೆಗೆ ಅದರೆ ವಿರುದ್ಧ ಒಂದು ಮಾತನ್ನಾದರೂ 
ಹೇಳುವ ಧೈರ್ಯ ಬರಲಿಲ್ಲ. ಯೂಸುಫರನ್ನು(ಅ) ಪ್ರೇಮಪಾಶದಲ್ಲಿ ಸಿಲುಕಿಸಲು ತಾನೇ 
ಪ್ರಯತ್ನಿಸಿದ್ದೆನೆಂಬ ಆಕೆಯ ಹೇಳಿಕೆ ಮುಂದೆ ಬರಲಿದೆ. 

ಮೇಲಿನ ಕುರ್‌ಆನ್‌ ಸೂಕ್ತಗಳಲ್ಲಿ ಪ್ರಸ್ತಾಪಿಸಲಾದ ಅನೇಕ ವಿಷಯಗಳ ಕುರಿತು 
ಕುರ್‌ಆನ್‌ ವ್ಯಾಖ್ಯಾನಕಾರರು ಸಾಕಷ್ಟು ಬರೆದಿದ್ದಾರೆ- ಉದಾ: 'ನನ್ನ ಪ್ರಭು ನನಗೆ ಉತ್ತಮ 
ಸ್ಥಾನ ನೀಡಿರುವನು' ಎಂಬ ಯೂಸುಫ್‌ರ(ಅ) ಹೇಳಿಕೆಯಲ್ಲಿ ಪ್ರಭು ಅಂದರೆ ಯಾರು? 
ಅಧಿಕಾರಿಯೋ ಅಥವಾ ಅಲ್ಲಾಹನೋ? 'ದೃಷ್ಟಾಂತ'ವೆಂದು ನೋಡಿದ್ದು ಏನನ್ನು? 'ಸಾಕ್ಸ್ನ್ಯ' 
ನುಡಿದದ್ದು ಯಾರು?- ಈ ವಿಷಯಗಳ ಚರ್ಚೆಯನ್ನು ನಾನು ಇಲ್ಲಿ ಮಾಡಬಯಸುವುದಿಲ್ಲ. 
ನನ್ನ ಉದ್ದೇಶವು ಯಾವುದೇ ಸಂಶೋಧನಾತ್ಮಕ ಪ್ರಬಂಧ ಬರೆಯುವುದಲ್ಲ. ಬದಲಾಗಿ 
ಈ ಘಟನೆಗಳಲ್ಲಿ ಅಡಗಿರುವ ಪಾಠಗಳು, ಉಪದೇಶಗಳು ಮತ್ತು ಬೋಧನೆಗಳನ್ನು ಮಾತ್ರ 
ವಿವರಿಸುವುದಾಗಿದೆ. ನನ್ನ ಮನಸ್ಸಿಗೆ ಸಂತೃಪ್ತಿಯಾದ ಹೇಳಿಕೆಗಳು ಮತ್ತು ವ್ಯಾಖ್ಯಾನಗಳನ್ನು 
ಮಾತ್ರ ನಾನು ಬರೆಯುತ್ತಿದ್ದೇನೆ. 


ರಬ್ಬ್‌, ಬುರ್ಹಾನ್‌ ಮತ್ತು ಶಾಹಿದ್‌ ಎಂದರೇನು? 

ನನ್ನ ಅಭಿಪ್ರಾಯದಲ್ಲಿ 'ರಬ್ಬೀ'(ನನ್ನ ಪ್ರಭು) ಎಂಬ ಯೂಸುಫ್‌ರ(ಅ) ಮಾತಿನ 
ಅರ್ಥ ಅಲ್ಲಾಹ್‌ ಆಗಿದೆ. 'ಬುರ್ಹಾನ್‌' ಎಂಬುದು ಅವರು 'ಮಆದಲ್ಲಾಹ್‌'(ಅಲ್ಲಾಹನ 
ಅಭಯ) ಎಂದು ಹೇಳಿದ ನಂತರ ನೀಡಿದ ಪುರಾವೆಯೇ ಆಗಿತ್ತು. ಅಂದರೆ ಅಲ್ಲಾಹನು 


ಪ್ರವಾದಿ ಯೂಸುಫ್‌(ಅ) 27 


ನನಗೆ ಉತ್ತಮ ಬಿಡಾರ ಮತ್ತು ಉತ್ತಮ ಸ್ಥಾನ ನೀಡಿರುವಾಗ ನಾನು ಇಂತಹ ನೀಚ 
ಕೆಲಸ ಮಾಡುವುದೇ? ಹಾಗೇನಾದರೂ ಮಾಡಿದರೆ ಅದು ಅತಿದೊಡ್ಡ ಅನ್ಕಾಯವಾದೀತು. 
ಅಕ್ರಮಿಗಳು ಯಶಸ್ವಿಯಾಗಲಾರರು. ವಾಸ್ತವದಲ್ಲಿ ಅಲ್ಲಾಹನು ಅವರಿಗೆ ಪ್ರದಾನ ಮಾಡಿದ 
ಪ್ರವಾದಿತ್ಚವೇ ಅವರಿಂದ ಹಾಗೆ ಹೇಳಿಸಿತ್ತು. ಹ. ಜಲ್‌ಫರ್‌ ಸಾದಿಕ್‌ರವರು(ರ) 
'ಬುರ್ಹಾನ್‌' ಎಂಬ ಪದವನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ: 

"ಬುರ್ಹಾನ್‌ ಎಂಬುದು ಅಲ್ಲಾಹನು ಅವರ ಹೃದಯದೊಳಗೆ ಇಳಿಸಿದ 
ಪ್ರವಾದಿತ್ವವಾಗಿತ್ತು. ಅಲ್ಲಾಹನನ್ನು ಕುಪಿತಗೊಳಿಸುವಂತಹ ಆ ಪಾಪದ ಹಾಗೂ 
ಯೂಸುಫ್‌ರ(ಅ) ನಡುವೆ ಅದುವೇ ತಡೆಯಾಗಿತ್ತು."(ತಪ್ಸೀರ್‌ ಮರುಖ್‌ಹರೀ, ಭಾಗ-5) 

ಅಲ್ಲಾಮಾ ಸನಾವುಲ್ಲಾ ಪಾನಿಪತಿಯವರು ಇದನ್ನೇ ಸಮರ್ಥಿಸಿದ್ದಾರೆ. ಅವರು 
ಹೇಳುತ್ತಾರೆ- ನನ್ನ ದೃಷ್ಟಿಯಲ್ಲಿ ಇತರೆಲ್ಲ ಹೇಳಿಕೆಗಳಿಗಿಂತ ಇದುವೇ ಸರಿಯಾದ 
ಅಭಿಪ್ರಾಯವಾಗಿದೆ. 

ಸಾಕ್ಸ್ಯ ನೀಡಿದ ಮಹಿಳೆಯ ಕುಟುಂಬದ ವ್ಯಕ್ತಿ ಬಹಳ ಧೀಮಂತನಾಗಿದ್ದ. ಪುರಾವೆ 
ಸಹಿತ ಆ ವ್ಯಕ್ತಿ ನೀಡಿದ ಸಾಕ್ಷ್ಯದ ಬಳಿಕ ಆ ಮಹಿಳೆಯ ಬಳಿಯಲ್ಲಿ ಹೇಳಲಿಕ್ಕೆ ಏನೂ ' 
ಇರಲಿಲ್ಲ. ಮೇಲೆ ಪ್ರಸ್ತಾಪಿಸಿದ ಕುರ್‌ಆನ್‌ ಸೂಕ್ತದಲ್ಲಿ ಅಲ್ಲಾಹನ ಈ ಮಾತೂ ಇದೆ- 
"ಹೀಗೇಕಾಯಿತೆಂದರೆ ನಾವು ಅವನಿಂದ ಕೆಡುಕು ಮತ್ತು. ಅಶ್ಲೀಲತೆಯನ್ನು 
ಹೋಗಲಾಡಿಸಬಯಸಿದ್ದೆವು. ವಾಸ್ತವದಲ್ಲಿ ಅವನು ನಮ್ಮ ಆಯ್ದ ದಾಸನಾಗಿದ್ದನು." 
ಇದನ್ನು ವ್ಯಾಖ್ಕಾನಿಸುತ್ತಾ ಮೌ। ಸಯ್ಯದ್‌ ಮೌದೂದಿಯವರು ಹೀಗೆ ಬರೆಯುತ್ತಾರೆ- 

ಈ ಮಾತಿಗೆ ಎರಡು ಅರ್ಥ ಕಲ್ಪಿಸಬಹುದು. ಒಂದನೆಯದಾಗಿ, ಅವನು ನೋಡುವುದು 
ಮತ್ತು ಪಾಪಕೃತ್ಯದಿಂದ ಪಾರಾಗುವುದು ನಮ್ಮ (ದೇವನ) ಅನುಜ್ಞೆಯಿಂದಾಗಿತ್ತು. ಏಕೆಂದರೆ 
ನಾವು ನಮ್ಮ ಈ ಆಯ್ದ ದಾಸನಿಂದ ಕೆಡುಕು ಮತ್ತು ಅಶ್ಲೀಲತೆಯನ್ನು 
ಹೋಗಲಾಡಿಸಬಯಸಿದ್ದೆವು. ಎರಡನೆಯದಾಗಿ, ನಡೆದು ಹೋದ ಪ್ರಕರಣವು ಯೂಸುಫ್‌ರ(ಅ) 
ತರಬೇತಿಯ ದೃಷ್ಟಿಯಿಂದ ಅಗತ್ಯವಾಗಿತ್ತು. ಇದು ಹೆಚ್ಚು ಆಳವಾದ ತಾತ್ಸರ್ಯವಾಗಿದೆಯೆಂದು 
ಭಾಸವಾಗುತ್ತದೆ. ಕೆಡುಕು ಮತ್ತು ಅಶ್ಲೀಲತೆಗಳಿಂದ ಶುದ್ಧಗೊಳಿಸಿ ಅವರ ಪಾವನ 
ವ್ಯಕ್ತಿತ್ವವನ್ನು ಉನ್ನತಿಗೇರಿಸಲು ಅವರ ಮುಂದೆ ಪಾಪದ ಸಂಕೀರ್ಣ ಅವಕಾಶವೊಂದನ್ನು 
ತಂದೊಡ್ಡುವುದು ಅನಿವಾರ್ಯವಾಗಿತ್ತು. ತನ್ಮೂಲಕ ಈ ಪರೀಕ್ಷೆಯಲ್ಲಿ ಅವರು ಮನಸ್ಸಿನ 
ಬ್ರಷ್ಟ ಒಲವುಗಳನ್ನು ಸಂಪೂರ್ಣವಾಗಿ ಮೆಟ್ಟಿ ನಿಲ್ಲಬೇಕಾಗಿತ್ತು. ಈ ಸತ್ವಪರೀಕ್ಲೆಯು 
ಅಲ್ಲಾಹನ ಅನುಜ್ಞೆಗನುಸಾರವಾಗಿತ್ತು. ವಿಶಿಷ್ಟ ರೀತಿಯ ಈ ತರಬೇತಿ ಕ್ರಮದ ಔಚಿತ್ಯ 
ಮತ್ತು ಮಹತ್ವವನ್ನು ಗ್ರಹಿಸಬೇಕಾದರೆ ಅಂದಿನ ಈಜಿಪ್ಟ್‌ ಸಮಾಜದಲ್ಲಿ ನೆಲೆಯೂರಿದ್ದ 
ನೈತಿಕ ದಿವಾಳಿತನದ ವಾತಾವರಣವನ್ನು ಮುಂದಿರಿಸಬೇಕು. ಮುಂದೆ ಅಧ್ಯಾಯದ ನಾಲ್ಕನೆಯ 
ರುಕೂಲ್‌ನಲ್ಲಿ ಆ ಪರಿಸರದ ಒಂದು ದೃಶ್ಯವನ್ನು ತೋರಿಸಲಾಗಿದೆ. ಆ ಕಾಲದ 'ನಾಗರಿಕ 
ಈಜಿಪ್ಟ್‌'ನ ಸಾಮಾನ್ಯ ಜನರಲ್ಲಿ ಹಾಗೂ ವಿಶೇಷವಾಗಿ ಅದರ ಪ್ರತಿಷ್ಠಿತ ವರ್ಗದವರಲ್ಲಿ 


28 ಪ್ರವಾದಿ ಯೂಸುಫ್‌(ಅ) 


ಲೈಂಗಿಕ ಅರಾಜಕತೆಯು ಸರಿಸುಮಾರು ನಮ್ಮ ಕಾಲದ ಪಾಶ್ಚಿಮಾತ್ಯರು ಮತ್ತು. ಪಾಶ್ಚಾತ್ಮ 
ಪೀಡಿತ ವರ್ಗದ ಜನರಲ್ಲಿರುವಂತೆಯೇ ಇತ್ತೆಂಬುದನ್ನು' ಅದರಿಂದ ಅಂದಾಜಿಸಬಹುದಾಗಿದೆ. 
ಯೂಸುಫ್‌ರಿಗೆ(ಅ) ಅಂತಹದೇ ಒಂದು ಕೆಟ್ಟ ಸಮಾಜದಲ್ಲಿದ್ದುಕೊಂಡು ಕೆಲಸ ಮಾಡಬೇಕಿತ್ತು. 
ಕೆಲಸ ಕೂಡ ಓರ್ವ ಸಾಮಾನ್ಯ. ಮನುಷ್ಯನಾಗಿ ಅಲ್ಲ, `ದೇಶದ ಆಡಳಿತಾಧಿಕಾರಿಯೆಂಬ 
ನೆಲೆಯಲ್ಲಿ ಮಾಡಬೇಕಾಗಿತ್ತು. ಆ ಸಮಾಜದ ಸ್ತ್ರೀಯರು. ಓರ್ವ 'ಗುಲಾಮನ ಮುಂದೆ 
ತಮ್ಮನ್ನು ಬಿಚ್ಚಲು ಪೈಪೋಟಿ ನಡೆಸುತ್ತಿದ್ದಾರೆಂದಾದರೆ, ಓರ್ವ "ಯುವ, ಸುಂದರ 
ಆಡಳಿತಾಧಿಕಾರಿಯನ್ನು ಸಿಲುಕಿಸಲು ಮತ್ತು ಅವರನ್ನು ಕೆಡಿಸಲು ಏನೆಲ್ಲ ಪ್ರಯತ್ನ ಮಾಡಿರಲಿಕ್ಕಿಲ್ಲ! 
ಅದರದೇ ಮುನ್ನುಡಿಯೆಂಬ ನೆಲೆಯಲ್ಲಿ ಅಲ್ಲಾಹನು ಆರಂಭದಲ್ಲೇ. ಯೂಸುಫ್‌ರನ್ನು(ಅ) 
ಕಠಿಣತರ ಪರೀಕ್ಷೆಗೊಡ್ಡಿ' ಅವರನ್ನು ಅಪ್ಪಟ ಅಪರಂಜಿಯಾಗಿ ಹೊರತೆಗೆದನು. ಅತ್ತ ಆ 
ಈಜಿಪ್ಟ್‌ನ ಮಹಿಳೆಯರನ್ನು ಕೂಡಾ ಅವರ ಬಗ್ಗೆ ಹತಾಶರಾಗುವಂತೆ ಮಾಡಿ ಅವರ ಎಲ್ಲ 
ದುಷ್ಟತನದ ಬಾಗಿಲುಗಳನ್ನು ಮುಚ್ಚಿಬಿಟ್ಟನು. (ತಪ್ಲೀಮುಲ್‌ ಕುರ್‌ಆನ್‌, ಭಾಗ-2) 


ಪ್ರತಿಷ್ಠಿತ ವರ್ಗದ ಸ್ತ್ರೀಯರ ದುಸ್ಥಿತಿ 

ಈಜಿಪ್ಟ್‌ನ ಆ ಅಧಿಕಾರಿಯು ನಡೆದ ಘಟನೆಯನ್ನು ರಹಸ್ಕವಾಗಿಡಲು 
ಪ್ರಯತ್ನಿಸಿರಬಹುದು. ಆದರೆ ಇಂತಹ ಪ್ರಕರಣಗಳು ಅಡಗುವುದು ಬಹಳ ಕಡಿಮೆ. ` 
'ಹಾಗೆಯೇ ಈಜಿಪ್ಟ್‌ನ ಲೈಂಗಿಕ ರೋಗಪೀಡಿತ ಸಮಾಜದಲ್ಲಿ ಅದು ಅಡಗಲೂ ಇಲ್ಲ. 
ಪ್ರತಿಷ್ಠಿತ ಮಹಿಳೆಯರಿಗೆ ಈ ವಿಷಯ ಹೇಗೋ ತಿಳಿದುಬಿಟ್ಟಿತು., ಅವರು ಈ ಸುಂದರ 
ಯುವಕನನ್ನು ಒಮ್ಮೆ. ನೋಡಿ. ಬಿಡಬೇಕೆಂದು ತುದಿಗಾಲಲ್ಲಿ ನಿಂತರು. ತಮ್ಮ ಚುಚ್ಚು 
ಮಾತುಗಳಿಂದ ಅಧಿಕಾರಿಯ ಪತ್ನಿಯನ್ನು ತರತರವಾಗಿ ಪೀಡಿಸತೊಡಗಿದರು. ಆದರೆ ಆ 
ಸ್ತ್ರೀ: ಇವರ ಮನದಿಂಗಿತವನ್ನು ಗ್ರಹಿಸಿದಳು. ಆಕೆ ಅವರಿಗೆ ಯೂಸುಫರನ್ನು(ಅ) ಕಾಣುವ 
ಅವಕಾಶವನ್ನು ಒದಗಿಸಿಕೊಟ್ಟಳು. ಅಲ್ಲಿ ಆ ಸ್ತ್ರೀಯರಿಗಾದ ತಳಮಳ ಹಾಗೂ ಅವರ 
ಕೂಟದಲ್ಲಿ ಅಧಿಕಾರಿಯ ಪತ್ನಿಯು ತನ್ನ ಮನದ ಆಗ್ರಹವನ್ನು ನಿರ್ಲಜ್ಜೆಯಿಂದ 
ಹೊರಗೆಡಹಿದ ರೀತಿಯನ್ನು ನೋಡುವಾಗ ಸಾವಿರಾರು. ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ 
'ಸ್ವಚ್ಛಂದ ಪ್ರೇಮ'ದ ದುಷ್ಟ ಸಂಪ್ರದಾಯವು ಯಾವ ಪಾತಾಳಕ್ಕಿಳಿದಿತ್ತು ಎಂಬುದನ್ನು 
ಅಂದಾಜಿಸಬಹುದು. 

ಕುರ್‌ಆನಿನಲ್ಲಿ ಹೀಗಿದೆ: . 

"ನಗರದ ವನಿತೆಯರು ಪರಸ್ಪರ ಚರ್ಚಿಸತೊಡಗಿದರು- 'ಅಯೀರುನ ಪತ್ನಿ ತನ್ನ 
ತರುಣ ಗುಲಾಮನನ್ನು ಮೋಹಪಾಶದಲ್ಲಿ ಬಿಗಿಯಲು ಯತ್ನಿಸುತ್ತಿದ್ದಾಳೆ. ಪ್ರೇಮವು 
ಅವಳನ್ನು ಅನಿಯಂತ್ರಿತಗೊಳಿಸಿದೆ. ನಮ್ಮ ದೃಷ್ಟಿಯಲ್ಲಿ ಅವಳು ಸುವ್ಯಕ್ತ ತಪ್ಪು 
ಹಾದಿಯಲ್ಲಿದ್ದಾಳೆ.' ಅವಳು ಅವರ ಈ ಕುಟಿಲ ಮಾತುಗಳನ್ನು ಕೇಳಿದಾಗ ಕರೆ ಕಳುಹಿಸಿದಳು 
ಮತ್ತು ಅವರಿಗಾಗಿ ಸುಪ್ಪತ್ತಿಗೆಗಳಿಂದ ಸಜ್ಜಾದ ಸಭೆಯೊಂದನ್ನು ಏರ್ಪಡಿಸಿದಳು. ಔತಣದಲ್ಲಿ 


pc 


ಪ್ರವಾದಿ ಯೂಸುಫ್‌(ಅ) 29 


ಪ್ರತಿಯೊಬ್ಬಳ ಮುಂದೆ ಒಂದೊಂದು ಚೊರಿಯನ್ನಿರಿಸಿದಳು. (ಆ ಸ್ತ್ರೀಯರು ಹಣ್ಣುಗಳನ್ನು 
ಕೊಯ್ದು ತಿನ್ನುತ್ತಲಿದ್ದ ಅದೇ ವೇಳೆಯಲ್ಲಿ) ಅವಳು ಯೂಸುಫರಿಗೆ(ಅ) ಅವರ ಮುಂದೆ 
ಹೊರಟು ಬರುವಂತೆ ಸೂಚನೆ ಕೊಟ್ಟಳು. `ಆ ಸ್ತ್ರೀಯರ ದೃಷ್ಟಿ ಅವರ ಮೇಲೆ ಬಿದ್ದಾಗ 
ಅವರು ದಂಗಾದರು ಮತ್ತು ತಮ್ಮ ಕೈಗಳನ್ನೇ ಕೊಯ್ದುಕೊಂಡರು. 'ಅಲ್ಲ. ಈತನು ಎಷ್ಟು 
ಮಾತ್ರಕ್ಕೂ ಮಾನವನೆಲ್ಲ. ಇದಾರೋ ಸನ್ಮಾನ್ಯ ದೇವಚರ' ಎಂದು ಭಾವಪರವಕರ್‌ಗಿ 
ಕೂಗಿಕೊಂಡರು. ಆರೀರುನ ಪತ್ನಿ ಹೇಳಿದಳು, ಕಂಡಿರಾ! ಯಾರ ವಿಷಯವಾಗಿ ನೀವು 
ನನ್ನ ಕುರಿತು ಆಕ್ಷೇಪಕರ ಮಾತುಗಳನ್ನಾಡುತ್ತಿದ್ದಿರೋ ಆ ವ್ಯಕ್ತಿ` ಇವನೇ. 
ನಿಸ್ಸಂದೇಹವಾಗಿಯೂ ನಾನು ಇವನನ್ನು ವಶೀಕರಿಸಲು ಪ್ರಯತ್ನಿಸಿದ್ದೆ. ಆದರೆ ಇವನು 
ತಪ್ಪಿಸಿಕೊಂಡನು. ಇವನು ನನ್ನ ಮಾತು ಕೇಳದಿದ್ದರೆ ಸೆರೆಮನೆ ಸೇರುವನು ಮತ್ತು 


ಅಪಮಾನಕ್ಕೊಳಗಾಗುವನು."' (ಪವಿತ್ರ ಕುರ್‌ಆನ್‌, 12:30-32) 
ಕುರ್‌ಆನ್‌ ವ್ಯಾಖ್ಯಾನ ಗ್ರಂಥಗಳಲ್ಲಿ, ಸತ್ಕಾರ ಕೂಟಕ್ಕೆ ಆಮಂತ್ರಿಸಲ್ಪಟ್ಟ ಸ್ತ್ರೀಯರ 


ಸಂಖ್ಯೆ ಐದೆಂದು ಹೇಳಲಾಗಿದೆ. ಅವರೆಲ್ಲರೂ ಉನ್ನತ ಅಧಿಕಾರಿಗಳ ಪತ್ನಿಯರಾಗಿದ್ದರು. 
ಇನ್ನೊಂದು ಹೇಳಿಕೆ ಪ್ರಕಾರ ಅವರು ನಲ್ವತ್ತುಮಂದಿ ಇದ್ದರು.' ಯೂರೋಪು; ಅಮೇರಿಕಾ 
ಹಾಗೂ ಅವರ 'ಪಾದಪಥಗಳನ್ನು ಅನುಸರಿಸುವವರ ದೃಷ್ಟಿಯಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು 
ಪ್ರಗತಿಯು ಇದಕ್ಕಿಂತ ಉನ್ನತ ಕಲ್ಪನೆಯೇನಾದರೂ ಇದೆಯೆ? ನಗ್ನತೆ, ಅಶ್ಲೀಲತೆ ಮತ್ತು 
ವ್ಯಭಿಚಾರಗಳು ಎಲ್ಲ ಅಜ್ಞಾನಜನ್ಮ ಸಮಾಜದ ವೈಶಿಷ್ಟ್ಯವಾಗಿದೆಯೆಂಬುದಕ್ಕೆ ಇತಿಹಾಸ 
ಸಾಕ್ಷಿಯಾಗಿದೆ. 


ದೇವಚರರು ನಿಷ್ಟಾಪಿಗಳೂ ಸುಂದರರೂ ಆಗಿರುತ್ತಾರೆ 

ಹ. ಯೂಸುಫ್‌ರನ್ನು(ಅ) ನೋಡಿ ಆ ಸ್ತ್ರೀಯರು ಇದೋರ್ವ 'ಸನ್ಮಾನ್ಕ ದೇವಚರ' 
ಎಂದು ಉದ್ಗರಿಸಿದ್ದರು. ದೇವಚರರು ನಿಷ್ಟಾಪಿಗಳಾಗಿರುತ್ತಾರೆ. ಅಷ್ಟೇ ಸುಂದರರೂ 
ಆಗಿರುತ್ತಾ ರೆ. ಈ ಎರಡೂ ಅರ್ಥದಲ್ಲಿ ಅವರು ಯೂಸುಫ್‌ರನ್ನು(ಅ) 'ದೇವಚರ'ನೆಂದು 
ಕರೆದಿದ್ದರು. ದೇವಚರರ ಸೌಂದರ್ಯದ ಕುರಿತು ಮೌ! ಶಬ್ಬೀರ್‌ ಅಹ್ಮದ್‌ ಉಸ್ಮಾನಿಯವರು 
ತಮ್ಮ ಕುರ್‌ಆನ್‌ ವ್ಯಾಖ್ಯಾನದಲ್ಲಿ ಅರಬ್‌ ಕವಿಯೊಬ್ಬರ ದ್ವಿಪದಿಯೊಂದನ್ನು ಉಲ್ಲೇಖಿಸಿದ್ದಾರೆ- 

"ಸೌಂದರ್ಯ ಸ್ಪರ್ಧೆಂಯಲ್ಲವರು ದೇವಚರರು 

ಹೂಡಿದರೆ ಅವರೊಂದಿಗೆ ಯುದ್ದ ರಕ್ಕಸರವರು.'' 

ಪುರುಷ ಸೌಂದರ್ಯವನ್ನು ಇಲ್ಲಿ ದೇವಚರರ ಸೌಂದರ್ಯಕ್ಕೆ ಹೋಲಿಸಲಾಗಿದೆ. 
ಯೂಸುಫ್‌ರ(ಅ) ಸೌಂದರ್ಯವು ಮಾನವ ಸೌಂದರ್ಯವಲ್ಲ, ಅದು ದೇವಚರರ 
ಸೌಂದರ್ಯವಾಗಿದೆಯೆಂದು ಆ ಸ್ತ್ರೀಯರು ಉದ್ದರಿಸಿದ್ದರು. ಅವರು ದೇವಚರರಷ್ಟೇ 
ನಿಷ್ಟಾಪಿಯಾಗಿದ್ದ ಕಾರಣ ಈ ಹದಿಹರೆಯದ ಯುವಕನು ಸೌಂದರ್ಯದ ರಾಶಿಯಾದ ಓರ್ವ 
ಸ್ತ್ರೀಯ ಮೋಹದ ಜಾಲದಿಂದ ತಪ್ಪಿಸಿಕೊಂಡನೆಂಬುದು ಆ ಮಹಿಳೆಯರ ಮಾತಿನ 
ಇಂಗಿತವಾಗಿತ್ತು. ` 


30 ಪ್ರವಾದಿ ಯೂಸುಫ್‌(ಆ) 


ಯೂಸುಫ್‌ರ(ಅ) ವಿನಯಶೀಲತೆ 

ಅಲ್ಲಾಹನ ಇಷ್ಟದಾಸರು ದೊಡ್ಡದೊಡ್ಡ ಸಾಧನೆಗಳನ್ನು ಮಾಡಿಯೂ ಗರ್ವಪಡುವುದಿಲ್ಲ. 

ಆ ಪೈಕಿ ಪ್ರವಾದಿಗಳು ಮುಂಚೂಣಿಯಲ್ಲಿರುತ್ತಾರೆ. ಅವರಲ್ಲಿ ಪ್ರತಿಯೊಬ್ಬರೂ ತನ್ನನ್ನು 

_ ಅಲ್ಲಾಹನ ವಿನೀತ ದಾಸನೆಂದೇ ಭಾವಿಸಿಕೊಂಡಿರುತ್ತಾರೆ. ತಾನು ಮಾಡುತ್ತಿರುವ ಆರಾಧನೆ- 
ಅನುಸರಣೆಗಳೆಲ್ಲವೂ ಅಲ್ಲಾಹನ ಅನುಗ್ರಹದಿಂದಲೇ ಆಗಿರುತ್ತದೆಂದು ಅವರು ಬಗೆಯುತ್ತಾರೆ. 
ಎಂತಹ ಕಷ್ಟ ಕಾಲವೇ ಬರಲಿ ಅವರು ಆತನ ಮುಂದೆಯಲ್ಲದೆ ಇನ್ನಾರ ಮುಂದೆಯೂ 
ಕೈಚಾಚುವುದಿಲ್ಲ. ಅವನಲ್ಲೇ ಪ್ರಾರ್ಥಿಸುತ್ತಾರೆ. ಆ ಮಹಿಳೆಯು ಯೂಸುಫ್‌ರಿಗೆ(ಅ) 
ಸೆರೆವಾಸದ ಬೆದರಿಕೆ ಹಾಕಿದಾಗ ಅವರು ಈ ರೀತಿ ಉದ್ಗರಿಸಿದರು: 

"ಯೂಸುಫ್‌ ಹೇಳಿದರು- ಓ ನನ್ನ ಪ್ರಭೂ! ಇವರು ನನ್ನಿಂದ ಬಯಸುವ 
ಕಾರ್ಯಕ್ಕಿಂತ ನನಗೆ ಸೆರೆಮನೆಯೇ ಲೇಸು. ನೀನು ಇವರ ಕುತಂತ್ರಗಳನ್ನು ನನ್ನಿಂದ 
ನೀಗಿಸದಿದ್ದರೆ ನಾನು ಇವರ ಬಲೆಯಲ್ಲಿ ಬಿದ್ದು ಹೋಗುವೆನು ಮತ್ತು ಅಜ್ಞಾನಿಗಳಲ್ಲಿ ಸೇರಿ 
ಹೋಗುವೆನು.' ಅವರ ಪ್ರಭು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು ಮತ್ತು ಆ ಸ್ತ್ರೀಯರ 
ಕುತಂತ್ರಗಳನ್ನು ಅವರಿಂದ ನೀಗಿಸಿದನು. ನಿಶ್ಚಯವಾಗಿಯೂ ಸರ್ವಶ್ರುಶನೂ ಸರ್ವಜ್ಜನೂ 
ಅವನೇ.'' (ಪವಿತ್ರ ಕುರ್‌ಆನ್‌, 12:33-34) 

ಎಷ್ಟೊಂದು ವಿನೀತ ಮೊರೆಯಿದು! ತನ್ನ ತುಂಬು ಯೌವನದಲ್ಲಿ ಓರ್ವ ಅಪ್ಸರೆಯಂತಹ 
ಸ್ತ್ರೀಯ ದುಷ್ಟೇರಣೆಯಿಂದ ಕಳಂಕರಹಿತವಾಗಿ ಪಾರಾಗಿ ಬಂದೆನೆಂಬ ಯೋಚನೆಯೂ 
ಅವರನ್ನು ಕಾಡಲಿಲ್ಲ.. ಈಗ ತಾನೇ ಅವಳಿಂದ ತಪ್ಪಿಸಿಕೊಂಡು ಬಂದಂತೆ ಈ ಸ್ತ್ರೀಯರ 
ಮೋಹದ ಜಾಲಗಳಿಂದಲೂ ಪಾರಾಗಿ ಬರಬಲ್ಲೆನೆಂಬ ಕಿಂಚಿತ್‌ ಭಾವನೆಯೂ ಅವರ 
ಮನಸ್ಸಿನಲ್ಲಿ ಮೂಡಲಿಲ್ಲ. ಬದಲಾಗಿ ತನ್ನ ಮಾನವ ಸಹಜ ದೌರ್ಬಲ್ಯಗಳನ್ನು 
ನೆನೆದುಕೊಂಡು ತನ್ನ ಪ್ರಭುವಿನ ಮುಂದೆ ವಿನೀತವಾಗಿ ಬಾಗಿಬಿಟ್ಟರು.' "ನನ್ನ ಪ್ರಭೂ! 
ಈ ಸ್ತ್ರೀಯರ ಮೋಹದ ಜಾಲದಿಂದ ನೀನು ಮಾತ್ರ ರಕ್ಷಿಸಬಲ್ಲೆ. ನೀನು ನನಗೆ ಸಹಾಯ 
ಮಾಡದಿದ್ದರೆ ನಾನು ಇವರ ಉರುಳಿಗೆ ಸಿಕ್ಕಿಬೀಳುವೆನು.”" ಅವರು ಈ ಪ್ರಾರ್ಥನೆ 
ಮಾಡುತ್ತಿದ್ದಾಗ ಕೇವಲ ಓರ್ವ ಅಪ್ಸರೆಯಲ್ಲ. ನೂರಾರು ಅಪ್ಸರೆಯರು ಅವರನ್ನು ತಮ್ಮ 
ಪ್ರೇಮಪಾಶದಲ್ಲಿ ಸಿಲುಕಿಸಲು ಪೈಪೋಟಿ ನಡೆಸುತ್ತಿದ್ದರು. ಅಲ್ಲಾಹನು ಅವರ ಮೊರೆಯನ್ನು 
ಆಲಿಸಿದನು. ಆ ಎಲ್ಲ ಸ್ತ್ರೀಯರ ಕುತಂತ್ರವನ್ನು ಛಿದ್ರಗೊಳಿಸಿಬಿಟ್ಟನು. ಈ 
ಸತಪರೀಕ್ಷೆಯಿಂದಲೂ ಅವರು ಅಪ್ಪಟ ಅಪರಂಜಿಯಾಗಿ ಹೊರಬಂದರು. 'ನನಗೆ ಸೆರೆವಾಸವೇ 
ಲೇಸು' ಎಂಬ ಅವರ ಮಾತು ಕೇವಲ ಔಪಚಾರಿಕವಾಗಿರಲಿಲ್ಲ. ಯಾವ ಪಾಪ ಕಾರ್ಯದತ್ತ 
ಆ ಹೆಂಗಸರು ಕರೆಯುತ್ತಿದ್ದರೋ ಅದಕ್ಕಿಂತ ತನಗೆ ಸೆರೆವಾಸವೇ ಲೇಸು ಎಂದವರು 
ಹೇಳಿದ್ದರು. ಕೆಲವು ವ್ಯಾಖ್ಯಾನಕಾರರು, ಯೂಸುಫ್‌ರು(ಅ) ಈ ಮಾತನ್ನು ಹೇಳದಿರುತ್ತಿದ್ದರೆ 
ಅವರಿಗೆ ಜೈಲು ಶಿಕ್ಷೆಯಾಗುತ್ತಿರಲಿಲ್ಲವೆಂದು ಹೇಳಿರುವುದು ಅವರ ಈ ಮಾತನ್ನು 


ಪ್ರವಾದಿ ಯೂಸುಫ್‌(ಆ) 31 


ಔಪಚಾರಿಕವೆಂದು ಭಾವಿಸಿದ್ದ ಕಾರಣದಿಂದಾಗಿತ್ತು. ಅನಂತರದ ಮಾತಿನ ಕಡೆಗೆ ಅವರು 
ಗಮನ ಹರಿಸಲಿಲ್ಲ.' ಒಂದು ವೇಳೆ ಅಪಮಾನದ ಬದುಕಿಗಿಂತ ನನಗೆ ಮರಣವೇ ಲೇಸೆಂದು' 
ಯಾರಾದರೂ ಹೇಳಿದರೆ ಆತ ಮರಣವನ್ನು ಬಯಸುತ್ತಾನೆಂದೋ ಮರಣವು ಒಂದು 
ಪ್ರಿಯವಸ್ತುವೆಂದೋ ಭಾವಿಸಿದಂತಾಗುವುದಿಲ್ಲ. 


ಯೂಸುಫ್‌(ಅ) ಕಾರಾಗೃಹದಲ್ಲಿ 

ಕೊನೆಗೂ ಅಧಿಕಾರಿಯ ಪತ್ನಿಯ ಬೆದರಿಕೆ ಕಾರ್ಯರೂಪಕ್ಕಿಳಿಯಿತು. ಆಕೆ 
ಯೂಸುಫ್‌ರನ್ನು(ಅ) ಜೈಲಿಗೆ ಅಟ್ಟಿಯೇ ಬಿಟ್ಟಳು. ಈ ರೀತಿ ಅವರು ಉನ್ನಶಿಯ ಕೊನೆಯ 
ಮೆಟ್ಟಲಿಗೆ ತಲುಪಿದರು. ಅದರ ನಂತರ ಈಜಿಪ್ಟ್‌ ಸಾಮ್ರಾಜ್ಯದ ಆಡಳಿತಪೀಠವು ಅವರ 
ಪಾದಸ್ಪರ್ಶಕ್ಕೆ ಕಾಯುತ್ತಿತ್ತು. ಅಧಿಕಾರಿಯು, ಯೂಸುಫರು ನಿರಪರಾಧಿಯೆಂದು ಅರಿತೂ 
ಅವರನ್ನು ಜೈಲಿಗೆ ಕಳಿಸಿದನು. ಈಜಿಪ್ಟ್‌ ಜನಸಾಮಾನ್ಯರೂ ಅಧಿಕಾರಿವರ್ಗವೂ ಅವರೇ 
ಅಪರಾಧಿಯಾಗಿದ್ದರೆಂದು ಭಾವಿಸಲೆಂದೂ ತಾನು ಅದರ ಕಳಂಕದಿಂದೆ ಪಾರಾಗಿಬಿಡುವೆನೆಂದೂ 
ಆತ ಭಾವಿಸಿದ್ದ. ಕುರ್‌ಆನ್‌ ಸಂಕ್ಷಿಪ್ತವಾಗಿ ಈ ಘಟನೆಯನ್ನು ಹೀಗೆ ವಿವರಿಸಿದೆ- 

''ತರುವಾಯ ಒಂದು ಕಾಲಾವಧಿಯವರೆಗೆ ಇವರನ್ನು ಸೆರೆಯಲ್ಲಿಡಬೇಕೆಂದು ಅವರಿಗೆ 
ತೋರಿತು. ವಸ್ತುತಃ ಅವರು. (ಇವರ ಪಾವಿಶ್ರ್ಯ ಮತ್ತು ಸ್ವತಃ ತಮ್ಮ ಸ್ತ್ರೀಯರ 
ದುರ್ಗುಣಗಳ) ಸ್ಪಷ್ಟ ದೃಷ್ಟಾಂತಗಳನ್ನು ಕಂಡು ಕೊಂಡಿದ್ದರು.'' 

(ಪವಿತ್ರ ಕುರ್‌ಆನ್‌, 12:35) 

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ತಮ್ಮ ವೈಯಕ್ತಿಕ, ಕೌಟುಂಬಿಕ ಅಥವಾ 
ರಾಜಕೀಯ ಸ್ವಾರ್ಥ ಸಾಧನೆಗಾಗಿ ನಿರಪರಾಧಿಗಳನ್ನು ಹಿಡಿಯುವುದು, ಅವರ ಅಪರಾಧವೇನೆಂದು 
ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸದೆ ಇರುವುದು ಮತ್ತು ಅವರನ್ನು ಸೆರೆಮನೆಗೆ ತಳ್ಳುವುದು 
ಇಂದು ನಡೆಯುತ್ತಿರುವುದು ಹೊಸತೇನೂ ಅಲ್ಲ. ಅದು ನಾಲ್ಕು ಸಾವಿರ ವರ್ಷಗಳ 
ಹಿಂದೆಯೂ ಇತ್ತು. ಎರಡನೆಯದಾಗಿ, ಬಲಿಪಶುವನ್ನು ಎಷ್ಟು ಕಾಲ ಸೆರೆವಾಸದಲ್ಲಿರಿಸಬೇಕೆಂದು 
ನಿರ್ಣಯಿಸುವ ಅಗತ್ಯವನ್ನೂ ಅಧಿಕಾರಿಗಳು ಮನಗಾಣಲಿಲ್ಲ. ಆದುದರಿಂದಲೇ ಯೂಸುಫ್‌(ಅ) 
ಅನೇಕ ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಜೈಲಿನಲ್ಲಿರುವಾಗ ಒಂದು ಘಟನೆ 
ನಡೆಯದಿರುತ್ತಿದ್ದರೆ ಬಹುಶಃ ಜೀವಮಾನವಿಡೀ ಅಲ್ಲೇ ಕೊಳೆಯಬೇಕಾಗುತ್ತಿತ್ತೇನೊ. ಅದರ 
ಪ್ರಸ್ತಾಪ ಮುಂದೆ ಬರಲಿದೆ. 

ಯೂಸುಫ್‌ರನ್ನು(ಅ) ಜೈಲಿಗೆ ಹಾಕುವುದರ ಹೊಣೆಗಾರಿಕೆಯನ್ನು ಕುರ್‌ಆನ್‌ ಕೇವಲ 
ಒಬ್ಬ ಅಧಿಕಾರಿಯ ತಲೆಯ ಮೇಲೆ ಹಾಕಲಿಲ್ಲ. ಅಲ್ಲಿ ಬಹುವಚನವನ್ನು ಪ್ರಯೋಗಿಸಿದೆ. 
ಅದರ ಪ್ರಕಾರ, ಉನ್ನತ ಅಧಿಕಾರಿಗಳ ಒಂದು ಸಭೆಯು(ಸಚಿವ ಸಂಪುಟವಾಗಿರಬಹುದು) 
ಅವರನ್ನು ಜೈಲಿಗೆ ಹಾಕುವ ತೀರ್ಮಾನಕ್ಕೆಗೊಂಡಿತ್ತು ಎಂಬ ಸೂಚನೆ ಲಭಿಸುತ್ತದೆ. ಆ 
ಅಧಿಕಾರಿಗಳು ಕೂಡಾ ರುುಲೇಖಾ ಸತ್ಕಾರ ಕೂಟಕ್ಕೆ ಆಮಂತ್ರಿಸಿದ ಗಣ್ಮ 


32 ಪ್ರವಾದಿ ಯೂಸುಫ್‌) 


ಮಹಿಳೆಯರಪತಿಯಂದಿರೇ ಆಗಿದ್ದರು. ಮುಂದಿನ ಘಟನೆಯು, ಈಜಿಪ್ಟ್‌ನ ಅರಸನಿಗೂ 
ಈ ವಿಷಯ ತಿಳಿದಿತ್ತೆಂಬುದನ್ನು ಸೂಚಿಸುತ್ತದೆ. ಈ ಅಧಿಕಾರಿಗಳು ಯೂಸುಫರನ್ನು(೮) 
ಜೈಲಿಗೆ ಕಳಿಸುವುದೇ ಸೂಕ್ತವೆಂಬ ವಿಚಾರವನ್ನು ಅರಸನಿಗೆ ಮನವರಿಕೆ ಮಾಡಿದ್ದ ರು. ಈ 
ರೀತಿ ಪ್ರಕರಣದ ಸುದ್ದಿ ದೇಶದಾದ್ಯಂತ ಹಬ್ಬಿರಬಹುದು. ಅದರಿಂದ ಯೂಸುಫ್‌ರ(ಲ) 
ಕೀರ್ತಿ ದೂರ ದೂರದವರೆಗೂ ತಲಪಿರಬಹುದು. ಅಲ್ಲಾಹನು ಅವರಿಂದ ಯಾವ 
ಸೇವೆಯನ್ನು. ಮಾಡಿಸಬಯಸಿದ್ದನೋ ಅದಕ್ಕಾಗಿ ಅವರ ವ್ಯಕ್ತಿತ್ವವು ಎಲ್ಲರಿಗೂ 
ಪರಿಚಿತವಾಗುವುದು ಅನಿವಾರ್ಯವಾಗಿತ್ತು. 

ಜೈಲರನು ಜೈಲನ್ನೇ ಒಪ್ಪಿಸಿದನು 

ಹ. ಯೂಸುಫ್‌(ಅ) ಸೆರೆಮನೆಗೆ ತಲಪಿದಾಗ ಅಲ್ಲಿನ ಜೈಲರ್‌ ಅಥವಾ ಜೈಲಧಿಕಾರಿಯು 
ಅವರ ಮುಗ್ದ ಚಹರೆ, ನಿರ್ಮಲ ಚಾರಿತ್ರ್ಯ ಹಾಗೂ ಅವರ ಉನ್ನತ ಚಾರಿತ್ರ್ಯವನ್ನು ಕಂಡು 
ಬಹಳ ಪ್ರಭಾವಿತನಾದ. ಆದ್ದರಿಂದ ಆತ ಸೆರೆಮನೆಯ ಎಲ್ಲ ವ್ಯವಸ್ಥೆಗಳನ್ನೂ ಅವರಿಗೇ 
ವಹಿಸಿಕೊಟ್ಟ, ಸೆರೆಮನೆಯ ಎಲ್ಲ ಅಧಿಕಾರಗಳೂ ಅವರ ಕೈಗೆ ಬಂದುವು. ಬೈಬಲ್‌ನ 

' ಆದಿಕಾಂಡದಲ್ಲಿ ಹೀಗಿದೆ- 

"ದೇವರು ಜೈಲಿನಲ್ಲಿ ಯೂಸುಫ್‌ರೊಂದಿಗಿದ್ದನು(ಅ). ಅವನು ಅವರ ಎಲ್ಲ 
ಕಾರ್ಯಗಳಲ್ಲೂ ಸಮೃದ್ಧಿ ನೀಡಿದ್ದನು. ಜೈಲರನು ಎಲ್ಲ ಕೈದಿಗಳನ್ನೂ ಅವರ ಸ್ವಾಧೀನಕ್ಕೆ 
ನೀಡಿದ್ದನು. ಕೈದಿಗಳು ಅವರ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಅವರ ವಶದಲ್ಲಿದ್ದ ಎಲ್ಲ 
ಕೆಲಸಕಾರ್ಯಗಳ ಬಗ್ಗೆ ಆತ ನಿಶ್ಚಿಂತನಾಗಿದ್ದ." (ಅಧ್ಯಾಯ 39- ಸೂಕ್ತಿಗಳು: 21-23) 

ಯೂಸುಫ್‌ರಿಗೆ(ಅ) ಅಲ್ಲಾಹನು ಅತ್ಯುತ್ತಮ ಚಾರಿತ್ರ್ಯ, ಆಕರ್ಷಕ ವ್ಯಕ್ತಿತ್ವ ಮತ್ತು 
ಜನಪ್ರಿಯತೆಯನ್ನೂ ಅಪ್ರತಿಮ ಪ್ರತಿಭೆಗಳನ್ನೂ ದಯಪಾಲಿಸಿದ್ದನು. ಅವರು ಎಲ್ಲಿದ್ದರೂ 
ಗೌರವಿಸಲ್ಪಡುತ್ತಿದ್ದರು. ಹೆಸರಿಗೆ ಕೈದಿಯಾದರೂ ವಾಸ್ತವದಲ್ಲಿ ಜೈಲಿನ ಅಧಿಕಾರಿಯ 
ಸ್ಥಾನಗಳಿಸಿದ್ದರು. ಯೂಸುಫ್‌ರ(ಅ) ಜೊತೆಯಲ್ಲಿ ಇನ್ನಿಬ್ಬರು ಯುವಕರನ್ನೂ ಜೈಲಿಗೆ 
ಹಾಕಲಾಗಿತ್ತು. ಅವರಲ್ಲೊಬ್ಬನು ರಾಜನಿಗೆ ಪಾನೀಯ ಕುಡಿಸುವವರ ಸಂಚಾಲಕನಾಗಿದ್ದನು. 
ಇನ್ನೊಬ್ಬನು ರಾಜನ ಅಡುಗೆಕೋಣೆಯ ಅಧಿಕಾರಿಯಾಗಿದ್ದನು. ಅವರಿಬ್ಬರಿಗೂ ಒಂದೊಂದು 
ಕನಸು ಬಿದ್ದಿತ್ತು. ಅದನ್ನು ಯೂಸುಫ್‌ರ(ಅ) ಮುಂದೆ ವಿವರಿಸಿ ಅದರ ಫಲವನ್ನು 
ತಿಳಿಸುವಂತೆ ಅವರು ವಿನಂತಿಸಿದರು. ಒಬ್ಬನು ಹೇಳಿದನು 'ನಾನು ರಾಜನಿಗಾಗಿ ಶರಾಬು 
ತಯಾರಿಸುವವನಾಗಿದ್ದೇನೆ.' ಇನ್ನೊಬ್ಬನು ಹೇಳಿದನು 'ನನ್ನ ತಲೆಯ ಮೇಲೆ ರೊಟ್ಟಿ 
ಇಡಲಾಗಿತ್ತು. ಪಕ್ಷಿಗಳು ಅದನ್ನು ಕುಕ್ಕಿ ತಿನ್ನುತ್ತಿದ್ದವು.' ಜೊತೆಗೆ ಅವರಿಬ್ಬರೂ 'ನೀವು 
ಒಬ್ಬ ಸಜ್ಜನ ವ್ಯಕ್ತಿಯಂತೆ ಕಾಣುತ್ತಿದ್ದೀರಿ' ಎಂದು ಹೇಳಿದರು. ಅವರ ಕನಸು 
ಯೂಸುಫ್‌ರು(ಅ) ಜೈಲಿಗೆ ಹೋಗಿ ಎಷ್ಟು ಕಾಲದ ನಂತರ ಕಂಡದ್ದೆಂದು ಹೇಳಲು 
ಸಾಧ್ಯವಿಲ್ಲ. ಆದರೆ ಕುರ್‌ಆನಿನ ಸೂಚನೆಯ ಪ್ರಕಾರ ಬಹಳ ಬೇಗನೆ ಕಂಡಿದ್ದರು. ಅವರ 


ಪ್ರವಾದಿ ಯೂಸುಫ್‌(ಅ) 33 


ವಿಚಾರಣೆ ನಡೆದು ಶಿಕ್ಷೆಯ ತೀರ್ಮಾನವೂ ಆಗಿತ್ತು. ಅವರು ಕೆಲವೇ ದಿನಗಳಲ್ಲಿ 
ಯೂಸುಫ್‌ರ(ಅ) ನೀತಿನಡವಳಿಕೆಗಳಿಂದ ಬಹಳ ಪ್ರಭಾವಿತರಾಗಿದ್ದರು. ಅದರಿಂದಾಗಿ ತಮ್ಮ 
ಕನಸಿನಫಲವನ್ನು ಅವರಿಂದಲೇ ಕೇಳಿ ತಿಳಿಯಲು ಬಂದಿದ್ದರು. ಅವರ ಬಗ್ಗೆ ತಮ್ಮಲನಿಸಿಕೆಯನ್ನು 
ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಿದ್ದರು. ಅವರಿಗೆ ಈ ಭಾವನೆ ಬರಲು ಕಾರಣ ಜೈಲಿಗೆ 
ಬಂದಂದಿನಿಂದಲೇ: ಜನರೊಂದಿಗೆ ಅವರ ಉತ್ತಮವರ್ತನೆ, ಅವರನ್ನು ಸುಧಾರಿಸುವ ರೀತಿ, 
ಅವರೊಂದಿಗೆ ಸಹಾನುಭೂತಿ, ಅವರ ಸೇವೆ ಮತ್ತು ಅವರಿಗೆ ಸಂದೇಶ ತಲಪಿಸುವ 
ಕಾರ್ಯವನ್ನು ಆರಂಭಿಸಿರುವುದೇ ಆಗಿತ್ತು. ಓರ್ವ ನಿರಪರಾಧಿ ವ್ಯಕ್ತಿಯನ್ನು ವಿನಾಕಾರಣ 
ಜೈಲಿಗೆ ಹಾಕಲಾಗಿದೆಯೆಂದು ಜೈಲಧಿಕಾರಿ ಮಾತ್ರವಲ್ಲ ಕೈದಿಗಳೆಲ್ಲರಿಗೂ ಮನವರಿಕೆಯಾಗಿತ್ತು. 
ಯೂಸುಫರು(ಅ) ಕೈದಿಗಳ ಕನಸಿನ ವೃತ್ತಾಂತವನ್ನು ಕೇಳಿ ತಿಳಿದಾಗ ಮತ್ತು ಅವರ ಪ್ರತಿಕ್ರಿಯೆ 
ಮುಂದೆ ಬಂದಾಗ ಅವರಿಗೆ ಕನಸಿನಫಲ ತಿಳಿಸುವುದಕ್ಕಿಂತ ಮುಂಚೆ ಅವರು ತನಗೆ ಸಿಕ್ಕಿದ 
ಅವಕಾಶವನ್ನು ಬಳಸಿಕೊಂಡು ತೌಹೀದ್‌(ಏಕದೇವತ್ವ)ನ ಸಂದೇಶವನ್ನು ಅತ್ಯುತ್ತಮ ರೀತಿಯಲ್ಲಿ 
ಆಧಾರಸಹಿತ ಅವರ ಮುಂದಿಟ್ಟರು. 


ತೌಹೀದ್‌ನ ಉಪನ್ಯಾಸದ ಪೀಠಿಕೆ 

ಯೂಸುಫ್‌ರು(ಅ) (ಹೀಗೆ) ಹೇಳಿದರು: ''ಇಲ್ಲಿ ನಿಮಗೆ ಸಿಗುತ್ತಿರುವ ಊಟ 
ಬರುವುದಕ್ಕಿಂತ ಮುಂಚೆ ನಾನು ನಿಮಗೆ ಈ ಸ್ವಪ್ನಗಳ ಫಲವನ್ನು ಹೇಳುವೆನು. ಇದು ನನ್ನ 
ಪ್ರಭು ನನಗೆ ದಯಪಾಲಿಸಿರುವ ಜ್ಞಾನಗಳಲ್ಲೊಂದು. ವಾಸ್ತವದಲ್ಲಿ ನಾನು ಅಲ್ಲಾಹನ 
ಮೇಲೆ ವಿಶ್ವಾಸವಿಡದವರ ಮತ್ತು ಷರಲೋಕವನ್ನು ನಿರಾಕರಿಸುವವರ ಮಾರ್ಗವನ್ನು 
ಬಿಟ್ಟಿರುವೆನು ಮತ್ತು ನಮ್ಮ ಪೂರ್ವಜರಾಗಿರುವ ಇಬ್‌ರಾಹೀಮ್‌(ಅ), ಇಸ್‌ಹಾಕ್‌(ಅ) 
ಮತ್ತು ಯಲ್‌ಕೂಬರ(ಅ) ಮಾರ್ಗವನ್ನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ ಇತರರನ್ನು 
ಸಹಭಾಗಿಗಳನ್ನಾಗಿಸುವುದು ನಮ್ಮಕೆಲಸವಲ್ಲ. ವಾಸ್ತವದಲ್ಲಿ ಇದು (ಅಲ್ಲಾಹನು ನಮ್ಮನ್ನು 
ತನ್ನ ಹೊರತು ಇನ್ನಾರದೇ ದಾಸರಾಗಿ ಮಾಡದಿರುವುದು) ನಮ್ಮಮೇಲೆ ಮತ್ತು ಸಕಲ 
ಮಾನವರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಹೆಚ್ಚಿನವರು ಕೃತಜ್ಞತೆ 
ಸಲ್ಲಿಸುವುದಿಲ್ಲ.'' (ಪವಿತ್ರ ಕುರ್‌ಆನ್‌, 12:37-38) 

ತೌಹೀದ್‌ನ ಬಗ್ಗೆ ಅವರ ಉಪನ್ಯಾಸ ಮುಂದೆಬರಲಿದೆ. ಅದಕ್ಕಿಂತ ಮುಂಚಿನ ಅವರ 
ಈ ಪೀಠಿಕೆ ಎಷ್ಟೊಂದು ಪರಿಣಾಮಕಾರಿ ಹಾಗೂ ಮನಮುಟ್ಟುವಂತಹದ್ದು! ಪ್ರಪ್ರಥಮವಾಗಿ 
ಅವರು ಹೇಳಿದರು- 'ನಾನು ನಿಮಗೆ ನಿಮ್ಮ ಕನಸಿನಫಲವನ್ನು ತಿಳಿಸುತ್ತೇನೆ. ಇದು ಮಾಟ, 
ಜೋತಿಷ್ಯ ಅಥವಾ ಇನ್ನಾವುದೇ ವಿದ್ಯೆಯಿಂದ ಗಳಿಸಿದ ಜ್ಞಾನವಲ್ಲ. ಬದಲಾಗಿ ಇದರ 
ಸ್ರೋತವು ಅಲ್ಲಾಹನ ವಾಣಿ(ವಹೀ) ಮತ್ತು ಅವನು ನೀಡಿದ ಜ್ಞಾನವಾಗಿದೆ. ಅದರಲ್ಲಿ 
ಯಾವುದೇ ಸಂಶಯಕ್ಕೆ ಆಸ್ಪದವೇ ಇಲ್ಲ. ನೀವೀಗ ಸಜ್ಜನ(ಮುಹ್ಲಿನ್‌)ನೆಂದು ಸಾರಿದ ವ್ಯಕ್ತಿ 
ನಿಜವಾಗಿಯೂ ಪ್ರವಾದಿಗಳ ಕುಟುಂಬದ ಓರ್ವವ್ಯಕ್ತಿಯೂ ಸ್ವಯಂ ಪ್ರವಾದಿಯೂ 


34 ಪ್ರವಾದಿ ಯೂಸುಫ್‌(ಆ) 


ಆಗಿರುವನು." ತರುವಾಯ ಅವರು, ಅಲ್ಲಾಹನನ್ನೂ ಪರಲೋಕವನ್ನೂ ನಂಬದವರಿಗೂ 
ನನಗೂ ಯಾವುದೇ ಸಂಬಂಧವಿಲ್ಲವೆಂಬುದನ್ನು ವ್ಯಕ್ತಪಡಿಸುತ್ತಾರೆ. 'ನನ್ನ ಧರ್ಮವು ನಮ್ಮ 
ಹಿರಿಯರಾದ ಇಬ್‌ರಾಹೀಮ್‌(ಅ), ಇಸ್‌ಹಾಕ್‌(ಅ) ಮತ್ತು ಯಲ್‌ಕೂಬ್‌ರ(ಅ) ಅದೇ 
ಧರ್ಮವೆಂದು ಅವರು ಹೇಳಿದರು. ಶಿರ್ಕನ್ನು(ಬಹುದೇವತ್ವ) ಬಲವಾಗಿ ಖಂಡಿಸುತ್ತಾ, 
ಅಲ್ಲಾಹನೊಂದಿಗೆ ಇತರ ಯಾವುದೇ ವಸ್ತುವನ್ನು ಸಹಭಾಗಿಯಾಗಿ ಮಾಡುವ ಅಧಿಕಾರ 
ನಮಗೆ ಇಲ್ಲವೇಇಲ್ಲ. ಅಲ್ಲಾಹನು ನಮ್ಮನ್ನೂ ಇತರೆಲ್ಲ ಮಾನವರನ್ನೂ ಆತನ ಹೊರತು 
ಇನ್ನಾರದೇ ದಾಸರನ್ನಾಗಿ ಮಾಡದಿರುವುದು ಆತನ ಮಹಾಉಪಕಾರವಾಗಿದೆ. ಆದರೆ ಹೆಚ್ಚಿನ 
ಜನರು ಅವನಿಗೆ ಕೃತಜ್ಞತೆ ಸಲ್ಲಿಸುವುದಿಲ್ಲ. ಇದೆಂತಹ ದುರಂತವೆಂದವರು ಮರುಗಿದರು. 
ಈ ಪೀಠಿಕೆಯಿಂದ ಆ ಇಬ್ಬರು ಕೈದಿಗಳಿಗೆ, ತಮ್ಮನ್ನು ಅಭಿಸಂಬೋಧಿಸಿ ಮಾತನಾಡುವ 
ವ್ಯಕ್ತಿ ಎಷ್ಟು ದೊಡ್ಡ ಸ್ಥಾನಮಾನದವರು, ಅವರ ಧರ್ಮ ಮತ್ತು ಜೀವನರೀತಿ ಯಾವುದು, 
ಅವರನ್ನು ಹೀಗೆ ನಿಸ್ವಾರ್ಥಿ ಹಾಗೂ ಮಹಾಉಪಕಾರಿಯಾಗಿ ಮಾಡಿರುವುದು ಯಾವುದು 
ಎಂದು ಗ್ರಹಿಸುವಂತಾಯಿತು. | 


ತೌಹೀದ್‌ನ ಬೋಧನೆ 

ತರುವಾಯ ಯೂಸುಫ್‌ರು(ಅ) ತೌಹೀದ್‌ನ ಕುರಿತಂತೆ ಈ ರೀತಿ ಬೋಧಿಸಿದರು: 

"ಓ ಸೆರೆಮನೆಯ ನನ್ನ ಸಂಗಾತಿಗಳೇ, ಅನೇಕ ಭಿನ್ನಭಿನ್ನ ಪ್ರಭುಗಳು ಲೇಸೋ 
ಅಥವಾ ಸರ್ವ ಸಮರ್ಥನಾದ ಏಕ ಅಲ್ಲಾಹನೋ? ಎಂದು ನೀವು ಸ್ಪತಃಯೋಚಿಸಿರಿ. 
ಅವನನ್ನು ಬಿಟ್ಟು ನೀವು ಯಾರ ದಾಸ್ಯ-ಆರಾಧನೆ ಮಾಡುತ್ತಿರುವಿರೋ ಅವರೆಲ್ಲಾ ನೀವೂ 
ನಿಮ್ಮಪೂರ್ವಿಕರೂ ಇರಿಸಿಕೊಂಡಿರುವ ಕೆಲವು ಹೆಸರುಗಳ ವಿನಾ ಇನ್ನೇನೂ ಅಲ್ಲ. 
ಅಲ್ಲಾಹನು ಅವುಗಳ ಬಗ್ಗೆ ಯಾವ ಪ್ರಮಾಣವನ್ನೂ ಇಳಿಸಿರುವುದಿಲ್ಲ. ಆಜ್ಞಾಧಿಕಾರವು 
ಅಲ್ಲಾಹನಿಗೆ ಹೊರತು ಇನ್ನಾರಿಗೂ ಇಲ್ಲ. ಅವನ ಹೊರತು ನೀವು ಯಾರ ದಾಸ್ಕ- 
ಆರಾಧನೆಯನ್ನೂ ಮಾಡಬಾರದೆಂದು ಅವನ ಕಟ್ಟಪ್ಪಣೆ ಇದೆ. ಇದೇ ಅಪ್ಪಟ ಯಜು 
ಜೀವನಮಾರ್ಗ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.'' 

(ಪವಿತ್ರ ಕುರ್‌ಆನ್‌, 12: 39-40) 

ಮಹಾಕವಿ ಇಕ್ಬಾಲರು ಬಹುಶಃ ಇದೇ ಉಪನ್ಯಾಸದಿಂದ ಪ್ರೇರಿತರಾಗಿ ಈ ಕೆಳಗಿನ 
ದ್ವಿಪದಿಯನ್ನು ಹಾಡಿರಬಹುದು: 

ಒಹ್‌ ಏಕ್‌ ಸಜ್ಜಾ ಜಿಸೇ ತೂ ಗಿರಾಂ ಸಮರ್‌ತಾಷ್ಛ 

ದೇತಾ ಹೈ ಆದ್ಮೀ ಕೋ ಹರರ್‌ ಸಜ್ಜೋಂಸೆ ನಜಾತ್‌ 

(ಹೊರೆಯೆಂದು ಭಾವಿಸುವ ನಿನ್ನ ಆ ಒಂದು ಸಜ್ಜಾ 

ನೀಡುವುದು ಸಹಸ್ರ ಸಜ್ಜಾಗಳಿಂದ ಮಾನವನಿಗೆ ಮುಕ್ತಿ) 

ಒಬ್ಬ ಒಡೆಯನ ಸೇವಕನಾಗುವುದು ಉತ್ತಮವೊ ಅಥವಾ ಅನೇಕ ಒಡೆಯರ 


ಪ್ರವಾದಿ ಯೂಸುಫ್‌(ಆ) 35 


ಸೇವಕನಾಗುವುದು ಉತ್ತಮವೋ ಎಂಬ ಪ್ರಶ್ನೆಗೆ ಸರಿಯಾದ ಮತ್ತು ಬುದ್ಧಿ ಪೂರ್ವಕವಾದ 
ಉತ್ತರ ಒಂದೇ ಆಗಿರಲು ಸಾಧ್ಯ. ಒಬ್ಬ ಒಡೆಯನ ಸೇವೆಯು ಸಾವಿರ ಒಡೆಯರ ಸೇವೆಗಿಂತ 
ಉತ್ತಮವೆಂಬುದೇ ಸರಿಯಾದ ಉತ್ತರವೆಂದಾದರೆ ಏಕೈಕನೂ ಅಜೇಯನೂ ಆದ ದೇವನ 
ಸೇವೆಮಾಡುವುದೇ ಉತ್ತಮವಲ್ಲವೆ? ಬಾತ ಯಾವವಸ್ತುವೂ ಅವನ ಅಧಿಕಾರ 
ವ್ಯಾಪ್ತಿಯಿಂದ ಹೊರಗಿಲ್ಲ. ಯೂಸುಫ್‌ರು(ಅ) ಆ ಇಬ್ಬರು ಯುವಕರನ್ನು ಯಾವ 
ಪದಗಳಿಂದ ಅಭಿಸಂಬೋಧಿಸಿದರೋ ಅದು ಕೂಡಾ ಸಂದೇಶ ಪ್ರಚಾರದ ಅತ್ಯುತ್ತಮ 
ಮಾದರಿಗಳಲ್ಲೊಂದಾಗಿದೆ. “ಓ ಸೆರೆಮನೆಯ ಸಂಗಾತಿಗಳೇ" ಎಂದವರು ಕರೆದರು. ಅಂದರೆ 
ನೀವು ಯಾವ ಸಂಕಷ್ಟದಲ್ಲಿ ಸಿಲುಕಿರುವಿರೋ ಅದೇ ಸಂಕಷ್ಟದಲ್ಲಿ ನಾನೂ ಸಿಲುಕಿದ್ದೇನೆ. 
ಈ ಸೆರೆಮನೆಯಲ್ಲಿ ನಾವೆಲ್ಲ ಸಂಗಾತಿಗಳಾಗಿದ್ದೇವೆ. ಈ ಅಭಿಸಂಬೋಧನಾ ರೀತಿಯಿಂದಲೇ 
ಅವರ ಮನಸ್ಸು ಮೃದುವಾಗಿರಬಹುದು. ಅದರಿಂದಾಗಿ ಅವರು ಯೂಸುಫ್‌ರ(ಅ) ಮಾತುಗಳನ್ನು 
ಗಮನಕೊಟ್ಟು ಆಲಿಸಲು ಸಿದ್ಧರಾಗಿರಬಹುದು. ಯೂಸುಫರು(ಲ) ಒಂದು ಪ್ರಶ್ನೆಯನ್ನು 
ಅವರ ಮುಂದಿಟ್ಟರು. ಅದಕ್ಕೆ ಒಂದೇ ಉತ್ತರವಿರಲು ಸಾಧ್ಯ. ಅನಂತರ ಅವರು ಸಿಲುಕಿದ್ದ 
ಶಿರ್ಕ್‌(ಬಹುದೇವತ್ವ)ನ ಕಡೆಗೆ ಅವರ ಗಮನಸೆಳೆದರು. ಅವರು ಹೀಗೆಂದರು: 

"ಅಲ್ಲಾಹನನ್ನು ಬಿಟ್ಟು ನೀವು ಯಾರ ದಾಸ್ಯ ಕೈಗೊಂಡಿರುವಿರೋ ಅವು ನೀವು ಮತ್ತು 
ನಿಮ್ಮ ಹಿರಿಯರು ಇಟ್ಟುಕೊಂಡ ಕೆಲವು ಕಾಲ್ಪನಿಕ ಹೆಸರುಗಳಾಗಿವೆ. ಅಲ್ಲಾಹನು ಅದಕ್ಕೆ 
ಯಾವುದೇ ಆಧಾರ ಪ್ರಮಾಣವನ್ನು ಇಳಿಸಲಿಲ್ಲ." ಕೈದಿಗಳಿಬ್ಬರೂ ಅರಸನ 
ಸೇವಕರಾಗಿದ್ದುದರಿಂದ ಯೂಸುಫ್‌ರು(ಅ) ಅವರ ಮುಂದೆ, ಪರಮಾಧಿಕಾರವು ಕೇವಲ 
ಅಲ್ಲಾಹನಿಗೆ ಮಾತ್ರ. ಅವನ ಅನುಜ್ಞೆ ಮತ್ತು ಕಾನೂನಿಗೆ ವಿರುದ್ಧವಾಗಿ ಅವನ 
ಸಾಮ್ರಾಜ್ಯದಲ್ಲಿ ಯಾರಿಗೂ ಯಾವುದೇ ಆಜ್ಞೆ ಹೊರಡಿಸುವ ಅಧಿಕಾರವಿಲ್ಲವೆಂಬ ಅತಿದೊಡ್ಡ 
ಸತ್ಯವನ್ನು ಪ್ರಸ್ತುತಪಡಿಸಿದರು. .ಜೊತೆಗೇ ತನ್ನನ್ನುಬಿಟ್ಟು ಇನ್ನಾರದೇ ದಾಸ್ಯ ಕೈಗೊಳ್ಳಬಾರದೆಂದು 
ಅಲ್ಲಾಹನೇ ವಿಧಿಸಿರುವಾಗ ಬೇರಾರದಾದರೂ ದಾಸ್ಕಕ್ಕೆ ಅವಕಾಶವೆಲ್ಲಿದೆಯೆಂದು ಕೇಳಿ 
ನೇರಮಾರ್ಗ ಇದುವೇಆಗಿದೆ, ಆದರೆ ಹೆಚ್ಚಿನ ಜನರು ಇದನ್ನು ಗ್ರಹಿಸುವುದಿಲ್ಲವೆಂಬ 
ವಾಸ್ತವಿಕತೆಯನ್ನೂ ಅವರ ಮುಂದಿಟ್ಟರು. ಏಕದೇವತ್ವದ ಕುರಿತ ಈ ಉಪನ್ಶಾಸ ಎಷ್ಟೊಂದು 
ಬುದ್ಧಿ ಪೂರ್ವಕ, ಸಾಧಾರ ಮತ್ತು ಪ್ರಭಾವಪೂರ್ಣವಾಗಿದೆ! 

ಈ ಉಪನ್ಯಾಸದ ಬಳಿಕ ಅವರು ಪುನಃ ಪ್ರೀತಿಪೂರ್ವಕವಾಗಿ, 'ಸೆರೆಮನೆಯ ನನ್ನ 
ಸಂಗಾತಿಗಳೇ! ಎಂದು ಕರೆದು ಅವರಿಗೆ ಅವರ ಕನಸಿನಫಲವನ್ನು ಈ ರೀತಿ ವಿವರಿಸಿದರು- 
'ನಿಮ್ಮಲ್ಲೊಬ್ಬ ತನ್ನ ಪ್ರಭು(ರಾಜ)ವಿಗೆ ಶರಾಬು ಕುಡಿಸುವನು, ಮತ್ತೊಬ್ಬನನ್ನು 
ಗಲ್ಲಿಗೇರಿಸಲಾಗುವುದು ಮತ್ತು ಅವನ ತಲೆಯನ್ನು ಪಕ್ಷಿಗಳು ಕುಕ್ಕಿತಿನ್ನುವುವು' ಈ 
ಕನಸಿನಫಲ ಸರಿಯೇ ಆಗಿದೆಯೆಂಬ ಬಗ್ಗೆ ಅವರಿಗೆ ದೃಢನಂಬಿಕೆಯಿತ್ತು. ಆದ್ದರಿಂದಲೇ 
ಅವರು, "ನೀವು ಕೇಳುತ್ತಿರುವ ವಿಷಯಗಳ ಬಗ್ಗೆ ತೀರ್ಮಾನವಾಗಿ ಬಿಟ್ಟಿತು” ಎಂದು 
ಹೇಳಿದರು. ತರುವಾಯ ಜೈಲಿನಿಂದ ಬಿಡುಗಡೆಗೊಂಡು ಹೋಗುತ್ತಿದ್ದ ಕೈದಿಯೊಡನೆ 


36 ಪ್ರವಾದಿ ಯೂಸುಫ್‌(ಅ) 


ಯೂಸುಫ್‌ರು(ಅ), ನಿನ್ನ ಪ್ರಭು(ರಾಜುವಿನ ಬಳಿ ನನ್ನ ಬಗ್ಗೆ ಪ್ರಸ್ತಾಪಿಸಬೇಕೆಂದು 
ಹೇಳಿದ್ದರು. ಆದರೆ ಶೈತಾನನು ಅವನನ್ನು ಮರೆಯುವಂತೆ ಮಾಡಿಬಿಟ್ಟನು. ಆದ ಕಾರಣ 
ಯೂಸುಫ್‌ರು(ಅ) ಅನೇಕ ವರ್ಷಗಳ ಕಾಲ(7-8ವರ್ಷ) ಸೆರೆಮನೆಯಲ್ಲೇ ಕಳೆಯಬೇಕಾಯಿತು. 
ಆ ಕಾಲವನ್ನು ಅವರು ಸೆರೆಮನೆಯಲ್ಲಿ ಹೇಗೆ ಕಳೆದಿರಬಹುದೆಂಬುದನ್ನು ಅವರ ಪ್ರಸ್ತುತ 
ಉಪನ್ಮಾಸದಿಂದಲೇ ಅಂದಾಜಿಸಬಹುದು. . ಸಿಕ್ಕಿದ ಒಂದು `ಸಂದರ್ಭವನ್ನು ಅವರು 
ಚೆನ್ನಾಗಿಯೇ ಬಳಸಿದ್ದ 


ಯೂಸುಫ್‌ರ(ಅ) ಮಾತು ತವಕ್ಕುಲ್‌ಗೆ ವಿರುದ್ಧವಲ್ಲ 

ಯೂಸುಫ್‌ರು(ಅ) ರಾಜನ ಸೇವಕನೊಂದಿಗೆ, ನೀನು ನನ್ನ ಬಿಡುಗಡೆಗಾಗಿ ಶಿಫಾರಸು 
ಮಾಡಬೇಕೆಂದಾಗಲಿ ಅದಕ್ಕೆ ಪ್ರಯತ್ನಿಸಬೇಕೆಂದಾಗಲಿ ಹೇಳಲಿಲ್ಲ. ಬದಲಾಗಿ -ರಾಜನ ಬಳಿ 
ನನ್ನ ಬಗ್ಗೆ ಪ್ರಸ್ತಾಪ ಮಾಡಬೇಕೆಂದಷ್ಟೇ ಹೇಳಿದ್ದರು. ಇದರ ಉದ್ದೇಶ ಒಬ್ಬ 
ಸಚ್ಚಾರಿತ್ರ್ಯವಂತ ವ್ಯಕ್ತಿ ಜೈಲಿನಲ್ಲಿ ವಿಚಾರಣೆಯಿಲ್ಲದೆ ಕೊಳೆಯುತ್ತಿದ್ದಾನೆ. ಅವನ ಮೇಲಿರುವ 
ಆಪಾದನೆಗಳ ಬಗ್ಗೆ ಏಕೆ ತನಿಖೆಯಾಗುತ್ತಿಲ್ಲವೆಂದು ರಾಜನ ಬಳಿ ಹೇಳಬೇಕೆಂದಷ್ಟೇ 
ಆಗಿತ್ತು. ಇದು ಕುರ್‌ಆನ್‌ನಿಂದಲೂ ಸ್ಪಷ್ಟವಾಗುತ್ತದೆ. ಅವರ ಬಿಡುಗಡೆಯ ಆಜ್ಞೆಹೊತ್ತು 
ರಾಜನದೂತನು ಅವರಬಳಿಗೆ ಬಂದಾಗ ಅವರು ಹೊರಬರಲು ನಿರಾಕರಿಸಿದರು. ತನ್ನ 
ಮೇಲಿರುವ ಆಪಾದನೆಗಳ ತನಿಖೆಯಾಗದೆ ತಾನು ಹೊರ ಬರಲಾರೆನೆಂದು ಸ್ಪಷ್ಟವಾಗಿ 
ಹೇಳಿದರು. ಒಬ್ಬವ್ಯಕ್ತಿ, ಆತ ಓರ್ವ ಪ್ರವಾದಿಯೇ ಆದರೂ ' ತನ್ನ ಮೇಲೆ ಹೊರಿಸಲಾದ 
ಆಪಾದನೆಗಳ ತನಿಖೆಯಾಗಬೇಕೆಂದು ಹೇಳುವುದು ಅಥವಾ ಅದರ ಆಗ್ರಹ ವ್ಯಕ್ತಪಡಿಸುವುದು 
ತವಕ್ಕುಲ್‌(ವಿಧಿ ವಿಶ್ವಾಸ)ಗೆ ವಿರುದ್ಧವಲ್ಲ. 


ಸೆರೆಮನೆಯಲ್ಲಿ ಕಳೆದ ಕೆಲವು ವರ್ಷಗಳು ಕ 

ಯೂಸುಫ್‌ರು(ಅ) ಅನೇಕ ವರ್ಷಗಳಕಾಲ ಜೈಲಲ್ಲಿ ಕಳೆದರು. ಕುರ್‌ಆನಿನಲ್ಲಿ ಬಿದ್‌ಇ 
ಸಿನೀನ್‌(ಅನೇಕ ವರ್ಷಗಳು) ಎಂದು ಹೇಳಲಾಗಿದೆ. ಅರಬಿ ಭಾಷೆಯಲ್ಲಿ ಬಿದ್‌ಆ್‌ ಎಂಬ 
ಪದವನ್ನು ಮೂರರಿಂದ ಒಂಭತ್ತು ವರ್ಷಗಳವರೆಗಿನ ಸಂಖ್ಯೆಗೆ ಬಳಸಲಾಗುತ್ತದೆ. ಈ ಲೆಕ್ಕ 
ಪ್ರಕಾರ, ಅವರ ಜೈಲುವಾಸ ಕಾಲವು ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ ಒಂಭತ್ತು 
ವರ್ಷವೆಂದಾಗುತ್ತದೆ. ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ, ಅವರು ಏಳು ವರ್ಷಗಳಕಾಲ 
ಸೆರೆಮನೆಯಲ್ಲಿ ಕಳೆದರು. ಯಾವುದೇ ಸತ್ವ ಪರೀಕ್ಸೆ ಮತ್ತು ತರಬೇತಿಗೆ ಇದು ಕಡಿಮೆ 
ಅವಧಿಯೇನಲ್ಲ. ಸ್ವಲ್ಪ ಸಮಯವಾಗಲಿ ದೀರ್ಥು ಸಮಯವಾಗಲಿ ಸೆರೆಮನೆಯಲ್ಲಿ 
ಕಳೆದವರಿಗೆ ಅದೊಂದು ಸಮಗ್ರ ತರಬೇತಿ ಶಾಲೆಯೆಂಬುದು ಮನವರಿಕೆಯಾಗದಿರದು. 
ಒಂದೆಡೆ, ಸೆರೆವಾಸದ ಸಂಕಷ್ಟ ಮತ್ತು ಪೀಡನೆಗಳು ಮಾನವನ ತಾಳ್ಮೆಯ ಪರೀಕ್ಷೆ 
ನಡೆಸುತ್ತವೆ. ಇನ್ನೊಂದೆಡೆ, ಕೆಟ್ಟ ಸಮಾಜದಿಂದ ಇಲ್ಲಿಗೆ ಬರುವವರ ಮಧ್ಯೆ ಕಾಲಕಳೆಯುವುದು 


ಪ್ರವಾದಿ ಯೂಸುಫ್‌(ಅ) 37 


ಮತ್ತು ತನ್ನ ಸಚ್ಚಾರಿತ್ರ್ಯ ಮತ್ತು ಉತ್ತಮ ನಡವಳಿಕೆಗಳಲ್ಲಿ ಸ್ಥಿರವಾಗಿ ನಿಲ್ಲುವುದು ಬಹಳ 
ಕಠಿಣವಾದ ಪರೀಕ್ಷಾ ಕಾಲವಾಗಿದೆ. ಈ ರೀತಿ ಹೆಜ್ಜೆಹೆಜ್ಜೆಗೂ `ಮಾನವನ : ತರಬೇತಿ 
ನಡೆಯುತ್ತಿರುತ್ತದೆ. ವೈಯಕ್ತಿಕ ಸುಧಾರಣೆಯ ಜೊತೆಗೆ ಸಂದೇಶ ಪ್ರಚಾರದ ತರಬೇತಿಗೂ 
ಇಲ್ಲಿ ಸಾಕಷ್ಟು ಅವಕಾಶಗಳು ಲಭಿಸುತ್ತವೆ. ಒಂದು ವೇಳೆ ಯಾವುದೇ ಕೇಂದ್ರೀಯ 
ಕಾರಾಗೃಹದಲ್ಲಿದ್ದರೆ ಅವನಿಗೆ ಅಲ್ಲಿ ಸಮಾಜದ ಎಲ್ಲವರ್ಗದ ಜನರೂ ಸಿಗುತ್ತಾರೆ. ಅಲ್ಲಿ 
ಕೈದಿಗಳ ಸ್ವಭಾವ, ನೀತಿ ಎಲ್ಲವೂ ಭಿನ್ನಭಿನ್ನವಾಗಿರುತ್ತವೆ. ಅಲ್ಲಿ ಆತ . ಅಂತಹ 
ಎಲ್ಲವರ್ಗದ ಜನರ ಮನೋವೃತ್ತಿಯನ್ನು ಅರಿತು ಅವರ ಮನ ಮಸ್ತಿಷ್ಕಗಳವರೆಗೂ 
ತಲಪುವ ತರಬೇತಿ ಪಡೆಯಬಲ್ಲನು. ಸೆರೆಮನೆಯ ಸಂಕಷ್ಟ ಮತ್ತು ಪೀಡನೆಗಳಿಂವಾಗಿ 
ಸಾಮಾನ್ಯವಾಗಿ ಕೈದಿಗಳ “ಮನಸ್ಸು ಮೃದುವಾಗುತ್ತದೆ. ಅವರಿಗೆ ಸಮಯಾವಕಾಶಗಳೂ 
ಸಾಕಷ್ಟು ಸಿಗುತ್ತವೆ. ಒಬ್ಬ ಸಂದೇಶ ಪ್ರಚಾರಕನು ಕೈದಿಗಳಿಗೆ ಅಲ್ಲಾಹನ ಸಂದೇಶವನ್ನು 
ಕೇಳಿಸಬಯಸಿದರೆ ಅವರನ್ನು ಸತ್ಕಮಾರ್ಗಕ್ಕೆ ಕರೆಯಲು ಮತ್ತು ಅವರ ಶೀಲ-ಚಾರಿತ್ರ್ಯಗಳನ್ನು 
ಸುಧಾರಿಸಬಯಸಿದರೆ ಅದಕ್ಕೂ ಅತ್ಯುತ್ತಮ ಅವಕಾಶ ದೊರೆಯುತ್ತದೆ. 

`  ಯೂಸುಫ್‌ರು(ಅ) ಈಜಿಪ್ಟ್‌ನ ರಾಜಧಾನಿಯ ಕಾರಾಗೃಹದಲ್ಲಿದ್ದರು. ಅವರಿಗೆ ಆ 
ಸಮಾಜದ ಎಲ್ಲವರ್ಗಗಳ ಜನರೂ ಸಿಕ್ಕಿರಬಹುದು. ಏಳು ವರ್ಷಗಳಕಾಲ ಒಂದೇ 
ಕಡೆಯಲ್ಲಿ ಪ್ರವಾದಿತ್ವದ ಬದುಕು ಎಂತಹ ಸಾಧನೆಗಳನ್ನು ಗೈದಿರಬಹುದೆಂದು 
ಊಹಿಸಬಹುದಾಗಿದೆ. ಯೂಸುಫ್‌ರಿಗೆ(ಅ) ಈಜಿಪ್ಟ್‌ನಲ್ಲಿ ಅವರನ್ನು ಭೇಟಿಯಾಗಲು 
ಪ್ರಯತ್ನಿಸುವ ಅಥವಾ ಅವರ ಮಾತನ್ನು ಉನ್ನತಾಧಿಕಾರಿಗಳಿಗೆ ತಲಪಿಸಬಲ್ಲಂತಹ 
ಸಂಬಂಧಿಕರಾರೂ ಇರಲಿಲ್ಲ. ಆದ್ದರಿಂದ ಏಳು ವರ್ಷಗಳ ಕಾಲ ಅವರು ಸಮಾಧಾನದೊಂದಿಗೆ 
ಸಂದೇಶ ಪ್ರಚಾರ ಮತ್ತು ಸುಧಾರಣೆಯ ಕಾರ್ಯಗಳನ್ನೇ ಮಾಡಿರಬಹುದು. ಅವರ ಈ 
ಕೆಲಸವನ್ನು ಅಡ್ಡಿ ಪಡಿಸುವಂತಹದ್ದೇನೂ ಅಲ್ಲಿರಲಿಲ್ಲ. ಜೈಲಧಿಕಾರಿಯು ತನ್ನ ಅಧಿಕಾರಗಳನ್ನೆಲ್ಲ 
ಅವರಿಗೆ ಕೊಟ್ಟು ಬಿಟ್ಟಿದ್ದನು. ಆದ್ದರಿಂದ ಅವರು ಎಲ್ಲ ಕೈದಿಗಳೊಂದಿಗೂ ನೇರವಾಗಿ 
ವೈಯಕ್ತಿಕ ಸಂಬಂಧ ಬೆಳೆಸಿರಬಹುದು. ಆ ಏಳುವರ್ಷಗಳ ಸುದೀರ್ಥ ಅವಧಿಯಲ್ಲಿ 
ನೂರಾರು ಕೈದಿಗಳು ಬಿಡುಗಡೆಗೊರಿಡಿರಬಹುದು. ಅವರ ಮೂಲಕ ಅವರ ಕೀರ್ತಿ ದೇಶದ 
ಮೂಲೆ ಮೂಲೆಗೂ ತಲಪಿರಬಹುದು. 


ರಾಜನ ಕನಸು ಅಥವಾ ಯೂಸುಫ್‌ರಿಗೆ(ಅ) ಅಧಿಕಾರ ಪೀಠದ ವ್ಯವಸ್ಥೆ 

ಯೂಸುಫ್‌ರಿಗೆ(ಆ) ತಮ್ಮ ಸತ್ಯ ಸಂದೇಶವನ್ನು ಸ್ವತಂತ್ರವಾಗಿ ಜನರ ಮುಂದಿಡುವ, 
“ಜೊತೆಗೆ ಈಜಿಪ್ಟ್‌ ಸಾಮ್ರಾಜ್ಯದ ಆಡಳಿತ ವ್ಯವಸ್ಥೆಯನ್ನು ವಹಿಸಿಕೊಳ್ಳುವ ಸಮಯ 
ಸನ್ನಿಹಿತವಾಗಿತ್ತು. ಹೀಗಿರಲು ಒಂದುದಿನ ರಾಜನಿಗೆ ಒಂದುಕನಸು ಬಿತ್ತು. ನೈಲ್‌ 
ನದಿಯೊಳಗಿನಿಂದ ಏಳು ಕೊಬ್ಬಿದ ಹಸುಗಳು ಎದ್ದು ಬಂದುವು. ಅವುಗಳ ಬೆನ್ನಲ್ಲೇ ಏಳು 
ಸಣಕಲು “ಹಸುಗಳು ಹೊರಟುಬಂದುವು. ಹಠಾತ್ತನೆ ಆ ಏಳು ಸಣಕಲು ಹಸುಗಳು ಕೊಬ್ಬಿದ 


38 ಪ್ರವಾದಿ ಯೂಸುಫ್‌(ಆ) 


ಹಸುಗಳನ್ನು ನುಂಗಿಬಿಟ್ಟುವು. ಆದರೆ ಅವುಗಳ ಶರೀರದಲ್ಲಿ ಯಾವುದೇ 
ಬದಲಾವಣೆಯುಂಟಾಗಲಿಲ್ಲ. ಅದೇ ರೀತಿ ಧಾನ್ಯದ ಏಳು ಹಸಿರು ತೆನೆಗಳು ಗೋಚರಿಸಿದುವು. 
ಅವುಗಳಿಗೆ ಏಳು ಒಣಗಿದ ಮತ್ತು ಬಾಡಿದ ತೆನೆಗಳು ಅಂಟಿಕೊಂಡವು. 
ನೋಡುನೋಡುತ್ತಿದ್ದಂತೆಯೇ ಆ ಹಸಿರು ತೆನೆಗಳು ಒಣ ತೆನೆಗಳಲ್ಲಿ ಲೀನವಾಗಿಬಿಟ್ಟುವು. 
ಈ ಅದ್ಭುತ, ವಿಚಿತ್ರ ಕನಸುಕಂಡು ರಾಜನು ದಿಗ್ಭಾಂತನಾದನು. ದೇಶದ ಎಲ್ಲೆಡೆಗೆ ಜನ 
ಕಳುಹಿಸಿ ಕಣಿಕಾರರನ್ನೂ ಎಲ್ಲ ಬಗೆಯ ಧೀಮಂತರನ್ನೂ ಕರೆಸಿ ಅವರ ಮುಂದೆ ತನ್ನ 
ಕನಸನ್ನು ವಿವರಿಸಿ ಅದರ ಫಲ ಕೇಳಿದನು. ಆದರೆ ಅದರ ಫಲವನ್ನು ಹೇಳಲು ಯಾರಿಂದಲೂ 
ಸಾಧ್ಯವಾಗಲಿಲ್ಲ. ಅವರೆಲ್ಲ ತಮ್ಮ ಅಸಹಾಯಕತೆಯನ್ನು ಬಚ್ಚಿಡಲಿಕ್ಕಾಗಿ ಅದೊಂದು 
ಅಸಂಬದ್ಧ ಕನಸೆಂದು ಹೇಳಿ ಜಾರಿಕೊಂಡರು. ವಾಸ್ತವದಲ್ಲಿ ಅವರಾರಿಗೂ ಅದರ 
ಫಲವೇನೆಂದು ತಿಳಿದೇ ಇರಲಿಲ್ಲ. 

ಆ ಸಂದರ್ಭದಲ್ಲಿ ಸೆರೆಮನೆಯೊಳಗೆ ತನ್ನ ಕನಸಿನಫಲವನ್ನು ಯೂಸುಫ್‌ರಿಂದ(ಅ) 
ಕೇಳಿ ತಿಳಿದ ಆ ಕೈದಿಗೆ ತಟ್ಟನೆ ಅವರ ನೆನಪಾಯಿತು. ಅವನ ಕನಸಿನಫಲ ಸರಿಯಾಗಿಯೇ 
ಸಾಕ್ಷಾತ್ಕಾರಗೊಂಡಿತ್ತು. ಅವನು ರಾಜನಿಗೆ ಸೆರೆಮನೆಯೊಳಗೆ ನಡೆದ ಘಟನೆಯನ್ನು 
ವಿವರಿಸಿದನು. ಯೂಸುಫ್‌ರ(ಅ) ಬಗ್ಗೆ ತಾನು ಕಂಡು ಕೇಳಿದ್ದನ್ನೆಲ್ಲ ಸವಿಸ್ತಾರ ಹೇಳಿ 
ಮುಗಿಸಿದನು. ತನ್ನನ್ನು ಸೆರೆಮನೆಯೊಳಗೆ ಯೂಸುಫ್‌ರ(ಅ) ಬಳಿಗೆ ಹೋಗಲು ಅನುಮತಿಸಿದರೆ 
ಈ ಕನಸಿನ ಫಲವನ್ನು ಅವರಿಂದ ಕೇಳಿ ತಿಳಿಸಬಲ್ಲೆನೆಂದು ಹೇಳಿದನು. ಅವನಿಗೆ ಅನುಮತಿ 
ದೊರೆತಾಗ ಸೆರೆಮನೆಗೆ ಹೋಗಿ ಅವರನ್ನು ಭೇಟಿಯಾಗಿ 'ಅಯ್ಕುಹಸ್ಸಿದ್ದೀಕ್‌'(ಓ ಸತ್ಯಸಂಧರೆಲ) 
ಎಂದು ಅಭಿಸಂಬೋಧಿಸುತ್ತಾ ರಾಜನ ಕನಸನ್ನು ವಿವರಿಸಿ ತಾನು ಅದರ ಫಲ ಕೇಳಲು 
ಬಂದಿರುವೆನೆಂದು ಹೇಳಿದನು. ಯೂಸುಫ್‌ರಿಗೆ(ಅ) ಇದು ತನ್ನನ್ನು ಮರೆತು ಬಿಟ್ಟಿ ಹಾಗೂ 
ತನ್ನ ಮಾತನ್ನು ರಾಜನಿಗೆ ಮುಟ್ಟಿಸದೆ ಇದ್ದ ಬಗ್ಗೆ ದೂರಿಕೊಳ್ಳುವ ಸುಸಂದರ್ಭವಾಗಿತ್ತು. 
ಅಷ್ಟೇ ಅಲ್ಲ, ತನ್ನನ್ನು ಇಲ್ಲಿಂದ ಬಿಡುಗಡೆಗೊಳಿಸದೆ ಅಥವಾ ತನ್ನ ಮೇಲೆ ಹೊರಿಸಲಾದ 
ಆಪಾದನೆಗಳ ತನಿಖೆಯಾಗದೆ ಕನಸಿನಫಲ ಹೇಳಲಾರೆನೆಂದು ಹೇಳುವ ಅವಕಾಶವೂ 
ಅವರಿಗಿತ್ತು. ಆದರೆ ಅವರು ದೂರಿಕೊಳ್ಳಲೂ ಇಲ್ಲ, ಯಾವುದೇ ಶರತ್ತನ್ನು ಮುಂದೊಡ್ಡಲೂ 
ಇಲ್ಲ. ಏಕೆಂದರೆ ಆ ಸಂದರ್ಭದಲ್ಲಿ ಶರತ್ತನ್ನೊಡ್ಡುವುದು ಕನಸಿನಫಲಕ್ಕೆ ಪ್ರತಿಫಲ 
ಬಯಸುವುದಕ್ಕೆ ಸಮಾನವಾಗಿತ್ತು. ಇದು ಅವರ ಘನ ವ್ಯಕ್ತಿತ್ವಕ್ಕೆ ತಕ್ಕುದಾಗಿರಲಿಲ್ಲ. ಅವರು 
ಕೂಡಲೇ ಕನಸಿನಫಲವನ್ನು ಹೇಳಿಬಿಟ್ಟರು. ಕುರ್‌ಆನ್‌ ತನ್ನ ಅತ್ಯದ್ಭುತ ಶೈಲಿಯಲ್ಲಿ ಆ 
ಘಟನೆಯನ್ನು ಹೀಗೆ ವಿವರಿಸಿದೆ: 

"ಒಂದು ದಿನ ಅರಸನು, 'ನಾನು ಸ್ವಪ್ನದಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು 
ಕೃಶವಾದ ಹಸುಗಳು ತಿನ್ನುತ್ತಿರುವುದನ್ನೂ ಧಾನ್ಯದ ಏಳು ತೆನೆಗಳು ಹಸುರಾಗಿದ್ದು 
ಇತರವಏಳು ತೆನೆಗಳು ಒಣಗಿರುವುದನ್ನೂ ಕಂಡಿರುತ್ತೇನೆ. ಓ ನನ್ನ ಆಸ್ನಾನದವರೇ, ನೀವು 
ಸ್ವಪ್ನಗಳ ಫಲ ಬಲ್ಲವರಾಗಿದ್ದರೆ, ನನಗೆ ಈ ಸ್ವಪ್ನದ ಫಲವನ್ನು ಹೇಳಿರಿ" ಎಂದನು. ಆಗ 


ಪ್ರವಾದಿ ಯೂಸುಫ್‌(ಆ) 39 


ಜನರು, 'ಗೊಂದಲಪೂರ್ಣ ಸ್ನಷ್ನಗಳಿವು. ಇಂತಹ ಸ್ವಪ್ನಗಳ ಫಲ ನಮಗೆ ತಿಳಿಯದು' 
ಎಂದರು. ಆ ಇಬ್ಬರು ಸೆರೆಯಾಳುಗಳ ಪೈಕಿ ಬದುಕಿ ಉಳಿದಿದ್ದವನಿಗೆ.-ದೀರ್ಥಕಾಲದ 
ತರುವಾಯ ಈಗ ಆ ಮಾತು ನೆನಪಿಗೆ ಬಂತು. ಅವನು, 'ನಿಮಗೆ ಇದರ ಫಲ ನಾನು 
ಹೇಳುತ್ತೇನೆ. ನನ್ನನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ (ಸೆರೆಮನೆಯಲ್ಲಿರುವ ಯೂಸುಷರ(ಆ) 
ಬಳಿಗೆ) ಕಳುಹಿಸಿರಿ' ಎಂದನು. ಅವನು ಹೋಗಿ ಯೂಸುಫರೊಡನೆ(ಅ), 'ಓ, ಸಾದ್ಯಂತ 
ಸತ್ಯಸಂಧರಾಗಿರುವವರೇ, ಏಳು ಕೊಬ್ಬಿದ ಹಸುಗಳನ್ನು ಏಳು ಕೃಶವಾದ ಹಸುಗಳು 
ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸುರಾಗಿಯೂ ಇನ್ನು ಏಳು ತೆನೆಗಳು ಒಣಗಿಯೂ 
ಇವೆ. ಈ ಸ್ವಪ್ನದ ಫಲವನ್ನು ನನಗೆ ಹೇಳಿರಿ. ಹಾಗಾದರೆ ನಾನು ಜನರಕಡೆಗೆ ಮರಳಬಹುದು 
ಮತ್ತು ಅವರು ತಿಳಿದು ಕೊಳ್ಳಬಹುದು' ಎಂದನು. ಯೂಸುಫ್‌(ಅ) ಹೇಳಿದರು- 'ಏಳು 
ವರ್ಷಗಳ ತನಕ ನೀವು ನಿರಂತರವಾಗಿ ಕೃಷಿ ಮಾಡುತ್ತಿರುವಿರಿ. ಆ ಕಾಲಾವಧಿಯಲ್ಲಿ ನೀವು 
ಕೊಯ್ಯುವ ಬೆಳೆಯಿಂದ ನಿಮ್ಮ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು 
ಅದರ ತೆನೆಗಳಲ್ಲೇ ಇರಗೊಡಿರಿ. ಅನಂತರ ಏಳು ಕಠಿಣ ವರ್ಷಗಳು ಬರುವುವು. ಆಗ ಆ 
ಕಾಲಕ್ಕಾಗಿ ಸಂಗ್ರಹಿಸಿಟ್ಟುದನ್ನು ಉಣ್ಣಬಹುದು. ಒಂದು ವೇಳೆ ಉಳಿಯುವುದಾದರೆ ನೀವು 
ಜೋಪಾನವಾಗಿರಿಸಿದುದು ಮಾತ್ರ. ಅನಂತರ ಬರುವ ಇನ್ನೊಂದು ವರ್ಷದಲ್ಲಿ ಕೃಪಾವೃಷ್ಟಿಯ 
ಮೂಲಕ ಜನರಸಂಕಷ್ಟ ನಿವಾರಣೆಯಾಗುವುದು ಮತ್ತು ಅವರು ರಸಹಿಂಡುವರು.'' 
(ಪವಿತ್ರ ಕುರ್‌ಆನ್‌, 12: 43-49) 


ಕನಸಿನ ಸುಂದರ ವ್ಯಾಖ್ಯಾನ 

ಕನಸಿನ ಈ ಸುಂದರ ವ್ಯಾಖ್ಯಾನವು ಬಹಳ ಆಕರ್ಷಕವಾಗಿತ್ತು. ಅವರು ಕೇವಲ 
ಏಳು ಕೊಬ್ಬಿದ ಹಸುಗಳು ಮತ್ತು ಧಾನ್ಯದ ಏಳುಹಸಿರು ತೆನೆಗಳೆಂದರೆ ನಳನಳಿಸುವ ಏಳು 
ವರ್ಷಗಳು ಮತ್ತು ಏಳುಬಡಕಲು ಹಸುಗಳು ಮತ್ತು ಒಣಗಿದ ತೆನೆಗಳೆಂದರೆ ಅನಂತರ 
ಬರುವ ಏಳು ಬರಗಾಲದ ವರ್ಷಗಳೆಂದು ಮಾತ್ರ ಹೇಳಿ ಮುಗಿಸಲಿಲ್ಲ. ಅಷ್ಟೇ 
ಹೇಳುತ್ತಿದ್ದರೂ ಸಾಕಾಗುತ್ತಿತ್ತು. ಆದರೆ ಅವರು ಅತ್ಮಂತ ಹಿತಚಿಂತನೆಯಿಂದ ಹೀಗೆ 
ಹೇಳಿದರು- 

ಸುಭಿಕ್ಷವಾದ ಏಳು ವರ್ಷಗಳಲ್ಲಿ ನೀವು ಚೆನ್ನಾಗಿ ಧಾನ್ಯಬೆಳೆಸಬೇಕು. ನಿಮ್ಮ 
ಅಗತ್ಯಕ್ಕೆ ಬೇಕಾಗುವ ಸ್ವಲ್ಪಪ್ರಮಾಣದ ಧಾನ್ಯವನ್ನು ಉಪಯೋಗಿಸಲು ತೆಗೆದು 
ಉಳಿದಧಾನ್ಯವನ್ನು ತೆನೆಯಲ್ಲೇ ಇರಗೊಡಬೇಕು. ಅದು ಸುರಕ್ಷಿತವಾಗಿರುವುದು, ಕೆಡಲಾರದು. 
ಅದಕ್ಕೆ ಗೆದ್ದಲೂ ಹಿಡಿಯಲಾರದು. ಅನಂತರ ತೀವ್ರ ಬರಗಾಲದ ಏಳುವರ್ಷಗಳು 
ಬರುವುವು. ಆಗ ನೀವು ತೆನೆಗಳಲ್ಲೇ ಬಿಟ್ಟಿದ್ದ ಧಾನ್ಮ ನಿಮ್ಮ ಪ್ರಯೋಜನಕ್ಕೆ ಬರುವುದು. 
ಬಿತ್ತನೆಗಾಗಿರುವಷ್ಟು ಧಾನ್ಯಗಳು ಮಾತ್ರ ಉಳಿಯುವುದು. ಅನಂತರ ಅವರು ರಾಜನಕನಸಿನಲ್ಲಿ 
ಇಲ್ಲದಿದ್ದ ಒಂದು ವಿಷಯವನ್ನೂ ತಿಳಿಸಿದರು. ಬರಗಾಲದ ಏಳುವಷರ್ಗಳ ಬಳಿಕ 


40 ಪ್ರವಾದಿ ಯೂಸುಫ್‌(ಆ) 


“ಅಲ್ಲಾಹನ ನ ಅನುಗ್ರಹಗಳು ಧಾರಾಳವಾಗಿ ಸುರಿಯುವುದು. ಅದರಿಂದ ಜನರ ಸಂಕಷ್ಟವೆಲ್ಲ 
ದೂರವಾಗೆವುದು. ಅಲ್ಲಿ ಬಹಳ ಸಮೃದ್ಧಿಯುಂಟಾಗುವುದು. ಎಣ್ಣೆಬೀಜಗಳಲ್ಲಿ ಎಣ್ಣೆ, 
ರಸನೀಡುವ ಹಣ್ಣುಗಳಲ್ಲಿ ರಸ, ಹಾಲುಕ ಡುವ ಜಾನುವಾರುಗಳ ಕೆಚ್ಚಲುಗಳಲ್ಲಿ ಹಾಲುತುಂಬಿ 
ತುಳುಕುವುದು. ಆಟ ಅವುಗಳನ್ನು ಧಾರಾಳಪಡೆದು ನೆಮ್ಮದಿಯಿಂದಿರುವರು." ಕನಸಿನ 
ಬಗ್ಗೆ ಅಲ್ಲಾಹನ ಪ್ರವಾದಿಗಳ ವ್ಯಾಖ್ಶಾನ ಹೀಗಿರುತ್ತದೆ! 


ಬಿಡುಗಡೆಗೆ ಆದೇಶ ಬಂದರೂ ಹೊರ ಹೋಗಲು ನಕಾರ ' 

ದೂತನ ಮೂಲಕ ತನ್ನ ಕನಸಿನ ವಿವರವಾದ ಫಲವನ್ನು ಕೇಳಿ ರಾಜ ಯೂಸುಫ್‌ರ(೮) 
ಮಹಾನತೆಗೆ ಮಾರು ಹೋದ. ಆತ ಮಾತ್ರವಲ್ಲ, ಆಸ್ಥಾನಿಕರೆಲ್ಲರೂ ಅವರ ಘನತೆಯನ್ನು 
ಒಪ್ಪಿಕೊಂಡರು. ಯೂಸುಫ್‌ರನ್ನು(ಅ) ಬಿಡುಗಡೆಗೊಳಿಸಿ ತನ್ನ ಮುಂದೆ ಹಾಜರು ಪಡಿಸುವಂತೆ 
ರಾಜಾಜ್ಞೆಯಾಯಿತು. ದೂತನು ಹೋಗಿ ಅವರಿಗೆ ಬಿಡುಗಡೆಯ ಶುಭಸಂದೇಶವನ್ನು ನೀಡಿ ` 
ರಾಜನ ಅಪ್ಪಣೆಯನ್ನು ತಿಳಿಸಿದನು. ಆದರೆ ಯೂಸುಫ್‌ರು(ಅ) ಏಳುವರ್ಷಗಳ ಕಾಲ 
ಸೆರೆವಾಸದಲ್ಲಿ ಕಳೆದ ಬಳಿಕವೂ ಈಗ ಹೊರಹೋಗಲು ನಿರಾಕರಿಸಿದರು. ಅವರು ಆ 
ರಾಜದೂತನೊಡನೆ ಹೀಗೆ ಹೇಳಿ ಕಳುಹಿಸಿದರು- 'ಮರಳಿ ಹೋಗು, ತಮ್ಮ ಕೈಗಳನ್ನು 
ಕೊಯ್ದ ಆ ಹೆಂಗಸರ ವಿಷಯವೇನಾಯಿತೆಂದು ರಾಜನಲ್ಲಿ ಕೇಳು." ತನ್ನ ಮೇಲೆ 
ಹೊರಿಸಲಾದ ಆಪಾದನೆಗಳ ಕುರಿತು ಪೂರ್ಣ ತನಿಖೆಯಾಗಿ ತೀರ್ಮಾನವಾಗುವ ತನಕ ತಾನು 
ಸೆರೆಮನೆಯಿಂದ ಹೊರಹೋಗಲಾರೆನೆಂಬುದು ಅವರ ಮಾತಿನ ಅರ್ಥವಾಗಿತ್ತು. ಅವರು 
ಎಂತಹ ಸಹನೆ ವಹಿಸಿದ್ದರೋ ಅದು ಎಲ್ಲರಿಂದಲೂ ಸಾಧ್ಯವಾಗುವ ಮಾತಲ್ಲ. ಇದನ್ನು 
ಪ್ರವಾದಿ ಮುಹಮ್ಮದ್‌(ಸ) ಈ ರೀತಿ ಸ್ಪಷ್ಟಪಡಿಸಿದ್ದಾರೆ: 

ಯೂಸುಫ್‌(ಅ) ಎಷ್ಟುಕಾಲ ಸೆರೆಮನೆಯಲ್ಲಿದ್ದರೋ ಅಷ್ಟುಕಾಲ ಒಂದು ವೇಳೆ 
ನಾನಿದ್ದಿದ್ದರೆ, ಬಿಡುಗಡೆಯ ಆದೇಶ ದೊರಕಿದ ಕೂಡಲೇ ಒಪ್ಪಿಕೊಂಡು ಹೊರಗೆ 
ಬರುತ್ತಿದ್ದೆ. (ಬುಖಾರಿ- ಸೂರಃ ಯೂಸುಫ್‌ನ(ಅ) ವ್ಯಾಖ್ಕಾನ) 

ಯೂಸುಫ್‌ರಿಗೆ(ಅ) ಮುಂದೆ ಯಾವ ಮಹಾಕಾರ್ಯವನ್ನು ನಿರ್ವಹಿಸಲಿಕ್ಕಿತ್ತೋ 
ಅದಕ್ಕಾಗಿ ಎಲ್ಲರ ಮುಂದೆ ಅವರ ನಿರಪರಾಧಿತ್ವ ಸಾಬೀತಾಗಬೇಕಾದುದು ಮತ್ತು ಒಬ್ಬ 
ನಿರಪರಾಧಿಯನ್ನು ವಿನಾಕಾರಣ ಸೆರೆಮನೆಯಲ್ಲಿ ಬಂಧಿಸಿಡಲಾಗಿತ್ತು ಎಂಬುದು ಎಲ್ಲರೂ 
ತಿಳಿಯುವುದು ಅನಿವಾರ್ಯವಾಗಿತ್ತು. ಕುರ್‌ಆನ್‌ ಹೇಳಿತು: 

"ಅರಸನು, 'ಅವರನ್ನು ನನ್ನ ಬಳಿಗೆ ಕರೆದು ತನ್ನಿರಿ' ಎಂದನು. ಆದರೆ ರಾಜದೂತನು 
ಯೂಸುಫ್‌ರ(ಅ) ಬಳಿಗೆ ಬಂದಾಗ ಅವರು, (ಹೀಗೆ) ಹೇಳಿದರು- ನಿನ್ನ ಪ್ರಭುವಿನ ಬಳಿಗೆ 
ನೀನು ಹಿಂತಿರುಗು ಮತ್ತು ತಮ್ಮಕ್ಕೆಗಳನ್ನು ಕೊಯ್ದುಕೊಂಡ ಸ್ತ್ರೀಯರ ಸಂಗತಿಯೇನೆಂದು 
ಅವನೊಡನೆ ಕೇಳು. ನನ್ನ ಪ್ರಭುವಂತು ಅವರ ಕುತಂತ್ರಗಳನ್ನು ತಿಳಿದೇ ಇದ್ದಾನೆ." 

(ಪವಿತ್ರ ಕುರ್‌ಆನ್‌, 12:50) 


ಪ್ರವಾದಿ ಯೂಸುಫ್‌(ಅ) 41 


- :ಈ ಸೂಕ್ತವನ್ನು ಸಯ್ಯದ್‌ ಮೌದೂದಿಯವರು ಹೀಗೆ ವ್ಯಾಖ್ಯಾನಿಸಿದ್ದಾರೆ: 

"ಅಂದರೆ ನನ್ನ ಪ್ರಭುವಂತೂ ನನ್ನ ನಿರಪರಾಧಿತ್ವವನ್ನು ತಿಳಿದೇಇದ್ದಾನೆ. ಆದರೆ 
ನಿನ್ನ ಪ್ರಭು(ರಾಜ) ಕೂಡಾ ನನ್ನ ಬಿಡುಗಡೆಗೆ ಮುಂಚೆ ನನ್ನನ್ನು ಯಾಕಾಗಿ ಇಲ್ಲಿ 
ಬಂಧಿಸಿಡಲಾಗಿದೆಯೆಂಬುದನ್ನು ಕೂಲಂಕಷವಾಗಿ ತನಿಖೆನಡೆಸಬೇಕು. ಏಕೆಂದರೆ ನಾನು 
ಯಾವುದೇ ಸಂಶಯ ಮತ್ತು ದೋಷದ ಕಳಂಕ ಹೊತ್ತು ಜನರಮುಂದೆ ಬರಲು 
ಇಷ್ಟಪಡುವುದಿಲ್ಲ. ನನ್ನ ಬಿಡುಗಡೆಯಾಗಬೇಕಾದರೆ ಮೊದಲು ಎಲ್ಲರ ಮುಂದೆ ನಾನು 
ನಿರಪರಾಧಿಯೆಂದು ಸಾಬೀತಾಗಬೇಕು.' ನೈಜ ಅಪರಾಧಿಗಳು ನಿಮ್ಮ ಸಾಮ್ರಾಜ್ಯದ 
ಅಧಿಕಾರಿಗಳು ಮತ್ತು ಕಾರ್ಯಕರ್ತರೇ ಆಗಿದ್ದಾರೆ. ತಮ್ಮ ಮಡದಿಯರ ಲಜ್ಜಾಹೀನ 
ಕೃತ್ಯಗಳ ಪಾಪವನ್ನು ಅವರೇ ನನ್ನ ಈ ನಿಷ್ಕಳಂಕ ವ್ಯಕ್ತಿತ್ವದ ಮೇಲೆ ಹಾಕಿದ್ದಾರೆ. 
ಇದರಿಂದ, ಅಧಿಕಾರಿಯ ಪತ್ನಿಯ ಸತ್ಕಾರ ಕೂಟದಲ್ಲಿ ನಡೆದ ಘಟನೆಯೆಲ್ಲ ರಾಜನಿಗೆ 
ಮೊದಲೇ ತಿಳಿದಿತ್ತು ಎಂಬುದು ಯೂಸುಫ್‌ರು(ಅ) ತನ್ನ ಈ ಬೇಡಿಕೆಯನ್ನು ಮುಂದಿಟ್ಟ 
ಶೈಲಿಯಿಂದಲೇ ವ್ಯಕ್ತವಾಗುತ್ತದೆ. ಆ ಘಟನೆಯ ಕಡೆಗೆ ಕೇವಲ ಒಂದು ಸೂಚನೆ ಮಾತ್ರ 
ನೀಡುವುದು ಸಾಕಾಗಿತ್ತು. ಅದನ್ನು ವಿಸ್ತರಿಸುವ ಅಗತ್ಯವಿರಲಿಲ್ಲ. ಆ ಘಟನೆ ಅಷ್ಟೊಂದು 
ಪ್ರಸಿದ್ಧಿಪಡೆದಿತ್ತು. ಯೂಸುಫ್‌ರು(ಅ) ತನ್ನ ಯಜಮಾನನ(ಅಧಿಕಾರಿ) ಪತ್ನಿಯ ಪ್ರಸ್ತಾಪವೆತ್ತದೆ 
ತಮ್ಮ ಕೈಗಳನ್ನು ಕೊಯ್ದ ಹೆಂಗಸರನ್ನು ಮಾತ್ರ ಪ್ರಸ್ತಾಪಿಸಿರುವುದು ಅವರ ಉನ್ನತಚಾರಿತ್ರ್ಯದ 
ಒಂದು ಪುರಾವೆಯಾಗಿದೆ. ಆದರೆ ಆಕೆ ಅವರೊಂದಿಗೆ ಎಷ್ಟೇ ಕೆಟ್ಟದಾಗಿವರ್ತಿಸಿದ್ದರೂ ಅವಳ 
ಪತಿ ಅವರ ಉಪಕಾರಿಯಾಗಿದ್ದ. ಆದ್ದರಿಂದ ಅವನ ಹೆಸರಿಗೆ ಕಳಂಕ ತರುವುದು ಅವರಿಗೆ 
ಇಷ್ಟವಿರಲಿಲ್ಲ. (ತಪ್ಲೀಮುಲ್‌ ಕುರ್‌ಆನ್‌, ಭಾಗ-4) 
ಸತ್ಯದ ಅನಾವರಣ ಮತ್ತು ತಪ್ಪೊಪ್ಪಿಗೆ 

ಯೂಸುಫ್‌ರು(ಲ) ಸೆರೆಮನೆಯಿಂದ ಹೊರಬರಲು ನಿರಾಕರಿಸುತ್ತಿದ್ದಾರೆ ಮತ್ತು ಪ್ರಕರಣದ 
ಪೂರ್ಣ ತನಿಖೆಯಾಗಬೇಕೆಂದು ಹೇಳುತ್ತಿದ್ದಾರೆಂದು ರಾಜನಿಗೆ ಅರಿವಾದಾಗ ಆತ ಅಧಿಕಾರಿಯ 
ಪತ್ನಿ(ರುಲೇಖಾ)ಯನ್ನೂ ಇತರ ಸಂಬಂಧಿತ ಸ್ತ್ರೀಯರನ್ನೂ ತನ್ನ ಆಸ್ಥಾನಕ್ಕೆ ಕರೆಸಿದನು. 
ಅವರು ಬಂದಾಗ ಆತ ಅವರೊಡನೆ ಕೇಳಿದ ಪ್ರಶ್ನೆ- 'ನೀವು ಯೂಸುಫರನ್ನು(ಅ) 
ವಶೀಕರಿಸಲು ಪ್ರಯತ್ನಿಸಿದಾಗಿನ ನಿಮ್ಮ ಅನುಭವವೇನು' ಎಂದಾಗಿತ್ತು. : 

ಈ ಪ್ರಶ್ನೆಯಿಂದ ಎರಡು ವಿಷಯಗಳು ಸ್ಪಷ್ಟವಾಗಿ ತಿಳಿದುಬರುತ್ತದೆ. ಒಂದನೆಯದಾಗಿ, 
ರಾಜನಿಗೆ ನಡೆದ ಘಟನೆಯೆಲ್ಲ ಮೊದಲೇ ತಿಳಿದಿತ್ತು. ಎರಡನೆಯದಾಗಿ, ಯೂಸುಫ್‌(ಅ) 
ನಿರಪರಾಧಿಯಾಗಿದ್ದಾರೆಂಬುದೂ ಅವನ ತಿಳುವಳಿಕೆಯಲ್ಲಿತ್ತು. ಆದ್ದರಿಂದಲೇ ಆತನು, 
ಯೂಸುಫ್‌ರನ್ನು(ಅ) ಪ್ರಚೋದಿಸುವ ಪ್ರಯತ್ನವನ್ನು ಆ ಮಹಿಳೆಯರೇ ಮಾಡಿದ್ದರೆಂಬುದನ್ನು 
ಸ್ಪಷ್ಟವಾಗಿ ಹೇಳಿದ್ದನು. ಆ ಎಲ್ಲ ಸ್ತ್ರೀಯರತ್ತ ಯೂಸುಫ್‌(ಅ) ಒಲವು ತೋರಿದ್ದರೇ 
ಎಂಬುದನ್ನು ಅರಿಯುವುದೂ. ಪ್ರಶ್ನೆಯ ಇಂಗಿತವಾಗಿತ್ತು. ಆ ಸ್ತ್ರೀಯರ ಉತ್ತರ ನೋಡಿ: 


40 ಪ್ರವಾದಿ ಯೂಸುಫ್‌(ಅ) 


"ಅವರೆಲ್ಲರೂ ಒಕ್ಕೊರಳಿನಿಂದ ಹೇಳಿದರು- ಎಷ್ಟಕ್ಕೂ ಇಲ್ಲ. ನಾವು ಅವರಲ್ಲಿ 
ಯಾವ ದೋಷವನ್ನೂ ಕಾಣಲಿಲ್ಲ." (ಪವಿತ್ರ ಕುರ್‌ಆನ್‌, 12:51) 

ಆಗಲೇ ಅಧಿಕಾರಿಯ ಪತ್ನಿಯು, ತನ್ನೊಂದಿಗೆ ಪ್ರಶ್ನೆ ಕೇಳುವ ಮೊದಲೇ ಹೇಳಿ 
ಬಿಟ್ಟಳು- ''ಈಗ ಸತ್ಯವು ಬಯಲಾಗಿದೆ. ಅವರನ್ನು ಪುಸಲಾಯಿಸಲು ಪ್ರಯತ್ನಿಸಿದವಳು 
ನಾನೇ ಆಗಿದ್ದೆ. ಖಂಡಿತವಾಗಿಯೂ ಅವರು ಸತ್ಯಸಂಧರು.''(ಪವಿತ್ರ ಕುರ್‌ಆನ್‌, 12:51) 

ಆಕೆ ಈ ಮುಂಚೆಯೂ ಆ ಮಹಿಳೆಯರ ಮುಂದೆ ತನ್ನ ತಪ್ಪೊಪ್ಪಿಕೊಂಡಿದ್ದಳು. 
ಈಗ ರಾಜನ ಮುಂದೆಯೂ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಗಿ ಬಂತು. "ಈಗ ಸತ್ಯವು 
ಬಯಲಾಗಿದೆ” ಎಂಬ ಆಕೆಯ ನುಡಿಯು ಗಮನಾರ್ಹವಾಗಿದೆ. ಸತ್ಯವನ್ನು ಬಚ್ಚಿಡಲು ನಾವು 
ನಡೆಸಿದ ಪ್ರಯತ್ನಗಳೆಲ್ಲವೂ ವೃರ್ಥಗೊಂಡುವು ಎಂಬುದೇ ಇದರನೇರ ಅರ್ಥವಾಗಿದೆ. 
ಯೂಸುಫ್‌ರ(ಅ) ಸತ್ಯಸಂಧತೆ, ಉನ್ನತ ಚಾರಿತ್ರ್ಯ, ಉತ್ತಮ ನಡವಳಿಕೆ ಹಾಗೂ ಅವರ 
ನಿರಪರಾಧಿತ್ವವು ಎಷ್ಟು ಸ್ಪಷ್ಟವಾಗಿವೆಯೆಂದರೆ, ಇನ್ನು ಅದನ್ನು ನಿರಾಕರಿಸುವುದು ವ್ಯರ್ಥ 
ಸಾಹಸವಾದೀತು. ತಪ್ಪಿತಸ್ಥಳು ನಾನೇ, ಅವರು ಸಚ್ಚಾರಿತ್ರ್ಯವಾಗಿದ್ದಾರೆಂಬುದನ್ನು ನಾನು 
ಒಪ್ಪಿಕೊಳ್ಳುತ್ತೇನೆಂದು ಅದರ ಅರ್ಥ. 

ಈ ಲೋಕದ ನ್ಯಾಯಾಲಯಗಳಲ್ಲಿ ಈ ರೀತಿಯ ಎಷ್ಟೆಲ್ಲ ಪ್ರಕರಣಗಳು 
ಬಂದಿದ್ದುವೋ ಅವುಗಳಲ್ಲಿ ಯಾವುದೂ ಈ ಪ್ರಕರಣಕ್ಕೆ ಸಾಟಿಯಿಲ್ಲದ್ದಾಗಿವೆ. ಆ 
ಮಹಿಳೆಯರು ಮತ್ತು ಅಧಿಕಾರಿಯ ಪತ್ನಿಯು ತಮ್ಮ ಅಪರಾಧವನ್ನು ಯಾವರೀಶಿ 
ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡರೂ ಅದರಿಂದ ಮಾನವ ಪ್ರಕೃತಿಯ ಒಂದು ಮುಖ 
ಅನಾವರಣಗೊಳ್ಳುತ್ತದೆ. ಒಳಿತು ಮತ್ತು ಒಳಿತಿನ ಬಯಕೆಯು ಮಾನವಸಹಜ ಪ್ರಕೃತಿಯಾಗಿದೆ. 
ಆತ್ಮಸಾಕ್ಷಿಯ ಕರೆಯನ್ನು ದಮನಿಸಲು ಮಾನವನಿಗೆ ಸಾಧ್ಯವಿಲ್ಲ. ಯೂಸುಫ್‌ರು(ಅ) 
ಸೆರೆಮನೆಯೊಳಗಿದ್ದಷ್ಟು ಕಾಲ, ಓರ್ವ ಸಚ್ಚಾರಿತ್ರ್ಯವಂತನಾದ ವ್ಯಕ್ತಿ ವಿನಾಕಾರಣ ಯಾವುದೇ 
ತಪ್ಪಮಾಡದೆ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆಂಬುದು ಆ ಮಹಿಳೆಯರ ಮನ ಮಸ್ತಿಷ್ಕಗಳನ್ನು 
ಕೊರೆಯುತ್ತಿದ್ದಿರಬಹುದು. ಅಪರಾಧಿಗಳು ತಾವೇ, ಆದರೆ ಯೂಸುಫ್‌ರಿಗೆ(ಅ) 
ಶಿಕ್ಷೆಯಾಗುತ್ತಿದೆಯೆಂಬ ಈ ಅಂತರ್‌ಪ್ರಜ್ಞೆಯೇ ಅವರನ್ನು ರಾಜನ ಮುಂದೆ ತಮ್ಮ 
ತಪ್ಪೊಪ್ಪಿಕೊಳ್ಳುವಂತೆ ಮಾಡಿತು. 


ಮಾನವ ಸಹಜ ವಿನಯಶೀಲತೆ 

ಅತ್ತ ಸೆರೆಮನೆಯಲ್ಲಿ ಯೂಸುಫ್‌ರಿಗೆ(ಅ) ಆ ಮಹಿಳೆಯರು ಬಹಿರಂಗವಾಗಿ ತಮ್ಮ 
ತಪ್ಪೊಪ್ಪಿಕೊಂಡ ಹಾಗೂ ಅಧಿಕಾರಿಯ ಪತ್ನಿಯೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆಂಬ 
ವಿಷಯ ತಿಳಿದಾಗ, ಅವರು ತಮ್ಮ ಭಾವನೆಗಳನ್ನು ಯಾವ ರೀತಿ ವ್ಯಕ್ತಪಡಿಸಿದರೆಂಬುದು 
ನೋಡತಕ್ಕದ್ದೆ. 

''ಯೂಸುಫ್‌(ಅ) ಹೇಳಿದರು: ಇದರ ಉದ್ದೇಶವು ನಾನು ತೆರೆಯಮರೆಯಲ್ಲಿ 
ಆಯೀ ಯುನಿಗೆ ವಿಶ್ವಾಸಘಾತಕವೆಸಗಲಿಲ್ಲವೆಂದೂ ಅಲ್ಲಾಹ್‌ ವಿಶ್ವಾಸಘಾತಕರ ಕುತಂತ್ರವನ್ನು 


ಪ್ರವಾದಿ ಯೂಸುಫ್‌(ಅ) 43 


ಸಫಲಗೊಳಿಸಲು ಬಿಡುವುದಿಲ್ಲವೆಂದೂ(ಅಮೀರಖ್‌) ತಿಳಿದುಕೊಳ್ಳಬೇಕೆಂಬುದಾಗಿತ್ತು. ನನ್ನ 
ಚಿತ್ತವು ನಿರ್ದೋಷಿಯೆಂದು ನಾನೇನೂ ಹೇಳಿಕೊಳ್ಳುವುದಿಲ್ಲ. ನನ್ನ ಪ್ರಭುವಿನ ಕೃಷೆಯಿಲ್ಲದೆ 
ಹೋದರೆ ಚಿತ್ತವಂತು ಕೇಡಿನ ಕಡೆಗೇ ಪ್ರೇರೇಪಿಸುತ್ತದೆ. ನಿಶ್ಚಯವಾಗಿಯೂ ನನ್ನ ಪ್ರಭು 
ಕ್ಸಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ." (ಪವಿತ್ರ ಕುರ್‌ಆನ್‌, 12:52-53) 

ಮಾನವ ಸಹಜ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವ ರೀತಿಯಿದು. ಅವರು ಇದನ್ನು 
ಈ ಮುಂಚೆಯೂ ಪ್ರಕಟಪಡಿಸಿದ್ದರು. ಈಗ ಪ್ರಕರಣ ಪೂರ್ಣಗೊಂಡಿರುವಾಗ, ಇದರಲ್ಲಿ 
ನನ್ನ ಪಾಲೇನೂ ಇರಲಿಲ್ಲವೆಂಬುದನ್ನು ಇನ್ನೊಮ್ಮೆ ಬಹಿರಂಗಪಡಿಸುತ್ತಾರೆ. ಇದೆಲ್ಲವೂ 
ನನ್ನ ಪ್ರಭುವಿನ ಅನುಜ್ಞೆ ಅವನ ಪರಿಪಾಲಕತ್ವ ಮತ್ತು ಕೃಪೆಯ ಆಟವಾಗಿದೆ. ಅನ್ಯಥಾ 
ಚಿತ್ತವು ನನಗೂ ಇದೆ. ಕೆಡುಕಿನತ್ತ ಸೆಳೆಯಲ್ಪಡುವುದು ಅದರ ಪ್ರಕೃತಿಯಾಗಿದೆ. ಒಂದುವೇಳೆ 
ಆತನ ಅನುಗ್ರಹ ಜೊತೆಗಿಲ್ಲದಿರುತ್ತಿದ್ದರೆ ಮತ್ತು ನಾನು ಅವನ ಆಶ್ರಯ ಪಡೆಯದೆ 
ಇರುತ್ತಿದ್ದರೆ ನನ್ನ ಮಾನದ ಮೇಲೂ ಯಾವುದಾದರೂ ಕಳಂಕವುಂಟಾಗುವ ಸಾಧ್ಯತೆಯನ್ನು 
ಅಲ್ಲಗಳೆಯಲಾರದು ಎಂದವರು ಹೇಳುತ್ತಾರೆ. 


ಅಧಿಕಾರ ಪೀಠ ಸಿದ್ದಗೊಂಡಿದೆ 

ಪ್ರಕರಣದ ತನಿಖೆ ನಡೆಯಿತು. ಯೂಸುಫರು(ಅ) ನಿರಪರಾಧಿಯೆಂದು ಸಾಬೀತುಗೊಂಡಿತು. 
ಆಗ ಅವರನ್ನು ಬಿಡುಗಡೆಗೊಳಿಸಿ ತನ್ನ ಮುಂದೆ ಹಾಜರುಪಡಿಸಬೇಕೆಂದು ಪುನಃ 
ರಾಜಾಜ್ಞೆಯಾಯಿತು. ಈಗ ಯಾವ ಅಡ್ಡಿ-ಆತಂಕಗಳೂ ಇರಲಿಲ್ಲ. ಆದ್ದರಿಂದ ಯೂಸುಫ್‌(ಅ) 
ಸೆರೆಮನೆಯಿಂದ ಹೊರಬಂದರು. ಕುರ್‌ಆನ್‌ ಹೇಳುತ್ತದೆ: 

“ಅರಸನು ಹೇಳಿದನು, ಅವನನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅವನನ್ನು 
ನನಗಾಗಿ ಕಾಯ್ದಿ ರಿಸಿಕೊಳ್ಳುತ್ತೆ ನೆ. ಯೂಸುಪರು(ಅ) ಅವನೊಡನೆ ಮಾತುಕತೆ ನಡೆಸಿದಾಗ 
ಅವನು ಹೀಗೆಂದನು, 'ಇಂದು, ತಾವು ನಮ್ಮಲ್ಲಿ ಗೌರವಾನ್ವಿತರಾಗಿರುತ್ತೀರಿ ಮತ್ತು 
ತಮ್ಮ ಪ್ರಾಮಾಣಿಕತೆಯ ಬಗ್ಗೆ ಸಂಪೂರ್ಣ ಭರವಸೆಯಿದೆ.' ಯೂಸುಫ್‌(ಅ) ಹೇಳಿದರು, 
'ದೇಶದ ಭ೦ಡಾರಗಳನ್ನು ನನ್ನ ವಶಕ್ಕೆ ಬಿಡಿರಿ. ನಿಶ್ಚಯವಾಗಿಯೂ ನಾನು ರಕ್ಷಣೆ 
ಮಾಡುವವನೂ ತಿಳುವಳಿಕೆಯುಳ್ಳವನೂ ಆಗಿರುತ್ತೇನೆ.' ಹೀಗೆ ನಾವು ಯೂಸುಪರಿಗೆ(ಅ) 
ಆ ಭೂಭಾಗದ ಅಧಿಕಾರವನ್ನು ಸುಗಮಗೊಳಿಸಿದೆವು. ಅಲ್ಲಿ ತನಗೆ ಸರಿಕ೦ಡಲ್ಲೆಲ್ಲ 
ಸ್ಥಳ ಮಾಡಿಕೊಳ್ಳಲು ಅವರು ಅಧಿಕಾರ ಹೊಂದಿದ್ದರು. ನಾವು ನಮಗಿಷ್ಟವಿದ್ದವರಿಗೆ 
ನಮ್ಮ ಕೃಪೆಯನ್ನು ಕರುಣಿಸುತ್ತೇವೆ. ನಮ್ಮಲ್ಲಿ ಸದ್ಭಕ್ತರ ಪ್ರತಿಫಲವು 
ನಷ್ಟಗೊಳಿಸಲ್ಪಡುವುದಿಲ್ಲ. ಸತ್ಯವಿಶ್ವಾಸವನ್ನಿರಿಸಿ, ದೇವಭಯದೊಂದಿಗೆ 
ಕಾರ್ಯಪ್ರವೃತ್ತರಾಗುವವರಿಗೆ ಪರಲೋಕದ ಪ್ರತಿಷಘಲವು ಇನ್ನಷ್ಟು 
ಉತ್ತಮವಾಗಿರುತ್ತದೆ.'' (ಪವಿತ್ರ ಕುರ್‌ಆನ್‌, 12: 54-57) 


44 ಪ್ರವಾದಿ ಯೂಸುಫ್‌ (ಅ) 


ಈ ಸೂಕ್ತಗಳಲ್ಲಿ ಈ ಕೆಳಗಿನ ವಿಷಯಗಳನ್ನು ಪ್ರಸ್ತುತ ಪಡಿಸಲಾಗಿದೆ: 

1) ರಾಜನ ಆಜ್ಞೆ ಅವರನ್ನು ಬಿಡುಗಡೆಗೊಳಿಸುವುದು ಮಾತ್ರವಾಗಿರಲಿಲ್ಲ.' ಅವರನ್ನು 
ತನ್ನ ಬಳಿಗೆ ಕರೆದು ತನ್ನ ಆಪ್ತನನ್ನಾಗಿ ಮಾಡುವ ಇಂಗಿತವನ್ನೂ ಆತ ಬಹಿರಂಗಪಡಿಸಿದ. 
ಈ ವಿಷಯ ದೇಶದ: ಅಧಿಕಾರಿಗಳು, ಆಸ್ಥಾನಿಕರು ಹಾಗೂ ಸ್ವತಃ ಯೂಸುಪರಿಗೂ(ಅ) 
ತಿಳಿದಿರಬಹುದು. 'ನನಗಾಗಿ ಆಯ್ದುಕೊಳ್ಳಲು' ಎಂಬ ಮಾತಿನ ಅರ್ಥ, ಅವನು 
ಯೂಸುಫ್‌ರಿಗೆ(ಅ) ತನ್ನಲ್ಲಿ ಆಪ್ತಸ್ಥಾನ ನೀಡಿ, ತಾನು ನಿರ್ವಹಿಸಬೇಕಾದ ಕೆಲಸವನ್ನು 
ಅವರಿಂದ ಮಾಡಿಸಬಯಸಿದ್ದನು ಎಂದಾಗಿದೆ. ಅವನು ಅವರ ಸ್ಥಿತಿಗತಿಗಳನ್ನು ಅರಿತು, 
ಕನಸಿನಫಲವನ್ನು ಅವರಿಂದ ಕೇಳಿ ತಿಳಿದ ಬಳಿಕ ಈಜಿಪ್ಟ್‌ ಸಾಮ್ರಾಜ್ಯಕ್ಕೆದುರಾಗಿರುವ ಭೀಕರ 
ಸಂಕಟದಿಂದ ಪಾರುಗೊಳಿಸಬಲ್ಲ ಹಾಗೂ ಇಡೀ ದೇಶದವೃವಸ್ಥೆಯನ್ನು ವಹಿಸಬಲ್ಲ 
ಅವರಿಗಿಂತ ಸಮರ್ಥವೃಕ್ತಿ ಇಡೀ ದೇಶದಲ್ಲಿ ಬೇರಾರೂ ಇಲ್ಲವೆಂದು ಅಂದಾಜಿಸಿದ್ದನು. 


ಬೇಡಿಕೆಯನ್ನು ಸ್ವೀಕರಿಸಲಾಯಿತು 

2) ಯೂಸುಫರು(ಅ) ರಾಜನೊಂದಿಗೆ ಮಾತುಕತೆ ನಡೆಸಿದರು. ಏನು ಮಾತುಕತೆ 
ನಡೆಯಿತೆಂಬುದನ್ನು ಕುರ್‌ಆನ್‌ ಪ್ರಸ್ತಾಪಿಸಿಲ್ಲ. ಆದರೆ ಮಾತುಕತೆಯ ಬಳಿಕ ಅವನು ಅವರ 
ಬಗ್ಗೆ ತನ್ನ ಪ್ರತಿಕ್ರಿಯೆ ಹಾಗೂ ಅಧಿಕಾರವನ್ನು ಹೀಗೆ ವ್ಯಕ್ತಪಡಿಸಿದನೆಂದು ಕುರ್‌ಆನ್‌ 
ಹೇಳುತ್ತದೆ: ''ಇಂದು ತಾವು ನಮ್ಮಲ್ಲಿ ಗೌರವಾನ್ವಿತರಾಗಿದ್ದೀರಿ. ತಮ್ಮ ಪ್ರಾಮಾಣಿಕತೆಯ 
ಬಗ್ಗೆ ಸಂಪೂರ್ಣ ಭರವಸೆಯಿದೆ.'' (ಪವಿತ್ರ ಕುರ್‌ಆನ್‌, 12:54) 

ಈ ಪ್ರತಿಕ್ರಿಯೆಯು ಅವರ ಮಾತುಕತೆಗಳ ವಿಷಯಗಳನ್ನು ಅಂದಾಜಿಸಲು 
ಸಾಕಾಗಲಾರದೆ? ಅವರ ಮಾತುಕತೆಯಲ್ಲಿ ಈಜಿಪ್ಟ್‌ನ ಸಾಮಾನ್ಯ ಸ್ಥಿತಿ ಹಾಗೂ ಏಳುವರ್ಷಗಳ 
ಕಾಲದ ಸುದೀರ್ಥ ಬರಗಾಲದ ವಿಶೇಷ ಪರಿಸ್ಥಿತಿಗಳ ಬಗ್ಗೆ ಖಂಡಿತ ಪ್ರಸ್ತಾಪ 
ಬಂದಿರಬಹುದು. ಈ ಪರಿಸ್ಥಿತಿಯನ್ನು ಸುಧಾರಿಸಬಲ್ಲವರು ಯಾರಿದ್ದಾರೆಂದು ರಾಜ ಕೇಳಿದ್ದು 
ಮಾತ್ರವಲ್ಲ ಅದಕ್ಕೆ ತಾವೇ ಅರ್ಹರಾಗಿದ್ದೀರೆಂದು ಆತ ಹೇಳಿರಬಹುದು. ಈಗ ತಾವು 
ನಮ್ಮಲ್ಲಿ ಗೌರವಾನ್ವಿತರಾಗಿರುತ್ತೀರಿ, ತಮ್ಮ ಪ್ರಾಮಾಣಿಕತೆಯ ಬಗ್ಗೆ ಪೂರ್ಣಭರವಸೆಯಿದೆ 
ಎಂಬುದರಿಂದ ದೇಶದ ಅಧಿಕಾರವನ್ನು ವಹಿಸಿಕೊಳ್ಳಬೇಕೆಂಬ ಬೇಡಿಕೆಯು ರಾಜನ 
ಕಡೆಯಿಂದಲೇ ಬಂದಿತ್ತೆಂದು ತಿಳಿಯುತ್ತದೆ. 

3) ರಾಜನ ಬೇಡಿಕೆಯನ್ನು ಅಂಗೀಕರಿಸುತ್ತಾ ಯೂಸುಫರು(ಅ) ನೀವು ನನ್ನ ಬಗ್ಗೆ 
ಹಾಗೆ ಭಾವಿಸುತ್ತೀರಾದರೆ ದೇಶದ ಖಜಾನೆಯನ್ನು ನನ್ನ ಸ್ವಾಧೀನಕ್ಕೆ ಒಪ್ಪಿಸಿರಿ, ನಾನದನ್ನು 
ರಕ್ಷಿಸುವೆ, ನನಗದರ ಜ್ಞಾನವೂ ಇದೆಯೆಂದು ಹೇಳಿದರು. ಅನಂತರ ಏನಾಯಿತೆಂಬುದನ್ನು 
ಕುರ್‌ಆನ್‌ ಪ್ರಸ್ತಾಪಿಸಿಲ್ಲ. ಅದರ ಕಾರಣ ಸ್ಪಷ್ಟ. ಯೂಸುಫ್‌ರು(ಅ) ರಾಜನ ಬೇಡಿಕೆಯನ್ನು 
ಅಂಗೀಕರಿಸಿದ ಕೂಡಲೇ ವಿಷಯ ಅಲ್ಲಿಗೆ ಮುಗಿಯಿತು. ಕುರ್‌ಆನಿನಲ್ಲಿ ಅದಕ್ಕಿಂತ ಹೆಚ್ಚಿನ 
ವಿಷಯವಿರುವುದು ಹೀಗೆ: 


ಪ್ರವಾದಿ ಯೂಸುಫ್‌(ಅ) 45 


4) ಅಲ್ಲಾಹನು ಹೇಳುತ್ತಾನೆ. ಇದೆಲ್ಲವೂ ನನ್ನ ಅನುಜ್ಞೆಯಿಂದ ನಡೆಯಿತು. 
ಯೂಸುಫ್‌ರಿಗೆ(ಅ) ಈಜಿಪ್ಟ್‌ನಲ್ಲಿ ಅಧಿಕಾರ ನೀಡಿರುವುದು ನಾವೇ ಆಗಿದ್ದೇವೆ. ಅದು 
ಕೂಡಾ ಎಂತಹ ಅಧಿಕಾರ! ಇಡೀ ದೇಶವೇ ಅವರ ಅಧಿಕಾರ ವಲಯದಲ್ಲಿತ್ತು. ಅವರು 
ಬಯಸಿದಲ್ಲಿ ತಮಗೆ ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿತ್ತು. ಅವರನ್ನು ತಡೆಯುವವರು 
ಮತ್ತು ಅಡ್ಡಿಪಡಿಸುವವರು ಯಾರೂ ಇರಲಿಲ್ಲ. 

5) ಕೊನೆಯಲ್ಲಿ ಕುರ್‌ಆನ್‌ ಈ ರೀತಿ ಎಚ್ಚರಿಕೆ ನೀಡುತ್ತ ದೆ- ಪರಲೋಕದ 
ಪ್ರತಿಫಲದೆದುರು ಇಲ್ಲಿನ ಪ್ರತಿಫಲವು ಏನೇನೂ ಅಲ್ಲ. ನಿಷ್ಠಾವಂತ ಸತ್ಯವಿಶ್ವಾಸಿಗಳ 
ಅತ್ಯುತ್ತಮ ಪ್ರತಿಫಲ ಪರಲೋಕದ ಪ್ರತಿಫಲವೇ ಆಗಿದೆ. ಆದುದರಿಂದ ಅದರತ್ತಲೇ ದೃಷ್ಟಿ 
ಹರಿಸಬೇಕು. 


ನಿಶ್ಯರ್ತ ಮತ್ತು ಸಂಪೂರ್ಣ ಅಧಿಕಾರ 

ಬೈಬಲ್‌, ತಲ್ಮೂದ್‌ ಮತ್ತು ಕುರ್‌ಆನ್‌ ವ್ಯಾಖ್ಯಾನ ಗ್ರಂಥಗಳಲ್ಲಿ ಯೂಸುಫ್‌ರ(ಅ) 
ಆಡಳಿತಾಧಿಕಾರಗಳ ಯಾವ ವಿವರಗಳು ಕಾಣಸಿಗುತ್ತವೋ ಅದನ್ನು ಕುರ್‌ಆನ್‌ ಸಮರ್ಥಿಸುತ್ತದೆ. 
ಕೆಲವು ವಿವರಗಳು ಈಗಾಗಲೇ ಪ್ರಸ್ತಾಪಿಸಲಾದ ಸೊಕ್ತಗಳಲ್ಲಿಬಂದಿವೆ. ಇನ್ನು ಕೆಲವು 
ಮುಂದೆ ಬರಲಿವೆ. ಬೈಬಲ್‌ನ ಆದಿಕಾಂಡದ 39ನೆಯ ಅಧ್ಯಾಯದಲ್ಲಿ ಹೀಗಿದೆ- ಈಜಿಪ್ಟ್‌ನ 
ರಾಜನು ತನ್ನ ಅರಸುತನವನ್ನು ನಾಮಮಾತ್ರಕ್ಕೆ ಉಳಿಸಿ, ಉಳಿದುದೆಲ್ಲವನ್ನೂ ಯೂಸುಫ್‌ರಿಗೆ(ಅ) 
ವಹಿಸಿಕೊಟ್ಟನು. ಕುರ್‌ಆನ್‌ ವ್ಯಾಖ್ಯಾನಗಳಲ್ಲಿ ಬಂದಿರುವ ಪ್ರಕಾರ, ಈಜಿಪ್ಟ್‌ನ ಅರಸನು 
ಅಧಿಕಾರವನ್ನು ಅವರಿಗೆ ವಹಿಸಿಕೊಟ್ಟು ಸ್ವತಃ ಮೂಲೆಸೇರಿದ್ದನು. ತಲ್ಮೂದ್‌ನ ವಿವರಣೆಯ 
ಪ್ರಕಾರ, ಅವರ ಅಧಿಕಾರವು ಎಷ್ಟು ನಿಶ್ಶರ್ತ ಮತ್ತು ನಿರಂಕುಶವಾಗಿತ್ತೆಂದರೆ ಯಾವುದೇ 
ವಿಷಯದಲ್ಲಿ ಅವರಿಗೆ ಫಿರ್‌ಔನನ(ಈಜಿಪ್ಟ್‌ ಸನ ಪರಂಪರಾಗತ ಅರಸ) ಅನುಮತಿ ಪಡೆಯುವ 
ಅಗತ್ಯವೇ ಇರಲಿಲ್ಲ. 

ಇಬ್ನು ಜರೀರ್‌ ತಬರಿಯವರು ಇಬ್ದು ರುದ್‌ರಿಂದ ಹೀಗೆ ವರದಿ ಮಾಡುತ್ತಾರೆ: 
ಅವರ ಅಧಿಕಾರವು ಎಷ್ಟು ಪ್ರಬಲವಾಗಿತ್ತೆಂದರೆ ಅವರು ಫಿರ್‌ಔನನನ್ನು ತನ್ನ ಅಧೀನದಲ್ಲಿರಿಸ 
ಬಯಸುತ್ತಿದ್ದರೆ ಹಾಗೂ ಮಾಡಬಹುದಿತ್ತು. ಕುರ್‌ಆನ್‌ ವ್ಯಾಖ್ಯಾನ ಗ್ರಂಥಗಳಲ್ಲಿ 
ಬಂದಿರುವ ಪ್ರಕಾರ, ಬರಗಾಲದ ದಿನಗಳಲ್ಲಿ ರಾಜನ ದೈನಂದಿನ ಆಹಾರ ಪದಾರ್ಥಗಳನ್ನೂ 
ಅವರೇ ನಿಶ್ಚಯಿಸಿದ್ದರು. ಅದು ಸಾಮಾನ್ಮ ದೈನಂದಿನ ಆಹಾರಕ್ಕಿಂತಲೂ ಕಡಿಮೆ 
ಪ್ರಮಾಣದ್ದಾಗಿತ್ತು. ತಪ್ಸೀರ್‌ ಮರು್‌ಹರೀಯಲ್ಲಿ ಹೀಗಿದೆ- ಈಜಿಪ್ಟ್‌ನ ಅರಸನು ತನ್ನನ್ನು 
ಯೂಸುಫ್‌ರ(ಅ) ಆಜ್ಞಾಧೀನನೆಂದು ಭಾವಿಸಿದ್ದನು. ಒಮ್ಮೆ ಅವನು ಅವರೊಂದಿಗೆ 
ಹೇಳಿದ್ದನು- 'ಅಭಿಪ್ರಾಯ ನಿಮ್ಮದು, ನಾವೆಲ್ಲ ನಿಮ್ಮ ಆಜ್ಞಾಧೀನರಾಗಿದ್ದೇವೆ.' 


46 ಪ್ರವಾದಿ ಯೂಸುಫ್‌(ಅ) 


ಆಡಳಿತ ವಹಿಸುವ ಉದ್ದೇಶ 

ಯೂಸುಫ್‌ರ(ಅ) ವ್ಯಕ್ತಿತ್ವ, ಅವರ ದೃಢ ನಂಬಿಕೆ, ಸಹನೆ, ಧರ್ಮನಿಷ್ಠೆ, ಪರೋಪಕಾರ 
ಮತ್ತು ಅವರ ಚಾರಿತ್ರ್ಯವೇ ಮೊದಲಾದ ಗುಣಗಳನ್ನು ವಿವರವಾಗಿ ತಿಳಿದ ಬಳಿಕ, ಅವರು 
ಈಜಿಪ್ಟ್‌ನ ಅಧಿಕಾರವನ್ನು ಯಾಕಾಗಿ ವಹಿಸಿಕೊಂಡರು ಎಂಬ ಪ್ರಶ್ನೆಗೆ ಉತ್ತರ ಕಂಡು 
ಹುಡುಕಲು ಬುದ್ಧಿಜೀವಿಗಳಾದ ಯಾರಿಗೂ ಕಷ್ಟವಾಗದು. ಒಂದು ವೇಳೆ ಅವರು 
ಪ್ರವಾದಿಯಲ್ಲದೆ ಇರುತ್ತಿದ್ದರೂ ಅವರಂತಹ ಉನ್ನತ ಚಾರಿತ್ರ್ಯದ ವ್ಯಕ್ತಿಯು ದೇಶದ 
ಆಡಳಿತವನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ವಹಿಸಿಕೊಳ್ಳಲಿಲ್ಲವೆಂದು ನಾವು ತಿಳಿಯುತ್ತಿದ್ದೆವು. 
ಈಗ ಅವರು ಅಲ್ಲಾಹನ ಶ್ರೇಷ್ಠ ಪ್ರವಾದಿಯಾಗಿರುವಾಗ ಅದರ ಉತ್ತರಕ್ಕಾಗಿ ತಡಕಾಡುವ 
ಅಗತ್ಯವೇ ಇಲ್ಲ. ಅವರ ಉದ್ದೇಶವು ಮಾನವಕುಲದ ಕಲ್ಕಾಣ, ಅಲ್ಲಾಹನ ಧರ್ಮದ 
ಪ್ರಚಾರ, ಅವನ ಆಜ್ಞೆಗಳನ್ನು ಜಾರಿಗೊಳಿಸುವುದು ಮತ್ತು ಧರ್ಮವನ್ನು ಸಂಸ್ಥಾಪಿಸುವುದೇ 
ಆಗಿತ್ತು. ಇವಲ್ಲದೆ ಬೇರಾವ ಉದ್ದೇಶವೂ ಅವರಿಗಿರಲಿಲ್ಲ. ಇದೇ ಮಾತನ್ನು ಅಲ್ಲಾಮಾ 
ರುಮಖ್ಯಿರಿಯವರು ತಮ್ಮ 'ಕಶ್ಶಾಫ್‌' ಎಂಬ ವ್ಯಾಖ್ಯಾನ ಗ್ರಂಥದಲ್ಲಿ ಬರೆದಿದ್ದಾರೆ: 

"ಯೂಸುಫ್‌ರು(ಅ) ಖಜಾನೆಯನ್ನು ನನಗೊಪ್ಪಿಸಿರಿ ಎಂದು ಹೇಳುವಾಗ ಅವರ 
ಉದ್ದೇಶವು ಕೇವಲ ಅಲ್ಲಾಹನ ಆಜ್ಞೆಗಳನ್ನು ಜಾರಿಗೊಳಿಸಲು ಸತ್ಯವನ್ನು ಸಂಸ್ಥಾಪಿಸಲು 
ಮತ್ತು ನ್ಮಾಯವನ್ನು ಸಾರ್ವತ್ರಿಕಗೊಳಿಸಲು ಅವಕಾಶ ಕಲ್ಪಿಸುವುದು ಹಾಗೂ ಪ್ರವಾದಿಗಳು 
ನಿಯೋಗಿಸಲ್ಪಟ್ಟಂತಹ ಕೆಲಸ ಮಾಡಲು ಶಕ್ತಿ ಗಳಿಸುವುದಾಗಿತ್ತು. ಅವರು ಗದ್ದುಗೆಯ 
ಮೇಲಿನ ಪ್ರೀತಿ ಮತ್ತು ಲೌಕಿಕ ಮೋಹದಿಂದ ಈ ಬೇಡಿಕೆಯನ್ನು ಮುಂದಿಟ್ಟಿರಲಿಲ್ಲ. 
ತನಗಿಂತ ಉತ್ತಮವಾಗಿ ಈ ಕಾರ್ಯವನ್ನು ನಿರ್ವಹಿಸಬಲ್ಲಂತಹ ಇನ್ನೊಬ್ಬ ವ್ಯಕ್ತಿ 
ಇಲ್ಲವೆಂಬುದನ್ನು ಅರಿತುಕೊಂಡೇ ಹಾಗೆ ಮಾಡಿದ್ದರು.” 

(ತಪ್ಪೀಮುಲ್‌ ಕುರ್‌ಆನ್‌-ಕಶ್ಯಾಫ್‌ನಿಂದ ಉದ್ಭತ್ತ) 

ಇದನ್ನೇ ಅಲ್ಲಾಮಾ ಸನಾವುಲ್ಲಾ ಪಾಣಿಪಶಿಯವರು ತಮ್ಮ 'ಮರು್‌ಹರೀ' ಎಂಬ 
ವ್ಯಾಖ್ಯಾನ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: "ಅವರು ಅಲ್ಲಾಹನ ಆಜ್ಞೆಗಳನ್ನು 
ಜಾರಿಗೊಳಿಸಲು, ಸತ್ಯವನ್ನು ಸಂಸ್ಥಾಪಿಸಲು ಮತ್ತು ನ್ಯಾಯ ನೀತಿಯನ್ನು ವ್ಯಾಪಕಗೊಳಿಸಲಿಕ್ಕಾಗಿ 
ದೇಶದ ಅಧಿಕಾರವನ್ನು ಕೇಳಿದ್ದರು. ಇದು ಪ್ರವಾದಿಗಳು ಮಾಡುವ ಕೆಲಸವಾಗಿದೆ. 
ಅದಕ್ಕಾಗಿಯೇ ಅಲ್ಲಾಹನು ಜನರ ಕಡೆಗೆ ಪ್ರವಾದಿಗಳನ್ನು ಕಳಿಸುತ್ತಾ ಬಂದಿದ್ದನು.” 


ಸುಭಿಕ್ಸ ಕಾಲದ ಸಾಧನೆಗಳು 

ಆ ಏಳು ವರ್ಷಗಳಲ್ಲಿ ಯೂಸುಫ್‌ರು!ಆ) ಇಳುವರಿ ಹೆಚ್ಚಿಸುವ ಮಾರ್ಗೋಪಾಯಗಳನ್ನು 
ಅವಲಂಬಿಸಿದರು. ಎರಡನೆಯದಾಗಿ ಇಳುವರಿಯ ಹೆಚ್ಚಿನ ಪಾಲನ್ನು ಸಂಗ್ರಹಿಸಿಡಲು ಆಹಾರ 
ಧಾನ್ಯದ ಗೋದಾಮುಗಳನ್ನು ನಿರ್ಮಿಸುವ ವ್ಯಾಪಕ ವ್ಯವಸ್ಥೆ ಮಾಡಿದರು. ಮೂರನೆಯದಾಗಿ, 


ಪ್ರವಾದಿ ಯೂಸುಫ್‌(ಆ) 47 


ಅವರು ಅಲ್ಲಾಹನ ಧರ್ಮದ ಸಂದೇಶವನ್ನು ಪ್ರಚಾರಮಾಡುವ ಮತ್ತು ಜನರನ್ನು 
ಇಸ್ಲಾಮಿನತ್ತ ಆಹ್ವಾನಿಸುವ ಪ್ರಯತ್ನ ಆರಂಭಿಸಿದರು. ನಾಲ್ಕನೆಯದಾಗಿ, ಈಜಿಪ್ಟ್‌ನ 
ರಾಜನನ್ನು, ಆತ ಇಸ್ಲಾಮನ್ನು ಅಂಗೀಕರಿಸುವ ವರೆಗೂ, ಇಸ್ಲಾಮಿನತ್ತ ಆಕರ್ಷಿತವಾಗುವಂತೆ 
ಮಾಡುವ ತನ್ನ ಪ್ರಯತ್ನವನ್ನು ಮುಂದುವರಿಸಿದರು. 

ರಾಜನೊಬ್ಬನೇ ಮುಸ್ಲಿಮನಾದುದಲ್ಲ. ಆತನ ಜೊತೆ ಬಹಳಷ್ಟು ಮಂದಿ ಇಸ್ಲಾಮ್‌ 
ಸ್ವೀಕರಿಸಿದರು. ಪ್ರಖ್ಯಾತ ಕುರ್‌ಆನ್‌ ವ್ಯಾಖ್ಯಾನಕಾರರಾದ ಮುಜಾಹಿದ್‌ ಮತ್ತು ಇತರ 
ಕೆಲವು ವ್ಯಾಖ್ಯಾನಕಾರರು ಹೀಗೆ ಹೇಳುತ್ತಾರೆ: ಯೂಸುಫ್‌ರು(ಅ) ಸೌಮ್ಯವಾಗಿ 
ಸದುಪದೇಶದೊಂದಿಗೆ ಇಸ್ಲಾಮಿನತ್ತ ಆಹ್ವಾನಿಸುತ್ತಲೇ ಇದ್ದರು. ಕಟ್ಟಕಡೆಗೆ ಆತ ಹಾಗೂ 
ಆತನೊಂದಿಗೆ ಇನ್ನೂ ಅನೇಕ ಮಂದಿ ಇಸ್ಲಾಮ್‌ ಸ್ಟೀಕರಿಸಿದರು. 

ಹ. ಯೂಸುಫ್‌ರು(ಅ) ತಮ್ಮ ಬದುಕಿನಾದೃಂತ ಪ್ರವಾದಿಶ್ಚದ ದೌತ್ಯವನ್ನು 
ನಿರ್ವಹಿಸುತ್ತಲೇ ಇದ್ದರು. ಸುಭಿಕ್ಷವಾದ ಆ ಏಳು ವರ್ಷಗಳ ಕುರಿತು ಕುರ್‌ಆನಿನಲ್ಲಿ 
ಯಾವುದೇ ಪ್ರಸ್ತಾಪವಿಲ್ಲ. ಯೂಸುಫ್‌ರ(ಅ) ವೃತ್ತಾಂತವನ್ನು ಕುರ್‌ಆನಿನಲ್ಲಿ ಯಾವ 
ಉದ್ದೇಶದಿಂದ ವಿವರಿಸಲಾಗಿದೆಯೋ ಅದರಂತೆ, ಬನೀ ಇಸ್ರಾಈಲರು ಈಜಿಪ್ಟ್‌ಗೆ ವಲಸೆ 
ಹೋದ ಚರಿತ್ರೆಯನ್ನು ವಾಕ್ಸರಣಿಯಲ್ಲಿ ಜೋಡಿಸಲಾಗಿದೆ. 


ಹ. ಮೂಸಾರ(ಅ) ಕಾಲದವರೆಗೂ ಸ್ಮರಣೆ 
ಯೂಸುಫ್‌ರ(ಅ) ಪ್ರವಾದಿತ್ವ ದೌತ್ಯದ ಚಟುವಟಿಕೆಗಳು ಬಹಳ ವಿಸ್ತಾರವಾಗಿತ್ತು. 
ಅದು ಮೂಸಾರ(ಅ) ಪ್ರವಾದಿತ್ವದ ಕಾಲದ ವರೆಗೂ ಜನಮನದಿಂದ ಮಾಸಿ ಹೋಗಿರಲಿಲ್ಲ. 
ಈಜಿಪ್ಟ್‌ನ ಜನತೆ ಅವರ ಆಡಳಿತ ಕಾಲವನ್ನು ಮರೆತಿರಲಿಲ್ಲ. ಫಿರ್‌ಔನನ ಆಸ್ಥಾನದಲ್ಲಿ 
ಓರ್ವ ಸತ್ಯವಿಶ್ವಾಸಿಯು ಆಡಿದ ಮಾತನ್ನು ಕುರ್‌ಆನ್‌ ಪ್ರಸ್ತಾಪಿಸಿದೆ. ಅದರ ಒಂದು ತುಣಕು 
ಹೀಗಿದೆ-''ಇದಕ್ಕೆ ಮುಂಚೆ ಯೂಸುಫ್‌ರು(ಅ) ನಿಮ್ಮ ಬಳಿಗೆ ಸುವ್ಯಕ್ತ ನಿದರ್ಶನಗಳನ್ನು 
ತಂದಿದ್ದರು, ಆದರೆ ನೀವು ಅವರು ತಂದ ಶಿಕ್ಷಣದ ಬಗ್ಗೆ ಸಂಶಯದಲ್ಲೇ ಬಿದ್ದು ಬಿಟ್ಟಿರಿ. 
ತರುವಾಯ, ಅವರು ನಿಧನರಾದಾಗ ನೀವು, ಇನ್ನು ಅವರ ಬಳಿಕ ಎಷ್ಟು ಮಾತ್ರಕ್ಕೂ 
ಅಲ್ಲಾಹನು ಸಂದೇಶವಾಹಕರನ್ನು ಕಳುಹಿಸಲಿಕ್ಕಿಲ್ಲ ಎಂದಿರಿ.''(ಪವಿತ್ರ ಕುರ್‌ಆನ್‌, 40:34) 
ಶಾಹ್‌ ಅಬ್ದುಲ್‌ ಕಾದಿರ್‌ ದೆಹ್ಟವಿಯವರು ಹೀಗೆ ಬರೆಯುತ್ತಾರೆ- ಯೂಸುಫ್‌ರ(ಅ) 
ಜೀವಿತಾವಧಿಯಲ್ಲಿ ಈಜಿಪ್ಟ್‌ನ ಜನರು ಅವರ ಪ್ರವಾದಿತ್ವವನ್ನು ಅಂಗೀಕರಿಸಿರಲಿಲ್ಲ. 
ಅವರು ನಿಧನ ಹೊಂದಿದ ನಂತರ, ಈಜಿಪ್ಟ್‌ನ ಆಡಳಿತ ವ್ಯವಸ್ಥೆಯು ಕೆಟ್ಟುಹೋದಾಗ 
ಅವರು ಹೀಗೆನ್ನತೊಡಗಿದರು. ಯೂಸುಫ್‌ರ(ಅ) ಪಾದಸ್ಪರ್ಶವು ಈ ದೇಶಕ್ಕೆ ಎಷ್ಟು 
ಮಂಗಲಮಯವಾಗಿತ್ತು. ಅಂತಹ ಓರ್ವ ಪ್ರವಾದಿಯಂತೂ ಇನ್ನು ಬರಲಿಕ್ಕಿಲ್ಲ.” 
(ಮೌದಿವುಲ್‌ ಕುರ್‌ಆನ್‌) 


48 ಪ್ರವಾದಿ ಯೂಸುಫ್‌(ಅ) 


ಈಜಿಪ್ಟ್‌ನ ಬಹುಸಂಖ್ಯಾತ ಜನರು ಯೂಸುಫ್‌ರ(ಅ) ಪ್ರವಾದಿತ್ವವನ್ನು ನಂಬಿರಲಿಲ್ಲ. 
ಆದರೆ ಈ 'ಸತ್ಯವಿಶ್ವಾಸಿ'ಯ ಮಾತಿನಿಂದ, ಯೂಸುಫರು ತಮ್ಮನ್ನು ಓರ್ವ ಪ್ರವಾದಿಯೆಂಬ 
ನೆಲೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದರೆಂದೂ ಅವರ ಪ್ರವಾದಿತ್ವ ಮತ್ತು ನ್ಯಾಯಪೂರ್ಣ 
ಆಡಳಿತದ ಪ್ರಭಾವವು ಬಹಳ ಕಾಲದ ವರೆಗೂ ಉಳಿದಿತ್ತೆಂದೂ ವ್ಯಕ್ತವಾಗುತ್ತವೆ. 


ಭೀಕರ ಬರಗಾಲ ಮತ್ತು ಸಹೋದರರ ಆಗಮನ 


ಸುಭಿಕ್ಷವಾದ ಆ ಏಳು ವರ್ಷಗಳ ಬಳಿಕ ಏಳು ವರ್ಷಗಳ ಭೀಕರ ಬರಗಾಲ 
ಬಂತು. ಅದು ಸುತ್ತಮುತ್ತಲಿನ ಪ್ರದೇಶಗಳನ್ನೂ ಆವರಿಸಿಕೊಂಡಿತು. ಯಲ್‌ಕೂಬ್‌(ಅ) 
ಮತ್ತು ಸಂತತಿಯವರಾದ ಬನೀ ಇಸ್ರಾಈಲ್‌ನವರು ಫೆಲೆಸ್ತೀನಿನ ನಿವಾಸಿಗಳಾಗಿದ್ದರು. 
ಅವರು ಜೆರೋನ್‌ ಅಥವಾ ಅಲ್‌ಖಲೀಲ್‌ ಎಂಬಲ್ಲಿ ವಾಸವಾಗಿದ್ದರು. ಆ ಪ್ರದೇಶಕ್ಕೂ 
ಬರಗಾಲದ ಬಿಸಿ ತಟ್ಟಿತು. ಯೂಸುಫ್‌ರು(ಅ) ಈಜಿಪ್ಟ್‌ನ ಜನರ ನೀತಿ ಚಾರಿತ್ರ್ಯಗಳನ್ನು 
ಚೆನ್ನಾಗಿ ಸಂಸ್ಕರಿಸಿ, ಅಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಅದರಿಂದಾಗಿ ಅವರು 
ರಕ್ಷಿಸಿಟ್ಟಿದ್ದ ಆಹಾರಧಾನ್ಯಗಳು ಕೇವಲ ಈಜಿಪ್ಟ್‌ ನವರಿಗೆ ಮಾತ್ರವಲ್ಲ ಸುತ್ತಮುತ್ತಲಿನ 
ಪ್ರದೇಶಗಳ ಜನರಿಗೂ ಸಾಕಾಗುವಪ್ಪಿತ್ತು. ಈಜಿಪ್ಟ್‌ ಒಂದನ್ನು ಬಿಟ್ಟರೆ ಬೇರೆಲ್ಲೂ 
ಆಹಾರಧಾನ್ಯವಿರಲಿಲ್ಲ. ಆ ಎಲ್ಲ ಪ್ರದೇಶಗಳ ಜನರ ಮಧ್ಯೆ, ಈಜಿಪ್ಟ್‌ನಲ್ಲಿ ಓರ್ವ 
ನೀತಿವಂತ ರಾಜನಿದ್ದು, ಆತನ ಆಡಳಿತದಲ್ಲಿ ನ್ಯಾಯ ಬೆಲೆಯಲ್ಲಿ ಆಹಾರಧಾನ್ಯ ಪೂರೈಸುವ 
ವ್ಯವಸ್ಥೆ ಮಾಡಲಾಗಿದೆಯೆಂದು ಪ್ರಚಾರವಾಗಿತ್ತು. ಆದ್ದರಿಂದ ನಾನಾ ಕಡೆಗಳಿಂದ ಆಹಾರಧಾನ್ಯ 
ಖರೀದಿಸಲಿಕ್ಕಾಗಿ ಜನರು ಅಲ್ಲಿಗೆ ಬರುತ್ತಿದ್ದರು. ಈ 'ನೀತಿವಂತ ರಾಜ'ನ ಕುರಿತ ಸುದ್ದಿಯು 
ಹ.ಯಲ್‌ಕೂಬರ(ಅ) ಕಿವಿಗೂಬಿತ್ತು. ಅವರು ತಮ್ಮ ಹತ್ತುಮಂದಿ ಪುತ್ರರನ್ನು ಆಹಾರಧಾನ್ಯ 
ಖರೀದಿಸಲಿಕ್ಕಾಗಿ ಈಜಿಪ್ಟ್‌ಗೆ ಕಳಿಸಿದರು. ಆದರೆ ಕಿರಿಯ ಪುತ್ರ ಬಿನ್‌ಯಮೂನ್‌ನನ್ನು 
ಕಳಿಸಲಿಲ್ಲ, ಈಜಿಪ್ಟ್‌ನ ಹೊರಗಿರುವ ಸ್ವತಂತ್ರ ನಾಡುಗಳ ಜನರು ಆಹಾರಧಾನ್ಯ 
ಖರೀದಿಸಲಿಕ್ಕಾಗಿ ಬಂದರೆ, ಮೊದಲು ಅವರನ್ನು ತಮ್ಮ ಮುಂದೆ ಹಾಜರು ಪಡಿಸಬೇಕೆಂದು 
ಯೂಸುಫ್‌ರ(ಅ) ಕೆಟ್ಟಾಜ್ಞೆಯಿತ್ತು. ಅನಂತರವೇ ಅವರಿಗೆ ಆಹಾರಧಾನ್ಯ ಪೂರೈಸಲಾಗುತ್ತಿತ್ತು. 
ಪ್ರತಿಯೊಬ್ಬನಿಗೂ ಒಂದು ಒಂಟೆಯ ಬೆನ್ನಲ್ಲಿಹೇರುವಷ್ಟು ಆಹಾರಧಾನ್ಯದ ಪಾಲನ್ನು(0ಟ೦೩) 
ಅವರು ನಿಶ್ಚಯಿಸಿದ್ದರು. ಆತ ಎಂತಹ ಸ್ಥಾನಮಾನದವನೇ ಆಗಿದ್ದರೂ ಸರಿ. 

ಯೂಸುಫ್‌ರ(ಅ) ಸಹೋದರರು ಆಹಾರಧಾನ್ಯ ಖರೀದಿಗಾಗಿ ಈಜಿಪ್ಟ್‌ಗೆ ಬಂದಾಗ 
ವಾಡಿಕೆಯಂತೆ ಅವರನ್ನು ಯೂಸುಫ್‌ರ(ಅ) ಮುಂದೆ ಹಾಜರುಪಡಿಸಲಾಯಿತು. ಅವರನ್ನು 
ನೋಡುತ್ತಲೇ ಯೂಸುಫ್‌ರು(ಅ) ಗುರುತಿಸಿದರು. ಆದರೆ 'ಅವರಿಗೆ ಯೂಸುಫರನ್ನು(ಅ) 
ಗುರುತಿಸಲಾಗಲಿಲ್ಲ. ಅದರ ಒಂದು 'ಕಾರಣ, ಅವರ ಸಹೋದರರು ಅವರನ್ನು ಪಾಳು 
ಬಾವಿಗೆ ಎಸೆದಿದ್ದಾಗ ಅವರಿನ್ನೂ ಸಣ್ಣ ಹುಡುಗ. ಗಡ್ಡವೂಸೆಗಳು ಮೊಳೆತಿರಲಿಲ್ಲ. ಈಗ 
ಅವರ ಮುಂದೆ ಓರ್ವ ಗಡ್ಡಮೂಸೆ ಹೊಂದಿರುವ ಯುವಕ ಅಧಿಕಾರ ಪೀಠದಲ್ಲಿ 
ವಿರಾಜಮಾನನಾಗಿದ್ದಾನೆ. ಎರಡನೆಯ ಕಾರಣ, ತಾವು ಎಂದೋ ಬಾವಿಗೆಸೆದಿದ್ದ 


ಸ ಪ್ರವಾದಿ ಯೂಸುಫ್‌ಲು ..... ಯು ಬಜ ಪತತ 


ಬಾಲಕನೊಬ್ಬನು ಮುಂದೊಂದು ದಿನ ಈಜಿಪ್ಟ್‌ನ ಚಕ್ರವರ್ತಿಯಾಗ. ಬಲ್ಲನೆಂಬುದು ಅವರ . 
ಊಹೆಗೂ ನಿಲುಕದ ವಿಷಯವಾಗಿತ್ತು. ` 
' ಯೂಸುಫರು(ಅ), ಸದ್ಮ ತನ್ನನ್ನು ಪರಿಚಯ ಪಡಿಸುವುದು ಸರಿಯಲ್ಲವೆಂದು ಮೌನ 
ವಹಿಸಿದರು. ಆದರೆ ಈ ಜನರು ಎಷ್ಟು ಮಂದಿಯ ಆಹಾರಧಾನ್ಯಗಳನ್ನು ಖರೀದಿಸ 
ಬಯಸಿದ್ದಾರೋ ಅವರೆಲ್ಲರೂ ಇಲ್ಲಿದ್ದಾರೆಯೇ ಎಂಬುದನ್ನು ವಾಡಿಕೆಯಂತೆ ತನಿಖೆ 
ನಡೆಸಿದರು. ಆಗ ಅವರು ತಮ್ಮ ತಂದೆ, ತಾಯಿ ಮತ್ತು ಮಲ ಸಹೋದರನೊಬ್ಬನನ್ನು 
ಒಟ್ಟಿಗೆ ಕರೆ' ತಂದಿರಲಿಲ್ಲವೆಂದು ಅವರಿಗೆ ತಿಳಿಯಿತು. ಇವರು ಮರಳಿಹೋಗಿ ಇನ್ನೊಮ್ಮೆ 
ಈಜಿಪ್ಟ್‌ಗೆ ಪುನಃ ಬರುವಾಗ ತಮ್ಮ ಆ ಸಹೋದರನನ್ನು ಕರೆತರಬೇಕೆಂದು ಬಯಸಿದರು. 
ಬೈಬಲ್‌ನ ವಿವರಗಳು ಮತ್ತು ಕುರ್‌ಆನಿನ ಸೂಚನೆಯಿಂದಲೂ ಯೂಸುಫರು(ಅ) ತಮ್ಮ 
ಸಹೋದರರೊಂದಿಗೆ ವಿಶೇಷ ಪ್ರೀತ್ಕಾದರಗಳೊಂದಿಗೆ ವ್ಯವಹರಿಸಿದ್ದು ಮಾತ್ರವಲ್ಲ ಅವರಿಗೆ 
ಸತ್ಕಾರಕೂಟವನ್ನು ಏರ್ಪಡಿಸಿದ್ದರು ಎಂದು ತಿಳಿದು ಬರುತ್ತದೆ. ಕುರ್‌ಆನ್‌ ಆ ವಿಷಯಗಳನ್ನು 

ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದೆ: 

“ಯೂಸುಫರ(ಅ) ಸಹೋದರರು ಈಜಿಪ್ಟಿಗೆ ಬಂದರು ಮತ್ತು ಇವರ ಮುಂದೆ 
ಹಾಜರಾದರು. ಇವರು ಅವರನ್ನು ಗುರುತಿಸಿದರು. ಆದರೆ ಅವರಿಗೆ ಇವರ ಗುರುತುಸಿಗಲಿಲ್ಲ. 
ಇವರು ಅವರ ಸರಕುಗಳನ್ನೆಲ್ಲಾ ಸಿದ್ಧಗೊಳಿಸಿದ ಬಳಿಕ' ಹೊರಡುವಾಗ ಹೀಗೆ ಹೇಳಿದರು, 
'ನಿಮ್ಮ ಮಲ ಸಹೋದರನನ್ನು. ನನ್ನ ಬಳಿಗೆ ಕರೆತರಬೇಕು. ನಾನು ಹೇಗೆ ಅಳತೆ ಪಾತ್ರ 
ತುಂಬಿ ಕೊಡುತ್ತೇನೆಂದೂ ಎಷ್ಟು ಉತ್ತಮ ಆತಿಥೇಯನಾಗಿದ್ದೇನೆಂಬುದನ್ನೂ 

. ಕಾಣುತ್ತೀರಲ್ಲವೆ? ನೀವು ಅವನನ್ನು ಕರೆತರದಿದ್ದರೆ ನನ್ನಲ್ಲಿ ನಿಮಗೆ ಧಾನ್ಯವಿಲ್ಲ. ಮಾತ್ರವಲ್ಲ 
ನೀವು ನನ್ನ ಬಳಿ ಸುಳಿಯಲೂಬಾರದು.' ಅವರು ಹೇಳಿದರು, `'ತಂದೆಯವರು ಅವನನ್ನು 
` ಕಳುಹಿಸಲು ಒಪ್ಪುವಂತೆ ಮಾಡಲು ಪ್ರಯತ್ನಿಸುವೆವು. ಹೀಗೆ ನಾವು ಮಾಡಿಯೇ ತೀರುವೆವು.' 
ಧಾನ್ಯದ ಪ್ರತಿಯಾಗಿ ಅವರು ಕೊಟ್ಟಿದ್ದ ಮೊಬಲಗನ್ನು" ಅವರ ಸರಕಿನಲ್ಲೇ ಗುಟ್ಟಾಗಿ 
ಇರಿಸಿಬಿಡಿರೆಂದು ಯೂಸುಫರು(ಅ) ತನ್ನ ಗುಲಾಮರೊಡನೆ ಹೇಳಿದರು. ಅವರು. ಮನೆಗೆ 
ತಲಪಿದಾಗ ತಮಗೆ ಮರಳಿಸಿಕ್ಕಿದ ಮೊಬಲಗನ್ನು ಗುರುತಿಸಿಕೊಳ್ಳುವರು (ಅಥವಾ ಈ 
.ಔದಾರ್ಯಕ್ಕಾಗಿ ಕೃತಜ್ಞರಾಗುವರು) ಮತ್ತು ಪುನಃ ಮರಳಿ ಬರಲೂಬಹುದೆಂಬ ನಿರೀಕ್ಷೆಯಿಂದ 
ಯೂಸುಫ್‌(ಅ) ಹೀಗೆ ಮಾಡಿದ್ದರು." 12: 58-62) 


ಯಲ್‌ಕೂಬರ(ಅ) ಮಾರ್ಗೋಪಾಯಗಳು ' ಮತ್ತು ಅಲ್ಲಾಹನ 


ಮೇಲಿನ ಅಚಲ ನಂಬಿಕೆ. 


ಯೂಸುಫ್‌ರ(ಅ) ಸಹೋದರರು ಮನೆಗೆ ಬಂದಾಗ, ಚಕ್ರ: ವರ್ತಿಯು ತಮ್ಮೊಂದಿಗೆ: 
ತೋರಿದ ವಿಶೇಷ ಗೌರವಾದರಗಳು ಮತ್ತು ಸೌಜನ್ಯದ ಕತೆಯನ್ನು ವಿವರವಾಗಿ ತಮ್ಮ ತಂದೆಗೆ 
``... ತಿಳಿಸಿದರು. ಇನ್ನೊಮ್ಮೆ ಆಹಾರಧಾನ್ಯಗಳು ಸಿಗಬೇಕಾದರೆ ಬಿನ್‌ಯವಮೂನ್‌ನನ್ನೂ ತಮ್ಮೊಂದಿಗೆ 


50 ಪ್ರವಾದಿ ಯೂಸುಫ್‌(ಆ) ' 


ಈಜಿಪ್ಟ್‌ಗೆ ಕಳಿಸಬೇಕಾದೀತೆಂದು ಅವರು ಹೇಳಿದರು. ಅಷ್ಟೇ ಅಲ್ಲ, ಅವನನ್ನು ನಮ್ಮೊಂದಿಗೆ 
ಕಳಿಸಿಕೊಡಿರಿ, ನಾವು ಅವನನ್ನು ರಕ್ಷಿಸುವೆವು ಎಂದೂ ಭರವಸೆ ನೀಡಿದರು. 
ಯಲ್‌ಕೂಬರು(ಅ) ಹೀಗೆಂದರು- "ನೀವು ಈ ಹಿಂದೆ ಯೂಸುಫ್‌ನನ್ನು(ಅ) ಯಾವ 
ರೀತಿ ರಕ್ಷಿಸಿದ್ದೀರೋ ಅದೇ ರೀತಿಯಲ್ಲಿ ಬಿನ್‌ಯಮೂನ್‌ನನ್ನೂ ರಕ್ಷಿಸುವಿರಾ? ವಾಸ್ತವದಲ್ಲಿ 
ಅಲ್ಲಾಹನೇ ರಕ್ಷಕನಾಗಿದ್ದಾನೆ. ಅವನು ಅತಿ ಹೆಚ್ಚು ಕರುಣಾಳುವೂ ಆಗಿದ್ದಾನೆ." 

ಆ ಸಹೋದರರು ತಾವು ತಂದಿದ್ದಸರಕನ್ನು ತೆರೆದು ನೋಡಿದಾಗ ಸಂತೋಷಾತಿರೇಕದಿಂದ 
ಕುಣಿದಾಡಿದರು. ಏಕೆಂದರೆ ಅವರು ಪಾವತಿಸಿದ್ದ ಹಣವನ್ನು ಅದರಲ್ಲೇ ಇರಿಸಲಾಗಿತ್ತು. 
ಈಗಂತೂ ಅವರು ಇನ್ನಷ್ಟು ಆಹಾರಧಾನ್ಯಗಳನ್ನು ಖರೀದಿಸಬಹುದೆಂದು ಭಾವಿಸಿದರು. 
ಆದುದರಿಂದ ಬಿನ್‌ಯಮೂನ್‌ನನ್ನು ತಮ್ಮ ಜೊತೆಯಲ್ಲಿ ಈಜಿಪ್ಟ್‌ಗೆ ಕಳಿಸುವಂತೆ 
ಒತ್ತಾಯಿಸತೊಡಗಿದರು. ಯಲ್‌ಕೂಬರು(ಅ) ಅವರಿಂದ, ಬಿನ್‌ಯಮೂನ್‌ನನ್ನು ಸುರಕ್ಷಿತವಾಗಿ 
ಖಂಡಿತ ಮರಳಿ ತರುವೆವೆಂಬ ವಾಗ್ದಾನವನ್ನು ಪಡೆದರು. ಎಲ್ಲಾದರೂ ಆತ ಬಂದಿಯಾದರೆ 
ಅರ್ಥಾತ್‌ ಅವರ ನಿಯಂತ್ರಣಕ್ಕೆ ಅತೀತವಾದ ಯಾವುದಾದರೂ ಆಪತ್ತಿಗೆ ಸಿಲುಕಿಬಿಟ್ಟರೆ 
ಆ ವಿಷಯ ಬೇರೆ. ಹೀಗೆ, ಅವರಿಂದ ವಾಗ್ದಾನಪಡೆದ ಬಳಿಕ ಯಲ್‌ಕೂಬರು(ಅ) ತಮ್ಮ 
ಮಕ್ಕಳೊಂದಿಗೆ, ಎಲ್ಲರೂ ಒಂದೇ ದ್ವಾರದ ಮೂಲಕ ನಗರದೊಳಗೆ ಪ್ರವೇಶಿಸಬಾರದೆಂದೂ 
ಬೇರೆ ಬೇರೆ ದ್ವಾರಗಳ ಮೂಲಕ ಪ್ರವೇಶಿಸಬೇಕೆಂದೂ ಒತ್ತುಕೊಟ್ಟು ಹೇಳಿದರು. ಈ 
ಮಾರ್ಗೋಪಾಯವನ್ನು ಅವರು ಯಾಕೆ ಹೇಳಿಕೊಟ್ಟರು. ಅದರ ಉದ್ದೇಶವೇನಾಗಿತ್ತೆಂಬುದನ್ನು 
ವ್ಯಾಖ್ಯಾನಕಾರರು ಹೀಗೆ ವಿವರಿಸುತ್ತಾರೆ: 

ಅವರು ಒಂದೇ ತಂಡವಾಗಿ ನಗರದೊಳಗೆ ಪ್ರವೇಶಿಸಿದರೆ ಈಜಿಪ್ಟ್‌ ಜನರ ಅಸೂಯೆ 
ಹಾಗೂ ಅವರ ವಕ್ರದೃಷ್ಟಿಗೆ ಬಲಿಯಾಗುವ ಅಪಾಯವಿತ್ತು. ಏಕೆಂದರೆ ಚಕ್ರವರ್ತಿಯ 
ಗೌರವಾದರಗಳಿಗೆ ಪಾತ್ರರಾದ ಕಾರಣ ಅವರ ಸ್ಥಾನಮಾನ ಅಲ್ಲಿ ಹೆಚ್ಚಾಗಿತ್ತು. ಅದರಿಂದಾಗಿ 
ಜನರಿಗೆ ಅವರ ಬಗ್ಗೆ ಈರ್ಷೈೆಯುಂಟಾಗುವ ಸಾಧ್ಯತೆಯಿತ್ತು. ಬೇರೆ ಬೇರೆ ದ್ವಾರಗಳ 
ಮೂಲಕ ಪ್ರವೇಶಿಸುವುದರಿಂದ ಈ ಅಪಾಯದ ಸಾಧ್ಯತೆ ಕಡಿಮೆಯಿತ್ತು. ಕೆಲವು ವ್ಯಾಖ್ಯಾನಕಾರರ 
ಪ್ರಕಾರ, ಅದರ ಕಾರಣ ರಾಜಕೀಯವಾಗಿತ್ತು. ಈ ಮಂದಿ ಸ್ವತಂತ್ರವಾದ ಒಂದು ಪ್ರದೇಶದ 
ನಿವಾಸಿಗಳಾಗಿದ್ದರು. ತೀವ್ರ ಬರಗಾಲದ ಕಾಲವೂ ಆಗಿತ್ತದು. ಒಂದು ವೇಳೆ ಅವರು 
ಗುಂಪಾಗಿ ನಗರದೊಳಗೆ ಪ್ರವೇಶಿಸುತ್ತಿದ್ದರೆ, ಈ ಮಂದಿ ಬಹುಶಃ ದರೋಡೆ ನಡೆಸಲು 
ಬಂದಿರುವರೆಂಬ ಸಂದೇಹ ಮೂಡಬಹುದಾಗಿತ್ತು. ಕಾರಣವೇನೇ ಇರಲಿ ಯಲ್‌ಕೂಬರ(ಅ) 
ಮನಸ್ಸಿನಲ್ಲಿ ಏನೋ ಒಂದು ಆತಂಕವಿತ್ತು. ಆದ್ದರಿಂದಲೇ ಅವರು ತಮ್ಮ ಮಕ್ಕಳಿಗೆ .ಈ 
ಉಪಾಯವನ್ನು ಹೇಳಿಕೊಟ್ಟರು. ವಸ್ತುತಃ ಯಾವುದೇ ಉಪಾಯವು ದೇವವಿಧಿಯ ಮುಂದೆ 
ಫಲಕಾರಿಯಾಗುವುದಿಲ್ಲ. ಎಲ್ಲವೂ ಅಲ್ಲಾಹನ ಇಚ್ಛೆಗನುಸಾರವೇ ನಡೆಯುತ್ತದೆಂಬುದನ್ನು 
ವ್ಯಕ್ತಪಡಿಸಲು ಅವರು ಮರೆಯಲಿಲ್ಲ. ಅವರಿಗೆ ಅಲ್ಲಾಹನ ಮೇಲಿದ್ದ ಅಚಂಚಲ 
ವಿಶ್ವಾಸವನ್ನು ಕುರ್‌ಆನ್‌ ಹೀಗೆ ವ್ಯಕ್ತಪಡಿಸುತ್ತದೆ: 


ಪ್ರವಾದಿ ಯೂಸುಫ್‌(ಅ) 51 


"ಆದರೆ ನಾನು ನಿಮ್ಮನ್ನು ಅಲ್ಲಾಹನ ವಿಧಿಯಿಂದ ತಪ್ಪಿಸಲಾರೆ. ಆಜ್ಞಾಧಿಕಾರವು 
ಅವನ ಹೊರತು ಇನ್ನಾರಿಗೂ ಇಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದೆ ಮತ್ತು 
ಯಾರು ಭರವಸೆಯನ್ನಿರಿಸುವುದಿದ್ದರೂ ಅವನ ಮೇಲೆಯೇ ಇರಿಸಲಿಿ'' 

(ಪವಿತ್ರ ಕುರ್‌ಆನ್‌, 12:67) 


ಅಲ್ಲಾಹನ ಮೇಲೆ ಅಚಂಚಲ ಭರವಸೆಯ ವಾಸ್ತವಿಕತೆ 
ಯಲ್‌ಕೂಬರು(ಅ) ಹೇಳಿದ ಮಾತಿನಿಂದ ತವಕ್ಕುಲ್‌ ಅಲಲ್ಲಾಹ್‌(ಅಲ್ಲಾಹನ ಮೇಲೆ 
ಅಚಂಚಲ ಭರವಸೆ ವಾಸ್ತವಿಕತೆಯನ್ನು ಗ್ರಹಿಸಬಹುದು. ಯಾವುದೇ ಮಾರ್ಗೋಪಾಯವನ್ನು 
ಕಂಡು ಕೊಳ್ಳದೆ ಕೇವಲ ಕೈಕಟ್ಟಿ ಕುಳಿತುಕೊಳ್ಳುವುದು ತವಕ್ಕುಲ್‌ ಅಲ್ಲ. ಬದಲಾಗಿ ಎಲ್ಲ 
ಉಪಾಯಗಳನ್ನು ಕೈಗೊಳ್ಳಬೇಕು, ಆದರೆ ಅವುಗಳನ್ನೇ ನಂಬಿ ಬಿಡಬಾರದು. ನಂಬಿಕೆಯು 
ಸರ್ವಸಂಪೂರ್ಣವಾಗಿ ಅಲ್ಲಾಹನ ಮೇಲಿರಬೇಕು. ಅವನ ಇಚ್ಛೆ ಇದ್ದರೆ ಎಲ್ಲ ಉಪಾಯಗಳೂ 
ಫಲ ನೀಡುತ್ತವೆ. ಅನ್ಯಥಾ ಎಲ್ಲವೂ ವ್ಯರ್ಥವಾಗುವುವು. ದೇವೇಚ್ಛೆ ಮಾತ್ರ ಈಡೇರುವುದು. 
ಈ ವಾಸ್ತವಿಕತೆಗಳನ್ನು ಗ್ರಹಿಸಿ ಅಂಗೀಕರಿಸುವುದರಿಂದ ತನ್ನ ಉಪಾಯಗಳು ವಿಫಲವಾದರೆ 
ಮಾನವನು ನಿರಾಶನಾಗುವುದಿಲ್ಲ, ಗೋಳಿಡುವುದಿಲ್ಲ. ಅಸಂಬದ್ಧ ಮಾತುಗಳನ್ನು ತನ್ನ 
ಬಾಯಿಂದ ಹೊರಡಿಸುವುದಿಲ್ಲ. ಆತ ಸಹನೆವಹಿಸಿಕೊಂಡು ತನ್ನ ಪರಿಶ್ರಮವನ್ನು 
ಮುಂದುವರಿಸುತ್ತಾನೆ. ಯಲ್‌ಕೂಬರು(ಅ) ತನ್ನಿಬ್ಬರೂ ಪುತ್ರರನ್ನು ಕಳಕೊಂಡಾಗ ಏನೆಲ್ಲ 
ಮಾಡಿದರೋ ಅದು ಅಲ್ಲಾಹನ ಮೇಲೆ ಅಚಂಚಲ ಭರವಸೆಯಿರಿಸಿಕೊಂಡು ತನ್ನ 
ಮಾರ್ಗೋಪಾಯಗಳನ್ನು ಪ್ರಯೋಗಿಸಿದುದರ ಅತ್ಯುತ್ತಮ ಉದಾಹರಣೆಯಾಗಿದೆ. ಕೊನೆಗೆ `` 
ಅಲ್ಲಾಹನು ಬಯಸಿದ್ದೇ ಸಂಭವಿಸಿತು. ಬಿನ್‌ಯವಮೂನ್‌ನನ್ನು ಈಜಿಪ್ಟ್‌ನಲ್ಲಿ 
ತಡೆದಿರಿಸಲಾಯಿತು. ಯಲ್‌ಕೂಬರಿಗೆ ಸಹನೆಯ ಇನ್ನೊಂದು ಸತ್ವಪರೀಕ್ಷೆ ಎದುರಾಯಿತು. 


ಬಿನ್‌ಯಮೂನ್‌ ಈಜಿಪ್ಟ್‌ನಲ್ಲಿ 

ಯಲ್‌ಕೂಬರು(ಅ) ಹೇಳಿಕೊಟ್ಟ ಉಪಾಯದ ಪ್ರಕಾರ ಯೂಸುಫ್‌ರ(ಅ) ಸಹೋದರರು 
ಬೇರೆ ಬೇರೆಯಾಗಿ ಈಜಿಪ್ಟ್‌ನೊಳಗೆ ಇನ್ನೊಮ್ಮೆ ಪ್ರವೇಶಿಸಿದರು. ಅವರು ಯೂಸುಫ್‌ರ(ಅ) 
ಬಳಿಗೆ ತಲಪಿದಾಗ ಅವರು ತಮ್ಮ ನೇರ ಸಹೋದರನಾದ ಬಿನ್‌ಯಮೂನ್‌ನನ್ನು ಹತ್ತಿರ 
ಕರೆದು, 'ನೋಡು, ನಾನು ನಿನ್ನ ಸಹೋದರ ಯೂಸುಫ್‌(ಅ) ಆಗಿದ್ದೇನೆ. ಇನ್ನು ನೀನು 
"ನಿನ್ನ ಸಹೋದರರ ಕಿರುಕುಳದ ಬಗ್ಗೆ ಬೇಸರಗೊಳ್ಳಬೇಡ' ಎಂದು ಹೇಳಿದರು. 

ವ್ಯಾಖ್ಯಾನ ಗ್ರಂಥಗಳಲ್ಲಿ ಬಂದಿರುವ ಪ್ರಕಾರ, ಯೂಸುಫ್‌ರು(ಅ) ಬಿನ್‌ಯವೂನ್‌ನನ್ನು 
ಏಕಾಂತದಲ್ಲಿ: ಕರೆದು ಅವನ ಹೆಸರು ಕೇಳಿದರು. ಅವನ ತಾಯಿಯ ಹೆಸರು ಕೇಳಿದರು. 
ಅವನ, ಮನೆಯ ಸ್ಥಿತಿಗತಿಗಳನ್ನೆಲ್ಲ ಕೇಳಿ ತಿಳಿದುಕೊಂಡರು. ಅವನಿಗೆ ಓರ್ವ ನೇರ 
ಸಹೋದರನಿದ್ದನೆಂದೂ ಅವನನ್ನು ತೋಳ ತಿಂದು ಬಿಟ್ಟಿತ್ತೆಂದೂ ಅವನಿಂದ ತಿಳಿದುಕೊಂಡರು. 
ತರುವಾಯ ಯೂಸುಫ್‌ರು(ಅ) ಅವನೊಡನೆ ನಿನ್ನ ಆ ಅಗಲಿದ ಸಹೋದರನ ಬದಲಿಗೆ 
ನಾನೇ ನಿನ್ನ ಸಹೋದರನಾದರೆ ಹೇಗೆ, ನಿನಗೆ ಇಷ್ಟವಾ ಎಂದು ಕೇಳಿದರು. ಆಗ ಆತ 


52 ಪ್ರವಾದಿ ಯೂಸುಫ್‌(ಅ) 


ಅಯ್ಯ್ಕುಹಲ್‌ ಮಲಿಕ್‌(ಓ ರಾಜಾ) ಎಂದು ಅಭಿಸಂಬೋಧಿಸಿಕೊಂಡು, 'ನಿಮ್ಮಂತಹ 
ಸಹೋದರ ಯಾರಿಗೆ ಸಿಕ್ಕಿಯಾರು? ಆದರೆ ನೀವು ಯಲ್‌ಕೂಬ್‌(ಅ) ಮತ್ತು 
ರಾಹೀಲಾರ(ತಾಯಿಯ ಹೆಸರು) ಮಗನಲ್ಲವಲ್ಲ' ಎಂದು ಉತ್ತರಿಸಿದರು." ಇದನ್ನು ಕೇಳಿದ 
ಯೂಸುಫ್‌ರ(ಅ) ದುಃಖದ ಕಟ್ಟೆಯೊಡೆಯಿತು. ಅವರು ಸಹೋದರನನ್ನು ಅಪ್ಪಿ ಹಿಡಿದು 
ಅತ್ತೇಬಿಟ್ಟರು. ಅನಂತರ, ಸತ್ತು ಹೋಗಿರುವನೆಂದು ನೀನು ಭಾವಿಸಿರುವ ಆ ನಿನ್ನ 
ಸಹೋದರ ನಾನೇ ಆಗಿದ್ದೇನೆ ಎಂದು ಹೇಳಿದರು. ಅದು ಎಂತಹ ಭಾವಪೂರ್ಣ 
ಸನ್ನಿವೇಶವಾಗಿರಬಹುದು! ಈ ರಹಸ್ಯವನ್ನು ಮಲ ಸಹೋದರರಿಗೆ ಬಹಿರಂಗ ಪಡಿಸಬಾರದೆಂಬ 
ತೀರ್ಮಾನವನ್ನೂ ಆ ಭೇಟಿಯಲ್ಲಿ ಕೈಗೊಂಡರು. ಯೂಸುಫ್‌ರು(ಅ) ತಮ್ಮ ಸಹೋದರನನ್ನು 
ತಮ್ಮ ಬಳಿಯಲ್ಲೇ ಇರಿಸಲಿಕ್ಕಾಗಿ ಅಳತೆಯ ಪಾತ್ರೆಯನ್ನು ಅವನ ಸರಕಿನ ಜೊತೆಯಲ್ಲಿರಿಸಿದ್ದರು. 
ಈ ವಿಷಯವನ್ನು ಆತನಿಗೆ ಮೊದಲೇ ತಿಳಿಸಲಾಗಿತ್ತೆಂದು ಸ್ಥಿತಿಗತಿಗಳಿಂದ ಅಂದಾಜಿಸಬಹುದು. 
ಬಿನ್‌ಯಮೂನ್‌ ತನ್ನ ಮಲ ಸಹೋದರರ ಜೊತೆಯಲ್ಲಿ ಹೋಗಲು ಸಿದ್ಧನಿರಲಿಲ್ಲ; 
ಆದ್ದರಿಂದ ಇಂತಹ ಒಂದು ನಾಟಕವಾಡಲು ಅವನೇ ಯೂಸುಫ್‌ರನ್ನು ಒತ್ತಾಯಿಸಿರಬೇಕೆಂದು ' 
ವ್ಯಾಖ್ಯಾನಕಾರರು ಅಭಿಪ್ರಾಯಪಡುತ್ತಾರೆ. i 


ತಡೆದಿರಿಸಿರುವುದರ ಯುಕ್ತಿ 

' ಯೂಸುಫ್‌ರ(ಅ) ಸಹೋದರರು. ಆಹಾರಧಾನ್ಯದೊಂದಿಗೆ ಹೊರಡಲು ಸಿದ್ಧತೆ 
ನಡೆಸುತ್ತಿದ್ದಾಗ ಯೂಸುಫ್‌ರು(ಅ) ಯಾರೂ ಗಮನಿಸದಂತೆ ಆ ಪಾತ್ರೆಯನ್ನು ಬಿನ್‌ಯಮೂನ್‌ನ 
ಸರಕಿನಲ್ಲಿಟ್ಟು ಬಿಟ್ಟರು. ಈ ವಿಷಯ ಅಲ್ಲಿ ಕೆಲಸ ಮಾಡುತ್ತಿದ್ದ ಆಸ್ಥಾನದ ಸಿಬ್ಬಂದಿಗಳಿಗೂ 
ತಿಳಿದಿರಲಿಲ್ಲ. ತಂಡ ಹೋದಬಳಿಕ ರಾಜನ ಪಾತ್ರೆ ಕಾಣೆಯಾಗಿರುವುದು ಸಿಬ್ಬಂದಿಗಳ 
ಗಮನಕ್ಕೆ ಬಂತು. ಅವರ ಬಳಿಯಲ್ಲಿ ಯೂಸುಫ್‌ರ(ಅ) ಸಹೋದರರೇ ಇದ್ದುದರಿಂದ, 
ಅವರೇ ಪಾತ್ರೆಯನ್ನು ಕೊಂಡು ಹೋಗಿರಬಹುದೆಂದು ಊಹಿಸಿಕೊಂಡರು. ಅವರು ಹೆಚ್ಚು 
ದೂರವೇನೂ ಸಾಗಿರಲಿಲ್ಲ. ಆಸ್ಥಾನ ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿಕೊಂಡು ಕೂಗಿ 
ಕರೆಯುತ್ತಾ ಅವರನ್ನು ಸುತ್ತುವರಿದರು. ಮಾತ್ರವಲ್ಲ, ಅವರ ಮೇಲೆ ಕಳ್ಳತನ ಮಾಡಿದ 
ಆಪಾದನೆ ಹೊರಿಸಿದರು. ಆದರೆ ಅವರು ಅದನ್ನು ಖಡಾ ಖಂಡಿತವಾಗಿ ನಿರಾಕರಿಸಿಬಿಟ್ಟರು. 
ಆಗ ಸಿಬ್ಬಂದಿಗಳು, ಒಂದು ವೇಳೆ ನಾವು ನಿಮ್ಮ ಸರಕಿನಲ್ಲಿ ಹುಡುಕಾಡಿ ಪಾತ್ರೆಯನ್ನು 
ಪತ್ತೆಹಚ್ಚಿದರೆ, ಆಗ ಕಳ್ಳನಿಗೆ ಯಾವ ಶಿಕ್ಷೆ ವಿಧಿಸಬೇಕೆಂದು ಕೇಳಿದರು. ಯಾರ ಸರಕಿನಲ್ಲಿ 
ಅದು ಸಿಗುವುದೋ ಅವನೇ ಅದರ ದಂಡವಾಗಿದ್ದಾನೆಂದು ಸಹೋದರರು ಉತ್ತರಿಸಿದರು. 
ಅಂದರೆ ಅವನನ್ನು ಗುಲಾಮನಾಗಿ ಮಾಡಿ ತಡೆದಿರಿಸಬಹುದು ಎಂಬುದು ಅವರ ಮಾತಿನ 
ಅರ್ಥವಾಗಿತ್ತು. ಇಬ್‌ರಾಹೀಮರ(ಅ) ಧರ್ಮಶಾಸ್ತ್ರ(ಶರೀಅತ್‌)ದ ಪ್ರಕಾರ, ಕಳ್ಳನನ್ನು ಸರಕಿನ 
ಮಾಲಕನ ಗುಲಾಮನಾಗಿ ಮಾಡುವುದೇ ಅವನ ಶಿಕ್ಸೆಯಾಗಿತ್ತು. ತರುವಾಯ ಸಿಬ್ಬಂದಿಗಳು 
ಹುಡುಕಾಟ ಆರಂಭಿಸಿದರು. ಒಂದರ ಹಿಂದೆ ಒಂದರಂತೆ ಎಲ್ಲ ಹತ್ತು ಮಂದಿ ಸಹೋದರರ 


ಪ್ರವಾದಿ.ಯೂಪುಫ್‌(ಆ) 53 


ಸರಕುಗಳನ್ನು ತಪಾಸಣೆ ಮಾಡಲಾಯಿತು. ಯಾವುದರಲ್ಲೂ ಆ ಪಾತ್ರೆ ಸಿಗಲಿಲ್ಲ. ಕಟ್ಟಕಡೆಗೆ 
ಬಿನ್‌ಯಮೂನ್‌ನ ಸರಕನ್ನು ಶೋಧಿಸಿದಾಗ ಅದು ಅವರಿಗೆ ಸಿಕ್ಕಿತು. 

ಯೂಸುಫ್‌(ಅ) ಅಧ್ಯಾಯದ 70ನೆಯ ಸೂಕ್ತದಲ್ಲಿ ಬಂದಿರುವ ಅಸ್ಸಿಕಾಯಃ ಎಂಬ 
ಪದವನ್ನು ಸಾಮಾನ್ಯವಾಗಿ ವ್ಯಾಖ್ಯಾನಕಾರರು ಸುವಾಲ್‌ ಅಥವಾ ಸಾಲ್‌ ಎಂದು 
ಅರ್ಥೈಸಿದ್ದಾರೆ. ಧಾನ್ಯ ಅಳತೆ ಮಾಡುವ ಪಾತ್ರೆ ಎಂದರ್ಥ. 

ಸೂಚಿತ. ಶಿಕ್ಷೆಯ ಪ್ರಕಾರ, ಬಿನ್‌ಯಮೂನ್‌ನನ್ನು ಯಾಸ್‌) ಬಳಿಗೆ 
ಕಳಿಸಲಾಯಿತು.. ಸರಕಾರಿ ಸಿಬ್ಬಂದಿಗಳ ಮೆದುಳಲ್ಲಿ ಅಲ್ಲಾಹನೇ ವಿಷಯ ಹಾಕಿದನು. 
ಯೂಸುಫ್‌ರ(ಅ) ಸಹೋದರರೊಂದಿಗೆ ಅವರಾಗಿಯೇ ಕಳ್ಳನಿಗೆ ಶಿಕ್ಷೆಯೇನಾಗಬೇಕೆಂದು 
ಕೇಳಿದರು. .ಸಹೋದರರು. ಅದಕ್ಕೆ ಇಬ್‌ರಾಹೀಮರ(ಅ) ಶರೀಅತ್‌ನಲ್ಲಿದ್ದ ಶಿಕ್ಷೆಯನ್ನು 
ಸೂಚಿಸಿದ್ದರು. ಈ. ರೀತಿ ಮೂರು ಪ್ರಯೋಜನಗಳಾದುವು. ಒಂದನೆಯದಾಗಿ, 
ಯೂಸುಫ್‌ರಿಗೆ(ಅ) ತಮ್ಮ -ವೈಯಕ್ತಿಕ ಪ್ರಕರಣದಲ್ಲಿ ಈಜಿಪ್ಟ್‌ನ ಪ್ರಚಲಿತ ದಂಡ 
ಸಂಹಿತೆಯ ಪ್ರಕಾರ ವರ್ತಿಸುವ ಅಗತ್ಯ ಬೀಳಲಿಲ್ಲ. 'ಎರಡನೆಯದಾಗಿ; ಈಜಿಪ್ಟ್‌ನಲ್ಲಿ 
ಇಬ್‌ರಾಹೀಮರ(ಅ) ಶರೀಅತ್‌ನಲ್ಲಿ ಕಳ್ಳನಿಗೆ ಯಾವ ಶಿಕ್ಲೆ ವಿಧಿಸಲಾಗುತ್ತಿತ್ತೆಂದು 
ತಿಳಿಯಿತು. ಮೂರನೆಯದಾಗಿ, ಬಿನ್‌ಯಮೂನ್‌ಗೆ ಬೇರೇನಾದರೂ ವಿಧಿಸಿರೆಂದು' ಹೇಳುವ 
ಸ್ಥಿತಿಯಲ್ಲಿ ಅವರ ಸಹೋದರರಿರಲಿಲ್ಲ. ಏಕೆಂದರೆ ತಮ್ಮ ವಾಗ್ದಾನಕ್ಕೆ ಅವರು ಬದ್ಧರಾಗಿದ್ದರು. 

ಈ ಪ್ರಕರಣದ ಇನ್ನೊಂದು ಮುಖವೂ ಇದೆ. ಇಂತಹ ಸಂದರ್ಭದಲ್ಲೂ ಅಸೂಯೆ 
'ಮತ್ತು ಚಾರಿತ್ರ್ಯ ಹೀನತೆಯು ಯೂಸುಫ್‌ರ(ಅ) ಸಹೋದರರ ಬೆನ್ನು ಬಿಡಲಿಲ್ಲ. ಅವರು 
ತಮ್ಮ ನಿರಪರಾಧಿತ್ವವನ್ನು ಸಾಬೀತು ಪಡಿಸಲಿಕ್ಕಾಗಿ, 'ಇವನು ಕದ್ದರೇನಾಯಿತು, ಅದರಲ್ಲಿ 
ಆಶ್ಚರ್ಯವೇನೂ ಇಲ್ಲ. ಇವನಿಗಿಂತ ಮುಂಚೆ ಇವನ ಸಹೋದರನೂ ಕದ್ದಿದ್ದನು' ಎಂದು 
ಹೇಳಿಬಿಟ್ಟರು. ಇದು ಯೂಸುಫ್‌ರ(ಅ) ಮೇಲೆ ಅವರು ಹೊರಿಸಿದ ಅಪವಾದವಾಗಿತ್ತು. 
ಆದರೆ ಯೂಸುಫ್‌ರು(ಅ) ಬಹಳ ತಾಳ್ಮೆವಹಿಸಿದರು. ರಹಸ್ಯವನ್ನು ಬಯಲು: ಗೊಳಿಸಲಿಲ್ಲ. 
ಅವರು ತನ್ನಷ್ಟಕ್ಕೆ ತಾನೇ ಇಷ್ಟು ಮಾತ್ರ ಹೇಳಿದರು: 'ಅತಿ ಕೆಟ್ಟವರು ನೀವು. ನೀವು 
ಹೊರಿಸುತ್ತಿರುವ ದುರಾರೋಪದ ವಸ್ತುಸ್ಥಿತಿಯನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು.' 
ಸಹೋದರರ ಈ ಸುಳ್ಳಾರೋಪವೂ ಯೂಸುಫ್‌ರ(ಅ) ಸಹನೆಯ ಇನ್ನೊಂದು 
ಸತ್ವಪರೀಕ್ಷೆಯಾಗಿತ್ತು. 

ತರುವಾಯ ಯೂಸುಫ್‌ರ(ಅ) ಸಹೋದರರು ಅವರೊಡನೆ, ಬಿನ್‌ಯಮೂನ್‌ನ ತಂದೆ 
ತುಂಬಾ ಮುದಿಪ್ರಾಯಕ್ಕೆ ತಲಪಿದವರಾಗಿದ್ದಾರೆ, ಅವರು ಇವನ ಅಗಲಿಕೆಯನ್ನು ಸಹಿಸಲಾರರು. 
ಆದ್ದರಿಂದ ನಮ್ಮ ಪೈಕಿ ಯಾರನ್ನಾದರೂ ತಡೆದಿರಿಸಿಕೊಳ್ಳಿರಿ ಎಂದು ಅಂಗಲಾಚಿದರು. 
ಯೂಸುಫ್‌(ಅ) ಹೇಳಿದರು: 'ಹಾಗೆ ಮಾಡಿದರೆ ನಾವು ಅನ್ಯಾಯ ಮಾಡಿದಂತಾಗುವುದು. 
ಯಾರ ಸರಕಿನಲ್ಲಿ ನಮ್ಮ ಪಾತ್ರೆ ಸಿಕ್ಕಿದೆಯೋ ಅವನನ್ನೇ: ನಾವು ತಡೆದಿರಿಸುವೆವು.' 

ಅವರು ಹತಾಶರಾಗಿ ಪರಸ್ಪರ ಸಮಾಲೋಚನೆ ನಡೆಸಿದರು. ತರುವಾಯ ಅವರ ಪೈಕಿ 


54 ಪ್ರವಾದಿ ಯೂಸುಫ್‌(ಆ) 


ಹಿರಿಯ ಸಹೋದರ ಅಲ್ಲೇ ನಿಲ್ಲುವುದೆಂದೂ ಉಳಿದವರು ಮರಳಿಹೋಗಿ ತಂದೆ 

- ಯಲ್‌ಕೂಬರಿಗೆ(ಅ) ವಸ್ತುಸ್ಥಿತಿಯನ್ನು ತಿಳಿಸುವುದೆಂದೂ ತೀರ್ಮಾನಿಸಲಾಯಿತು. ಹಾಗೆ 
ಅವರು ಮರಳಿಹೋಗಿ ತಂದೆಗೆ ನಡೆದ ಘಟನೆಯನ್ನೆಲ್ಲಾ ಸಂಪೂರ್ಣವಾಗಿ ವಿವರಿಸಿದರು. 
ಅವರೊಳಗೆ ನಡೆದ ಮಾತುಕತೆಯನ್ನು ಕುರ್‌ಆನ್‌ ಹೀಗೆ ದಾಖರಿಸಿದೆ: 

"ತಾವು ನಾವಿದ್ದ ನಾಡಿನ ಜನರೊಡನೆಯೂ ನಾವು ಯಾವ ಯಾತ್ರಾ ತಂಡದೊಂದಿಗೆ 
ಬಂದಿದ್ದೇವೋ ಅವರೊಡನೆಯೂ ಕೇಳಿಕೊಳ್ಳಿರಿ. ನಾವು ಸಂಪೂರ್ಣ ಸತ್ಯವಾದಿಗಳು ಎಂದು 
ಹೇಳಿರಿ ಎಂದನು. ಈ ವೃತ್ತಾಂತವನ್ನು ಕೇಳಿ ತಂದೆಯು, 'ವಾಸ್ತವದಲ್ಲಿ ನಿಮ್ಮ ಬ್ರಷ್ಟಚಿತ್ತವು 
ನಿಮಗೆ ಇನ್ನೊಂದು ದೊಡ್ಡ ವಿಷಯವನ್ನು ಸುಲಭಗೊಳಿಸಿಬಿಟ್ಟಿತು. ಚಿಂತಿಲ್ಲ; ಇದನ್ನೂ 
ತಾಳಿಕೊಳ್ಳುವೆನು; ಚೆನ್ನಾಗಿ ತಾಳಿಕೊಳ್ಳುವೆನು. ಅಲ್ಲಾಹ್‌ ಅವರೆಲ್ಲರನ್ನೂ ತಂದು ನನ್ನೊಂದಿಗೆ 
ಸೇರಿಸಿಬಿಡಲೂ ಬಹುದು. ನಿಶ್ಚಯವಾಗಿಯೂ ಅಲ್ಲಾಹ್‌ ಸರ್ವಜನಾಗಿದ್ದು ಅವನ ಎಲ್ಲ 
ಕಾರ್ಯಗಳೂ ಯುಕ್ತಿಹೂರ್ಣವಾಗಿರುತ್ತವೆ' ಎಂದು ಹೇಳಿದರು. ಅನಂತರ 
ಅವರು(ಯಲ್‌ಕೂಬರು) ಅವರಿಂದ ಮುಖ ತಿರುಗಿಸಿ ಕುಳಿತರು ಮತ್ತು 'ಹಾ! ಯೂಸುಫ್‌(ಅ)!' 
ಎಂದು ಪ್ರಲಾಪಿಸತೊಡಗಿದರು. ಅವರು ಒಳಗಿಂದೊಳಗೆ ಶೋಕಾತಿರೇಕದಿಂದ ಏದುಸಿರು 
ಬಿಡುತ್ತಿದ್ದರು ಮತ್ತು ಅವರ ಕಣ್ಣುಗಳು ಬಿಳುಪೇರಿ ಬಿಟ್ಟಿದ್ದುವು. ಪುತ್ರರು ಹೇಳಿದರು, 
'ಅಲ್ಲಾಹನಾಣೆ! ಶಾವಂತು ಯೂಸುಫನನ್ನೇ ನೆನೆಸುತ್ತ ಅವನ ದುಃಖದಲ್ಲಿ ತಮ್ಮನ್ನು ತಾವೇ 
ಕರಗಿಸಿಬಿಡುವಿರಿ ಅಥವಾ ತಮ್ಮ ಜೀವನವನ್ನೇ ನಾಶಗೊಳಿಸಿಕೊಳ್ಳುವಿರಿ.' ಅವರು ಹೀಗೆ 
ಹೇಳಿದರು: ನಾನು ನನ್ನ ತಲ್ಲಣ ಮತ್ತು ದುಃಖದ ಮೊರೆಯನ್ನು ಅಲ್ಲಾಹನ ಹೊರತು 
ಇನ್ನಾರೊಡನೆಯೂ ಇಡುವುದಿಲ್ಲ. ಅಲ್ಲಾಹನನ್ನು ನಾನು ತಿಳಿದುಕೊಂಡಂತೆ ನೀವು ತಿಳಿದಿಲ್ಲ. 
ಓ ನನ್ನ: ಮಕ್ಕಳೇ, ನೀವು ಹೋಗಿ ಯೂಸುಫನನ್ನೂ(ಅ) ಅವನ ತಮ್ಮನನ್ನೂ ಪತ್ತೆಹಚ್ಚಿರಿ. 
ಅಲ್ಲಾಹನ ಅನುಗ್ರಹದಿಂದ ನಿರಾಶರಾಗಬೇಡಿರಿ. ಅವನ ಅನುಗ್ರಹದಿಂದ ಸತ್ಯನಿಷೇಧಿಗಳು 
ಮಾತ್ರ ನಿರಾಶರಾಗುತ್ತಾರೆ.'' (ಪವಿತ್ರ ಕುರ್‌ಆನ್‌,12: 82-87) 

ಈ ಸೂಕ್ತದಲ್ಲಿ ಯಲ್‌ಕೂಬರ(ಅ) ಸಹನೆ, ದೃಢ -ವಿಶ್ವಾಸ ಮತ್ತು ಜಾಣ್ಮೆ 
ಎಲ್ಲವನ್ನೂ ವಿವರಿಸಲಾಗಿದೆ. - 


ನೀವೇನಾ ಯೂಸುಫ್‌(ಅ)? 

ಯಲ್‌ಕೂಬರು(ಅ) ತಮ್ಮ ಪುತ್ರರೊಂದಿಗೆ, 'ನಿರಾಶರಾಗಬೇಡಿ, ಯೂಸುಫ್‌ನನ್ನೂ(ಅ) 
ಅವನ ಸಹೋದರನನ್ನೂ ಹುಡುಕಿರಿ' ಎಂದು ಆದೇಶಿಸಿದಾಗ ಅವರು ಮಗುದೊಮ್ಮೆ 
ಈಜಿಪ್ಟ್‌ಗೆ ಬಂದು ಯೂಸುಫ್‌ರ(ಅ) ಆಸ್ಥಾನದಲ್ಲಿ ಹಾಜರಾದರು. ಅವರು ಯೂಸುಫ್‌ರ(ಅ) 
ಮುಂದೆ ದೀನ ಭಾವದೊಂದಿಗೆ, 'ನಾವೂ ನಮ್ಮ ಮನೆ ಮಂದಿಯೂ ಬರಗಾಲದಿಂದಾಗಿ 
ಬಹಳ ಸಂಕಷ್ಟದಲ್ಲಿ ಸಿಲುಕಿದ್ದೇವೆ. ನಾವು ಸ್ವಲ್ಪ ಹಣ ತಂದಿದ್ದೇವೆ. ತಾವು ನಮಗೆ ಆದಷ್ಟು 
ಹೆಚ್ಚು ಆಹಾರಧಾನ್ಯ 'ನೀಡಿ ನಮ್ಮಮೇಲೆ ದಯೆ ತೋರಬೇಕು. ಅಲ್ಲಾಹನು ದಾನಿಗಳಿಗೆ 


ಪ್ರವಾದಿ ಯೂಸುಫ್‌(ಆ) 55 


ಪ್ರತಿಫಲ ನೀಡುವವನಾಗಿದ್ದಾನೆ" ಎಂದು ಗೋಗರೆದರು. ಅವರ ಈ ಕರುಣಾಜನಕ 
ಬಿನ್ನಹವನ್ನು ಕೇಳಿ. ಯೂಸುಫರು(ಅ) ತತ್ತರಿಸಿ ಹೋಗಿರಬಹುದು. ತನ್ನನ್ನು ತನ್ನ ಮಲ 
ಸಹೋದರರಿಗೆ ಪರಿಚಯ ಪಡಿಸಲು ಇದುವೇ ಸೂಕ್ತ ಸಮಯವೆಂದು ಅವರು ಭಾವಿಸಿದರು. 
ಆದ್ದರಿಂದ ಅವರು ಕೇಳಿದರು- "ನೀವು ಅಜ್ಞಾನದಿಂದಾಗಿ ಯೂಸುಫ್‌(ಅ) ಮತ್ತು ಅವನ 
ಸಹೋದರನೊಂದಿಗೆ ಹೇಗೆ ವರ್ತಿಸಿದಿರೆಂದು ನಿಮಗೆ ತಿಳಿದಿದೆಯೆ? (ಈ ಅನಿರೀಕ್ಷಿತ 
ಪ್ರಶ್ನೆಯಿಂದ ಅವರು ಬೆಚ್ಚಿಬಿದ್ದರು.) 'ಏನು? ನೀವೇನಾ ಯೂಸುಫ್‌(ಅ)?' ಎಂದವರು 
ಪ್ರಶ್ನಿಸಿದರು. '' (ಪವಿತ್ರ ಕುರ್‌ಆನ್‌, 12: 89-90) 

ಅವರ ಈ ಪ್ರಶ್ನೆ ಎಷ್ಟೊಂದು ಅಚ್ಚರಿದಾಯಕವಾಗಿತ್ತು. ಎಷ್ಟೊಂದು ಪಾಠ 
ಬೋಧಕವಾಗಿತ್ತು ಅವರ ಅಸೂಯೆಯ ಅಂತಿಮಗತಿ ಎಷ್ಟೊಂದು ಅಪಮಾನಕರವಾಗಿತ್ತು! 

ಯೂಸುಫ್‌ರೊಂದಿಗಿನ(ಅ) ಅವರ ಅಸೂಯೆಯು ಅವರಿಂದ ಏನೆಲ್ಲ ಮಾಡಿಸಲಿಲ್ಲ? 
ಆದರೆ ಅದೇ ಅಸೂಯೆಗೆ ಬಲಿಯಾದವನು ಇಂದು ಈಜಿಪ್ಟ್‌ ಸಾಮ್ರಾಜ್ಯದ ಅಧಿಕಾರ 
ಪೀಠದಲ್ಲಿ ವಿರಾಜಮಾನವಾಗಿದ್ದಾನೆ. ಈ ಮಂದಿ ಅವರ ಮುಂದೆ ಅತ್ಯಂತ ದೈನ್ಯತೆಯೊಂದಿಗೆ 
ಆಹಾರಧಾನ್ಮದ ಭಿಕ್ಸೆ ಬೇಡುತ್ತಿದ್ದಾರೆ. ಯೂಸುಫ್‌ರು ಅವರ ಪ್ರಶ್ನೆಗೆ ನೀಡಿದ ಉತ್ತರವು 
ಅವರ ಪ್ರವಾದಿತ್ವ ಪದವಿಗೆ ತಕ್ಕುದಾಗಿತ್ತು. 

"ಅವರು ಹೇಳಿದರು- ಹೌದು, ನಾನೇ ಯೂಸುಫ್‌(ಅ)! ಇವನು ನನ್ನ ತಮ್ಮ. 
ಅಲ್ಲಾಹನು ನಮ್ಮ ಮೇಲೆ ಅನುಗ್ರಹ ತೋರಿದ್ದಾನೆ. ವಾಸ್ತವದಲ್ಲಿ ಭಯಭಕ್ತಿಯೊಂದಿಗೂ 
ಸಹನೆಯೊಂದಿಗೂ ಕಾರ್ಯವೆಸಗಿದರೆ ಅಲ್ಲಾಹನ ಬಳಿ ಇಂತಹ ಸಜ್ಜನರ ಪ್ರತಿಫಲ 
ವ್ಯರ್ಥಗೊಳ್ಳುವುದಿಲ್ಲ.'' ಕ (ಪವಿತ್ರ ಕುರ್‌ಆನ್‌, 12:90) 

ಇಲ್ಲಿ ಯಾವುದೇ ಬೇಸರವಿಲ್ಲ, ಆಕ್ಷೇಪವಿಲ್ಲ, ಹೆಮ್ಮೆಯಿಲ್ಲ, ದರ್ಪವಿಲ್ಲ. 
ಪ್ರತಿಯೊಂದು ಕ್ಷಣದಲ್ಲೂ ಅಲ್ಲಾಹನ ಮತ್ತು ಅವನ ಅಪಾರ ಅನುಗ್ರಹ ಸ್ಮರಣೆಯೇ 
ತುಂಬಿದೆ! 

ಈಗ ಸಹೋದರರಿಗೂ ದೇವನ ನೆನಪಾಯಿತು. ಅವರು ಹೇಳಿದರು- 

''ಅಲ್ಲಾಹನಾಣೆ! ನಿಮಗೆ ಅಲ್ಲಾಹನು ನಮ್ಮ ಮೇಲೆ ಶ್ರೇಷ್ಠತೆ ದಯಪಾಲಿಸಿಬ್ದಾನೆ. 
ನಿಜಕ್ಕೂ ನಾವು ಅಪರಾಧಿಗಳಾಗಿದ್ದೆವು.'' (ಪವಿತ್ರ ಕುರ್‌ಆನ್‌, 12:91) 

"ಯೂಸುಫ್‌(ಅ) ಘೋಷಿಸಿ ಬಿಟ್ಟರು- ಇಂದು ನಿಮ್ಮ ಮೇಲೆ ಯಾವ 
ದೋಷಾರೋಪಣೆಯೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ರಮಿಸಲಿ. ಅವನು ಅತ್ಯಂತ 
ಕರುಣಾಳುವಾಗಿದ್ದಾನೆ" ' ' (ಪವಿತ್ರ ಕುರ್‌ಆನ್‌, 12:92) 


ಸೌಜನ್ಯದ ಅತ್ಯುನ್ನತ ಮಾದರಿ 


'ತಸ್ರೀಬ್‌' ಎಂಬುದು ವಿಶಾಲಾರ್ಥ ಹೊಂದಿದ ಪದವಾಗಿದೆ. ಅದರಲ್ಲಿ ಹಿಡಿಯುವುದು, 
ಆರೋಪಿಸುವುದು, ಗದರಿಸುವುದು ಮತ್ತು ನಿಂದಿಸುವುದೇ ಮೊದಲಾದ ಎಲ್ಲ ಅರ್ಥಗಳೂ 


ಬ ` ಪ್ರವಾದಿ ಯೂಸುಫ್‌(ಅ) 


ಸೇರಿವೆ. ಯುಸುಫ್‌ರ(ಲ) ಮಾತಿನ ಅರ್ಥ ನೀವು ಏನೆಲ್ಲ ಮಾಡಿದ್ದಿ ರೋ ಅವೆಲ್ಲವೂ 
ನಿಮ್ಮ ತಿಳಿಗೇಡಿತನದಿಂದಾಗಿತ್ತು. ಅದಕ್ಕಾಗಿ ಈಗ ನಿಮ್ಮನ್ನು ಹಿಡಿಯಲಾಗದು, ಅವಮಾನಕ್ಕೆ 
ಗುರಿಪಡಿಸಲಾಗದು, ನಿಂದಿಸಲಾಗದು. ನಿಮ್ಮ ಮೇಲೆ ಯಾವ ದೋಷಾರೋಪವೂ ಇಲ್ಲ. ನಾನು ` 
ನಿಮ್ಮನ್ನು ಸಂಪೂರ್ಣವಾಗಿ ಕ್ಸಮಿಸಿದ್ದೇನೆ. ಅಲ್ಲಾಹನೂ ನಿಮ್ಮನ್ನು ಕ್ಸಮಿಸಲಿ ಎಂದಾಗಿದೆ. 
ಪ್ರವಾದಿ ಮುಹಮ್ಮದ್‌(ಸ) ಕೂಡಾ ಇದೇ ಉತ್ತರವನ್ನು ಮಕ್ಕಾ -ವಿಜಯದ 
ಸಂದರ್ಭದಲ್ಲಿ ನೀಡಿದ್ದರು. ಅಂದು ಅಪರಾಧಿಗಳೂ ದೋಷಿಗಳೂ ಆಗಿದ್ದ ಕುರೈಶ್‌ 
ಸರದಾರರನ್ನು ಪ್ರವಾದಿವರ್ಯರ(ಅ) ಮುಂದೆ ಹಾಜರುಗೊಳಿಸಲಾದಾಗ, ಅವರೊಂದಿಗೆ 
ಪ್ರವಾದಿ(ಸ) ಕೇಳಿದರು. "ಇಂದು ನಾನು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಿದ್ದೇನೆಂದು 
ಭಾವಿಸುತ್ತಿದ್ದೀರಿ?" "ತಾವು ಉದಾರಿಯ ಪುತ್ರ ಉದಾರಿಯಾಗಿದ್ದೀರಿ, ತಮ್ಮಿಂದ ನಾವು 
` ಉತ್ತಮವಾದುದನ್ನೇ ನಿರೀಕ್ಷಿಸುತ್ತಿದ್ದೇವೆ" ಎಂದು ಆ ಸರದಾರರು ಉತ್ತರಿಸಿದ್ದರು. 
ಪ್ರವಾದಿ(ಸ) ಆಗ ಹೇಳಿದ್ದರು- ಇಂದು ನಾನು ಯೂಸುಫ್‌(ಅ) ತಮ್ಮ ಸಹೋದರರೊಂದಿಗೆ 
ಹೇಳಿದ್ದುದನ್ನೇ ಹೇಳುತ್ತಿದ್ದೇನೆ. ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ. ಹೋಗಿರಿ, 
ನೀವೆಲ್ಲರೂ ಸ್ವತಂತ್ರರು. ಶಕ್ತಿ ಮತ್ತು ಅಧಿಕಾರ ಕೈಸೇರಿದ ಬಳಿಕ ಈ ರೀತಿಯ ಸಭ್ಯತನ 
` ಸಚ್ಚಾರಿತ್ರ್ಯ ಮತ್ತು ಸೌಜನ್ಯ ಪ್ರದರ್ಶನಕ್ಕೆ: ಬಹಳ ದೊಡ್ಡ ೆ ಮನಸ್ಸು ಬೇಕು. ಸಾಮಾನ್ಯ ನಿಂದ 
ಇದು ಸಾಧ್ಯವಿಲ್ಲ. 


ಯೂಸುಫ್‌ರ(ಅ) ಸುವಾಸನೆ 

ತಂದೆ ಯಲ್‌ಕೂಬರ(ಅ) ದೃಕ್‌ಶಕ್ತಿ ಹೋಗಿ ಬಿಟ್ಟಿದೆಯೆಂದು ಯೂಸುಫ್‌ರಿಗೆ(ಅ) 
ತಮ್ಮ ಸಹೋದರರಿಂದ ತಿಳಿಯಿತು. ತಮ್ಮ ಮಲ ಸಹೋದರರಿಗೆ ಕ್ಷಮೆಯನ್ನು ಘೋಷಿಸಿದ 
ಬಳಿಕ ಅವರು ಹೀಗೆ 'ಹೇಳಿದರು- 

''ಹೋಗಿರಿ, ನನ್ನ ಈ ಅಂಗಿಯನ್ನು ಕೊಂಡು ಹೋಗಿರಿ ಮತ್ತು ನನ್ನ ತಂದೆಯವರ 
ಮುಖದ ಮೇಲೆ ಹಾಕಿಬಿಡಿರಿ. ಅವರ ದೃಷ್ಟಿ ಮರಳಿ ಬರುವುದು ಮತ್ತು ನಿಮ್ಮ 
ಕುಟುಂಬದವರನ್ನೆಲ್ಲ ನನ್ನ ಬಳಿಗೆ ಕರೆತನ್ನಿರಿ ಎಂದರು." (ಪವಿತ್ರ ಕುರ್‌ಆನ್‌, 12:93) 

ಅವರ ತಂಡವು ಇನ್ನೂ ಈಜಿಪ್ಟ್‌ನಿಂದ' ಹೊರಟಿರಲಿಲ್ಲ. ನೂರಾರು ಮೈಲು ದೂರದ 
ಕನ್‌ಆನ್‌ನಲ್ಲಿ ಯಲ್‌ಕೂಬರಿಗೆ(ಅ) ಯೂಸುಫ್‌ರ(ಅ) ಸುವಾಸನೆ ಮೂಗಿಗೆ ಬಡಿಯ 
ತೊಡಗಿತು. ಅಲ್ಲಾಹನು ಆ ಅಂಗಿಯ ಸುವಾಸನೆಯನ್ನು ಯಲ್‌ಕೂಬರಿಗೆ(ಅ) ತಲಪಿಸುವಂತೆ 
ಗಾಳಿಗೆ ಆಜ್ಞಾಪಿಸಿದನು. ಇನ್ನೊಂದೆಡೆ ಯಲ್‌ಕೂಬರ(ಅ) ಮೂಗಿಗೆ ಆ ಸುಗಂಧವನ್ನು 
ದೂರದಿಂದಲೇ ಆಫ್ರಾಣಿಸುವಷ್ಟು ಶಕ್ತಿ ನೀಡಿದನು. ಬೇರಾರಿಗೂ ಅದರ ಅರಿವಾಗಲಿಲ್ಲ. 

“ಈ ಕಾರವಾನವು(ಈಜಿಷ್ಟ್‌ನಿಂದ ಹೊರಟಾಗ) ಅವರ ತಂದೆಯು(ಕನ್‌ಆನ್‌ನಲ್ಲಿ 
ಹೀಗೆ) ಹೇಳಿದರು: ನಾನು ಯೂಸುಫ್‌ನ(ಅ) ಸುವಾಸನೆಯನ್ನು ಪಡೆಯುತ್ತಿದ್ದೇನೆ. ನೀವು 
`ನನಗೆ ಮುದಿಭ್ರಾ ೦ತಿಯುಂಟಾಗಿದೆ ಎಂದೇನೂ ಹೇಳಬೇಡಿರಿ. "(ಪವಿತ್ರ ಕುರ್‌ಆನ್‌, 12:94) 


"ಪ್ರವಾದಿ: ಯೂಸುಫ್‌(ಆ) ` 57 


ಯೂಸುಫ್‌(ಅ) ಅನೇಕ ವರ್ಷಗಳ ಕಾಲ ಈಜಿಪ್ಟ್‌ನಲ್ಲಿದ್ದರು. ಆದರೆ ಎಂದೂ 
ಯಲ್‌ಕೂಬರನ್ನು(ಅ) ಅವರ ಸುವಾಸನೆ ಕಾಡಲಿಲ್ಲ. ಅವರು ಈಜಿಪ್ಟ್‌ನಲ್ಲಿದ್ದಾರೆಂದೂ 
ತಿಳಿಯಲಿಲ್ಲ. ಪ್ರವಾದಿಗಳ ಮುಲ್‌ಜಿರುತ್‌ಗಳಾಗಲಿ ಔಲಿಯಾಗಳ ಕರಾಮತ್‌ಗಳಾಗಲಿ- 
ಎಲ್ಲವೂ ಅಲ್ಲಾಹನ ಇಚ್ಛೆ ಮತ್ತು ಸೂಚನೆಯನ್ನು ಅವಲಂಬಿಸಿದೆಯೆಂದು ಇದರಿಂದ ತಿಳಿದು 
ಬರುತ್ತದೆ. 


ರೂ 


ಮನೆಯವರಿಗೆ ಇನ್ನೂ ನಂಬಿಕೆ ಬರಲಿಲ್ಲ 
ಯಲ್‌ಕೂಬರು(ಅ) ವ್ಯಕ್ತಪಡಿಸಿದ ಅಭಿಪ್ರಾಯ ಸರಿಯೇ ಆಗಿತ್ತು. ಆದರೆ ಅವರ 
ಮನೆಯವರಿಗೆ ಅವರ ಮಾತಿನ ಮೇಲೆ ನಂಬಿಕೆ ಹುಟ್ಟಿಲಿಲ್ಲ. ಕುರ್‌ಆನ್‌ ಹೇಳುತ್ತದೆ: 
"ಆಗ ಮನೆಯವರು, 'ಅಲ್ಲಾಹನಾಣೆ! ನೀವಿನ್ನೂ ಅದೇ ಹಳೆಯ ಭ್ರಮೆಯಲ್ಲೇ 
ಬಿದ್ದಿರುವಿರಿ' ಎಂದರು." (ಪವಿತ್ರ ಕುರ್‌ಆನ್‌, 12:95) 
ಇದರಿಂದ, ಯಜ್‌ಕೂಬರ(ಅ) ಸ್ಥಾನಮಾನವನ್ನು ಅರಿತವರು ಆ ಇಡೀ ಕುಟುಂಬದಲ್ಲಿ 
ಯಾರೂ ಇರಲಿಲ್ಲ. ಆದ್ದರಿಂದಲೇ ಅವರಿಗೆ ಯೂಸುಫ್‌ರ ಮೇಲೆ ವಿಶೇಷ ಪ್ರೀತಿಯಿತ್ತೆಂದು 
ತಿಳಿದು ಬರುತ್ತದೆ. ಅವರು ಮನೆಯ ಶೋಭೆಯಾಗಿದ್ದರು. ಅವರಿಂದಲೇ ಯಆ್‌ಕೂಬರು 
`` ಶುಭ ನಿರೀಕ್ಷೆಗಳನ್ನಿರಿಸಿ ಕೊಂಡಿದ್ದರು. ಯೂಸುಫ್‌ರು(ಅ) ಎಲ್ಲೂ ಕಾಣೆಯಾಗಿಲ್ಲ. ಅವರ 
ಅಸ್ತಿತ್ವವೇನೂ ಅಳಿದು ಹೋಗಿಲ್ಲವೆಂಬ ಬಗ್ಗೆ ಅವರಿಗೆ' ದೃಢವಾದ ನಂಬಿಕೆಯಿತ್ತು. ಆದರೆ 
ಅವರು ಎಲ್ಲಿದ್ದಾರೆ, ಯಾವಾಗ ಅವರ ಭೇಟಿಯಾಗಬಹುದು ಎಂಬುದು ಅವರಿಗೆ 
ತಿಳಿದಿರಲಿಲ್ಲ. ಯಲ್‌ಕೂಬರು(ಅ) ಯಾವ ಪರಿಸರದಲ್ಲಿ ಬದುಕು ಸಾಗಿಸುತ್ತಿದ್ದರೋ 
ಅದರಲ್ಲಿ ಯೂಸುಫ್‌ರ(ಅ) ನಾಪತ್ತೆಯು ಒಂದು ವಿಷಯವೇ ಆಗಿರಲಿಲ್ಲ. ಅದೊಂದು 
ಹೃದಯ ಬೇಗುದಿಯಾಗಿತ್ತು. ಅವರು ಒಳಗೊಳಗೇ ಕರಗುತ್ತಿದ್ದರು. ಇದು ಅವರ 
ದೃಷ್ಟಿಯನ್ನು ಕಳಕೊಳ್ಳುವಂತೆ ಮಾಡಿತ್ತು. ಆದರೆ ಅವರ ಹಿತಚಿಂತಕರಾಗಿ ಅಲ್ಲಿ ಯಾರೂ 
ಇರಲಿಲ್ಲ. ಅಲ್ಲಾಹನ ದಾಸರ ಪೈಕಿ ಎಷ್ಟೋ ಮಂದಿ ಸಜ್ಜನರು ಇಂತಹದೇ ಸಂಕಷ್ಟಮಯ 
ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದ್ದಾರೆಂಬುದಕ್ಕೆ ಇತಿಹಾಸದಲ್ಲಿ ಅನೇಕ ಸಾಕ್ಸ್ಯ್ಯಗಳಿವೆ. 


ದೃಷ್ಟಿ ಮರಳಿ ಬಂತು 
ಯಲ್‌ಕೂಬರು(ಅ) ಯಾವುದನ್ನು ಗ್ರಹಿಸಿದ್ದರೋ ಕೊನೆಗೆ ಅದುವೇ ಸಂಭವಿಸಿತು. 
"ತರುವಾಯ ಸುವಾರ್ತೆ ತರುವವನು ಬಂದಾಗ ಅವನು ಯೂಸುಘ್‌ರ(ಅ) ಅಂಗಿಯನ್ನು 
ಯಲ್‌ಕೂಬರ(ಅ) ಮುಖದ ಮೇಲೆ ಹಾಕಿದನು ಮತ್ತು ಒಮ್ಮೆಲೆ ಅವರ ದೃಷ್ಟಿ ಮರಳಿ 
ಬಂತು. ಆಗ ಅವರು ಹೇಳಿದರು- ನಾನು ಅಲ್ಲಾಹನ ಕಡೆಯಿಂದ ನಿಮಗೆ ತಿಳಿಯದುದನ್ನು 
ತಿಳಿಯುತ್ತೇನೆಂದು ಮೊದಲೇ ಹೇಳುತ್ತಿರಲಿಲ್ಲವೆ?' (ಪವಿತ್ರ ಕುರ್‌ಆನ್‌, 12:96) 
ವ್ಯಾಖ್ಯಾನಕಾರರ ಪ್ರಕಾರ, ಯೂಸುಫ್‌ರ(ಅ) ಅಂಗಿಯೇ ಅವರನ್ನು ದುಃಖ ಸಾಗರದಲ್ಲಿ 


58 | ಪ್ರವಾದಿ ಯೂಸುಫ್‌(ಅ) 


ಮುಳುಗಿಸಿತ್ತು. ಈಗ ಅದೇ ಅಂಗಿಯು ಅವರನ್ನು ಸಂತೋಷಗೊಳಿಸುತ್ತಿದೆ. ಯೂಸುಫ್‌ರ(ಅ) 
ರಕ್ತಸಿಕ್ತ ಅಂಗಿಯನ್ನು ಅಂದು ಯಾವ ಪುತ್ರನು ಯಲ್‌ಕೂಬರಿಗೆ(ಅ) ತೋರಿಸಿದ್ದನೋ 
ಇಂದು ಅದೇ ಪುತ್ರನು ಅವರ ಸುಗಂಧಭರಿತ ಅಂಗಿಯನ್ನು ತಂದಿದ್ದನು. 
ವ್ಯಾಖ್ಯಾನಕಾರರು ಹೀಗೂ ಬರೆಯುತ್ತಾರೆ: ಯಲ್‌ಕೂಬರು ಶುಭವಾರ್ತೆ ತಂದವನೊಡನೆ, 
ನೀವು ಯೂಸುಫ್‌ನನ್ನು(ಅ) ಯಾವ ಸ್ಥಿತಿಯಲ್ಲಿ ಕಂಡಿದ್ದೀರಿ ಎಂದು ವಿಚಾರಿಸಿದಾಗ ಅವನು 
ಯೂಸುಫ್‌(ಅ) ಈಜಿಪ್ಟ್‌ನ ರಾಜನಾಗಿದ್ದಾನೆಂದು ತಿಳಿಸಿದನು. ಆಗ ಅವರು, ಅವೆಲ್ಲ 
ನನಗೇಕೆ? ಅವನು ಯಾವ ಧರ್ಮವನ್ನು ಅವಲಂಬಿಸಿ ನಡೆಯುತ್ತಿದ್ದಾನೆಂದು ಹೇಳು 
ಎಂದರು. ಅವನ ಧರ್ಮ ಮತ್ತು ಜೀವನ ರೀತಿ ಇಸ್ಲಾಮ್‌ ಆಗಿದೆಯೆಂದು ಅವನು 
. ಹೇಳಿದಾಗ ಅವರಿಗೆ ಸಮಾಧಾನವಾಯಿತು. "ಈಗ ಅನುಗ್ರಹ ಪೂರ್ಣಗೊಂಡಿತು. ಸಂತೋಷವೂ 
ಪೂರ್ತಿಯಾಯಿತು' ಎಂದು ಹೇಳಿದರು. 
ಮನೆಯವರ ತಪ್ಪೊಪ್ಪಿಗೆ 

ಈ ಸ್ಪಷ್ಟವಾದ ಪವಾಡವನ್ನು ಕಣ್ಣಾರೆ ಕಂಡ ಬಳಿಕ ಅವರಿಗೆ ತಮ್ಮ ತಪ್ಪನ್ನು 
ಒಪ್ಪಿಕೊಳ್ಳದೆ ನಿರ್ವಾಹವಿರಲಿಲ್ಲ. ಆದ್ದರಿಂದ, 

"ಅವರು ಹೇಳಿದರು: ಅಪ್ಪಾ, ತಾವು ನಮ್ಮ ಅಪರಾಧಗಳಿಗಾಗಿ ಕ್ಷಮೆ ಯಾಚಿಸಿರಿ. 
ನಿಜಕ್ಕೂ ನಾವು ಅಪರಾಧಿಗಳಾಗಿದ್ದೆವು. ಆಗ ಅವರು(ಯಲ್‌ಕೂಬ್‌) ಹೇಳಿದರು- ನಾನು 
ನನ್ನ ಪ್ರಭುವಿನೊಡನೆ ನಿಮ್ಮನ್ನು ಕ್ಪಮಿಸಲಿಕ್ಕಾಗಿ ಪ್ರಾರ್ಥಿಸುವೆನು. ಅವನು ಮಹಾ 
ಕ್ಸಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.'' (ಪವಿತ್ರ ಕುರ್‌ಆನ್‌, 12: 97-98) 

ಯಲ್‌ಕೂಬರು(ಅ) ತಮ್ಮ ವಾಗ್ದಾನವನ್ನು ಈಡೇರಿಸಿರಬಹುದು. ಆದರೆ ಕುರ್‌ಆನ್‌ 
ಅದನ್ನು ಪ್ರಸ್ತಾಪಿಸಲಿಲ್ಲ. 'ಅತ್ಯುತ್ತಮ ಸಹನೆ'ಗೆ ಅವರಿಗೆ ಈ ಲೋಕದಲ್ಲೇ ಪ್ರತಿಫಲ 
ಸಿಕ್ಕಿತು ದುಃಖದ ಛಾಯೆ ಸರಿಯಿತು. ಆನಂದದಾಯಕ ವಸಂತದ ಉದಯವಾಯಿತು. 


ಬನೀ ಇಸ್ರಾ ಈಲರು ಫೆಲೆಸ್ತೀನ್‌ನಿಂದ ಈಜಿಷ್ಟ್‌ಗೆ ಹೋದದ್ದು 

ಕುರ್‌ಆನಿನಲ್ಲಿ ಬನೀ ಇಸ್ರಾಈಲ್‌ರ ಪ್ರಯಾಣದ ವಿವರ, ಹೋದವರ ಸಂಖ್ಯೆ ಮತ್ತು 
ಅವರು ಈಜಿಪ್ಟ್‌ಗೆ ಪ್ರವೇಶಿಸಿದ ಕುರಿತು ಪ್ರಸ್ತಾಪವನ್ನು ಕೈಬಿಡಲಾಗಿದೆ. ಬೈಬಲ್‌, 
ತಲ್ಮೂದ್‌ ಮತ್ತು ಕುರ್‌ಆನ್‌ ವ್ಯಾಖ್ಯಾನ ಗ್ರಂಥಗಳಲ್ಲಿ ಅದರ ವಿವರ ಸಿಗುತ್ತದೆ. 
ವ್ಯಾಖ್ಯಾನ ಗ್ರಂಥಗಳ ಪ್ರಕಾರ ಯೂಸುಫ್‌ರು(ಅ) ತಮ್ಮ ಅಂಗಿಯನ್ನು ಮಾತ್ರ 
ಕಳುಹಿಸಿದ್ದಲ್ಲ. ಅದರೊಂದಿಗೆ ಅವರ ಇಡೀ ಪರಿವಾರವು ಈಜಿಪ್ಟ್‌ಗೆ ಬರಲು ಸುಲಭವಾಗುವಂತೆ 
ಅನೇಕ ಒಂಟೆಗಳನ್ನೂ ಪ್ರಯಾಣ ಸಾಮಗ್ರಿಗಳನ್ನೂ ಕಳಿಸಿದರು. 

ಬೈಬಲ್‌ನ ಆದಿಕಾಂಡದಲ್ಲಿ ಹೀಗಿದೆ- ಯೂಸುಫರು(ಆ) ಎಲ್ಲರನ್ನೂ ಈಜಿಪ್ಟ್‌ಗೆ 
ಕರೆಸಲು ಜಟಕಾಬಂಡಿ ಮತ್ತು ವಿವಿಧ ಸರಕು ಸರಂಜಾಮುಗಳನ್ನು ಹೊತ್ತ 20 ಕತ್ತೆಗಳನ್ನು 
ಕಳಿಸಿದ್ದರು (ಅಧ್ಯಾಯ 45, ಸೂಕ್ತ 23) ಈಜಿಪ್ಟ್‌ಗೆ ಹೋದವರ ಸಂಖ್ಯೆಯ ಕುರಿತು 


ಪ್ರವಾದಿ ಯೂಸುಫ್‌(ಆ) 59 


ವ್ಯಾಖ್ಯಾನಕಾರರ ಎರಡು ಹೇಳಿಕೆಗಳಿವೆ. ಎಲ್ಲರೂ ಸೇರಿ ಅವರು 72 ಮಂದಿಯಿದ್ದರೆಂಬುದು 
ಒಂದು ಅಭಿಪ್ರಾಯವಾದರೆ 93 ಮಂದಿಯಿದ್ದರೆಂದು ಇನ್ನೊಂದು ಅಭಿಪ್ರಾಯವಾಗಿದೆ. ಇಡೀ 
ಕುಟುಂಬದ ಸದಸ್ಯರು ಸೇರಿ ಒಟ್ಟು 67 ಮಂದಿಯಿದ್ದರೆಂದು ಬೈಬಲ್‌ ಹೇಳುತ್ತದೆ. ಅದರಲ್ಲಿ 
ಅವರಲ್ಲಿ ವಿವಾಹವಾಗಿ ಬಂದ ಹೆಣ್ಣುಮಕ್ಕಳ ಸಂಖ್ಯೆಯನ್ನು ಸೇರಿಸಲಾಗಿಲ್ಲ. ಕುರ್‌ಆನ್‌ 
ವ್ಯಾಖ್ಯಾನಕಾರರು ಅವರನ್ನೂ ಸೇರಿಸಿ ಸಂಖ್ಯೆ ಬರೆದಿರಬಹುದು. 

ಈ ಮಹಾತಂಡವು ಈಜಿಪ್ಟ್‌ನ ಹತ್ತಿರ ತಲಪಿದಾಗ ಯೂಸುಫ್‌ರು(ಅ) ಅವರನ್ನು 
ರಾಜ ವೈಭವದೊಂದಿಗೆ ಬರಮಾಡಿಕೊಂಡರು. ತಲ್ಮೂದ್‌ನ ಪ್ರಕಾರ, ಯಲ್‌ಕೂಬ್‌ರ(ಅ) 
ಆಗಮನದ ಸುದ್ದಿ ರಾಜಧಾನಿಗೆ ತಲಪಿದಾಗ ಯೂಸುಫ್‌ರು(ಅ), ಆಸ್ಥಾ ನದ ದೊಡ್ಡದೊಡ್ಡ 
ಅಧಿಕಾರಿಗಳು ಮತ್ತು ಸೇನಾ ನಾಯಕರ ಜೊತೆ ಅವರ ಸ್ವಾಗತಕ್ಕಾಗಿ ಹೊರಟರು. ಬಹಳ 
ರಾಜ ಮರ್ಯಾದೆಯೊಂದಿಗೆ ಅವರನ್ನು ನಗರಕ್ಕೆ ಕರೆತಂದರು. ಅಂದು ಇಡೀ ನಗರ 
ಉತ್ಸವದ ದಿನದಂತೆ ಕಂಗೊಳಿಸುತ್ತಿತ್ತು. ಸ್ತ್ರೀ-ಪುರುಷರು ಮತ್ತು ಮಕ್ಕಳೆನ್ನದೆ ಆಬಾಲ 
ವೃದ್ಧರೆಲ್ಲರೂ ಈ ಮೆರವಣಿಗೆಯನ್ನು ನೋಡಲು ಬಂದು ಸೇರಿದ್ದರು, ದೇಶವಿಡೀ 
ಸಂಭ್ರಮಗೊಂಡಿತು. (ತಪ್ಲೀಮುಲ್‌ ಕುರ್‌ಆನ್‌, ಭಾಗ-2) 


ರಾಜ ವೈಭವದ ಸ್ವಾಗತ 

ಯೂಸುಘ್‌ರು(ಅ) ತಮ್ಮ ತಂದೆಯ ಇಡೀ ಪರಿವಾರವನ್ನು ಈಜಿಪ್ಟ್‌ ದೇಶದ ಆಗಿನ 
ದಮ್ಮತ್‌ ಮತ್ತು ಕೈರೋಗಳ ನಡುವೆ ಇದ್ದ ಪ್ರದೇಶದಲ್ಲಿ ವಾಸ ಹೂಡಿಸಿದರು. 
ಬೈಬಲ್‌ನಲ್ಲಿ ಆ ಪ್ರದೇಶವನ್ನು ಜುಸನ್‌ ಅಥವಾ ಗೋಶನ್‌ ಎರದು ಕರೆಯಲಾಗಿದೆ. 
ಹ.ಮೂಸಾರ ಕಾಲದ ವರೆಗೂ ಅವರು ಅಲ್ಲೇ ನೆಲೆಸಿದ್ದರು. ಕುರ್‌ಆನಿನ ಸೂಚನೆಯ 
ಪ್ರಕಾರ, ಯೂಸುಫರು(೮) ಅವರನ್ನು ಪ್ರಥಮವಾಗಿ ಈಜಿಪ್ಟ್‌ನ ಗಡಿಯಲ್ಲಿ ಭೇಟಿಮಾಡಿ 
ಸ್ವಾಗತಿಸಿದ್ದರು. ಈ ಭೇಟಿಯು ಯಾವುದೋ ರಾಜಡೇರೆಯಲ್ಲಿ ನಡೆದಿರಬಹುದು. ಆ 
ಪ್ರಥಮ ಭೇಟಿಯ ಪ್ರಸ್ತಾಪವನ್ನು ಕುರ್‌ಆನ್‌ ಈ ರೀತಿ ಪ್ರಸ್ತಾಪಿಸುತ್ತದೆ: 

"ಅನಂತರ ಇವರು ಯೂಸುಫ್‌ರ(ಅ) ಬಳಿಗೆ ತಲಪಿದಾಗ ಅವರು ತಮ್ಮ 
ಮಾತಾಪಿತರನ್ನು ತನ್ನೊಂದಿಗೆ ಇರಿಸಿಕೊಂಡರು ಮತ್ತು (ತಮ್ಮ ಎಲ್ಲಾ ಕುಟುಂಬದವರೊಡನೆ) 
ನೀವೆಲ್ಲರೂ ನಗರದೊಳಕ್ಕೆ ಪ್ರವೇಶಿಸಿರಿ. ಅಲ್ಲಾಹನಿಚ್ಛಿಸಿದರೆ ಇಲ್ಲಿ ಶಾಂತಿ 
ಸಮಾಧಾನಗಳೊಂದಿಗೆ ವಾಸಿಸುವಿರಿ ಎಂದರು.'" ಪವಿತ್ರ ಕುರ್‌ಆನ್‌, 12:99) 

ವ್ಯಾಖ್ಕಾನಕಾರರ ಅಭಿಪ್ರಾಯದಲ್ಲೂ, ಈ ಭೇಟಿಯು ಯಾವುದೇ ಡೇರೆಯೊಳಗೆ 
ಅಥವಾ ಯೂಸುಫ್‌ರ(ಅ) ಗಡಿಯ ಯಾವುದೋ ಭವನದಲ್ಲಿ ನಡೆದಿರಬಹುದು. 
ಯೂಸುಫ್‌ರನ್ನು(ಅ) ಹೆತ್ತ ತಾಯಿ ಮರಣ ಹೊಂದಿದ್ದರು. ಅನಂತರ ಅವರ ತಂಗಿಯನ್ನೇ 
ಯಲ್‌ಕೂಬರು ಮದುವೆ ಆಗಿದ್ದರು. ಚಿಕ್ಕಮ್ಮ ತಾಯಿಗೆ ಸಮಾನರಾಗಿರುತ್ತಾರೆ. ಈಗಂತೂ 
ಅವರು ಮಲತಾಯಿಯೂ ಆದರು. ಆದ್ದರಿಂದಲೇ ಕುರ್‌ಆನಿನಲ್ಲಿ ಅವರನ್ನು ಅಬವೈಹಿ 
(ಅವರ ತಂದೆ-ತಾಯಿ) ಎಂದು ಹೇಳಲಾಗಿದೆ. 


60 ಪ್ರವಾದಿ ಯೂಸುಫ್‌(ಅ) 


ಸೂರ್ಯ, ಚಂದ್ರ, ನಕ್ಟತ್ರಗಳು ಬಾಗಿದುವು 

ಯೂಸುಫ್‌ರ(ಅ) ತಂದೆ-ತಾಯಿ ಮತ್ತು ಸಹೋದರರೆಲ್ಲರೂ ಗಡಿಯಿಂದ ಹೊರಟು 
ಆಸ್ಥಾನಕ್ಕೆ ತಲಪಿದರು. 

"ಅವರು ತಮ್ಮ ಮಾತಾಷಿತರನ್ನೆತ್ತಿ ತಮ್ಮ ಬಳಿ ಆಸನದಲ್ಲಿ ಕುಳ್ಳಿರಿಸಿಕೊಂಡರು 
ಮತ್ತು ಎಲ್ಲರೂ ಅವರ ಮುಂದೆ ಸುಜೂದ್‌ ಮಾಡಿದರು. ಆಗ ಯೂಸುಫ್‌(ಅ) 
ಇಂತೆಂದರು- ಅಷ್ಟಾ! ನಾನು ಹಿಂದೆ ಕಂಡಿದ್ದ ಸ್ವಷ್ನದ ಫಲ ಇದಾಗಿರುತ್ತದೆ. ನನ್ನ ಪ್ರಭು 
ಇದನ್ನು ಸತ್ಯ ಗೊಳಿಸಿಬಿಟ್ಟನು.” . ? (ಪವಿತ್ರ ಕುರ್‌ಆನ್‌, 12:100) 

ಈ ಭೇಟಿಯ ಸ್ವರೂಪವನ್ನು ಹೀಗೆ ಗ್ರಹಿಸಬಹುದು. ಮೊದಲು ಯೂಸುಫ್‌ರು(ಅ) 
ತಮ್ಮ ಆಸ್ಥಾನದಲ್ಲಿ ರಾಜಪೀಠದಲ್ಲಿ ಕುಳಿತಿರಬಹುದು.. ತರುವಾಯ ಅವರೆಲ್ಲರನ್ನೂ 
ಆಸ್ಥಾನಕ್ಕೆ ಕರೆಸಿರಬಹುದು. ಅವರೆಲ್ಲರೂ ಆಸ್ಥಾನಕ್ಕೆ ಬಂದಾಗ 'ಸುಜೂದ್‌' ಮಾಡಿರಬಹುದು. 
ಅನಂತರ ಅವರು ತಮ್ಮ ತಂದೆಯನ್ನು ಪೀಠದಲ್ಲಿ ಕುಳ್ಳಿರಿಸಿರಬಹುದು. ಇದು ಕತೆಯ 
ಆರಂಭದಲ್ಲಿ ವಿವರಿಸಿದಂತೆ, ಯೂಸುಫರು(ಅ) ತಮ್ಮ ಬಾಲ್ಕಕಾಲದಲ್ಲಿ ಕಂಡ ಕನಸಿನ 
ಫಲವಾಗಿತ್ತೆಂದು ಕುರ್‌ಆನ್‌ ಸ್ಪಷ್ಟವಾಗಿ ಹೇಳಿದೆ. ಈ ಸುಜೂದ್‌(ಸಾಷ್ಟಾಂಗ)ನ 
ಸ್ವರೂಪವೇನಾಗಿತ್ತು? ಅದು ಆರಾಧನೆಯ ಸಾಷ್ಟಾಂಗ ಖಂಡಿತ ಆಗಿರಲಿಲ್ಲ. ಏಕೆಂದರೆ 
ಅಲ್ಲಾಹನ ಹೊರತು ಇತರರನ್ನು ಆರಾಧಿಸುವ ರೂಪದ ಸಾಷ್ಟಾಂಗವು ಯಾವ ದೈವಿಕ 
ಧರ್ಮಶಾಸ್ತ್ರದಲ್ಲೂ ಧರ್ಮಸಮ್ಮತವಾಗಿರಲಿಲ್ಲ. ಹಾಗಾಗಲು ಸಾಧ್ಯವೂ ಇಲ್ಲ. ಈ 
ಸಾಷ್ಟಾಂಗದ ಕುರಿತು ವ್ಯಾಖ್ಯಾಕಾರರ ಎರಡು ಹೇಳಿಕೆಗಳು ಕಾಣಸಿಗುತ್ತವೆ. ಒಂದನೆಯ 
ಅಭಿಪ್ರಾಯ ಪ್ರಕಾರ, ಸುಜೂದ್‌ ಅಂದರೆ ಕೇವಲ ಬಾಗುವುದೇ ಹೊರತು ಹಣೆಯನ್ನು 
ನೆಲಕ್ಕೆ ತಾಗಿಸುವುದಲ್ಲ. ಅಂದರೆ ಅವರೆಲ್ಲರೂ ಗೌರವಾರ್ಥ ಯೂಸುಫ್‌ರ(ಅ) ಮುಂದೆ 
ನೆಲದ ಕಡೆಗೆ ಬಾಗಿದರು. ಎರಡನೆಯ ಅಭಿಪ್ರಾಯ ಪ್ರಕಾರ, ಅವರು ಗೌರವಾರ್ಥ ತಮ್ಮ 
ಹಣೆಯನ್ನು ನೆಲಕ್ಕೆ ತಾಗಿಸಿದರು. ಈ -ರೀತಿಯ ಗೌರವ ಸೂಚಕ ಸುಜೂದ್‌ ಹಿಂದಿನ ' 
ಧರ್ಮಶಾಸ್ತ್ರಗಳಲ್ಲಿ ಸಮ್ಮತವಾಗಿತ್ತು. ಆದರೆ ಮುಹಮ್ಮದೀಯ ಶರೀಲತ್‌ನಲ್ಲಿ ಅಂತಹ 
ಎಲ್ಲ ಬಗೆಯ ಸುಜೂದ್‌ಗಳನ್ನೂ ದೇವೇತರರಿಗೆ ಮಾಡುವುದನ್ನು ನಿಷೇಧಿಸಲಾಯಿತು. 
ಆದ್ದರಿಂದ ದೇವೇತರರಿಗೆ ಗೌರವ ಸೂಚಕ ಸುಜೂದ್‌ ಮಾಡುವುದೂ ನಿಷಿದ್ಧವಾಗಿದೆ. 
ಅಲ್ಲಾಮಾ ಸನಾವುಲ್ಲ ಪಾಣಿಪತಿಯವರು ಮೊದಲನೆಯ ವರ್ಗಕ್ಕೆ ಸೇರಿದವರಾಗಿದ್ದಾರೆ. 
ಅವರು ಹೀಗೆ ಬರೆಯುತ್ತಾರೆ: 

"ಇಲ್ಲಿ ಸುಜೂದ್‌ ಅಂದರೆ ಹಣೆಯನ್ನು ನೆಲಕ್ಕೆ ತಾಗಿಸುವುದಲ್ಲ. ಅದು ಕೇವಲ ` 
ಬಾಗುವುದು ಮತ್ತು ವಿನಯ ಶೀಲತೆಯನ್ನು ಪ್ರಕಟಿಸುವುದಾಗಿದೆ. ಅಂದರೆ ಅವರು 
ಬಾಗಿಕೊಂಡು ಯೂಸುಫ್‌ರಿಗೆ(ಅ) ಗೌರವ: ಸಲ್ಲಿಸಿದರು. (ತಪ್ಸೀರ್‌ ಮರು್‌ಹರಿ) . 

ಪ್ರಸ್ತುತ ಕುರ್‌ಆನ್‌ ಸೂಕ್ತದಲ್ಲಿ ಯೂಸುಫರು(ಅ) ಅಧಿಕಾರ ಪೀಠದಲ್ಲಿ 
ಕುಳಿತಿದ್ದರೆಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಅವರು ಈಜಿಪ್ಟ್‌ ಸಾಮ್ರಾಜ್ಯದ ಅಧಿಕಾರ 


£3 


ಪ್ರವಾದಿ `ಯೂಸುಫ್‌(ಆ) ©1861 


ಪೀಠದ ' ಶೋಭೆಯಾಗಿದ್ದರು . ಮತ್ತು -ದೇಶದ ಕಣಕಣವೂ ಅವರ ಇಷು 
ಆಡಳಿತದಿಂದ ಸಂತೃಪ್ತ, ವಾಗಿತ್ತೆಂಬುದೇ ವಾಸ್ತವ. 

ಪ್ರಸ್ತುತ ಸುಜೂದ್‌ ಯೂಸುಫ್‌ರಿಗೆ(ಅ) ಆಗಿರಲೇ ಇಲ್ಲ, ಅದು ಅಲ್ಲಾಹನಿಗಾಗಿತ್ತು' 
ಎಂಬ ಅಭಿಪ್ರಾಯವೂ ವ್ಯಾಖ್ಯಾನ ಗ್ರಂಥಗಳಲ್ಲಿದೆ. 'ವಖಿರ್ರೂಲಹೂ ಸುಜ್ಜದನ್‌'(ಎಲ್ಲರೂ 
ಅವನ ಮುಂದೆ ಸುಜೂದ್‌ ಮಾಡಿದರು) ಎಂಬ ವಾಕ್ಕದಲ್ಲಿ 'ಲಹೂ'(ಅವನಿಗೆ) ಎಂಬ 
ಪದವು 'ಅಲ್ಲಾಹನ ಕಡೆಗೆ' ಎಂಬರ್ಥ ನೀಡುತ್ತದೆಂದು ಅವರ: ಅಭಿಪ್ರಾಯ. ಇದಕ್ಕೆ 
ಏನಾದರೂ ಆಧಾರವಿರುತ್ತಿದ್ದರೆ ಇದುವೇ ಅತ್ಯುತ್ತಮ ಅಭಿಪ್ರಾಯವಾಗಿರುತ್ತಿತ್ತು. ಆದರೆ 
ಇದೊಂದು ನಿರಾಧಾರ ಅಭಿಪ್ರಾಯವಾಗಿದ್ದು ಕುರ್‌ಆನ್‌ ಸೂಕ್ತಗಳಿಂದ ಇದರ 
ನಿರಾಕರಣೆಯಾಗುತ್ತದೆ. ಯೂಸುಫ್‌ರ(ಅ) ಸ್ವಪ್ನಫಲದಿಂದ, ಕೆಲವೊಮ್ಮೆ ಒಂದು ಕನಸಿನ 
ಫಲ ಗೋಚರಿಸಲು ವರ್ಷಗಳೇ ಬೇಕಾಗುತ್ತದೆಂಬ ಸತ್ಯವೂ ಬಯಲಾಗುತ್ತದೆ. ಅವರು 
ಕನಸನ್ನು ಎಂದೋ ಕಂಡಿದ್ದರು. ಅದರ ಫಲ ಗೋಚರಿಸುವುದು 'ಯಾವಾಗಲೋ. ಈ ಮಧ್ಯೆ 
ಕನಿಷ್ಠ 20 ವರ್ಷಗಳಾದರೂ ದಾಟಿರಬಹುದು. 


ಪ್ರತಿಕ್ರಿಯೆ ಮತ್ತು :ಮನದಾಳದ ಪ್ರಾರ್ಥನೆ 
"ನನ್ನನ್ನು ಸೆರೆಮನೆಯಿಂದ ಬಿಡಿಸಿದುದೂ ತಮ್ಮನ್ನೆಲ್ಲ ಮರುಭೂಮಿಯಿಂದ ತಂದು 
ನನ್ನೊಂದಿಗೆ ಸೇರಿಸಿದುದೂ ಅವನ ಮಹದುಪಕಾರವಾಗಿದೆ. ವಸ್ತುತಃ ಶೈತಾನನು ನನ್ನ 
` ಮತ್ತು ನನ್ನ ಸಹೋದರರ ನಡುವೆ ಪಿತೂರಿಯನ್ನುಂಟು ಮಾಡಿ ಬಿಟ್ಟಿದ್ದನು. ವಾಸ್ತವದಲ್ಲಿ 
ನನ್ನ ಪ್ರಭು ಗ್ರಹಿಸಲಾಗದಂತಹ ಯುಕ್ತಿಗಳಿಂದ ತನ್ನ ವಿಧಿಯನ್ನು ಪೂರ್ತಿಔಕರಿಸುತ್ತಾನೆ. 
ನಿಶ್ಚಯವಾಗಿಯೂ ಅವನು ಸರ್ವಜ್ಜನೂ ಧೀಮಂತನೂ ಆಗಿರುತ್ತಾನೆ. ಓ ನನ್ನ ಪ್ರಭೂ! 
ನೀನು ನನಗೆ ಸಾಮ್ರಾಜ್ಯದ ಅಧಿಕಾರವನ್ನು ದಯಪಾಲಿಸಿದೆ. ವಿಷಯಗಳ ಆಳವನ್ನರಿಯಲು 
ಕಲಿಸಿಕೊಟ್ಟೆ. ಓ ಆಕಾಶಗಳ ಮತ್ತು ಭೂಮಿಯ ನಿರ್ಮಾಪಕಾ! ಇಹದಲ್ಲೂ ಪರದಲ್ಲೂ 
ನೀನೇ ನನ್ನ ರಕ್ಷಕ ಮಿತ್ರನು. ನನ್ನನ್ನು ಮುಸ್ಲಿಮನನ್ನಾಗಿ ಅಂತ್ಯಗೊಳಿಸು ಮತ್ತು 
ಅಂತಿಮವಾಗಿ ಸಜ್ಜನರೊಂದಿಗೆ ಸೇರಿಸು. (ಪವಿತ್ರ ಕುರ್‌ಆನ್‌, 12:100-101) 
ಈ ಪ್ರತಿಕ್ರಿಯೆಯಲ್ಲಿ ಎಂತಹ ದಾಸ್ಯ ಭಾವ, ಎಷ್ಟೊಂದು ಸಭ್ಯತನ ಮತ್ತು ಯಾವ 
ರೀತಿಯ ವಿನಯಶೀಲತೆಯಿದೆ. ಅವರ ಪ್ರಾರ್ಥನೆಯು ಬಾಣದಂತೆ ಹೃದಯದ ಆಳಕ್ಕೆ 
ಹೋಗುತ್ತದೆ. ಯೂಸುಫ್‌ರ(ಅ) ಸೌಂದರ್ಯವು ವಿಶ್ವ ವಿಖ್ಯಾತವಾಗಿದೆ. ಆದರೆ ಯೂಸುಫ್‌(ಅ) 
ಅಧ್ಯಾಯವು ಒಂದು ದರ್ಪಣವಾಗಿದೆ. ಅದರಲ್ಲಿ ಅವರ ಆಂತರಿಕ ಸೌಂದರ್ಯ ಮತ್ತು ಉನ್ನತ 
ಚಾರಿತ್ರ್ಯವು ಬಾಹ್ಮ ಸೌಂದರ್ಯಕ್ಕಿಂತ ಎಷ್ಟೋ ಮಿಗಿಲಾಗಿರುವುದನ್ನು ಸ್ಪಷ್ಟವಾಗಿ ನೋಡಬಹುದು. 


ಮದುವೆ ಮತ್ತು ಕುಟುಂಬ 


ಬೈಬಲ್‌ನ ಆದಿಕಾಂಡದ 41:45ರ ಪ್ರಕಾರ, ಫಿರ್‌ಔನನು ಸಸ) 
ವಿವಾಹವನ್ನು ಫೋತಿಫಾರನ ಪುತ್ರಿ ಆಶ್ನಾಥಳೊಡನೆ ನೆರವೇರಿಸಿಕೊಟ್ಟನು. ಆತ ಓರ್ವ 


62 ಪ್ರವಾದಿ ಯೂಸುಫ್‌(ಅ) 


ಧಾರ್ಮಿಕ ವ್ಯಕ್ತಿ ಅಥವಾ ರಾಜಕುಮಾರನಾಗಿದ್ದನೆಂದು ಬೈಬಲ್‌ನಿಂದಲೇ ತಿಳಿದು ಬರುತ್ತದೆ. 
ಯೂಸುಫ್‌ರೊಂದಿಗೆ(ಅ) ರುುಲೈಖಾಳ ವಿವಾಹ ನಡೆದಿತ್ತೆಂದು ಕೆಲವು ವ್ಯಾಖ್ಯಾನಕಾರರು 
ಬರೆದಿದ್ದಾರೆ. ಆದರೆ ಅದಕ್ಕೆ ಯಾವುದೇ ಐತಿಹಾಸಿಕ ಆಧಾರವಿಲ್ಲ. ಯಲ್‌ಕೂಬರು(ಅ) 
ಈಜಿಪ್ಟ್‌ಗೆ ಬಂದಾಗ ಯೂಸುಫ್‌ರಿಗೆ(ಅ) ಅನೇಕ ಮಕ್ಕಳಿದ್ದರು. ಅವರ ಕುಟುಂಬ 
ವರ್ಧಿಸುತ್ತಲೇ ಇತ್ತು. ಪ್ರವಾದಿ ಹ.ಯೂಶಲ್‌ ಬಿನ್‌ನೂನ್‌(ಅ) ಯೂಸುಫ್‌ರ(ಅ) 
ಕುಟುಂಬದವರೇ ಆಗಿದ್ದರೆಂಬ ಅಭಿಪ್ರಾಯವೂ ಇದೆ. 


ಯಲ್‌ಕೂಬರ(ಅ) ಮರಣ 


ಯಲ್‌ಕೂಬರು(ಅ) ಈಜಿಪ್ಟ್‌ಗೆ ಬಂದ ನಂತರವೂ ಸುಮಾರು 20ವರ್ಷಗಳ ಕಾಲ 
ಬದುಕಿದ್ದರು. ಮರಣಾಸನ್ನವಾದಾಗ ಅವರು ಯೂಸುಫ್‌ರನ್ನು(ಅ) ಕರೆದು, ತನ್ನ ಅಂತ್ಯಸಂಸ್ಕಾರ 
ಮತ್ತು ದಫನಕ್ರಿಯೆಯನ್ನು ಕನ್‌ಆನಿನಲ್ಲಿರುವ ತಮ್ಮ ಹಿರಿಯರ ಕಬರಸ್ಥಾನದಲ್ಲಿ ಮಾಡಬೇಕೆಂದು 
ಅಂತಿಮ ಉಪದೇಶ ಮಾಡಿದರು. ಬೈಬಲ್‌ನ ಆದಿಕಾಂಡದ 47ನೇ ಅಧ್ಯಾಯದಲ್ಲಿ, 
ಯಲ್‌ಕೂಬರು(ಅ) ಯೂಸುಫ್‌ರಿಂದ(ಅ), ತನ್ನನ್ನು ಈಜಿಪ್ಟ್‌ನಲ್ಲಿ ದಫನ ಮಾಡುವುದಿಲ್ಲ, 
ಕನ್‌ಆನ್‌ನಲ್ಲಿ ಮಾಡಲಾಗುವುದು ಎಂದು ಆಣೆ ಹಾಕಿಸಿ ವಾಗ್ದಾನ ಪಡೆದಿದ್ದರೆಂದು 
ಹೇಳಲಾಗಿದೆ. 50ನೆಯ ಅಧ್ಯಾಯದಲ್ಲಿ ದಫನ ಕ್ರಿಯೆಯ ವಿವರವಿದೆ. 


ಯೂಸುಫ್‌ರ(ಅ) ಆಡಳಿತ ಕಾಲ ಮತ್ತು ಮರಣ 

ಬೈಬಲ್‌ನ ಉಲ್ಲೇಖ ಪ್ರಕಾರ, ಯೂಸುಫ್‌ರು(ಅ) ಈಜಿಪ್ಟ್‌ನ ಆಡಳಿತವನ್ನು 
ವಹಿಸಿಕೊಂಡಾಗ ಅವರಿಗೆ 30 ವರ್ಷ ಪ್ರಾಯವಾಗಿತ್ತು. ಅವರು 110ನೆಯ ವರ್ಷದಲ್ಲಿ 
ಮರಣ ಹೊಂದಿದರು. ಈ ರೀತಿ 80ವರ್ಷಗಳ ಸುದೀರ್ಥು ಕಾಲ ಅವರು ಆಡಳಿತ 
ನಡೆಸಿದರು. ಅದು ಈಜಿಪ್ಟ್‌ ಸಾಮ್ರಾಜ್ಯದ ಸುವರ್ಣ ಯುಗವಾಗಿತ್ತು. ಮರಣಾಸನ್ನವಾದಾಗ, 
ಬನೀ ಇಸ್ರಾಈಲರು ಈಜಿಪ್ಟ್‌ನಿಂದ ಹೋಗುವಾಗ, ತನ್ನ ದೇಹದ ಎಲುಬು, ಮೂಳೆಗಳನ್ನು 
ತಮ್ಮೊಂದಿಗೆ ಒಯ್ಯಬೇಕೆಂದು ಅಂತ್ಕೋಪದೇಶ ಮಾಡಿದರು. ಈ ಅಂತ್ಕೋಪದೇಶ ಮತ್ತು 
ಅವರ ಜಡ ದೇಹವನ್ನು ಒಂದು ಪೆಟ್ಟಿಗೆಯಲ್ಲಿಡಲಾಗಿದೆಯೆಂಬ ಪ್ರಸ್ತಾಪವು ಬೈಬಲ್‌ನ 
ಆದಿಕಾಂಡದ 50ನೆಯ ಅಧ್ಯಾಯದಲ್ಲಿದೆ. ಮೂಸಾ(ಅ) ಬನೀ ಇಸ್ರಾಈಲರನ್ನು ಈಜಿಪ್ಟ್‌ನಿಂದ 
ವಿಮೋಚನೆಗೊಳಿಸಿ ಕೊಂಡೊಯ್ಯುವಾಗ ಆ ಪೆಟ್ಟಿಗೆಯನ್ನು ತಮ್ಮೊಂದಿಗೆ ಒಯ್ದಿದ್ದರೆಂದು 
ವ್ಯಾಖ್ಯಾನ ಗ್ರಂಥಗಳಲ್ಲಿವೆ. ನಿಜಸ್ಸಿತಿಯನ್ನು ಅಲ್ಲಾಹನೇ ಬಲ್ಲ! 


` ಯೂಸುಫ್‌ರ(ಅ) ಕತೆ ಹೇಳಿ ಮುಗಿಸಿದ ನಂತರ 
ಈ ಅತ್ಯುತ್ತಮ ಕತೆಯನ್ನು ಯೂಸುಫ್‌ರ(ಅ) ಅತ್ಯುತ್ತಮ ಪ್ರಾರ್ಥನೆಯೊಂದಿಗೆ 
ಕೊನೆಗೊಳಿಸಿದ ನಂತರ ಮುಂದೆ ಕೆಲವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲಾಗಿದೆ. 


ಪ್ರವಾದಿ ಯೂಸುಫ್‌(ಅ) i 63 


1) ಅಲ್ಲಾಹನು ತನ್ನ ಅಂತಿಮ ಪ್ರವಾದಿ ಮುಹಮ್ಮದ್‌ರನ್ನು(ಸ) ಅಭಿಸಂಬೋಧಿಸುತ್ತಾ 
ಹೀಗೆ ಹೇಳುತ್ತಾನೆ: ನಿಮಗೆ. ಈ ಕತೆಯೇನೂ ತಿಳಿದಿರಲಿಲ್ಲ, ಯಾರು ಇದನ್ನು 
ಅಪೇಕ್ಸಿಸಿದ್ದರೋ ಅವರು ಬಾಯಿ ಮುಚ್ಚುವಂತಹ ಪುರಾವೆಗಳನ್ನು ಈ ಕತೆಯ ಮೂಲಕ 
ಒದಗಿಸಲಾಗಿದೆ. ಆದರೆ, ನೀವು ಎಷ್ಟೇ ಬಯಸಿದರೂ ಅವರಲ್ಲಿ ಹೆಚ್ಚಿನವರು ನಂಬಲಾರರು. 
ಏಕೆಂದರೆ ಅವರು ವಿಶ್ವಾಸವಿರಿಸಲಿಕ್ಕಾಗಿ ಅದನ್ನು ಅಪೇಕ್ಲಿಸಿರಲಿಲ್ಲ. 

2) ನೀವು ಅವರಿಂದ ಯಾವುದೇ ಪ್ರತಿಫಲವನ್ನು ಬಯಸುವವರಲ್ಲ. ನೀವು ಯಾವ 
ಸಂದೇಶವನ್ನು ಅವರ ಮುಂದಿಡುತ್ತಿದ್ದೀರೋ ಯಾವ ಕರೆಯನ್ನು ಅವರಿಗೆ ಕೊಡುತ್ತಿರುವಿರೋ 
ಅದು ಅವರದೇ ಪ್ರಯೋಜನಕ್ಕಾಗಿದೆ. ನಿಮ್ಮ ಕರೆಯಲ್ಲಿ ಲೌಕಿಕ ಲಾಭದ ಲವಲೇಶವೂ 
ಇಲ್ಲ. ಆದರೆ ಈ ಮಂದಿ ಯಾವುದೇ ವಿಷಯದ ಬಗ್ಗೆ ಆಲೋಚಿಸಲಿಕ್ಕೂ ಸಿದ್ಧರಿಲ್ಲ. 
ಇವರು ಆಲಿಸಲಿ, ಆಲಿಸದಿರಲಿ ನೀವಂತೂ ನಿಮ್ಮ ಸಂದೇಶವನ್ನು ಅವರ ಮುಂದಿಡುತ್ತಲೇ 
ಇರಿ. ಇದು ಸಕಲ ಮಾನವರಿಗಾಗಿರುವ ಸಾರ್ವತ್ರಿಕ ಉಪದೇಶವಾಗಿದೆ. ಇವರು ಇದನ್ನು 
ಸ್ವೀಕರಿಸದಿದ್ದರೆ ಬೇರೆ ಯಾರಾದರೂ ಸ್ವೀಕರಿಸಿಯಾರು. 

3) ಭೂಮಿ-ಆಕಾಶಗಳಲ್ಲಿ ಅನೇಕ ದೃಷ್ಟಾಂತಗಳಿವೆ. ಅವುಗಳ ಮೂಲಕ ಈ ಜನರು 
ನಿತ್ಯ ಹಾದು ಹೋಗುತ್ತಿದ್ದಾರೆ. ಆದರೆ ಸ್ವಲ್ಪವೂ ಗಮನ ಹರಿಸುವುದಿಲ್ಲ. ಇವರಲ್ಲಿ 
ಹೆಚ್ಚಿನವರು ದೇವನನ್ನು ನಂಬುವವರಾಗಿದ್ದಾರೆ. ಆದರೆ ಯಾವ ರೀತಿ? ಅವನೊಂದಿಗೆ 
ಇತರರನ್ನೂ ಸೇರಿಸಿಕೊಳ್ಳುತ್ತಾರೆ. ಇದು ಇಲ್ಲಿ ಪ್ರಸ್ತುತ ಪಡಿಸಲಾಗಿರುವ ಅತಿದೊಡ್ಡ 
ಸತ್ಯವಾಗಿದೆ. ದೇವನನ್ನು ನಂಬುವುದಿಲ್ಲವೆಂಬುದು ಅವರ ರೋಗವಲ್ಲ. ಬದಲಾಗಿ ಅವರ 
ದೇವ ವಿಶ್ವಾಸದಲ್ಲಿ ಶಿರ್ಕ್‌ ಅಡಗಿದೆ. ಈಮಾನ್‌ನೊಂದಿಗೆ ಶಿರ್ಕ್‌ ಸೇರಿಕೊಂಡರೆ ಅದು 
ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಈ ಲೋಕದಲ್ಲಿ ಪಥಭ್ರಷ್ಟ ಜನರ ನೈಜ ರೋಗವು 
ದೇವ ನಿರಾಕರಣೆಯಲ್ಲ. ಬದಲಾಗಿ, ದೇವನ ಅಸ್ತಿತ್ವ, ಗುಣಗಳು ಹಾಗೂ ಅವನ ಹಕ್ಕು- 
ಅಧಿಕಾರಗಳಲ್ಲಿ ಇತರರನ್ನು ಸೇರಿಸಿಕೊಳ್ಳುವುದೇ ಆಗಿದೆ. ಇವರೇನು, ದೇವನ ವತಿಯಿಂದ 
ಒಂದು ಯಾತನೆ ಎರಗಿ ಅವರನ್ನು ನಾಶ ಪಡಿಸದೆಂದು ಭಾವಿಸಿ ಅಥವಾ ನಿರ್ಣಾಯಕ 
ದಿನ(ಕಿಯಾಮತ್‌)ದ ಘಳಿಗೆಯು ಹಠಾತ್ತನೆ ಅವರನ್ನು ಆವರಿಸದೆಂದು ನಂಬಿ 
ಸಮಾಧಾನದಿಂದಿದ್ದಾರೆಯೆ? ಶಿರ್ಕ್‌ ಮಿಶ್ರಿತ ಈಮಾನ್‌ ಇವರನ್ನು ಇಹಲೋಕದ 
ಯಾತನೆಯಿಂದಲೂ ರಕ್ಷಿಸದು. ಪರಲೋಕದ ಶಿಕ್ಷೆಯಿಂದಲೂ ರಕ್ಷಿಸದು. 

4) ಇವರು ಅಂಗೀಕರಿಸಲಿ, ಇಲ್ಲದಿರಲಿ. ನೀವು ಅವರೊಡನೆ, ನನ್ನ ಕರೆಯು 
ಅಲ್ಲಾಹನ ಕಡೆಗಾಗಿದ್ದು, ಆತನನ್ನು ನಂಬುವುದರ ತಾತ್ಪರ್ಯವೇನೆಂಬುದನ್ನು ವಿವರಿಸಿಕೊಡುವುದು 
ಮಾತ್ರವೆಂದು ಹೇಳಿರಿ. ಈ ಕರೆಯು ಆಕಸ್ಮಿಕ ಕರೆಯಲ್ಲ. ನಾನೂ ನನ್ನ ಸಂಗಾತಿಗಳೂ 
ದಿನದ ಬೆಳಕಿನಲ್ಲೆಂಬಂತೆ ನಮ್ಮ ಮಾರ್ಗವನ್ನು ಸ್ಪಷ್ಟವಾಗಿ ನೋಡುತ್ತಿದ್ದೇವೆ. ಅಲ್ಲಾಹನು 
ಎಲ್ಲ ದೌರ್ಬಲ್ಯಗಳಿಂದಲೂ ವಿರಹಿತನು. ಶಿರ್ಕ್‌ ಮಾಡುವವರೊಂದಿಗೆ ನನ್ನ ಯಾವುದೇ 
ಸಂಬಂಧವಿಲ್ಲವೆಂದು ಸಾರಿ ಬಿಡಿರಿ. 


64 ತ ಪ್ರವಾದಿ ಯೂಸುಫ್‌(ಅ) 


5) ನಾನು ನಿಮ್ಮ ಮೇಲೆ ವಹ್ಮ್‌(ದಿವ್ಯವಾಣಿ) ಅವತೀರ್ಣ ಗೊಳಿಸುತ್ತಿದ್ದರೆ, ಅದರಲ್ಲಿ 
ಅದ್ಭುತವೇನಿಲ್ಲ. ನಿಮಗಿಂತ ಮುಂಚೆ ನಾವು ಕಳಿಸಿದ ಪ್ರವಾದಿಗಳೆಲ್ಲ ಮನುಷ್ಯರೇ ಆಗಿದ್ದರು. 
ಗತ ಸಮುದಾಯಗಳ ಅಂತಿಮ ಗತಿಯನ್ನು ಸಾರುವ ಕುರುಹುಗಳು 'ನಾಲ್ಕೂ ಸುತ್ತ 
ಹರಡಿಕೊಂಡಿವೆ. ಆದರೆ ಇವರು ಆ ಸಮುದಾಯಗಳ ದುರ್ಗತಿಯಿಂದ ಪಾಠ ಕಲಿಯದೆ, 
ತಮ್ಮ ಪರಲೋಕವನ್ನು ಹಾಳುಗೆಡಹುತ್ತಿದ್ದಾರೆ. ` 

6) ನಿಮಗಿಂತ ಮುಂಚಿನ ಪ್ರವಾದಿಗಳೊಂದಿಗೂ ಹೀಗೆಯೇ ನಡೆದಿತ್ತು. ಅವರು 
ಬಹಳ ಕಾಲದ ವರೆಗೂ ಧರ್ಮದ ಸಂದೇಶವನ್ನು ಸಾರುತ್ತಲೇ ಇದ್ದರು. ಆದರೆ ಜನರು 

ಅವರ ಕರೆಗೆ ಗಮನ ಕೊಡಲಿಲ್ಲ. ಕೊನೆಗೆ ಅವರ ಬಗ್ಗೆ ಪ್ರವಾದಿಗಳು ನಿರಾಶರಾದಾಗ 
ಮತ್ತು ಪ್ರವಾದಿಗಳು ಸುಳ್ಳೇ ಹೇಳುತ್ತಿದ್ದಾರೆಂದು ಜನರೂ ಭಾವಿಸಿಕೊಂಡಾಗ ಪ್ರವಾದಿಗಳಿಗೆ 
ಹಠಾತ್ತನೆ ನಮ್ಮ ಸಹಾಯ ಬಂದು ಬಿಟ್ಟಿತು ಈ ಮೂಲಕ ಯಾವುದೇ ಕಠಿಣ 
ಪರಿಸ್ಥಿತಿಯಲ್ಲೂ ಧೈರ್ಯಗುಂದಬಾರದೆಂದು ಮುಸ್ಲಿಮರಿಗೆ ಸಾಂತ್ವನ ನೀಡಲಾಗುತ್ತದೆ. 
ಸಂದರ್ಭ ಬಂದಾಗ ನಮ್ಮ ಸಹಾಯ ಖಂಡಿತ ಬರುವುದು. ಆದರೆ ಒಂದು ಶರತ್ತಿದೆ. 
ನೀವು ನಿಮ್ಮನ್ನು ಅದಕ್ಕೆ ಅರ್ಹರನ್ನಾಗಿಸಬೇಕು. 

7) ಕುರ್‌ಆನಿನಲ್ಲಿ ವಿವರಿಸಲಾಗಿರುವ ಗತ ಜನಾಂಗಗಳ ವೃತ್ತಾ! ಂತಗಳಲ್ಲಿ ಬುದ್ಧಿ 
ವಿವೇಕವುಳ್ಳವರಿಗೆ ಪಾಠವಿದೆ. ಕುರ್‌ಆನಿನಲ್ಲಿ ಈ ವಿವರಿಸಿರುವುದೆಲ್ಲ ಕಟ್ಟುಕತೆಗಳಲ್ಲ. 
ಕುರ್‌ಆನ್‌ ಈ ಹಿಂದೆ ಬಂದ ಎಲ್ಲ ದೈವಿಕ ಗ್ರಂಥಗಳನ್ನು ಸಮರ್ಥಿಸುತ್ತದೆ. ಅದರಲ್ಲಿ 
ಮಾನವರ ಮಾರ್ಗದರ್ಶನಕ್ಕಿರುವ ಎಲ್ಲ ವಿಷಯಗಳ ವಿವರಣೆಯಿದೆ. ನಂಬಿಕೆಯಿರಿಸುವವರಿಗೆ 
ಸನ್ಮಾರ್ಗವೂ ಕೃಪೆಯೂ ಇದೆ. 


ನೈಜ ಪಾಠ: 

ಈ ಅಧ್ಯಾಯದಾದ್ಕಂತ ವಿವರಿಸಲಾಗಿರುವ ವಿಷಯಗಳು ವಿಶ್ವಾಸಿಗಳ ಮನಸ್ಸಿಗೆ ನಾಟಿ 
ಬಿಟ್ಟರೆ ಅವರು ಎಂತಹ ' ಕಠಿಣತರ ಪರಿಸ್ಥಿತಿಗಳಲ್ಲೂ ಸತ್ಯದ ಮಾರ್ಗದಲ್ಲಿ ಸ್ಥಿರ - 
ಚಿತ್ತರಾಗುವರು. ಜೀವನದ ಕೊನೆಯ ಕ್ಷಣದ ವರೆಗೂ ಸತ್ಮದ ಮೇಲೆ ಅಚಲರಾಗಿ 
ನಿಲ್ಲುವುದರಲ್ಲೇ ಮಾನವನ ನೈಜ ವಿಜಯವು ಅಡಗಿದೆ. ಈ ಲೋಕದ ಕಷ್ಟ ಕೋಟಲೆಗಳು 


ಮರಣದೊಂದಿಗೆ ಕೊನೆಗೊಳ್ಳುತ್ತವೆ. ' ತರುವಾಯ ಅನಂತ ಸುಖ ಜೀವನ ಪ್ರಾಪ್ತವಾಗುವುದು. 


VAY